ವಿದ್ಯಾರ್ಥಿವೇತನ

ಈ ವಿದ್ಯಾರ್ಥಿಗಳಿಗೆ ಸಿಗಲಿದೆ ವರ್ಷಕ್ಕೆ ₹50,000 ಹಣಕಾಸಿನ ನೆರವು | Laduma Dhamecha Yuva Scholarship Program 2022

WhatsApp Group Join Now
Telegram Group Join Now

ಸರ್ಕಾರೇತರ ಸಂಸ್ಥೆಯಾದ ಯುವ ಅನ್‌ಸ್ಟಾಪಬಲ್ ಸಹಯೋಗದಲ್ಲಿ ಲಡುಮಾ ಧಮೇಚಾ ಯುವ ವಿದ್ಯಾರ್ಥಿವೇತನ ಕಾರ್ಯಕ್ರಮ-2022ಕ್ಕೆ ಅರ್ಹ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ವಾರ್ಷಿಕ 50,000 ರೂಪಾಯಿ ದೊಡ್ಡ ಮೊತ್ತದ ಈ ಸ್ಕಾಲರ್‌ಶಿಪ್ ಪಡೆಯಲು ಮಾನದಂಡಗಳೇನು? ಯಾವೆಲ್ಲ ವಿದ್ಯಾರ್ಥಿಗಳಿಗೆ ಇದು ಅನ್ವಯವಾಗುತ್ತದೆ? ಅರ್ಜಿ ಸಲ್ಲಿಕೆ ಹೇಗೆ? ಇತ್ಯಾದಿ ಮಾಹಿತಿ ಇಲ್ಲಿದೆ…

ಲಡುಮಾ ಧಮೇಚಾ ಯುವ ವಿದ್ಯಾರ್ಥಿವೇತನ ಕಾರ್ಯಕ್ರಮ-2022 ಭಾರತದಲ್ಲಿನ ಸರ್ಕಾರೇತರ ಸಂಸ್ಥೆಯಾದ ಯುವ ಅನ್‌ಸ್ಟಾಪಬಲ್‌ನ ಕಾರ್ಯಕ್ರಮವಾಗಿದೆ. ಇದು ಪ್ರತಿಭಾವಂತ ಮತ್ತು ಅಗತ್ಯವಿರುವ ವಿದ್ಯಾರ್ಥಿಗಳಿಗೆ ಅವರ ಶೈಕ್ಷಣಿಕ ಕನಸು ಬೆಂಬಲಿಸಲು ಹಣಕಾಸಿನ ನೆರವು ನೀಡುವ ಗುರಿಯನ್ನು ಹೊಂದಿದೆ.

ಈ ಸ್ಕಾಲರ್‌ಶಿಪ್ ಕಾರ್ಯಕ್ರಮದ ಅಡಿಯಲ್ಲಿ ಅಹಮದಾಬಾದ್, ಮುಂಬೈ, ಬೆಂಗಳೂರು ಮತ್ತು ದೆಹಲಿ ಎನ್‌ಸಿಆರ್‌ನ 10ನೇ ತರಗತಿಯ ನಂತರ ಅಥವಾ ಇಂಜಿನಿಯರಿಂಗ್/ಎಂಬಿಬಿಎಸ್ ಕಾರ್ಯಕ್ರಮದ ಮೊದಲ ವರ್ಷದ ನಂತರ JEE/NEET ಕೋಚಿಂಗ್ ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ ತಮ್ಮ ಶೈಕ್ಷಣಿಕ ರಕ್ಷಣೆಗಾಗಿ ವರ್ಷಕ್ಕೆ 50,000 ರೂಪಾಯಿ ಹಣಕಾಸಿನ ನೆರವು ನೀಡಲಾಗುತ್ತದೆ. 

ಯುವ ಅನ್‌ಸ್ಟಾಪಬಲ್ ಭಾರತದಲ್ಲಿನ ಸರ್ಕಾರೇತರ ಸಂಸ್ಥೆಯಾಗಿದ್ದು, ಇದು ಹಿಂದುಳಿದ ಮಕ್ಕಳಿಗೆ ಶಿಕ್ಷಣ, ನೈರ್ಮಲ್ಯ, ಕುಡಿಯುವ ನೀರು, ಯುವ ವ್ಯವಹಾರಗಳು, ಸ್ವಚ್ಛತೆ ಮತ್ತು ವಿವಿಧ ಪಠ್ಯೇತರ ಚಟುವಟಿಕೆಗಳನ್ನು ಪ್ರೋತ್ಸಾಹಿಸಲು ಹಣಕಾಸು ನೆರವು ಒದಗಿಸುತ್ತದೆ. ಇದೇ ನವೆಂಬರ್ 30ರ ಒಳಗೆ ಅರ್ಹ ವಿದ್ಯಾರ್ಥಿಗಳು ಆನ್‌ಲೈನ್ ಅರ್ಜಿ ಸಲ್ಲಿಸುವ ಮೂಲಕ ಈ ಹಣಕಾಸು ನೆರವು ಪಡೆಯಬಹದು. ಇದನ್ನೂ ಓದಿ: ಕೇಂದ್ರ ಕೈಗಾರಿಕಾ ಭದ್ರತಾ ಪಡೆಯ 787 ಕಾನ್ಸ್‌ಟೇಬಲ್ ಹುದ್ದೆಗಳಿಗೆ SSLC ಪಾಸಾದ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ

ನೆರವು ಪಡೆಯಲು ಅರ್ಹತೆಗಳೇನು?

 1. ಅಹಮದಾಬಾದ್, ಮುಂಬೈ, ಬೆಂಗಳೂರು ಮತ್ತು ದೆಹಲಿ ಓಅಖ ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆದುಕೊಳ್ಳಬಹುದು.
 2. 10ನೇ ತರಗತಿಯ ನಂತರ JEE/NEET ಕೋಚಿಂಗ್ ಪಡೆಯಲು ಅಥವಾ ಇಂಜಿನಿಯರಿಂಗ್/MBBS ಮೊದಲ ವರ್ಷಕ್ಕೆ ಸೇರ್ಪಡೆಗೊಳ್ಳಲು ಈ ಹಣಕಾಸು ನೆರವು ಲಭ್ಯವಾಗುತ್ತದೆ.
 3. ವಿದ್ಯಾರ್ಥಿಯು 10ನೇ ತರಗತಿ/12ನೇ ತರಗತಿ ಪರೀಕ್ಷೆಯಲ್ಲಿ ಕನಿಷ್ಠ ೮೫% ಅಂಕಗಳನ್ನು ಗಳಿಸಿರಬೇಕು.
 4. ಅರ್ಜಿದಾರರ ಕುಟುಂಬದ ವಾರ್ಷಿಕ ಆದಾಯವು ಎಲ್ಲಾ ಮೂಲಗಳಿಂದ 3 ಲಕ್ಷ ರೂಪಾಯಿಗಿಂತ ಹೆಚ್ಚಿರಬಾರದು.
 5. ಯುವ ಅನ್‌ಸ್ಟಾಪಬಲ್ ಮತ್ತು buddy4study ಉದ್ಯೋಗಿಗಳ ಮಕ್ಕಳು ಈ ಹಣಕಾಸು ನೆರವು ಪಡೆಯಲು ಅರ್ಹರಲ್ಲ.

ಇದನ್ನೂ ಓದಿ: ತೆಂಗು ರೈತರ ಸಂಸ್ಥೆಯಿಂದ ಕರ್ನಾಟಕದ ಪ್ರತಿ ಜಿಲ್ಲೆಗೆ 50 ಜನ ಪದವೀಧರ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ

ಬೇಕಾಗುವ ದಾಖಲೆಗಳು

 • ಹಿಂದಿನ ತರಗತಿ/ಸೆಮಿಸ್ಟರ್‌ನ ಮಾರ್ಕ್‌ಶೀಟ್
 • ಸರ್ಕಾರ ನೀಡಿದ ಗುರುತಿನ ಪುರಾವೆ (ಆಧಾರ್ ಕಾರ್ಡ್/ವೋಟರ್ ಐಡಿ ಕಾರ್ಡ್/ಚಾಲನಾ ಪರವಾನಗಿ/ಪ್ಯಾನ್ ಕಾರ್ಡ್)
 • ಪ್ರಸಕ್ತ ವರ್ಷದ ಪ್ರವೇಶ ಪುರಾವೆ (ಶುಲ್ಕ ರಸೀದಿ/ಪ್ರವೇಶ ಪತ್ರ/ಸಂಸ್ಥೆಯ ಗುರುತಿನ ಚೀಟಿ/ಬನಫೈಡ್ ಪ್ರಮಾಣಪತ್ರ)
 • ಕುಟುಂಬದ ಆದಾಯದ ಪುರಾವೆ
 • ಅರ್ಜಿದಾರರ ಬ್ಯಾಂಕ್ ಖಾತೆ ವಿವರಗಳು
 • ಅರ್ಜಿದಾರರ ಪಾಸ್‌ಪೋರ್ಟ್ ಗಾತ್ರದ ಭಾವಚಿತ್ರ
 • ಪೋಷಕರ ಆಧಾರ್ ಕಾರ್ಡ್
 • ಅರ್ಜಿದಾರರ ಮನೆಯ ಚಿತ್ರಗಳ PDF (3-4)
 • ಒಂದು ತಿಂಗಳ ವಿದ್ಯುತ್ ಬಿಲ್ (ಯಾವುದೇ ಬೇಸಿಗೆ ತಿಂಗಳು ಉದಾ. ಮಾರ್ಚ್, ಏಪ್ರಿಲ್, ಮೇ)

ಗಮನಿಸಿ: ಯುವ ಅನ್‌ಸ್ಟಾಪಬಲ್ ಅವಶ್ಯಕತೆಗೆ ಅನುಗುಣವಾಗಿ ವಿದ್ಯಾರ್ಥಿಗಳ ಮನೆ ಭೇಟಿ ನೀಡಿ ಆಯ್ಕೆ ಮಾಡಲಗುತ್ತದೆ.

ಇದನ್ನೂ ಓದಿ: ಸಣ್ಣ ವ್ಯಾಪಾರಕ್ಕೆ 10 ಲಕ್ಷ ರೂಪಾಯಿ ಧನ ಸಹಾಯ : ಇಲ್ಲಿ ಅರ್ಜಿ ಸಲ್ಲಿಸಿ

ಅರ್ಜಿ ಸಲ್ಲಿಸುವುದು ಹೇಗೆ?

ಅರ್ಜಿ ಸಲ್ಲಸಲು ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ

buddy4study.com ಪುಟ ತೆರೆದುಕೊಳ್ಳುತ್ತದೆ. ಅಲ್ಲಿ ಸದರಿ ವಿದ್ಯಾರ್ಥಿ ವೇತನ ಕುರಿತ ನಿಬಂಧನೆಗಳ ಸಹಿತ ವಿವರವನ್ನು ಸಂಪೂರ್ಣ ಓದಿಕೊಂಡು ಈ ಹಣಕಾಸು ನೆರವು ಪಡೆಯಲು ನೀವು ಅರ್ಹರಾ? ಎಂಬುವುದನ್ನು ಖಚಿತಪಡಿಸಿಕೊಂಡು ಮುಂದುವರೆಯಿರಿ.

ಬಳಿಕ ‘ಆನ್‌ಲೈನ್ ಅರ್ಜಿ ನಮೂನೆ ಪುಟಕ್ಕೆ ಇಳಿಯಲು ನಿಮ್ಮ ನೋಂದಾಯಿತ ಐಡಿಯನ್ನು ಬಳಸಿಕೊಂಡು buddy4studyಗೆ ಲಾಗಿನ್ ಮಾಡಿ. ಒಂದು ವೇಳೆ ನೋಂದಾಯಿಸದಿದ್ದರೆ, ನಿಮ್ಮ ಇಮೇಲ್/ಮೊಬೈಲ್/ಜಿಮೇಲ್ ಖಾತೆಯೊಂದಿಗೆ buddy4studyನಲ್ಲಿ ನೋಂದಾಯಿಸಿ.

ಇದನ್ನೂ ಓದಿ: 2023ನೇ ಸಾಲಿನ ವಾಯುಪಡೆ ಅಗ್ನಿವೀರರ ನೇಮಕಕ್ಕೆ PUC ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ: ₹40,000 ಸಂಬಳ

ನಿಮ್ಮನ್ನು ಈಗ ಲಾಡುಮಾ ಧಮೇಚಾ ಯುವ ವಿದ್ಯಾರ್ಥಿವೇತನ ಕಾರ್ಯಕ್ರಮ 2022 ಅರ್ಜಿ ನಮೂನೆಯ ಪುಟಕ್ಕೆ ಮರು ನಿರ್ದೇಶಿಸಲಾಗುತ್ತದೆ. ಅಪ್ಲಿಕೇಶನ್ ಪ್ರಕ್ರಿಯೆಯನ್ನು ಪ್ರಾರಂಭಿಸಲು ‘ಅಪ್ಲಿಕೇಶನ್ ಪ್ರಾರಂಭಿಸಿ/ Start Application  ಬಟನ್ ಮೇಲೆ ಕ್ಲಿಕ್ ಮಾಡಿ.

ಆನ್‌ಲೈನ್ ವಿದ್ಯಾರ್ಥಿವೇತನ ಅರ್ಜಿ ನಮೂನೆಯಲ್ಲಿ ಅಗತ್ಯವಿರುವ ವಿವರಗಳನ್ನು ಭರ್ತಿ ಮಾಡಿ. ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ.

ನಿಯಮಗಳು ಮತ್ತು ಷರತ್ತುಗಳನ್ನು ಸ್ವೀಕರಿಸಿ ಮತ್ತು ಪೂರ್ವವೀಕ್ಷಣೆ/Preview ಕ್ಲಿಕ್ ಮಾಡಿ. ಅರ್ಜಿದಾರರು ಭರ್ತಿ ಮಾಡಿದ ಎಲ್ಲಾ ವಿವರಗಳು ಪೂರ್ವವೀಕ್ಷಣೆ ಪರದೆಯಲ್ಲಿ ಸರಿಯಾಗಿ ತೋರಿಸುತ್ತಿದ್ದರೆ, ಅಪ್ಲಿಕೇಶನ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಸಲ್ಲಿಸು/Submit ಬಟನ್ ಕ್ಲಿಕ್ ಮಾಡಿ.

ಇದನ್ನೂ ಓದಿ:  ಇನ್ಮುಂದೆ ಆಧಾರ್ ಕಾರ್ಡ್ ಅಪ್‌ಡೇಟ್ ಮಾಡದಿದ್ದರೆ ಸೌಲಭ್ಯಗಳು ಕಟ್

WhatsApp Group Join Now
Telegram Group Join Now

Related Posts

error: Content is protected !!