ಕೃಷಿ

ಇಲ್ಲಿದೆ ಕರೆಂಟು, ಬೋರ್‌ವೆಲ್ ಇಲ್ಲದೇ ನೀರಾವರಿ ಕೃಷಿ ಮಾಡುವ ಹೊಸ ವಿಧಾನ | IIHR Wicks Irrigation Method

WhatsApp Group Join Now
Telegram Group Join Now

ಇದು ಬತ್ತಿ ನೀರಾವರಿ ಸಿಸ್ಟಮ್. ಕರೆಂಟು, ಬೋರ್‌ವೆಲ್ ಇಲ್ಲದೆಯೂ ಈ ನೀರಾವರಿ ವ್ಯವಸ್ಥೆಯ ಮೂಲಕ ಸಣ್ಣ ಮತ್ತು ಅತೀ ಸಣ್ಣ ರೈತರು ಹೂವು, ತರಕಾರಿ ಬೇಸಾಯದಲ್ಲಿ ಭಾರೀ ಲಾಭ ಕಾಣಬಹುದು. ಏನಿದು ಬತ್ತಿ ನೀರಾವರಿ? ಅದರ ಅಳವಡಿಕೆ ಹೇಗೆ? ಖರ್ಚು ವೆಚ್ಚಗಳೇನು? ಇದರಿಂದ ರೈತರಿಗಾಗುವ ಅನುಕೂಲಗಳೇನು? ಸಂಪೂರ್ಣ ಮಾಹಿತಿ ಇಲ್ಲಿದೆ…

ಇದು ಸಣ್ಣ ರೈತರಿಗೆ ದೊಡ್ಡ ಆದಾಯ ತರುವ ಸರಳ ತಂತ್ರಜ್ಞಾನ. ಈ ನೀರಾವರಿ ವ್ಯವಸ್ಥೆಯನ್ನು ಸರಿಯಾಗಿ ಸದ್ಭಳಕೆ ಮಾಡಿಕೊಂಡರೆ ಸಣ್ಣ ಮತ್ತು ಅತೀ ಸಣ್ಣ ರೈತರು ಹೂವು, ತರಕಾರಿ ಬೇಸಾಯದಲ್ಲಿ ಭಾರೀ ಲಾಭ ಕಾಣಬಹುದು. ಬೆಂಗಳೂರಿನ ಹೆಸರಘಟ್ಟ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ (IIHR) ಈ ವಿಶಿಷ್ಟ ನೀರಾವರಿ ತಂತ್ರವನ್ನು ಆವಿಷ್ಕರಿಸಿದೆ.

ಇದನ್ನೂ ಓದಿ: ಪಿಎಂ ಕಿಸಾನ್ 13ನೇ ಕಂತು ಶೀಘ್ರ ಬಿಡುಗಡೆ: ನಿಮ್ಮೂರಿನ ಯಾರಿಗೆಲ್ಲ ಹಣ ಸಿಗಲ್ಲ ಮೊಬೈಲ್‌ನಲ್ಲೇ ಚೆಕ್ ಮಾಡಿ

ಐಐಎಚ್‌ಆರ್‌ನಲ್ಲಿ ಪ್ರಸ್ತುತ 600 ಕನಕಾಂಬರ ಗಿಡಗಳನ್ನು ಈ ನೀರಾವರಿ ವಿಧಾನದಲ್ಲಿ ಬೆಳೆಸಲಾಗಿದೆ. ಎರಡು ದಿನಕ್ಕೊಮ್ಮೆ ಸುಮಾರು ಒಂದೂವರೆ ಕೆ.ಜಿ. ಕನಕಾಂಬರ ಹೂವು ಸಿಗುತ್ತಿದೆ. ಇದೊಂದು ಸುಲಭ ಹಾಗೂ ಹೆಚ್ಚು ಲಾಭದಾಯಕ ವಿಧಾನವಾಗಿದ್ದು, ಸಣ್ಣ ರೈತರಿಗೆ ಹೂವಿನ ಬೆಳೆಗೆ ಹೆಚ್ಚು ಅನುಕೂಲಕರವಾಗಿದೆ ಎನ್ನುವುದು ಐಐಎಚ್‌ಆರ್‌ನ ಪುಷ್ಪ ಮತ್ತು ಔಷಧಿ ವಿಭಾಗದ ವಿಜ್ಞಾನಿಗಳ ಅಭಿಮತ.

ಏನಿದು ಬತ್ತಿ ನೀರಾವರಿ?

ಮನೆಗೆ ಸಿಂಟೆಕ್ಸ್ ಟ್ಯಾಂಕ್ ಬಳಸಿದ ಹಾಗೆ ಜಮೀನಿಗೂ ಟ್ಯಾಂಕ್ ಅಳವಡಿಸಿ, ಅದರಿಂದ ಪೈಪ್ ಮತ್ತು ಬತ್ತಿಗಳ ಮೂಲಕ ಗಿಡಗಳಿಗೆ ನೀರುಣಿಸುವ ವಿಧಾನವೇ ಬತ್ತಿ ನೀರಾವರಿ. ಇದೊಂದು ಹನಿ ನೀರಾವರಿ ಮಾದರಿಯ ನೂತನ ನೀರಾವರಿ ವ್ಯವಸ್ಥೆ. ಆದರೆ ಇಲ್ಲಿ ನೀರು ಹರಿಸಲು ಯಾವುದೇ ವಿದ್ಯುತ್, ಯಂತ್ರದ ಅಗತ್ಯವಿಲ್ಲ. ನಿಂತ ನೀರಿನ ತಾಣದಿಂದ ವ್ಯವಸ್ಥಿತವಾಗಿ ಸಂಪರ್ಕ ಕಲ್ಪಿಸಿದರೆ ಬತ್ತಿಗಳ ಮೂಲಕ ತಾನಾಗಿಯೇ ಬೆಳೆಗೆ ನೀರು ಜಿನುಗುತ್ತದೆ.

ಈ ವಿಧಾನದ ನೀರಾವರಿ ವ್ಯವಸ್ಥೆಯನ್ನು ಹೆಸರಘಟ್ಟದ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ (IIHR) ವಾಣಿಜ್ಯ ಉದ್ದೇಶಕ್ಕಾಗಿ ಮೊದಲ ಬಾರಿಗೆ ಆವಿಷ್ಕರಿಸಿದೆ. ಸಣ್ಣ ರೈತರು ಈ ನೀರಾವರಿ ವ್ಯವಸ್ಥೆಯಲ್ಲಿ ಲಾಭದಾಯಕ ಕೃಷಿ ಮಾಡಬಹುದು. ಈ ನೀರಾವರಿ ವ್ಯವಸ್ಥೆಯು ರೈತರಿಗೆ ಕೈಗೆಟಕುವಂತಿದ್ದು, ಬಗೆ ಬಗೆಯ ಹೂವು, ತರಕಾರಿ ಬೆಳೆಗಳನ್ನು ಸಮೃದ್ಧವಾಗಿ ಬೆಳೆಯಬಹುದು.

ಇದನ್ನೂ ಓದಿ: ತೋಟಗಾರಿಕೆ ಇಲಾಖೆಯಿಂದ ರೈತರಿಗೆ ಸಿಗುವ ಸಬ್ಸಿಡಿ ಸೌಲಭ್ಯಗಳು

ಬತ್ತಿ ನೀರಾವರಿ ಅಳವಡಿಕೆ ಹೇಗೆ?

ಜಮೀನಿನ ಸಮತಟ್ಟಾದ ಸೂಕ್ತ ಸ್ಥಳದಲ್ಲಿ ಸಿಂಟೆಕ್ಸ್ ಟ್ಯಾಂಕ್ ಅಳವಡಿಸಬೇಕು. ಈ ಟ್ಯಾಂಕ್‌ಗೆ ಸಂಪರ್ಕಿಸುವಂತೆ ಸುಮಾರು ಒಂದರಿಂದ ಒಂದೂವರೆ ಇಂಚಿನ ಪೈಪ್ ಅಳವಡಿಸಬೇಕು. ಗಿಡಗಳಿಗೆ ನೀರು ಹೋಗಲು ಅನುಕೂಲವಾಗುವಂತೆ ಅಲ್ಲಲ್ಲಿ ಪೈಪ್‌ನ ತೂತುಗಳಲ್ಲಿ ಗಿಡಗಳ ಸಮೀಪ ಸುಮಾರು ಒಂದು ಅಡಿ ಉದ್ದದ ಬತ್ತಿಯನ್ನು ಪೈಪ್‌ಗೆ ಜೋಡಿಸಬೇಕು. ಈ ಬತ್ತಿಯು ಗಿಡಕ್ಕೆ ಬೇಕಾದಷ್ಟು ನೀರನ್ನು ತಾನಾಗಿಯೇ ಬಿಟ್ಟುಕೊಳ್ಳುತ್ತದೆ.

ಹನಿ ನೀರಾವರಿ ಮಾದರಿಯಲ್ಲಿ ಇಲ್ಲಿ ಕೂಡ ನೀರು ಬೆಳೆಗೆ ಹನಿಹನಿಯಾಗಿ ಜಿನುಗುತ್ತದೆಯಾದರೂ ಯಾವುದೇ ವಿದ್ಯುತ್ ಚಾಲಿತ ಯಂತ್ರವನ್ನು ಅಳವಡಿಸಿರುವುದಿಲ್ಲ. ಹೀಗಾಗಿ ನೀರು ರಭಸವಾಗಿ ಹರಿಯುವುದಿಲ್ಲ. ಕಡಿಮೆ ನೀರು ಸಾಕಾಗುತ್ತದೆ. ಬತ್ತಿ ನೀರಾವರಿ ವ್ಯವಸ್ಥೆಯಿಂದ ಶೇ.60-70ರಷ್ಟು ನೀರು ಉಳಿತಾಯವಾಗುತ್ತದೆ. ಖರ್ಚು ಕೂಡ ತುಂಬಾ ಕಡಿಮೆ.

ಇದನ್ನೂ ಓದಿ: ಜಮೀನು ಕಾಲುದಾರಿ, ಬಂಡಿದಾರಿ ಸಮಸ್ಯೆಗೆ ಇಲ್ಲಿದೆ ಸುಲಭ ಕಾನೂನು ಪರಿಹಾರ… 

ಕಡಿಮೆ ಖರ್ಚು ಆದಾಯ ಹೆಚ್ಚು

ಇದು ಸಣ್ಣ ರೈರಿಗೆ, ಅದರಲ್ಲೂ ಮಹಿಳಾ ರೈತರಿಗೆ ಹೆಚ್ಚು ಉಪಯುಕ್ತವಾಗಲಿದ್ದು, ಕಡಿಮೆ ಖರ್ಚಿನಲ್ಲಿ ಹೆಚ್ಚು ಆದಾಯ ಗಳಿಸಲು ಪೂರಕವಾಗಿದೆ. ಬತ್ತಿ ನೀರಾವರಿ ವ್ಯವಸ್ಥೆಯನ್ನು ಹನಿ ನೀರಾವರಿಯಂತೆ ಒಂದು ಬಾರಿ ಅಳವಡಿಸಿದರೆ ಸಾಕಷ್ಟು ವರ್ಷಗಳ ಕಾಲ ವೆಚ್ಚವಿಲ್ಲದೇ ಬಳಕೆ ಮಾಡಬಹುದು. ಆದರೆ ಬತ್ತಿಯನ್ನು ಮಾತ್ರ ಸುಮಾರು ಮೂರು ವರ್ಷಗಳಿಗೊಮ್ಮೆ ಬದಲಿಸಬೇಕಾಗುತ್ತದೆ. ಮನೆಯ ಸಮೀಪ ಚಿಕ್ಕ ತೋಟಗಳಲ್ಲಿ ಈ ವಿಧಾನದಲ್ಲಿ ಸುಮಾರು 500 ರಿಂದ 1,000 ಹೂವು, ತರಕಾರಿ ಗಿಡಗಳನ್ನು ಬೆಳೆದು ನಿತ್ಯವೂ ಹಣ ಗಳಿಸಬಹುದು. ಮಲ್ಲಿಗೆ, ಕನಕಾಂಬರದಂತಹ ಹೂ ಬೇಸಾಯಕ್ಕೆ ಇದು ಹೇಳಿ ಮಾಡಿಸಿದ ವ್ಯವಸ್ಥೆಯಾಗಿದೆ. ಹೆಚ್ಚಿನ ಮಾಹಿತಿಗೆ: 080-23086100

ಇದನ್ನೂ ಓದಿ: ಕಾಂಪೋಸ್ಟ್ ಗೊಬ್ಬರ ತಯಾರಿಕೆ, ಬಳಕೆ, ಉಪಯೋಗ

ಸಮಗ್ರ ಮಾಹಿತಿಗಾಗಿ ನಮ್ಮ ಟೆಲಿಗ್ರಾಂ ಗ್ರುಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

WhatsApp Group Join Now
Telegram Group Join Now

Related Posts

error: Content is protected !!