Solar Agricultural Pumpset Scheme 2024 : ಕರ್ನಾಟಕ ರಾಜ್ಯ ಸರ್ಕಾರದಿಂದ ರೈತರ ಕೃಷಿ ಪಂಪ್‌ಸೆಟ್’ಗಳಿಗೆ ನಿರಂತರ ಮತು ಸಮರ್ಪಕ ವಿದ್ಯುತ್ ಕಲ್ಪಿಸುವ ನಿಟ್ಟಿನಲ್ಲಿ ಶೇಕಡಾ 80ರಷ್ಟು ಸಹಾಯಧನದಲ್ಲಿ ಸೋಲಾರ್ ವಿದ್ಯುತ್ ಘಟಕ ಅಳವಡಿಕೆಗೆ ಅರ್ಹ ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ. ಈ ಯೋಜನೆಗೆ ಸಂಬ೦ಧಿಸಿದ ಸಂಪೂರ್ಣ ಮಾಹಿತಿಯನ್ನು ಈ ಕೆಳಗಿನ ಲೇಖನದಲ್ಲಿ ನೀಡಲಾಗಿದೆ.
ಯಾವುದು ಈ ಸೋಲಾರ್ ಯೋಜನೆ?
ಸರಕಾರ ರಾಜ್ಯದ ರೈತರಿಗೆ ನೀರಾವರಿಗಾಗಿ ನಿರಂತರ ಕರೆಂಟ್ ಒದಗಿಸುವ ಉದ್ದೇಶದಿಂದ ಕೃಷಿ ಪಂಪ್‌ಸೆಟ್’ಗಳಿಗೆ ಸೋಲಾರ್ ವಿದ್ಯುತ್ ಘಟಕ ಕಳವಡಿಸುವ ಮಹತ್ವಾಕಾಂಕ್ಷಿ ಯೋಜನೆಯನ್ನು ಅನುಷ್ಠಾನಗೊಳಿಸಿದೆ. ‘ಕುಸುಮ್-ಬಿ ಯೋಜನೆ’ ಹೆಸರಿನ ಈ ಯೋಜನೆಯು ರಾಜ್ಯ ಮತ್ತು ಕೇಂದ್ರ ಸರಕಾರ ಪ್ರಾಯೋಜಿತ ಯೋಜನೆಯಾಗಿದ್ದು; ಅರ್ಹ ರೈತರಿಗೆ ಶೇ.80ರಷ್ಟು ಸಹಾಯಧನ ನೀಡಲಾಗುತ್ತದೆ.
ಈ ಯೋಜನೆಯ ಅಡಿಯಲ್ಲಿ ಕೃಷಿ ಪಂಪ್‌ಸೆಟ್’ಗಳಿಗೆ ಸೋಲಾರ್ ವಿದ್ಯುತ್ ಸಂಪರ್ಕ (Solar agricultural pump set) ಅಳವಡಿಸುವ ಗುರಿಯನ್ನು ಸರ್ಕಾರ ಹೊಂದಿದೆ. ರೈತರು ತೆರೆದ / ಕೊರೆದ ಬಾವಿಗಳಿಗೆ 3 ಹೆಚ್.ಪಿ ಯಿಂದ 10 ಹೆಚ್.ಪಿ ವರೆಗಿನ ಸಾಮರ್ಥ್ಯದ ಕೃಷಿ ಪಂಪ್‌ಸೆಟ್‌ಗಳಿಗೆ ಸೋಲಾರ್ ವಿದ್ಯುತ್ ಘಟಕ ಅಳವಡಿಸಿಕೊಳ್ಳಲು ಸರ್ಕಾರದಿಂದ ಸಹಾಯಧನ ದೊರೆಯಲಿದೆ.
ಸೌರ ಘಟಕ ಅಳವಡಿಕೆಗೆ ತಗಲುವ ವೆಚ್ಚವೆಷ್ಟು?
ಕೃಷಿ ಪಂಪ್‌ಸೆಟ್’ಗಳಿಗೆ ಸೋಲಾರ್ ಘಟಕವನ್ನು ಅಳವಡಿಸಿಕೊಳ್ಳಲು ರೈತರ ಮೇಲಿನ ಆರ್ಥಿಕ ಹೊರೆಯನ್ನು ತಗ್ಗಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರವು ಸೇರಿ 80% ಸಹಾಯಧನವನ್ನು ನೀಡಲಿವೆ. ಇದರಲ್ಲಿ ರಾಜ್ಯ ಸರ್ಕಾರವು 50% ಸಹಾಯಧನ ಮತ್ತು ಕೇಂದ್ರ ಸರ್ಕಾರ 30% ಸಹಾಯಧನ ನೀಡಲಿವೆ. ಅಂದರೆ ರೈತರು ಕೃಷಿ ಪಂಪ್‌ಸೆಟ್’ಗಳನ್ನು ಅಳವಡಿಸಿಕೊಳ್ಳಲು ಭರಿಸಬೇಕಾಗಿರುವುದು ಕೇವಲ 20% ಹಣ ಮಾತ್ರ.
ಉದಾಹರಣೆಗೆ : ರೈತರು ತಮ್ಮ ಕೃಷಿ ಪಂಪ್‌ಸೆಟ್’ಗಳಿಗೆ ಸೋಲಾರ್ ಘಟಕವನ್ನು ಅಳವಡಿಸಿಕೊಳ್ಳಲು 1 ಲಕ್ಷ ರೂಪಾಯಿ ವೆಚ್ಚ ತಗುಲಿದರೆ, ರಾಜ್ಯ ಮತ್ತು ಕೇಂದ್ರ ಸರ್ಕಾರ ಸೇರಿ 80 ಸಾವಿರ ರೂಪಾಯಿ ಹಣವನ್ನು ಸಬ್ಸಿಡಿ ರೂಪದಲ್ಲಿ ನೀಡಲಿವೆ ಹಾಗೂ ರೈತರು ಭರಿಸಬೇಕಾಗಿರುವುದಕ್ಕೆ ಕೇವಲ 20 ಸಾವಿರ ರೂಪಾಯಿ ಮಾತ್ರ.
ಇದನ್ನೂ ಓದಿ: ಮನೆಮನೆಗೂ ಸೋಲಾರ್ ವಿದ್ಯುತ್ | ಬೆಸ್ಕಾಂ ಸೂಪರ್ ಸ್ಕೀಮ್ | ಕೂತಲ್ಲೇ ಗಳಿಸಿ ಭರ್ಜರಿ ಆದಾಯ Bescom Solar Rooftop Scheme
ಯಾವೆಲ್ಲ ರೈತರಿಗೆ ಅವಕಾಶ ಸಿಗಲಿದೆ?
ಸರಕಾರ ರೈತರಿಗೆ ಈ ಕೆಳಗಿನ 4 ಆದ್ಯತೆಗಳ ಆಧಾರದ ಮೇರೆಗೆ ಸೌರ ಘಟಕ ವ್ಯವಸ್ಥೆ ಕಲ್ಪಿಸಲಿದೆ. ಗಮನಿಸಬೇಕಾದ ವಿಷಯವೇನೆಂದರೆ ಈ ಎಲ್ಲಾ ಆದ್ಯತೆಗಳು ಮೊದಲು ಅರ್ಜಿ ಸಲ್ಲಿಸಿದವರಿಗೆ ಮೊದಲು ನೀಡುವ ಆಧಾರದಲ್ಲಿರುತ್ತವೆ. (First Come First Serve Basis). ಹೀಗಾಗಿ ರೈತರು ತಡ ಮಾಡದೆ ಈ ಕೂಡಲೇ ಅರ್ಜಿ ಸಲ್ಲಿಸಿ…
ಆದ್ಯತೆ 1 : ರಾಜ್ಯದಲ್ಲಿ ಹಲವು ರೈತರು ಅಕ್ರಮ ಪಂಪ್‌ಸೆಟ್’ಗಳನ್ನು ಸಕ್ರಮಗೊಳಿಸುವ ಯೋಜನೆಯ ಅಡಿಯಲ್ಲಿ ಈಗಾಗಲೇ ₹10,000ಕ್ಕಿಂತ ಅಧಿಕ ಮೊತ್ತವನ್ನು ಪಾವತಿಸಿ ಅರ್ಜಿ ಸಲ್ಲಿಸಿದ್ದಾರೆ. ಈ ರೈತರು ಕೊರೆದ ಅಥವಾ ತೆರೆದ ಬಾವಿಗಳು (open or closed well) ಟ್ರಾನ್ಸಫಾರ್ಮೆರ್ ಕೇಂದ್ರದಿ೦ದ 500 ಮೀಟರ್’ಗಿಂತ ಹೆಚ್ಚಿನ ದೂರದಲ್ಲಿದ್ದವರಿಗೆ ಮೊದಲ ಆದ್ಯತೆ ನೀಡಲಾಗುವುದು.
ಆದ್ಯತೆ 2 : ರೈತರು ಅಕ್ರಮ ಪಂಪ್‌ಸೆಟ್’ಗಳನ್ನು ಸಕ್ರಮಗೊಳಿಸುವ ಯೋಜನೆಯ ಅಡಿಯಲ್ಲಿ ನೋಂದಾಯಿಸಲು ಈಗಾಗಲೇ ರೂ. 50 ಅರ್ಜಿ ಶುಲ್ಕವನ್ನು ಪಾವತಿಸಿದ್ದು, ಇವರ ಕೊರೆದ ಅಥವಾ ತೆರೆದ ಬಾವಿಗಳು ಟ್ರಾನ್ಸ್’ಫಾರ್ಮರ್ ಕೇಂದ್ರದಿ೦ದ 500 ಮೀಟರ್’ಗಿಂತ ಹೆಚ್ಚಿನ ದೂರದಲ್ಲಿದ್ದವರಿಗೆ ಎರಡನೇ ಆದ್ಯತೆ ನೀಡಲಾಗುವುದು.
ಇದನ್ನೂ ಓದಿ: ಹಣ ಡಬಲ್ ಮಾಡುವ ಕಿಸಾನ್ ವಿಕಾಸ್ ಪತ್ರ | ₹5 ಲಕ್ಷಕ್ಕೆ ₹10 ಲಕ್ಷ ಗ್ಯಾರಂಟಿ Kisan Vikas Patra-KVP
ಆದ್ಯತೆ 3 : ಕೃಷಿ ಪಂಪ್‌ಸೆಟ್ ಸೋಲಾರ್ ಘಟಕ ಯೋಜನೆಯ ಅಡಿಯಲ್ಲಿ ಹೊಸದಾಗಿ ಅರ್ಜಿ ಸಲ್ಲಿಸುವ ರೈತರು ವೆಚ್ಚದ 20% ರಷ್ಟು ಹಣವನ್ನು ಪಾವತಿಸಿದ್ದು ಮತ್ತು ಇವರ ಕೊರೆದ ಅಥವಾ ತೆರೆದ ಬಾವಿಗಳು ಟ್ರಾನ್ಸ್’ಫಾರ್ಮರ್ ಕೇಂದ್ರದಿ೦ದ 500 ಮೀಟರ್’ಗಿಂತ ಹೆಚ್ಚಿನ ದೂರದಲ್ಲಿದ್ದವರಿಗೆ ಮೂರನೇ ಆದ್ಯತೆ ನೀಡಲಾಗುವುದು.
ಆದ್ಯತೆ 4 : ಕೃಷಿ ಪಂಪ್‌ಸೆಟ್ ಸೋಲಾರ್ ಘಟಕ ಯೋಜನೆಯ ಅಡಿಯಲ್ಲಿ ಹೊಸದಾಗಿ ಅರ್ಜಿ ಸಲ್ಲಿಸುವ ರೈತರು ವೆಚ್ಚದ 20% ರಷ್ಟು ಹಣವನ್ನು ಪಾವತಿಸಿದ್ದು ಮತ್ತು ಇವರ ಕೊರೆದ ಅಥವಾ ತೆರೆದ ಬಾವಿಗಳು ಟ್ರಾನ್ಸ್’ಫಾರ್ಮರ್ ಕೇಂದ್ರದಿ೦ದ 500 ಮೀಟರ್’ಗಿಂತ ಕಡಿಮೆ ದೂರದಲ್ಲಿದ್ದವರಿಗೆ ಮೂರನೇ ಆದ್ಯತೆ ನೀಡಲಾಗುವುದು.
ಅರ್ಜಿ ಸಲ್ಲಿಸುವುದು ಹೇಗೆ?
ಕೃಷಿ ಪಂಪ್‌ಸೆಟ್ ಸೋಲಾರ್ ಘಟಕ ಯೋಜನೆಯಡಿಯಲ್ಲಿ ಆಸಕ್ತ ಮತ್ತು ಅರ್ಹರು ಅರ್ಜಿ ಸಲ್ಲಿಸುವುದಾದರೆ ಈ ಯೋಜನೆಯ ಅಧಿಕೃತ ಜಾಲತಾಣ souramitra.comಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು ಅಥವಾ 080-22202100 ನಂಬರ್‌ಗೆ ಕಾಲ್ ಮಾಡಿ ಹೆಚ್ಚಿನ ಮಾಹಿತಿ ಪಡೆಯಬಹುದಾಗಿದೆ.
ಇದನ್ನೂ ಓದಿ: ಹೈನುಗಾರಿಕೆಗೆ ₹10 ಲಕ್ಷದ ವರೆಗೂ ಮೇಲಾಧಾರ ಮುಕ್ತ ಸಾಲ ಸೌಲಭ್ಯ HDFC Bank Agriculture and Animal Husbandry Loan