NewsSchemes

ಮೇ 31ರೊಳಗೆ ಪ್ಯಾನ್-ಆಧಾರ್ ಲಿಂಕ್ ಮಾಡದಿದ್ದರೆ ಬೀಳಲಿದೆ ದುಪ್ಪಟ್ಟು ತೆರಿಗೆ | ಮೊಬೈಲ್’ನಲ್ಲೇ ಲಿಂಕ್ ಮಾಡಿ… PAN Aadhaar Link Status Check Online

WhatsApp Group Join Now
Telegram Group Join Now

PAN Aadhaar Link Status Check Online : ಮತ್ತೆ ಆಧಾರ್ ಕಾರ್ಡ್ ಪ್ಯಾನ್ ಕಾರ್ಡ್ ಜೋಡಣೆ ಸಂಬAಧ ಆದಾಯ ತೆರಿಗೆ ಇಲಾಖೆಯು ಎಚ್ಚರಿಕೆ ನೀಡಿದೆ. ಇಲಾಖೆಯು ನಿಗದಿತ ಗಡುವಿನೊಳಗೆ ಆಧಾರ್-ಪ್ಯಾನ್ ಜೋಡಣೆ ಪೂರ್ಣಗೊಳಿಸಿದರೆ ತೆರಿಗೆ ಕಡಿತಗೊಳಿಸುವುದಿಲ್ಲ ಎಂದು ಕಳೆದ ತಿಂಗಳು ಸುತ್ತೋಲೆ ಹೊರಡಿಸಿತ್ತು. ಆದರೆ, ಇನ್ನೂ ಅನೇಕರು ಆಧಾರ್-ಪ್ಯಾನ್ ಜೋಡಣೆ ಪ್ರಕ್ರಿಯೆ ಮುಗಿಸಿಲ್ಲವಾದ್ದರಿಂದ ಇದೀಗ ನಿನ್ನೆ ಮೇ 28ರಂದು ಆದಾಯ ತೆರಿಗೆ ಇಲಾಖೆ ಮತ್ತೊಮ್ಮೆ ಎಚ್ಚರಿಸಿದೆ.

ಇದೇ ಮೇ 31 ಆಧಾರ್-ಪ್ಯಾನ್ ಜೋಡಣೆಯ ಕೊನೆಯ ದಿನಾಂಕವಾಗಿದ್ದು; ಈ ಗಡುವಿನೊಳಗೆ ಇವೆರಡನ್ನೂ ಲಿಂಕ್ ಮಾಡದಿದ್ದರೆ ತೆರಿಗೆಯು ದುಪ್ಪಟ್ಟು ಕಡಿತವಾಗಲಿದೆ ಎಂದು ಆದಾಯ ತೆರಿಗೆ ಇಲಾಖೆಯು ಎಚ್ಚರಿಕೆ ನೀಡಿದೆ. ಪ್ಯಾನ್‌ಗೆ ಬಯೊಮೆಟ್ರಿಕ್ ಆಧಾರ್ ಲಿಂಕ್ ಮಾಡದೇ ಇರುವವರಿಗೆ TDS (ಮೂಲದಲ್ಲಿ ತೆರಿಗೆ ಕಡಿತ) ಅನ್ವಯಿಸುವ ದರಕ್ಕಿಂತ ಎರಡು ಪಟ್ಟು ತೆರಿಗೆ ಕಡಿತವಾಗಲಿದೆ.

ಇದನ್ನೂ ಓದಿ: 2024ನೇ ಸಾಲಿನ ಮುಂಗಾರು ಬೆಳೆವಿಮೆ ಅರ್ಜಿ | ಜಿಲ್ಲೆ, ಬೆಳೆವಾರು ಕೊನೆಯ ದಿನಾಂಕಗಳ ಪಟ್ಟಿ ಇಲ್ಲಿದೆ… Kharif Crop Insurance 2024-25 PMFBY Scheme

ಆಧಾರ್-ಪ್ಯಾನ್ ಲಿಂಕ್ ಆಗಿರುವುದನ್ನು ತಿಳಿಯುವುದು ಹೇಗೆ?

ಭದ್ರತಾ ವಿಷಯಕ್ಕೆ ಸಂಬ೦ಧಿಸಿದ೦ತೆ ಪ್ಯಾನ್ ಕಾರ್ಡ್ಗೆ ಆಧಾರ್ ಲಿಂಕ್ ಅನ್ನು ಕಡ್ಡಾಯವಾಗಿ ಲಿಂಕ್ ಮಾಡಬೇಕು ಎಂದು ಸೂಚಿಸಲಾಗಿದ್ದು, ಈಗಾಗಲೇ ಬಹುಪಾಲು ಮಂದಿ ಈ ಪ್ರಕ್ರಿಯೆಯನ್ನು ಪೂರೈಸಿದ್ದರೆ, ಇನ್ನೂ ಕೆಲವರು ಲಿಂಕ್ ಮಾಡಿಸಿಲ್ಲ.

2017ರ ನಂತರ ಪ್ಯಾನ್ ಮಾಡಿಸಿಕೊಂಡವರು ಯಾರೂ ಪ್ಯಾನ್-ಆಧಾರ್ ಲಿಂಕ್ ಮಾಡಿಸುವ ಅಗತ್ಯವಿಲ್ಲ. ಯಾಕೆಂದರೆ, ಅವರಿಗೆ ಪ್ಯಾನ್ ಅರ್ಜಿ ಹಾಕುವಾಗಲೇ ಆಧಾರ್ ಕೊಡುವುದು ಕಡ್ಡಾಯವಾಗಿತ್ತು. ಹೀಗಿದ್ದರೂ ಕೂಡ ಅನೇಕರಿಗೆ ತಮ್ಮ ಆಧಾರ್ ಮತ್ತು ಪ್ಯಾನ್ ಜೋಡಣೆ ಆಗಿದೆಯೋ ಇಲ್ಲವೋ ಎಂಬ ಅನುಮಾನ ಇದ್ದೇ ಇದೆ.

ಹೀಗೆ ತಮ್ಮ ಆಧಾರ್-ಪ್ಯಾನ್ ಜೋಡಣೆಯ ಬಗ್ಗೆ ಗೊಂದಲ ಇರುವವರು ಮೊಬೈಲ್‌ನಲ್ಲೇ ಆಧಾರ್ ಲಿಂಕ್ ಸ್ಟೇಟಸ್ ಚೆಕ್ ಮಾಡುವ ಮೂಲಕ ಅನುಮಾನ ಪರಿಹರಿಸಿಕೊಳ್ಳಬಹುದು. ನಾವು ಲೇಖನದ ಕೊನೆಯಲ್ಲಿ ನೀಡಿರುವ ಲಿಂಕ್ ಮೂಲಕ ಆಧರ್-ಪ್ಯಾನ್ ಜೋಡಣೆ ಮಾಹಿತಿಯನ್ನು ಖಚಿತಪಡಿಸಿಕೊಳ್ಳಬಹುದಾಗಿದೆ.

ಇದನ್ನೂ ಓದಿ: RTC aadhar card link : ಜಮೀನು ಪಹಣಿಗೆ (RTC) ಮೊಬೈಲ್‌ನಲ್ಲೇ ಆಧಾರ್ ಲಿಂಕ್ ಮಾಡಿ | ಇದರಿಂದ ರೈತರಿಗೆ ಸಿಗಲಿದೆ ಹಲವು ಪ್ರಯೋಜನ

ಈ ಲಿಂಕ್ ಕ್ಲಿಕ್ ಮಾಡಿದರೆ ಆದಾಯ ತೆರಿಗೆ ಇಲಾಖೆ ಅಧಿಕೃತ ವೆಬ್‌ಸೈಟ್‌ನ Link Aadhar Status ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ನಿಮ್ಮ 10 ಅಂಕಿಯ ಪ್ಯಾನ್ ಸಂಖ್ಯೆ ಮತ್ತು 12 ಅಂಕಿಯ ಆಧಾರ್ ಸಂಖ್ಯೆಯನ್ನು ನಮೂದಿಸಿ View Aadhar link status ಮೇಲೆ ಕ್ಲಿಕ್ ಮಾಡಿ.

ನಿಮ್ಮ ಆಧಾರ್ ಲಿಂಕ್ ಆಗಿದ್ದರೆ Your PAN CIXXXXXX2L is already linked to given Aadhaar 26XXXXXXXX25  ಹೀಗೆ ‘ಈಗಾಗಲೇ ಲಿಂಕ್ ಆಗಿದೆ’ ಎಂಬ ಪಾಪ್‌ಅಪ್ ಮೆಸೆಜ್ ಕಾಣಿಸಿಕೊಳ್ಳುತ್ತದೆ. ಇಲ್ಲವಾದರೆ ಈ ಕೆಳಗಿನ ಹಂತ ಅನುಸರಿಸುವ ಮೂಲಕ ಲಿಂಕ್ ಮಾಡಿ.

PAN Aadhaar Link Status Check Online

ಲಿಂಕ್ ಮಾಡುವುದು ಹೇಗೆ?

ಪಾಪ್‌ಅಪ್ ಮೆಸೆಜ್‌ನಲ್ಲಿ ಕಾಣುವ Link Adhar ಮೇಲೆ ಕ್ಲಿಕ್ ಮಾಡಿ, ಅಲ್ಲಿ ನಿಮ್ಮ ಆಧಾರ್ ಮತ್ತು ಪ್ಯಾನ್ ನಂಬರ್ ಹಾಕಿ Validate ಮೇಲೆ ಕ್ಲಿಕ್ ಮಾಡಿ. ಬಳಿಕ Continue to pay through E-pay tax ಮೇಲೆ ಕ್ಲಿಕ್ ಮಾಡಿ. ಅಲ್ಲಿ ಪ್ಯಾನ್ ನಂಬರ್‌ನ್ನು ಎರಡು ಸಲ ಹಾಕಿ ನಿಮ್ಮ ಮೊಬೈಲ್ ನಂಬರ್ ಹಾಕಿ Continue ಮೇಲೆ ಕ್ಲಿಕ್ ಮಾಡಿ.

ಆಗ ನಿಮ್ಮ ಮೊಬೈಲ್‌ಗೆ ಬರುವ OTP ಹಾಕಿ Continue ಮೇಲೆ ಕ್ಲಿಕ್ ಮಾಡಿದರೆ ಮತ್ತೊಂದು ಪುಟ ತೆರೆದುಕೊಳ್ಳುತ್ತದೆ. ಅದರಲ್ಲಿ ಮೊದಲನೆ Option ಮೇಲೆ ಕ್ಲಿಕ್ ಮಾಡಿ. ನಂತರ Assessment year 2024-25 ಮತ್ತು Payment minor “Other receipt 500” select ಮಾಡಿ Continue ಮೇಲೆ ಕ್ಲಿಕ್ ಮಾಡಿ. ನಂತರ ನಿಮ್ಮ Bank select ಮಾಡಿ Pay ಮಾಡಿದರೆ ನಿಮ್ಮ ಆಧಾರ್‌ಗೆ ಪ್ಯಾನ್ ಲಿಂಕ್ ಆಗುತ್ತದೆ.

PAN Aadhaar Status Check Link : Click here

ಇದನ್ನೂ ಓದಿ: ಬ್ಯಾಂಕುಗಳಿಂದ ಕಡಿಮೆ ಬಡ್ಡಿ ಸಾಲ ಬೇಕೆ? ಇಲ್ಲಿದೆ ಸರಳ ಮಾರ್ಗ | ಮೊಬೈಲ್‌ನಲ್ಲೇ ಚೆಕ್ ಮಾಡಿ ನಿಮ್ಮ ಸಾಲ ಪಡೆಯುವ ಅರ್ಹತೆ How to Check CIBIL Score?

WhatsApp Group Join Now
Telegram Group Join Now

Related Posts

error: Content is protected !!