ಉದ್ಯೋಗ

10ನೇ ತರಗತಿ ಪಾಸಾದವರಿಗೆ ₹50 ಸಾವಿರಕ್ಕೂ ಹೆಚ್ಚು ಸಂಬಳದ ಸರ್ಕಾರಿ ನೌಕರಿ | ಈಗಲೇ ಅರ್ಜಿ ಸಲ್ಲಿಸಿ | Yadgiri district court recruitment 2024

WhatsApp Group Join Now
Telegram Group Join Now

10ನೇ ತರಗತಿ ಪಾಸಾದವರಿಗೆ ಜಿಲ್ಲಾ ನ್ಯಾಯಾಲಯಗಳಲ್ಲಿ ಅನೇಕ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಬೇಕಾದ ಸಂಪೂರ್ಣ ಮಾಹಿತಿ ಇಲ್ಲಿದೆ…

Yadgiri district court recruitment 2024 ಸಂಕ್ಷಿಪ್ತ ವಿವರ

  • ನೇಮಕಾತಿ ಸಂಸ್ಥೆ : ಯಾದಗಿರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ
  • ಹುದ್ದೆಗಳ ಹೆಸರು : ಅನೇಕ ಹುದ್ದೆಗಳು
  • ಒಟ್ಟು ಖಾಲಿ ಹುದ್ದೆಗಳು : 30 ಹುದ್ದೆಗಳು
  • ಅರ್ಜಿ ಸಲ್ಲಿಕೆ : ಆನ್‌ಲೈನ್ ಮುಖಾಂತರ
  • ಉದ್ಯೋಗ ಸ್ಥಳ : ಯಾದಗಿರಿ ಜಿಲ್ಲೆ

ಇದನ್ನೂ ಓದಿ: Government Business Loan Schemes : ಹಳ್ಳಿಯಲ್ಲಿಯೇ ಸ್ವಯಂ ಉದ್ಯೋಗ ಮಾಡುವವರಿಗೆ ಸರ್ಕಾರದಿಂದ ಸಿಗುವ ಸಾಲ ಸೌಲಭ್ಯಗಳು | 10 ಲಕ್ಷದಿಂದ 1 ಕೋಟಿ ತನಕ ಸಾಲ

ಯಾದಗಿರಿ ಜಿಲ್ಲೆಯ, ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರ ನ್ಯಾಯಾಲಯದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲು ಅಧಿಕೃತ ಅಧಿಸೂಚನೆ ಹೊರಡಿಸಿದೆ. ಅರ್ಜಿ ಸಲ್ಲಿಸಲು ಬೇಕಾಗಿರುವ ಅಧಿಕೃತ ಜಾಲತಾಣ, ಅಧಿಕೃತ ಅಧಿಸೂಚನೆ, ವೇತನ ಮತ್ತು ವಯೋಮಿತಿಗಳ ವಿವರ, ಪ್ರಮುಖ ದಿನಾಂಕಗಳು, ಸಹಾಯವಾಣಿ ಮತ್ತು ವಿದ್ಯಾರ್ಹತೆಯ ಸಂಪೂರ್ಣ ಮಾಹಿತಿ ಈ ಕೆಳಗಿನ ಲೇಖನದಲ್ಲಿದೆ.

ಹುದ್ದೆಗಳ ಸಂಪೂರ್ಣ ವಿವರ

  1. ಶೀಘ್ರ ಲಿಪಿಗಾರರು (Stenographer) – 01
  2. ಬೆರಳಚ್ಚುಗಾರರು (Typist) – 05
  3. ಜವಾನ (Peon) – 24

ಇದನ್ನೂ ಓದಿ: 2,000+ ಕಾನ್’ಸ್ಟೇಬಲ್ ಮತ್ತು ಸಬ್’ಇನ್‌ಸ್ಪೆಕ್ಟರ್ ಹುದ್ದೆಗಳ ಬೃಹತ್ ನೇಮಕಾತಿ | ಪಿಯುಸಿ, ಪದವೀಧರರಿಗೆ ಸುವರ್ಣಾವಕಾಶ | RPF Constable & SI recruitment 2024

ವಿದ್ಯಾರ್ಹತೆ ಏನು? (Educational Qualification)

ಶೀಘ್ರ ಲಿಪಿಗಾರರು ಹುದ್ದೆಗಳಿಗೆ ದ್ವಿತೀಯ ಪಿಯುಸಿ ಜೊತೆಗೆ, ಕನ್ನಡ ಮತ್ತು ಇಂಗ್ಲಿಷ್ ಭಾಷೆಯ ಶೀಘ್ರಲಿಪಿಯಲ್ಲಿ ಹಿರಿಯ ದರ್ಜೆ ಮತ್ತು ಬೆರಳಚ್ಚು ಹಿರಿಯ ದರ್ಜೆ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಪಾಸಾಗಿರಬೇಕು.

ಬೆರಳಚ್ಚುಗಾರರು ಹುದ್ದೆಗಳಿಗೆ ಪಿಯುಸಿ (PUC) ಜೊತೆಗೆ ಕನ್ನಡ ಮತ್ತು ಆಂಗ್ಲ ಬೆರಳಚ್ಚು ಪ್ರೌಢ ದರ್ಜೆ ಪರೀಕ್ಷೆಯಲ್ಲಿ ಪಾಸಾಗಿರಬೇಕು. ಇನ್ನು ಜವಾನ ಹುದ್ದೆಗಳಿಗೆ SSLC ಪಾಸಾಗಿರಬೇಕು.

ನೇಮಕಾತಿ ವಿಧಾನ ಹೇಗೆ? (Selection Procedure)

ಶೀಘ್ರಲಿಪಿಗಾರರು ಮತ್ತು ಬೆರಳಚ್ಚುಗಾರರು ಹುದ್ದೆಗಳಿಗೆ ಕನ್ನಡ ಮತ್ತು ಆಂಗ್ಲ ಭಾಷೆಗಳಲ್ಲಿ ಉಕ್ತಲೇಖನವನ್ನು ಕೊಟ್ಟು ಬೆರಳಚ್ಚು ಯಂತ್ರ/ಕ೦ಪ್ಯೂಟರ್‌ನಲ್ಲಿ ಬೆರಳಚ್ಚು ಮಾಡಿಸಿ ಅರ್ಹತಾ ಪರೀಕ್ಷೆ ನಡೆಸಲಾಗುವುದು.

ಜವಾನ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅರ್ಹ ಅಭ್ಯರ್ಥಿಗಳ 10ನೇ ತರಗತಿಯಲ್ಲಿ ಗಳಿಸಿದ ಅಂಕಗಳ ಆಧಾರದ ಮೇಲೆ ಸಂದರ್ಶನ ನಡೆಸಿ ಆಯ್ಕೆ ಮಾಡಿಕೊಳ್ಳಲಾಗುವುದು.

ಇದನ್ನೂ ಓದಿ: Indian post office Staff Car Drivers Recruitment 2023 | ಎಸ್‌ಎಸ್‌ಎಲ್‌ಸಿ ಪಾಸಾದವರಿಗೆ ಅಂಚೆ ಇಲಾಖೆ ಸ್ಟಾಫ್‌ಕಾರ್ ಡ್ರೈವರ್ ಹುದ್ದೆಗಳು

ಮಾಸಿಕ ಸಂಬಳವೆಷ್ಟು? (Salary)

  • ಶೀಘ್ರ ಲಿಪಿಗಾರರು : ₹27,650 ರಿಂದ ₹52,650ರ ವರೆಗೆ
  • ಬೆರಳಚ್ಚುಗಾರರು : ₹21,400 ರಿಂದ ₹42,000ರ ವರೆಗೆ
  • ಜವಾನ : ₹17,000 ರಿಂದ ₹28,950ರ ವರೆಗೆ

ವಯೋಮಿತಿ ಎಷ್ಟಿರಬೇಕು? (Age limit)

ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ನಿಗದಿಪಡಿಸಿದ ದಿನಾಂಕಕ್ಕೆ ಕನಿಷ್ಠ 18 ವರ್ಷ ಮತ್ತು ಗರಿಷ್ಠ 35 ವರ್ಷ ಮೀರಿರಬಾರದು. ಮೀಸಲಾತಿ ಬಯಸುವ ಅಭ್ಯರ್ಥಿಗಳಿಗೆ ನಿಯಮಗಳ ಅನುಸಾರ ವಯೋಮಿತಿ ಸಡಿಲಿಕೆ ನೀಡಲಾಗುವುದು.

ಇದನ್ನೂ ಓದಿ: 12ನೇ ತರಗತಿ ಪಾಸಾದವರಿಗೆ ಗ್ರಾಮ ಪಂಚಾಯಿತಿ ಹುದ್ದೆಗಳ ಹೊಸ ನೇಮಕಾತಿಗೆ ಅರ್ಜಿ ಅಹ್ವಾನ | Gram Panchayat Recruitment 2024

ಅರ್ಜಿ ಶುಲ್ಕ ಎಷ್ಟು? (Application fee)

ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 200 ರೂಪಾಯಿ, ಪ್ರವರ್ಗ 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ 100 ರೂಪಾಯಿ ಹಾಗೂ ಪ. ಜಾತಿ, ಪ. ಪಂಗಡ, ಪ್ರವರ್ಗ 1 ಮತ್ತು ಅಂಗವಿಕಲ ಅಭ್ಯರ್ಥಿಗಳಿಗೆ ಶುಲ್ಕದಿಂದ ಸಂಪೂರ್ಣ ವಿನಾಯಿತಿ ನೀಡಲಾಗಿದೆ.

ಅರ್ಜಿ ಸಲ್ಲಿಸಲು ಪ್ರಮುಖ ದಿನಾಂಕಗಳು

ಅರ್ಜಿ ಸಲ್ಲಿಸಲು ಆರಂಭ ದಿನಾಂಕ : 16-01-2024
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 16-02-2024

ಅರ್ಜಿ ಸಲ್ಲಿಸಲು ಬೇಕಾಗಿರುವ ಪ್ರಮುಖ ಲಿಂಕುಗಳು

ಇದನ್ನೂ ಓದಿ: BESCOM Recruitment 2023 : ಬೆಸ್ಕಾಂ ನೇಮಕಾತಿ | Diploma ಮುಗಿಸಿದವರಿಗೆ ವಿದ್ಯುತ್ ಇಲಾಖೆಯಲ್ಲಿ ಉದ್ಯೋಗಾವಕಾಶ | ಉಚಿತವಾಗಿ ಅರ್ಜಿ ಸಲ್ಲಿಸಿ |

WhatsApp Group Join Now
Telegram Group Join Now

Related Posts

error: Content is protected !!