NewsSchemesTechnology

Panchamitra whatsapp chat karnataka : ಗ್ರಾಮ ಪಂಚಾಯತಿ ಸಮಸ್ಯೆಗಳಿಗೆ ವಾಟ್ಸಾಪ್’ನಲ್ಲೇ ಪರಿಹಾರ ಪಡೆಯಿರಿ | ಈ ವಾಟ್ಸಾಪ್ ನಂಬರ್‌ಗೆ ಮೆಸೇಜ್ ಮಾಡಿದರೆ ಪರಿಹಾರ ಗ್ಯಾರಂಟಿ

WhatsApp Group Join Now
Telegram Group Join Now

Panchamitra whatsapp chat karnataka : ಇತ್ತೀಚೆಗೆ ರಾಜ್ಯ ಸರ್ಕಾರ ರಾಜ್ಯದ ಗ್ರಾಮ ಪಂಚಾಯತಿಗಳ ಸಮಸ್ಯೆಗಳಿಗೆ ಪರಿಹಾರ ಪಡೆಯಲು ಮತ್ತು ಸೇವೆಗಳಿಗಾಗಿ ಆರಂಭಿಸಿರುವ ‘ಪಂಚಮಿತ್ರ ವ್ಯಾಟ್ಸಪ್ ಚಾಟ್’ (Panchamitra whatsapp chat)  ಮತ್ತು ‘ಪಂಚಮಿತ್ರ ಪೋರ್ಟಲ್’ (Panchmitra Portal) ಗ್ರಾಮೀಣಾಭಿವೃದ್ಧಿಯ ಚಹರೆಯನ್ನೇ ಬದಲಿಸಿದೆ. ಈ ವೇದಿಕೆಯ ಮೂಲಕ ಸಾರ್ವಜನಿಕರು ಗ್ರಾಮೀಣಾಭಿವೃದ್ಧಿ ಇಲಾಖೆಗೆ ಸಂಬ೦ಧಿಸಿದ ಬೇರೆ ಬೇರೆ ಇಲಾಖೆಗಳ ಹಲವು ಸೇವೆಗಳನ್ನು ವಾಟ್ಸಾಪ್ ಚಾಟ್ ಮುಖಾಂತರವೇ ಪಡೆಯಬಹುದಾಗಿದೆ.

ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಆಯುಕ್ತಾಲಯ ಆರಂಭಿಸಿರುವ ‘ಪಂಚಮಿತ್ರ’ ವಾಟ್ಸಾಪ್ ಚಾಟ್‌ಗೆ ಅಭೂತಪೂರ್ವ ಸ್ಪಂದನೆ ದೊರೆತಿದ್ದು; ಕೇವಲ 70 ದಿನದಲ್ಲಿ 88,000ಕ್ಕೂ ಹೆಚ್ಚು ಜನ ಬಳಕೆದಾರರಾಗಿದ್ದಾರೆ. ‘ಪಂಚಮಿತ್ರ ಪೋರ್ಟಲ್’ನಲ್ಲಿ 2.650ಕ್ಕೂ ಹೆಚ್ಚು ಕುಂದು-ಕೊರತೆ ದೂರುಗಳು ದಾಖಲಾಗಿವೆ.

ಕುಳಿತಲ್ಲೇ ಹಲವು ಸೇವೆಗಳು

ಇದು ಪುರಸಭೆ, ನಗರಸಭೆ ಹಾಗೂ ಮಹಾನಗರ ಪಾಲಿಕೆಯಲ್ಲೂ ಇಲ್ಲದ ವಿಶೇಷ ಸೌಲಭ್ಯ. ರಾಜ್ಯದ 5,991 ಗ್ರಾಮ ಪಂಚಾಯತಿಗಳಲ್ಲಿ (Gram Panchayat) ಈ ಸೇವೆ ಆರಂಭವಾಗಿದ್ದು; ಗ್ರಾಮ ಪಂಚಾಯಿತಿಗಳಿಗೆ ಸಂಬ೦ಧಿಸಿದ ಸೇವೆಗಳಿಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು, ಸಲ್ಲಿಸಿದ ಅರ್ಜಿಗಳ ಸ್ಥಿತಿಗತಿ ಪರಿಶೀಲಿಸಲು ಹಾಗೂ ಗ್ರಾಮ ಪಂಚಾಯತಿಗಳಿಗೆ ಸಂಬ೦ಧಿಸಿದ ಕುಂದುಕೊರತೆ ದಾಖಲಿಸಬಹುದಾಗಿದೆ.

ವಿಶೇಷವೆಂದರೆ ಗ್ರಾಮದ ಸಮಸ್ಯೆ ಕುರಿತು ನೇರಾನೇರ ದೂರು ದಾಖಲಿಸಲಾಗದಷ್ಟು ಹಳ್ಳಿ ರಾಜಕೀಯ ಕಲುಷಿತಗೊಂಡಿದೆ. ಪಂಚಾಯತಿ ಸಮಸ್ಯೆಗಳ ಕುರಿತು ನೀಡಿದ ದೂರುಗಳು ಹಲವು ಸಂದರ್ಭಗಳಲ್ಲಿ ವೈಯಕ್ತಿಕ ದ್ವೇಷ ಸಾಧನೆಗೆ ಕಾರಣವಾಗುತ್ತವೆ. ಆದರೆ ‘ಪಂಚಮಿತ್ರ ವಾಟ್ಸಾಪ್ ಚಾಟ್’ ಮೂಲಕ ದೂರು ನೀಡಿದರೆ ದೂರುದಾರರ ಗೌಪ್ಯತೆಯನ್ನೂ ಕಾಪಾಡಲಾಗುತ್ತದೆ. ಹಾಗಾಗಿ ಜನರು ನಿರ್ಭಯವಾಗಿ ದೂರು ನೀಡಬಹುದಾಗಿದೆ.

Drought relief technical issues : ನಿಮಗಿನ್ನೂ ಬರ ಪರಿಹಾರ ಬಂದಿಲ್ಲವೇ? ಹಣ ಪಡೆಯಲು ಈಗಲೇ ಈ ಕೆಲಸ ಮಾಡಿ | ಸರಕಾರದ ಸೂಚನೆ

ಯಾವೆಲ್ಲ ಸೇವೆಗಳು ಸಿಗಲಿವೆ?

ಗ್ರಾಮ ಪಂಚಾಯಿತಿಗೆ ಸಂಬ೦ಧಿಸಿದ೦ತೆ 17 ಸೇವೆಗಳು ಮತ್ತು ಸರ್ಕಾರದ ಇತರೆ ಇಲಾಖೆ ಸಂಬ೦ಧಿಸಿದ 72 ಸೇವೆಗಳು ಸೇರಿ ಒಟ್ಟು 89 ಸರ್ಕಾರಿ ಸೇವೆಗಳು ಪಂಚಮಿತ್ರ ಪೋರ್ಟಲ್ ಮತ್ತು ಪಂಚಮಿತ್ರ ವಾಟ್ಸಪ್ ಚಾಟ್ ಮುಖಾಂತರ ಸಾರ್ವಜನಿಕರಿಗೆ ಲಭ್ಯವಿರಲಿವೆ. ಪ್ರಮುಖ ಸೇವೆಗಳ ವಿವರ ಕೆಳಗಿನಂತಿದೆ:

  • ಕಟ್ಟಡ ನಿರ್ಮಾಣ ಪರವಾನಗಿ
  • ಹೊಸ ನೀರು ಪೂರೈಕೆ ಸಂಪರ್ಕ
  • ನೀರು ಸರಬರಾಜಿನ ಸಂಪರ್ಕ ಕಡಿತ
  • ಕುಡಿಯುವ ನೀರಿನ ನಿರ್ವಹಣೆ
  • ಬೀದಿ ದೀಪದ ನಿರ್ವಹಣೆ
  • ಗ್ರಾಮ ನೈರ್ಮಲ್ಯ ನಿರ್ವಹಣೆ
  • ಉದ್ದಿಮೆ ಪರವಾನಗಿ
  • ಸ್ವಾಧೀನ ಪ್ರಮಾಣ ಪತ್ರ
  • ನಾನಾ ಸೇವೆ ಸಂಬ೦ಧ ರಸ್ತೆ ಅಗೆತಕ್ಕೆ ಅನುಮತಿ
  • ಕೈಗಾರಿಕೆ, ಕೃಷಿ ಆಧಾರಿತ ಉತ್ಪಾದನಾ ಘಟಕ ಸ್ಥಾಪನೆಗೆ ಅನುಮತಿ
  • ನಿರಾಕ್ಷೇಪಣಾ ಪತ್ರ
  • ನರೇಗಾ ಯೋಜನೆಯಡಿ ಜಾಬ್ ಕಾರ್ಡ್ ವಿತರಣೆ
  • ಕಾರ್ಮಿಕರಿಗೆ ಉದ್ಯೋಗ ಕಲ್ಪಿಸುವುದು
  • ಹೊಸ ಇಲ್ಲವೇ ಅಸ್ತಿತ್ವದಲ್ಲಿರುವ ದೂರಸಂಪರ್ಕ ಮೂಲಸೌಕರ್ಯ ಗೋಪುರಕ್ಕೆ ಅನುಮತಿ
  • ಓವರ್ ಗ್ರೇಂಡ್ ಕೇಬಲ್ ಮೂಲಸೌಕರ್ಯ / ನೆಲದಾಳದ ಕೇಬಲ್ ಮೂಲಸೌಕರ್ಯಕ್ಕಾಗಿ ಅನುಮತಿ
  • ಜತೆಗೆ ನಮೂನೆ 9/11ಎ, ನಮೂನೆ 11ಬಿ

ಗ್ರಾಮ ಪಂಚಾಯತಿ ಸಮಸ್ಯೆಗಳಿಗೆ ಪರಿಹಾರ

ವಾಟ್ಸಾಪ್ ಮೂಲಕ ಗ್ರಾಮ ಪಂಚಾಯತಿಗಳಿಗೆ ಸಂಬ೦ಧಿಸಿದ೦ತೆ ಕುಡಿಯುವ ನೀರು, ರಸ್ತೆ ಮತ್ತು ಸೇತುವೆಗಳ ದುರಸ್ತಿ, ಉದ್ಯೋಗ ಖಾತ್ರಿ ಯೋಜನೆಗೆ ಮತ್ತು ಪಂಚಾಯತ್ ರಾಜ್ ವಿಷಯಗಳಿಗೆ ಸಂಬAಧಿತ ಕುಂದುಕೊರತೆ ದಾಖಲಿಸಿ ಪರಿಹಾರ ಕಂಡುಕೊಳ್ಳಬಹುದಾಗಿದೆ. ಕುಂದು-ಕೊರತೆಯ ಸ್ಥಿತಿ-ಗತಿಯನ್ನು ಕಾಲಕಾಲಕ್ಕೆ ಪರಿಶೀಲಿಸಲೂ ಅವಕಾಶ ಕಲ್ಪಿಸಲಾಗಿದೆ.

ಇವುಗಳ ಜೊತೆಗೆ ಚುನಾಯಿತ ಪ್ರತಿನಿಧಿಗಳ ವಿವರ, ಸಿಬ್ಬಂದಿ ಮಾಹಿತಿ, ಪೂರ್ಣಗೊಂಡ ಗ್ರಾಪಂ ಸಭೆಗಳ ನಡಾವಳಿ, ಗ್ರಾಪಂ ಮುಂಬರುವ ಸಭೆಗಳ ಮಾಹಿತಿ, ಆದಾಯ ಸಂಗ್ರಹ ವಿವರ, ಸೇವೆಗಳ ವಿವರಗಳು, ಸ್ವ ಸಹಾಯ ಗುಂಪಿನ ವಿವರ ಸೇರಿದಂತೆ ಹಲವು ಮಾಹಿತಿಯನ್ನು ಕೂಡ ಪಡೆದುಕೊಳ್ಳಬಹುದಾಗಿದೆ.

E-Swathu : ಗ್ರಾಮ ಪಂಚಾಯತಿಯಲ್ಲಿ ಆಸ್ತಿ ಇ-ಸ್ವತ್ತು ಮಾಡಿಸುವುದು ಹೇಗೆ? | ಈ ಸರಳ ವಿಧಾನ ಅನುಸರಿಸಿ..

ವಾಟ್ಸಪ್ ಚಾಟ್‌ನಲ್ಲಿ ಸೇವೆ ಪಡೆಯುವುದು ಹೇಗೆ?

ಹಂತ 1: ರಾಜ್ಯ ಸರ್ಕಾರದ ‘ಪಂಚಮಿತ್ರ ವಾಟ್ಸಪ್ ಚಾಟ್’ ವ್ಯವಸ್ಥೆಯನ್ನು ಬಳಸಿಕೊಂಡು ಎಲ್ಲಾ ಸೇವೆಗಳನ್ನು ಪಡೆಯಲು 82775 06000 ವಾಟ್ಸಪ್ ನಂಬರಿಗೆ ಮೊದಲು ‘ಹಾಯ್’ (Hi) ಎಂಬ ಸಂದೇಶ ಕಳುಹಿಸಿ.

ಹಂತ 2: ನಂತರದಲ್ಲಿ ನಿಮಗೆ ಭಾಷೆಗಳ ಪಟ್ಟಿಯನ್ನು ತೋರಿಸಲಾಗುತ್ತದೆ. ಕನ್ನಡ ಮತ್ತು ಇಂಗ್ಲಿಷ್ ಭಾಷೆ ಆಯ್ಕೆಗಳ ಪೈಕಿ ಕನ್ನಡ ಆಯ್ಕೆ ಮಾಡಿಕೊಂಡು ನಿಮ್ಮ ಜಿಲ್ಲೆ, ತಾಲ್ಲೂಕು ಹಾಗೂ ಗ್ರಾಮ ಪಂಚಾಯಿತಿಗಳನ್ನು ಆಯ್ಕೆ ಮಾಡಿಕೊಳ್ಳಬೇಕು.

ಹಂತ 3: ಕೊನೆಯದಾಗಿ ನಿಮ್ಮ ಗ್ರಾಮ ಪಂಚಾಯಿತಿಯನ್ನು ಆಯ್ಕೆ ಮಾಡಿಕೊಂಡು ನಿಮಗೆ ಬೇಕಾಗಿರುವ ಸೇವೆಗಳ ಮಾಹಿತಿ ಅಥವಾ ಕುಂದು ಕೊರತೆಯನ್ನು ಆಯ್ಕೆ ಮಾಡಿಕೊಳ್ಳುವ ಮೂಲಕ ಅವುಗಳ ಲಾಭ ಪಡೆಯಬಹುದಾಗಿದೆ.

New Ration Card Application Process : ಹೊಸ ರೇಷನ್ ಕಾರ್ಡ್ ಅರ್ಜಿ ಆರಂಭ | ಈ ದಿನದಿಂದ 2,95,986 ಅರ್ಜಿಗಳು ವಿಲೇವಾರಿ

WhatsApp Group Join Now
Telegram Group Join Now

Related Posts

error: Content is protected !!