ಸುದ್ದಿಗಳು

ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರಿದೆಯಾ? ಕೂಡಲೇ ಮೊಬೈಲ್‌ನಲ್ಲೇ ಚೆಕ್ ಮಾಡಿಕೊಳ್ಳಿ | Voter ID Card

WhatsApp Group Join Now
Telegram Group Join Now

ಇತ್ತೀಚೆಗೆ ಬೆಂಗಳೂರಿನ ಚಿಲುಮೆ ಸಂಸ್ಥೆ ನಡೆಸಿದೆ ಎನ್ನಲಾದ ಮತದಾರರ ಪಟ್ಟಿ ಭಾನಗಡಿಯಿಂದ ನಿಜವಾದ ಮತದಾರರು ಗೊಂದಲಕ್ಕೆ ಒಳಗಾಗಿದ್ದಾರೆ. ನಮ್ಮ ಹೆಸರು ಮತದಾರರ ಪಟ್ಟಿಲ್ಲಿ ಇದೆಯಾ? ಅಥವಾ ತೆಗೆದು ಹಾಕಲಾಗಿದೆಯಾ? ಎಂಬ ಅನುಮಾನ ಅನೇಕರಲ್ಲಿ ತಲೆ ಎತ್ತಿಕೊಂಡಿದೆ. ಹಾಗಾದರೆ ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರಿರುವುದನ್ನು ಪರಿಶೀಲಿಸುವುದು ಹೇಗೆ? ಇಲ್ಲಿದೆ ಸರಳ ವಿಧಾನ…

ರಾಜ್ಯ ವಿಧಾನಸಭೆ ಚುನಾವಣೆಗೆ ದಿನಗಣನೆ ಶುರುವಾಗಿದೆ. ಚುನಾವಣೆ ನಿಮಿತ್ತ ಬಗೆಬಗೆ ನಾಟಕಗಳು ಕೂಡ ಶುರುವಾಗಿವೆ. ಒಂದೆಡೆ ರಾಜಕೀಯ ಪಕ್ಷಗಳು ಮತದಾರರನ್ನು ಓಲೈಸಲು ಕಸರತ್ತು ನಡೆಸುತ್ತಿದ್ದರೆ, ಮತ್ತೊಂದು ಕಡೆಗೆ ಮತದಾರರ ಪಟ್ಟಿಗೆ ಅಕ್ರಮ ಹೆಸರು ಸೇರಿಸುವ ಮತ್ತು ಸಕ್ರಮ ಮತದಾರರನ್ನೇ ಪಟ್ಟಿಯಿಂದ ತೆಗೆದು ಹಾಕುವ ಮನೆಹಾಳು ಕೆಲಸಗಳು ಕೂಡ ತೆರೆಮರೆಯಲ್ಲಿ ನಡೆಯುತ್ತಿವೆ.

ಈ ಸಂಬಂಧ ಬೆಂಗಳೂರು ಚಿಲುಮೆ ಹೆಸರಿನ ಸಂಸ್ಥೆಯೊಂದರ ಹಗರಣ ಬಟಾಬಯಲಾಗಿದ್ದು; ಸದರಿ ಸಂಸ್ಥೆಯ ಮುಖ್ಯಸ್ಥರು, ನೌಕರರನ್ನು ಬಂಧಿಸಲಾಗಿದೆ. ಈ ವಿಚಾರದಲ್ಲಿ ಆಡಳಿತ ಪಕ್ಷ ಬಿಜೆಪಿ ನಾಯಕ ವಿರುದ್ಧವೂ ಗುರುತರ ಆರೋಪ ಕೇಳಿ ಬಂದಿರುವುದರಿಂದ ಸಹಜವಾಗಿಯೇ ಮತದಾರರ ಪಟ್ಟಿಯ ವಿಚಾರವಾಗಿ ಕೆಸರೆರಚಾಟ ಶುರುವಾಗಿದೆ.

ಇದನ್ನೂ ಓದಿ: 1,55,927 ಅರ್ಜಿದಾರರಿಗೆ ಶೀಘ್ರದಲ್ಲಿಯೇ ಸಿಗಲಿದೆ ಹೊಸ BPL ಕಾರ್ಡ್

ಈ ಎಲ್ಲ ಹಿನ್ನಲೆಯಲ್ಲಿ ನಿಜವಾದ ಮತದಾರರು ಗೊಂದಲಕ್ಕೆ ಒಳಗಾಗಿದ್ದಾರೆ. ನಮ್ಮ ಹೆಸರು ಮತದಾರರ ಪಟ್ಟಿಲ್ಲಿ ಇದೆಯಾ? ಅಥವಾ ತೆಗೆದು ಹಾಕಲಾಗಿದೆಯಾ? ಎಂಬ ಅನುಮಾನ ಅನೇಕರಲ್ಲಿ ತಲೆ ಎತ್ತಿಕೊಂಡಿದೆ. ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಇರದಿದ್ದರೆ ನೀವು ಅತ್ಯಮೂಲ್ಯ ಹಕ್ಕಿನಿಂದ ವಂಚಿತರಾದಂತೆಯೇ. ಮತದಾರರ ಪಟ್ಟಿಯಲ್ಲಿ ಹೆಸರು ಇರದಿದ್ದರೆ ಯಾವುದೇ ಚುನಾವಣೆಯಲ್ಲೂ ನೀವು ವೋಟು ಹಾಕಲು ಸಾಧ್ಯವಿಲ್ಲ.

ನಿಮ್ಮಲ್ಲಿ ಭಾರತೀಯ ಚುನಾವಣಾ ಆಯೋಗ (ECI) ನೀಡಿದ ಮತದಾರರ ಗುರುತಿನ ಚೀಟಿ ಇದ್ದರೂ ಕೂಡ ಪಟ್ಟಿಯಿಂದ ಹೆಸರು ಡಿಲೀಟ್ ಆಗಿದ್ದರೆ ಮತ ಚಲಾಯಿಸಲು ಆಗುವುದಿಲ್ಲ. ಹಾಗಾದರೆ ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರಿರುವುದನ್ನು ಪರಿಶೀಲಿಸುವುದು ಹೇಗೆ? ಇಲ್ಲಿದೆ ಸರಳ ವಿಧಾನ. ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ಪರಿಶೀಲಿಸಲು ನೀವು ಈ ಕೆಳಗಿನ ಹಂತಗಳನ್ನು ಅನುಸರಿಸಬಹುದು.

ಇದನ್ನೂ ಓದಿ: ಈ ಯೋಜನೆಗೆ ಸೇರಿದರೆ ಪ್ರತಿ ತಿಂಗಳು ಸಿಗಲಿದೆ ₹3,000 ಪಿಂಚಣಿ

ಮೊದಲಿಗೆ ರಾಷ್ಟ್ರೀಯ ಮತದಾರರ ಸೇವಾ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ ರಾಷ್ಟ್ರೀಯ ಮತದಾರರ ಸೇವಾ ವೆಬ್‌ಸೈಟ್‌ನ ಪುಟ ತೆರೆದುಕೊಳ್ಳುತ್ತದೆ. ಅಲ್ಲಿ ಎರಡು ಆಯ್ಕೆಗಳನ್ನು ನೋಡುತ್ತೀರಿ, ಮೊದಲಿಗೆ ಕಾಣುವ Search by Details ಆಯ್ಕೆಯಲ್ಲಿ ಕೇಳಲಾದ ನಿಮ್ಮ ಹೆಸರು, ವಯಸ್ಸು, ಪತಿ ಅಥವಾ ತಂದೆಯ ಹೆಸರು, ಲಿಂಗ ಆಯ್ಕೆಗಳನ್ನು ಭರ್ತಿ ಮಾಡಬೇಕು. ಬಳಿಕ ಕೆಳಗೆ ರಾಜ್ಯ, ಜಿಲ್ಲೆ ಹಾಗೂ ಯಾವ ವಿಧಾನಸಭಾ ಕ್ಷೇತ್ರ ಎಂಬುವುದನ್ನು ಆಯ್ಕೆ ಮಾಡಿ Captcha code ನಮೂದಿಸಿ Search ಕ್ಲಿಕ್ ಮಾಡಿದರೆ ನಿಮ್ಮ ವಿವರ ಸಿಗುತ್ತದೆ. ಮತದಾರರ ನೋಂದಣಿ ವಿವರಗಳನ್ನು ಸಂಪೂರ್ಣವಾಗಿ ನೀವು ಅಲ್ಲಿ ಪರಿಶೀಲಿಸಬಹುದು.

ಇದನ್ನೂ ಓದಿ: ಹೈನುಗಾರಿಕೆ, ಮೀನುಗಾರಿಕೆ ಕುರಿ-ಮೇಕೆ-ಕೋಳಿ ಸಾಕಣೆಗೆ ಗರಿಷ್ಠ ₹3 ಲಕ್ಷ ಸಾಲ

ಎಸ್‌ಎಂಎಸ್ ಮೂಲಕವೂ ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ಪರಿಶೀಲಿಸಿ

ಇದಕ್ಕಾಗಿ ನೀವು ಮೊಬೈಲ್ ಸಂದೇಶ ವಿಭಾಗದಲ್ಲಿ EPIC ಎಂದು ಟೈಪ್ ಮಾಡಬೇಕು. ನಂತರ ನಿಮ್ಮ ಮತದಾರರ ಗುರುತಿನ ಚೀಟಿ ಸಂಖ್ಯೆಯನ್ನು ನಮೂದಿಸಿ. ಈ ಸಂದೇಶವನ್ನು 9211728082 ಅಥವಾ 1950ಗೆ ಕಳುಹಿಸಿ. ನಿಮ್ಮ ಪೋಲಿಂಗ್ ಸ್ಟೇಷನ್ ಸಂಖ್ಯೆ ಮತ್ತು ಹೆಸರನ್ನು ನಿಮ್ಮ ಫೋನ್ ಪರದೆಯ ಮೇಲೆ ಪ್ರದರ್ಶಿಸಲಾಗುತ್ತದೆ. ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಇಲ್ಲದಿದ್ದರೆ, ನಿಮಗೆ No records found ಎಂಬ ಬರುತ್ತದೆ.

====================================

ಇವುಗಳನ್ನೂ ಓದಿ:

ಈ ವಿದ್ಯಾರ್ಥಿಗಳಿಗೆ ಸಿಗಲಿದೆ ವರ್ಷಕ್ಕೆ ₹50,000 ಹಣಕಾಸಿನ ನೆರವು

ಇನ್ಮುಂದೆ ಸರಕಾರಿ ನೌಕರರಿಗೆ ನಿವೃತ್ತಿಯ ವರೆಗೂ ಸಿಗಲಿದೆ ವಿಮಾ ಸೌಲಭ್ಯ

ಕೇಂದ್ರ ಕೈಗಾರಿಕಾ ಭದ್ರತಾ ಪಡೆಯ 787 ಕಾನ್ಸ್‌ಟೇಬಲ್ ಹುದ್ದೆಗಳಿಗೆ SSLC ಪಾಸಾದ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ

ತೆಂಗು ರೈತರ ಸಂಸ್ಥೆಯಿಂದ ಕರ್ನಾಟಕದ ಪ್ರತಿ ಜಿಲ್ಲೆಗೆ 50 ಜನ ಪದವೀಧರ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ

ರೈತರಿಗೆ ₹24,000 ಕೋಟಿ ಶೂನ್ಯ ಬಡ್ಡಿ ಸಾಲ: ಮುಖ್ಯಮಂತ್ರಿ ಘೋಷಣೆ 

ಈ ವಿದ್ಯಾರ್ಥಿಗಳಿಗೆ ಸಿಗಲಿದೆ ವರ್ಷಕ್ಕೆ ₹50,000 ಹಣಕಾಸಿನ ನೆರವು

ಇನ್ಮುಂದೆ ಸರಕಾರಿ ನೌಕರರಿಗೆ ನಿವೃತ್ತಿಯ ವರೆಗೂ ಸಿಗಲಿದೆ ವಿಮಾ ಸೌಲಭ್ಯ

ಕೇಂದ್ರ ಕೈಗಾರಿಕಾ ಭದ್ರತಾ ಪಡೆಯ 787 ಕಾನ್ಸ್‌ಟೇಬಲ್ ಹುದ್ದೆಗಳಿಗೆ SSLC ಪಾಸಾದ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ

ತೆಂಗು ರೈತರ ಸಂಸ್ಥೆಯಿಂದ ಕರ್ನಾಟಕದ ಪ್ರತಿ ಜಿಲ್ಲೆಗೆ 50 ಜನ ಪದವೀಧರ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ

ಕೆಎಂಎಫ್‌ನಿಂದ ಬಂಪರ್ ಬೆಲೆಗೆ ಮೆಕ್ಕೆಜೋಳ ಖರೀದಿ: ರೈತರೇ ಈ ಅವಕಾಶ ಬಳಸಿಕೊಳ್ಳಿ

ನರೇಗಾ ಯೋಜನೆಯಲ್ಲಿ ರೈತರಿಗೆ ₹2.5 ಲಕ್ಷ ಸಹಾಯಧನ 

ಶೀಘ್ರದಲ್ಲಿಯೇ ಎಲ್ಲ ರೈತರಿಗೂ ಬೆಳೆವಿಮೆ ಪರಿಹಾರ: ನಿಮಗೆ ಎಷ್ಟು ಬೆಳೆವಿಮೆ ಬರಲಿದೆ ಚೆಕ್ ಮಾಡಿಕೊಳ್ಳಿ 

20 ಕುರಿ, 1 ಮೇಕೆ ಗಿಫ್ಟ್: ಮುಖ್ಯಮಂತ್ರಿ ಘೋಷಣೆ | ಈ ಗಿಫ್ಟ್ ಪಡೆಯಲು ಯಾರೆಲ್ಲ ಅರ್ಹರು?

ಬೆಳೆಹಾನಿ ಪರಿಹಾರಕ್ಕೆ ರೈತರಿಗೆ ಆಧಾರವಾದ ಬೆಳೆ ಸಮೀಕ್ಷೆ 

ಗ್ರಾಮ ಪಂಚಾಯತಿಯಲ್ಲಿ ನಿಮ್ಮ ಆಸ್ತಿ ಇ-ಸ್ವತ್ತು ನೋಂದಣಿಗೆ ಈ ಸರಳ ಕ್ರಮ ಅನುಸರಿಸಿ 

ಸಮಗ್ರ ಮಾಹಿತಿಗಾಗಿ ನಮ್ಮ ಟೆಲಿಗ್ರಾಂ ಗ್ರುಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

WhatsApp Group Join Now
Telegram Group Join Now

Related Posts

error: Content is protected !!