ಸರಕಾರಿ ಯೋಜನೆ

ಅಕ್ಟೋಬರ್ 20ರೊಳಗೆ ಅರ್ಜಿ ಸಲ್ಲಿಸಿ ವಿದ್ಯಾಸಿರಿ ಯೋಜನೆಯಡಿ ₹15,000 ವಿದ್ಯಾರ್ಥಿವೇತನ ಪಡೆಯಿರಿ | Vidyasiri Scholarship

WhatsApp Group Join Now
Telegram Group Join Now

ಅಲ್ಪಸಂಖ್ಯಾತ ಸಮುದಾಯದ ಪಿಯುಸಿ ಹಾಗೂ ಪದವಿ ವಿದ್ಯಾರ್ಥಿಗಳಿಗೆ ಪ್ರಸಕ್ತ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವತಿಯಿಂದ 2022-23ನೇ ಸಾಲಿನ ವಿದ್ಯಾಸಿರಿ ವಿದ್ಯಾರ್ಥಿವೇತನಕ್ಕೆ (Vidyasiri Scholarship) ಅರ್ಜಿ ಆಹ್ವಾನಿಸಲಾಗಿದೆ.

ಯಾವುದೇ ಇಲಾಖೆಯ ಸರ್ಕಾರಿ/ ಅನುದಾನಿತ ವಿದ್ಯಾರ್ಥಿ ನಿಲಯ ಹಾಗೂ ವಸತಿ ಕಾಲೇಜುಗಳಲ್ಲಿ ಪ್ರವೇಶ ದೊರೆಯದ ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಸಿಖ್, ಬೌದ್ಧ ಮತ್ತು ಪಾರ್ಸಿ ಸಮುದಾಯದ ವಿದ್ಯಾರ್ಥಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು. ಅಗತ್ಯ ದಾಖಲೆಯೊಂದಿಗೆ ನಿಗದಿತ ಸಮಯದೊಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿ ಈ ವಿದ್ಯಾಸಿರಿ ವಿದ್ಯಾರ್ಥಿವೇತನವನ್ನು ಸದ್ಭಳಕೆ ಮಾಡಿಕೊಳ್ಳಬಹುದು. ಮನೆಯಿಂದ ಕಾಲೇಜಿಗೆ 5 ಕಿ.ಮೀ. ದೂರ ಇರುವ ಸರ್ಕಾರಿ ವಿದ್ಯಾರ್ಥಿ ನಿಲಯಗಳಲ್ಲಿ ಪ್ರವೇಶ ಪಡೆಯದೆ ಇರುವ ಅಲ್ಪಸಂಖ್ಯಾತ ಸಮುದಾಯದ ಕಾಲೇಜು ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು.

ಇದನ್ನೂ ಓದಿ: ಉಚಿತ ವಿದ್ಯುತ್ ಯೋಜನೆ ನೋಂದಣಿ ಆರಂಭ | ಅಮೃತ ಜ್ಯೋತಿ ವಿದ್ಯುತ್‌ಗೆ ಇಂದೇ ಅರ್ಜಿ ಸಲ್ಲಿಸಿ

ಮೆಟ್ರಿಕ್ ನಂತರದ ಕೋರ್ಸ್‌ಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಗೆ ವಿದ್ಯಾಭ್ಯಾಸ ಮುಂದುವರೆಸಲು ಅನುಕೂಲವಾಗುವಂತೆ ಊಟ ಮತ್ತು ವಸತಿ ಸೌಲಭ್ಯಕ್ಕೆ ಸಹಾಯವನ್ನು ಒದಗಿಸಲು ಪ್ರತಿ ತಿಂಗಳಿಗೆ ರೂ.1,500/- ರಂತೆ ಶೈಕ್ಷಣಿಕ ಅವಧಿಯ ಹತ್ತು ತಿಂಗಳಿಗೆ ಅನುದಾನದ ಲಭ್ಯತೆಯನುಸಾರ ಒಟ್ಟು ರೂ.15,000/- ಗಳನ್ನು ಸಂಬಂಧಪಟ್ಟ ಫಲಾನುಭವಿ ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗೆ ನೇರವಾಗಿ ಜಮಾ ಆಲಿದೆ.

ಈ ಸೌಲಭ್ಯವನ್ನು ಪಡೆದುಕೊಳ್ಳಲು ಮೇಲ್ಕಾಣಿಸಿದ ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳು ದಿನಾಂಕ: 19 ಸೆಪ್ಟೆಂಬರ್ 2022 ರಿಂದ 20 ಅಕ್ಟೋಬರ್ 2022ರ ಸಂಜೆ 5.30 ಗಂಟೆಯೊಳಗೆ ಅರ್ಜಿ ಸಲ್ಲಿಸಲು ಕೋರಲಾಗಿದೆ. ಆಸಕ್ತ ಅಲ್ಪಸಂಖ್ಯಾತರ ವಿದ್ಯಾರ್ಥಿಗಳು ಈ ಕೆಳಕಂಡ ದಾಖಲೆಗಳ ಸಹಿತ ಸೇವಾಸಿಂಧು ಮುಖಾಂತರ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ಇದನ್ನೂ ಓದಿ: ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ ಡಿಜಿಟಲ್ ಕಾರ್ಡ್ ಪಡೆಯುವುದು ಹೇಗೆ?

ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು

  • ಎಸ್‌ಎಸ್‌ಎಲ್‌ಸಿ ಅಂಕಪಟ್ಪಿ
  • ಪಿಯುಸಿ / ಸೆಮಿಸ್ಟರ್ ಅಂಕಪಟ್ಪಿ
  • ಆಧಾರ್ ಕಾರ್ಡ್
  • ಬ್ಯಾಂಕ್ ಪಾಸ್ ಪುಸ್ತಕ
  • ಜಾತಿ ಮತ್ತು ಆದಾಯ ಪ್ರಮಾಣ ಪತ್ರ
  • ದೂರ ದೃಢೀಕರಣ ಪತ್ರ
  • ಪಾಸ್‌ಪೋರ್ಟ್ ಅಳತೆಯ ಒಂದು ಭಾವಚಿತ್ರ
  • ಶಾಲಾ ಶುಲ್ಕದ ರಶೀದಿ

ಹೆಚ್ಚಿನ ಮಾಹಿತಿಗಾಗಿ ವಿದ್ಯಾರ್ಥಿಗಳು ಆಯಾ ತಾಲೂಕಿನ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಸಂಪರ್ಕಿಸಬಹುದಾಗಿದೆ. ಇಲಾಖಾ ಸಹಾಯವಾಣಿ ಸಂಖ್ಯೆ: 8277799990, ಇಲಾಖಾ ವೆಬ್‌ಸೈಟ್ ಗಾಗಿ  ಇಲ್ಲಿ ಕ್ಲಿಕ್ ಮಾಡಿ

ಅಲ್ಪಸಂಖ್ಯಾತರ ನಿರ್ದೇಶನಾಲಯ, ಮಿಲ್ಲರ್ ಟ್ಯಾಂಕ್ ಬೆಡ್ ರಸ್ತೆ, ವಸಂತ ನಗರ, ಬೆಂಗಳೂರು-560 052  (# 16 C, Miller Tank Bed Area, Vasantha Nagara, Bengaluru-560052), ದೂರವಾಣಿ: 080-22864212, ಫ್ಯಾಕ್ಸ್: 080-22863618, Email:[email protected]

ಇದನ್ನೂ ಓದಿ: ಅಂಚೆ ಕಚೇರಿಯಲ್ಲಿ ವರ್ಷಕ್ಕೆ ಕೇವಲ ₹399 ಕಟ್ಟಿದರೆ ಸಿಗಲಿದೆ ₹10 ಲಕ್ಷ ಅಪಘಾತ ಪರಿಹಾರ

WhatsApp Group Join Now
Telegram Group Join Now

Related Posts

error: Content is protected !!