JobsNews

ಪಿಯುಸಿ ಪಾಸಾದವರಿಗೆ ರೈಲ್ವೆ ಟಿಕೆಟ್ ಕಲೆಕ್ಟರ್ ಹುದ್ದೆಗಳು | 11,250 ಹುದ್ದೆಗಳಿಗೆ ಅರ್ಜಿ ಆಹ್ವಾನ Railway Ticket Collector (TC) Recruitment 2024

WhatsApp Group Join Now
Telegram Group Join Now

Railway Ticket Collector (TC) Recruitment 2024 : ಭಾರತೀಯ ರೈಲ್ವೆ ಇಲಾಖೆಯಲ್ಲಿ ನೇಮಕಾತಿ ಹಂಗಾಮ ಮತ್ತೆ ಮುಂದುವರೆದಿದೆ. 2024-25ನೇ ಸಾಲಿನಲ್ಲಿ ಜನವರಿಯಿಂದ ಈ ವರೆಗೆ ಸುಮಾರು 15,000ಕ್ಕೂ ಹೆಚ್ಚು ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಪ್ರಕಟಿಸಿದೆ.

ಅಸಿಸ್ಟೆಂಟ್ ಲೋಕೋ ಪೈಲಟ್, ಟೆಕ್ನಿಷಿಯನ್ ಮತ್ತು ಆರ್‌ಪಿಎಫ್‌ನಲ್ಲಿರುವ ನಾಲ್ಕು 4000ಕ್ಕೂ ಹೆಚ್ಚು ಕಾನ್ಸ್’ಟೆಬಲ್, ಸಬ್ ಇನ್ಸ್’ಪೆಕ್ಟರ್ ಹುದ್ದೆಗಳ ನೇಮಕಾತಿಗೂ ಅರ್ಜಿ ಸಲ್ಲಿಕೆ ಮುಕ್ತಾಯಗೊಂಡಿದೆ.

ಇದೀಗ ಸದ್ಯದಲ್ಲಿಯೇ ರೈಲ್ವೆ ಟಿಕೆಟ್ ಕಲೆಕ್ಟರ್ ಹುದ್ದೆಗಳ ಭರ್ತಿಗೆ ಜೂನ್ ಮೊದಲ ವಾರ ಅಧಿಸೂಚನೆ ಹೊರಬೀಳಲಿದ್ದು; ಪಿಯುಸಿ ಪಾಸಾದ ಅಭ್ಯರ್ಥಿಗಳಿಗೆ ಇದೊಂದು ಸುವರ್ಣಾವಕಾಶವಾಗಿದೆ.

ಇದನ್ನೂ ಓದಿ: 2024ನೇ ಸಾಲಿನ ಮುಂಗಾರು ಬೆಳೆವಿಮೆ ಅರ್ಜಿ | ಜಿಲ್ಲೆ, ಬೆಳೆವಾರು ಕೊನೆಯ ದಿನಾಂಕಗಳ ಪಟ್ಟಿ ಇಲ್ಲಿದೆ… Kharif Crop Insurance 2024-25 PMFBY Scheme

11,250 ಟಿಕೆಟ್ ಕಲೆಕ್ಟರ್ ಹುದ್ದೆಗಳು

ರೈಲ್ವೆ ಇಲಾಖೆಯು ಈ ಬಾರಿಯೂ ಬರೋಬ್ಬರಿ 11,250 ಟಿಕೆಟ್ ಕಲೆಕ್ಟರ್ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲಿದೆ ಎನ್ನಲಾಗುತ್ತಿದೆ. ರೈಲ್ವೆಯಲ್ಲಿ ಕಾರ್ಯನಿರ್ವಹಿಸುವ ಕನಸಿರುವ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಪ್ರಯತ್ನಿಸಬಹುದು.

ಈವರೆಗಿನ ಟಿಸಿ (Ticket Collector) ನೇಮಕಾತಿಗೆ ಇದ್ದ ನಿಯಮಾನುಸಾರ 18ರಿಂದ 38 ವರ್ಷದೊಳಗಿನ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ನಿಗದಿತ ಗರಿಷ್ಠ ವಯೋಮಿತಿಯಲ್ಲಿ ಎಲ್ಲಾ ಸರಕಾರಿ ನೇಮಕಾತಿಯಂತೆ ಒಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಹಾಗೂ ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ ಐದು ವರ್ಷಗಳ ವಯೋಮಿತಿ ಸಡಿಲಿಕೆ ಇರುತ್ತದೆ.

Railway TC Recruitment 2024

ಇದನ್ನೂ ಓದಿ: ಸರಕಾರಿ ನೌಕರರ ಸಂಬಳ ಹೆಚ್ಚಳಕ್ಕೆ ಸಿದ್ಧತೆ | ಯಾರಿಗೆ ಎಷ್ಟು ಹೆಚ್ಚಳವಾಗಲಿದೆ? ಸರಕಾರದ ಗ್ರೀನ್ ಸಿಗ್ನಲ್ Increase in salary of government employees

ವಿದ್ಯಾರ್ಹತೆ ಮತ್ತು ಅರ್ಜಿ ಶುಲ್ಕ ವಿವರ

ಅರ್ಜಿ ಸಲ್ಲಿಸುವವರು ದೇಶದ ಯಾವುದೇ ಅಧಿಕೃತ ಶಿಕ್ಷಣ ಸಂಸ್ಥೆಯಿ೦ದ ಪಿಯುಸಿ ವಿದ್ಯಾರ್ಹತೆ ಪಡೆದಿರಬೇಕಾಗುತ್ತದೆ. ಎಸ್‌ಸಿ/ಎಸ್‌ಟಿ ಹೊರತುಪಡಿಸಿ ಉಳಿದ ಅಭ್ಯರ್ಥಿಗಳು 100 ರೂಪಾಯಿ ಅರ್ಜಿ ಶುಲ್ಕವನ್ನೂ ಪಾವತಿಸಬೇಕಾಗುತ್ತದೆ.

ಈ ನೇಮಕಾತಿಗೂ ಕಂಪ್ಯೂಟರ್ ಆಧಾರಿತ ಪರೀಕ್ಷೆಯನ್ನು ನಡೆಸಲಾಗುತ್ತದೆ. ಈಗಾಗಲೇ ರೈಲ್ವೆಯು ಈ ವರ್ಷದಿಂದ ಸಿಬಿಟಿಯನ್ನು ಕನ್ನಡ ಸೇರಿದಂತೆ ವಿವಿಧ 13 ಭಾಷೆಗಳಲ್ಲಿ ನಡೆಸುವುದಾಗಿ ಘೋಷಿಸಿದೆ. ಟಿಸಿ ಹುದ್ದೆಗಳ ಆಯ್ಕೆ ಪ್ರಕ್ರಿಯೆಗೂ ಪ್ರಾದೇಶಿಕ ಭಾಷೆಗಳಲ್ಲಿ ಪರೀಕ್ಷೆ ಬರೆಯಲು ಅವಕಾಶ ನೀಡುವ ನಿರೀಕ್ಷೆಯಿದೆ.

ಕೇಂದ್ರ ಸರಕಾರಿ ಅಧೀನದ ಭಾರತೀಯ ರೈಲ್ವೆ ಇಲಾಖೆಯಲ್ಲಿ ಸೇವೆ ಸಲ್ಲಿಸುವ ಆಸಕ್ತಿ ಮತ್ತು ಅರ್ಹತೆಯುಳ್ಳ ಅಭ್ಯರ್ಥಿಗಳು ಟಿಕೆಟ್ ಕಲೆಕ್ಟರ್ ಹುದ್ದೆಗಳಿಗೆ ಈಗಿನಿಂದಲೇ ಪ್ರಯತ್ನ ನಡೆಸಬಹುದು. ಈ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಕುರಿತ ಅಧಿಕೃತ ಅಧಿಸೂಚನೆ ಹಾಗೂ ಸಮಗ್ರ ವಿವರಗಳಿಗಾಗಿ  https://samagrakrushi.com/ ಜಾಲತಾಣ ಫಾಲೋ ಮಾಡಿ…

ಇದನ್ನೂ ಓದಿ: ನಿಮ್ಮ ಜಮೀನು ಒತ್ತುವರಿಯಾದರೆ ತಗಾದೆ ಇಲ್ಲದೇ ಹದ್ದುಬಸ್ತು ಮಾಡಿಕೊಳ್ಳುವುದು ಹೇಗೆ? ಇಲ್ಲಿದೆ ತಜ್ಞರ ಸರಳ ಸಲಹೆ… Haddubastu land survey

WhatsApp Group Join Now
Telegram Group Join Now

Related Posts

error: Content is protected !!