ನಿಮ್ಮ ಮನೆಗೆ ಉಚಿತ ಸೋಲಾರ್ ವಿದ್ಯುತ್ ಪಡೆಯಲು ಈಗಲೇ ಅರ್ಜಿ ಸಲ್ಲಿಸಿ | ರಾಜ್ಯದಲ್ಲಿ 4.36 ಲಕ್ಷ ಮಂದಿ ನೋಂದಣಿ PM Surya Ghar Scheme Free Solar Power

WhatsApp
Telegram
Facebook
Twitter
LinkedIn

PM Surya Ghar Scheme Free Solar Power : ಕಳೆದ ಫೆಬ್ರವರಿ 15ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಜಾರಿಗೊಳಿಸಿದ್ದ ಪ್ರಧಾನ ಮಂತ್ರಿ ಸೂರ್ಯ ಫರ್ ಯೋಜನೆಗೆ (PM – Surya Ghar Muft Bijli Jojana) ರಾಜ್ಯದಲ್ಲಿ ಭರ್ಜರಿ ಸ್ಪಂದನೆ ವ್ಯಕ್ತವಾಗುತ್ತಿದೆ.

ಮನೆ ಮೇಲ್ಚಾವಣಿಯಲ್ಲಿ (Rooftop Scheme) ಸೋಲಾರ್ ವಿದ್ಯುತ್ ಘಟಕ ಆಳವಡಿಕೆಗೆ ರಾಜ್ಯದ ಜನರು ಭಾರೀ ಆಸಕ್ತಿ ತೋರುತ್ತಿದ್ದು, ಒಟ್ಟು 4.36 ಲಕ್ಷ ಮಂದಿ ಈಗಾಗಲೇ ನೋಂದಣಿ ಮಾಡಿಕೊಂಡಿದ್ದಾರೆ. ಬೆಂಗಳೂರು ನಗರ ಹಾಗೂ ಬೆಳಗಾವಿಯಲ್ಲಿ ಹೆಚ್ಚು ನೋಂದಣಿಯಾಗಿದೆ ಎಂದು ಬೆಸ್ಕಾಂ ಮಾಹಿತಿ ನೀಡಿದೆ.

ರಾಜ್ಯದಲ್ಲಿ 2,686 ಸೌರ ಘಟಕಗಳು ಅಳವಡಿಕೆ

ರಾಜ್ಯ ಸರ್ಕಾರ ಕಳೆದ ಮೇ 24ರಂದು ಪ್ರಧಾನ ಮಂತ್ರಿ ಸೂರ್ಯ ಫರ್ ಯೋಜನೆಯನ್ನು ಪರಿಣಾಮಕಾರಿ ಅನುಷ್ಠಾನಗೊಳಿಸಲು ರಾಜ್ಯದ ಎಲ್ಲ ವಿದ್ಯುತ್ ಸರಬರಾಜು ಕಂಪನಿಗಳಿಗೆ ಸೂಚಿಸಿ, ಈ ನಿಟ್ಟಿನಲ್ಲಿ ಅನುಸರಿಸಬೇಕಾದ ಕ್ರಮಗಳ ಬಗ್ಗೆ ನಿರ್ದೇಶನ ನೀಡಿತ್ತು.

ಮೇ ತಿಂಗಳಿನಿ೦ದ ಈತನಕ ರಾಜ್ಯದಲ್ಲಿ ಒಟ್ಟು 4,36,016 ಮಂದಿ ನೊಂದಾಯಿಸಿಕೊ೦ಡಿದ್ದು, 29,830 ಮಂದಿ ಅರ್ಜಿಗಳನ್ನು ಸಲ್ಲಿಸಿದ್ದಾರೆ. ಈಗಾಗಲೇ 2,686 ಜನರು ಸೂರ್ಯ ಘರ್ ಯೋಜನೆಯಡಿ ತಮ್ಮ ಮನೆಗಳಿಗೆ ಸೌರ ಘಟಕಗಳನ್ನು ಅಳವಡಿಸಿಕೊಂಡಿದ್ದಾರೆ.

ತಿಂಗಳಿಗೆ 300 ಯೂನಿಟ್ ಉಚಿತ ವಿದ್ಯುತ್

ಸರ್ಕಾರಿ ಉದ್ಯೋಗದಲ್ಲಿ ಇಲ್ಲದ ಹಾಗೂ ಸ್ವಂತ ಮನೆ ಹೊಂದಿರುವ ಯಾರು ಬೇಕಾದರೂ ಈ ಯೋಜನೆಯಡಿ ಅರ್ಜಿ ಸಲ್ಲಿಸಬಹುದು. ತಮ್ಮ ಮನೆಯ ಛಾವಣಿಯ ಮೇಲೆ ಸೋಲಾರ್ ವಿದ್ಯುತ್ ಘಟಕವನ್ನು ಅಳವಡಿಸಿಕೊಳ್ಳಲು ಸಬ್ಸಿಡಿ ಮತ್ತು ಕಡಿಮೆ ಬಡ್ಡಿ ಸಾಲ ನೀಡಲಾಗುತ್ತದೆ.

ಇದರಿಂದ ಫಲಾನುಭವಿಗಳಿಗೆ ಯಾವುದೇ ರೀತಿಯ ವಿದ್ಯುತ್ ಬಿಲ್ ಬರುವುದಿಲ್ಲ. ಒಂದು ತಿಂಗಳಿಗೆ 300 ಯೂನಿಟ್ ವರೆಗಿನ ಉಚಿತ ವಿದ್ಯುತ್ ಸಿಗುತ್ತದೆ. ಮನೆಗೆ ಬಳಕೆಯಾಗಿ ಮಿಕ್ಕಿದ ಹೆಚ್ಚುವರಿ ವಿದ್ಯುತ್ ತಯಾರಿಸಿದರೆ ಅದನ್ನು ಮಾರಾಟ ಮಾಡಿ ಆದಾಯ ಕೂಡ ಗಳಿಸಬಹುದು.

ಸಹಾಯಧನ ವಿವರ

ಪ್ರಧಾನ ಮಂತ್ರಿ ಸೂರ್ಯ ಫರ್ ಯೋಜನೆಯಡಿ ಸೌರ ಮೇಲ್ಚಾವಣಿ ಘಟಕ ಅಳವಡಿಸಿಕೊಳ್ಳುವವರಿಗೆ ಕೇಂದ್ರ ಸರ್ಕಾರ ಸಹಾಯಧನ ನೀಡಲಿದ್ದು, ಸಬ್ಸಿಡಿ ವಿವರ ಈ ಕೆಳಗಿನಂತಿದೆ:

  • 1 ಕಿಲೋ ವ್ಯಾಟ್ ಸಾಮರ್ಥ್ಯದ ಘಟಕಕ್ಕೆ 30,000 ರೂ.,
  • 2 ಕಿಲೋ ವ್ಯಾಟ್ ಸಾಮರ್ಥ್ಯದ ಘಟಕಕ್ಕೆ 60,000 ರೂ.,
  • 3 ಕಿಲೋ ವ್ಯಾಟ್ ಸಾಮರ್ಥ್ಯದ ಘಟಕಕ್ಕೆ 78,000 ರೂ.,
ಯೋಜನೆಯಡಿ ನೋಂದಣಿ ಹೇಗೆ?

ಪ್ರಧಾನ ಮಂತ್ರಿ ಸೂರ್ಯ ಫರ್ ಯೋಜನೆಯಡಿ ಸೋಲಾರ್ ಘಟಕ ಅಳವಡಿಕೆಯಲ್ಲಿ ಆಸಕ್ತಿಯುಳ್ಳವರು www.pmsuryaghar.gov.in ಈ ವೆಬ್‌ಸೈಟ್‌ಗೆ ಭೇಟಿ ನೀಡಿ, ನೋಂದಣಿ ಮಾಡಿಕೊಳ್ಳಬಹುದಾಗಿದೆ.

ರಾಜ್ಯ, ಜಿಲ್ಲೆ, ನಿಮ್ಮ ಎಸ್ಕಾಂ ಕಂಪನಿ ಹಾಗೂ ನಿಮ್ಮ ಮನೆಯ ವಿದ್ಯುತ್ ಬಿಲ್‌ನಲ್ಲಿರುವ ಆಕೌಂಟ್ ನಂಬರ್ ನಮೂದಿಸಿದ ಬಳಿಕ, ಮೊಬೈಲ್ ಸಂಖ್ಯೆ ಮತ್ತು ಇ-ಮೇಲ್ ನಮೂದಿಸಿ, ನಂತರ ಪೋರ್ಟಲ್ ನಿರ್ದೇಶನ ಅನುಸರಿಸಿ ನೋಂದಣಿ ಪ್ರಕ್ರಿಯೆ ಮುಗಿಸಬೇಕಿದೆ. ಸೋಲಾರ್ ರೂಫ್‌ಟಾಫ್ ಅಳವಡಿಕೆಗೆ ಪೋರ್ಟಲ್‌ನಲ್ಲಿ ಗುರುತಿಸಿರುವ ವೆಂಡರ್‌ಗಳನ್ನು ಆಯ್ಕೆ ಮಾಡಿಕೊಳ್ಳಬೇಕಿದೆ.

ಅರ್ಜಿ ಸಲ್ಲಿಕೆ ಲಿಂಕ್ : Apply ಮಾಡಿ

Samagra Krushi   About Us
Samagra Krushi samagrakrushi.com - Comprehensive Kannada website for govt scheme, education, jobs information Read More
For Feedback - [email protected]

LATEST Post

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

WhatsApp Icon Telegram Icon