NewsSchemes

ರೇಷನ್ ಕಾರ್ಡ್ ತಿದ್ದುಪಡಿಗೆ ಮತ್ತೆ ಅವಕಾಶ | ತಪ್ಪದೇ ಈ ಅವಕಾಶ ಬಳಸಿಕೊಳ್ಳಿ Ration Card Correction Karnataka

WhatsApp Group Join Now
Telegram Group Join Now

Ration Card Correction Karnataka: ಬಿಪಿಎಲ್, ಎಪಿಎಲ್ ರೇಷನ್ ಕಾರ್ಡ್’ದಾರರಿಗೆ ಆಹಾರ ಇಲಾಖೆ ಸಿಹಿಸುದ್ದಿ ನೀಡಿದೆ. ಪಡಿತರ ಚೀಟಿದಾರರು ಮತ್ತೆ ತಿದ್ದುಪಡಿಗೆ (Ration Card Updates) ಅರ್ಜಿ ಸಲ್ಲಿಕೆ ಮಾಡಬಹುದು. ಈ ಬಗ್ಗೆ ಆಹಾರ ಇಲಾಖೆ ಮಾಹಿತಿ ಹಂಚಿಕೊ೦ಡಿದೆ. ರೇಷನ್ ಕಾರ್ಡ್’ದಾರರು ಈ ಅವಕಾಶ ಬಳಸಿಕೊಳ್ಳಲು ಕೋರಲಾಗಿದೆ.

ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಕೆಗೆ ವರ್ಷಗಳಿಂದ ಅವಕಾಶ ಕಲ್ಪಿಸಿಲ್ಲ. ಕೊನೆ ಪಕ್ಷ ತಿದ್ದುಪಡಿಗಾದರೂ ಹೆಚ್ಚಿನ ಸಮಯಾವಕಾಶ ನೀಡುವಂತೆ ಜನರಿಂದ ಆಕ್ರೋಶ ವ್ಯಕ್ತವಾಗುತ್ತ ಬಂದಿದೆ. ಈ ಹಿನ್ನಲೆಯಲ್ಲಿ ರಾಜ್ಯ ಸರಕಾರ ಎಪಿಎಲ್ (APL Card), ಬಿಪಿಎಲ್ (BPL Card) ಹಾಗೂ ಅಂತ್ಯೋದಯ ಪಡಿತರ ಕಾರ್ಡ್ (Anthyodaya Card) ತಿದ್ದುಪಡಿಗೆ ಅವಕಾಶ ಕಲ್ಪಿಸಿದೆ.

ಇದನ್ನೂ ಓದಿ: ಮಹಿಳೆಯರಿಗೆ ಉಜ್ವಲ ಉಚಿತ ಸಿಲಿಂಡರ್ ಪಡೆಯಲು ಅರ್ಜಿ ಆಹ್ವಾನ | ಈಗಲೇ ಅರ್ಜಿ ಸಲ್ಲಿಸಿ… Pradhan Mantri Ujjwala Yojana

ತಿದ್ದುಪಡಿ ಸಮಯ

ಇಂದಿನಿ೦ದ ರೇಷನ್ ಕಾರ್ಡ್ ತಿದ್ದುಪಡಿಗೆ ಅವಕಾಶವಿದೆ. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿಯೂ ಬೆಳಗ್ಗೆ 10 ಗಂಟೆಯಿ೦ದ ಸಂಜೆ 5 ಗಂಟೆಯ ವರೆಗೆ ಬಯೋಮೆಟ್ರಿಕ್ ಸೌಲಭ್ಯ ಇರುವ ಬೆಂಗಳೂರು ಒನ್ (Bangalore One), ಕರ್ನಾಟಕ ಒನ್ (karnataka One) ಹಾಗೂ ಗ್ರಾಮ ಒನ್ ಕೇಂದ್ರಗಳಲ್ಲಿ (Grama One Center) ಪಡಿತರ ಕಾರ್ಡ್ ತಿದ್ದುಪಡಿ ಮಾಡಿಕೊಳ್ಳಬಹುದಾಗಿದೆ.

Ration Card Correction Karnataka

ಏನೆಲ್ಲ ತಿದ್ದುಪಡಿ ಮಾಡಬಹುದು?

  • ರೇಷನ್ ಕಾರ್ಡ್ನಲ್ಲಿರುವ ಫಲಾನುಭವಿಗಳ ಮಾಹಿತಿ
  • ಹೆಚ್ಚುವರಿ ಫಲಾನುಭವಿಗಳ ಹೆಸರು ಸೇರ್ಪಡೆ
  • ಮೃತಪಟ್ಟ ಕುಟುಂಬ ಸದಸ್ಯರ ಹೆಸರು ತೆಗೆದು ಹಾಕುವುದು
  • ಐದು ವರ್ಷದೊಳಗಿನ ಮಕ್ಕಳ ಹೆಸರು ಸೇರ್ಪಡೆ
  • ಹೊಸದಾಗಿ ಮದುವೆಯಾಗಿ ಬಂದ ಸೊಸೆಯ ಹೆಸರು ಸೇರ್ಪಡೆ
  • ನ್ಯಾಯಬೆಲೆ ಅಂಗಡಿ ಬದಲಾವಣೆ
  • ಬೇರೆ ಜಿಲ್ಲೆಗೆ ವರ್ಗಾವಣೆ ಸೇರಿದಂತೆ ವಿವಿಧ ತಾಂತ್ರಿಕ ದೋಷಗಳ ತಿದ್ದುಪಡಿಗೆ ಅವಕಾಶ ಕಲ್ಪಿಸಲಾಗಿದೆ.

ಇದನ್ನೂ ಓದಿ: ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ₹7 ಲಕ್ಷದ ವರೆಗೂ ಎಸ್‌ಬಿಐ ಆಶಾ ಸ್ಕಾಲರ್‌ಶಿಪ್ ಆರ್ಥಿಕ ನೆರವು | ಅರ್ಜಿ ಆಹ್ವಾನ SBI Asha Scholarship Program 2024

ತಿದ್ದುಪಡಿಗೆ ಬೇಕಾದ ದಾಖಲೆಗಳೇನು?

  • ಪ್ರಸ್ತುತ ಇರುವ ರೇಷನ್ ಕಾರ್ಡ್ ಪ್ರತಿ
  • ಕುಟುಂಬ ಸದಸ್ಯರ ಆಧಾರ್ ಕಾರ್ಡ್
  • ಹೊಸ ಹೆಸರು ಸೇರ್ಪಡೆಗೆ ಆಧಾರ್ ಕಾರ್ಡ್, ಜನನ ಪ್ರಮಾಣ ಪತ್ರ
  • ತೀರಿಹೋದ ಹಿರಿಯರ ಮರಣ ಪ್ರಮಾಣ ಪತ್ರ
  • ಮೊಬೈಲ್ ನಂಬರ್

ತಿದ್ದುಪಡಿ ಎಲ್ಲಿ ಮಾಡಿಸಬೇಕು?

ರೇಷನ್ ಕಾರ್ಡ್ನಲ್ಲಿನ ತಿದ್ದುಪಡಿಗಾಗಿ ಗ್ರಾಮ ಒನ್, ಕಾಮನ್ ಸರ್ವೀಸ್ ಸೆಂಟರ್ ಅಥವಾ ಕರ್ನಾಟಕ ಒನ್ ಕೇಂದ್ರಗಳಲ್ಲಿ ಅವಕಾಶ ಕಲ್ಪಿಸಲಾಗಿದೆ. ಇಂದಿನಿAದ ಬೆಳಗ್ಗೆ 10ರಿಂದ ಸಂಜೆ 5 ಗಂಟೆಯ ವರೆಗೆ ಅರ್ಜಿದಾರರು ತಿದ್ದುಪಡಿ ಕೇಂದ್ರಗಳಲ್ಲಿ ಪಡಿತರ ಚೀಟಿ ತಿದ್ದುಪಡಿ ಮಾಡಿಸಬಹುದಾಗಿದೆ.

ಇದನ್ನೂ ಓದಿ: 10ನೇ ತರಗತಿ ಪಾಸಾದವರಿಂದ ಹೋಮ್‌ಗಾರ್ಡ್ ಹುದ್ದೆಗಳಿಗೆ ಅರ್ಜಿ ಆಹ್ವಾನ Home Guard Recruitment Belagavi 2024

WhatsApp Group Join Now
Telegram Group Join Now

Related Posts