39,481 ಕಾನ್ ಸ್ಟೇಬಲ್ ಹುದ್ದೆಗಳಿಗೆ ಅರ್ಜಿ ಆಹ್ವಾನ | ಎಸ್‌ಎಸ್‌ಎಲ್‌ಸಿ ಪಾಸಾದವರಿಗೆ ಭರ್ಜರಿ ಅವಕಾಶ SSC 39481 Constable Recruitment 2024

WhatsApp
Telegram
Facebook
Twitter
LinkedIn

SSC 39481 Constable Recruitment 2024 : ಕೇಂದ್ರದ ಸಿಬ್ಬಂದಿ ಆಯ್ಕೆ ಆಯೋಗವು (Staff Selection Commission – SSC) ಬಹುದೊಡ್ಡ ಪ್ರಮಾಣದಲ್ಲಿ ಕೇಂದ್ರೀಯ ಪೊಲೀಸ್ ಪಡೆಗಳು (Central Police Forces), ಅಸ್ಲಾಂ ರೈಫಲ್ಸ್ (Aslam Rifles), ವಿಶೇಷ ಭದ್ರತಾ ಪಡೆ (Special Security Force) ಹಾಗೂ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋಗಳಿಗಾಗಿ (Narcotics Control Bureau) ಕಾನ್‌ಸ್ಟೆಬಲ್’ಗಳನ್ನು ನೇಮಕಾತಿ ಮಾಡಿಕೊಳ್ಳುತ್ತಿದೆ. ಒಟ್ಟು 39,481 ಹುದ್ದೆಗಳನ್ನು ತುಂಬಿಕೊಳ್ಳಲಾಗುತ್ತಿದ್ದು, ಕರ್ನಾಟಕಕ್ಕಾಗಿಯೇ ಒಟ್ಟು 897 ಹುದ್ದೆಗಳಿವೆ.

ಎಸ್‌ಎಸ್‌ಎಲ್‌ಸಿ ಉತ್ತೀರ್ಣರಾದವರು ಕೇವಲ ಒಂದು ನೂರು ರೂಪಾಯಿ ಶುಲ್ಕ ಪಾವತಿಸಿ ಆನ್‌ಲೈನ್ ಅರ್ಜಿ ಸಲ್ಲಿಸಬಹುದು. ಇನ್ನು NCC ಸರ್ಟಿಫಿಕೇಟ್ ಪಡೆದವರಿಗೆ ಹೆಚ್ಚುವರಿ ಅಂಕಗಳನ್ನು ನೀಡಿ ಹುದ್ದೆಗೆ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಒಂದೇ ಹಂತದ ಕಂಪ್ಯೂಟರ್ ಆಧರಿತ ಪರೀಕ್ಷೆ ಹಾಗೂ ದೂರದ ಓಟವನ್ನು ಪೂರೈಸಿ ಹುದ್ದೆಗೆ ನೇಮಕಗೊಳ್ಳಬಹುದು. ಕನ್ನಡದಲ್ಲಿಯೂ ಪರೀಕ್ಷೆ ಬರೆಯಲು ಅವಕಾಶವಿದೆ.

ಯಾವ್ಯಾವ ಪಡೆಗಳಲ್ಲಿ ಅರ್ಜಿ ಆಹ್ವಾನ?
  • ಕೇಂದ್ರೀಯ ಪೊಲೀಸ್ ಪಡೆಗಳು (CAPF) : BSF, CISF, CRPF, SSB, ITBP
  • ವಿಶೇಷ ಭದ್ರತಾ ಪಡೆ (SSF)
  • ಅಸ್ಸಾಂ ರೈಫಲ್ಸ್ (AR)
  • ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (NCB)
ಕರ್ನಾಟಕಕ್ಕೆ ಲಭ್ಯವಿರುವ ಹುದ್ದೆಗಳ ವಿವರ
  • ಬಿಎಸ್‌ಎಫ್ : 336
  • ಸಿಐಎಸ್‌ಎಫ್ : 162
  • ಸಿಆರ್‌ಪಿಎಸ್ : 285
  • ಎಸ್‌ಎಸ್‌ಬಿ : 21
  • ಐಟಿಬಿಪಿ : 64
  • ಅಸ್ಸಾಂ ರೈಫಲ್ಸ್ : 29
ವೇತನ ಶ್ರೇಣಿ ಎಷ್ಟು?

ಎನ್‌ಸಿಬಿ ಸಿಪಾಯಿ ಹುದ್ದೆಗಳಿಗೆ 1ನೇ ಹಂತದ ವೇತನ ಶ್ರೇಣಿಯಾದ 18,000 – 56,900 ರೂಪಾಯಿ ನಿಗದಿಯಾಗಿದೆ. ಉಳಿದ ಹುದ್ದೆಗಳಿಗೆ 3ನೇ ಹಂತದ ವೇತನ ಶ್ರೇಣಿಯಾದ 21,700 ರಿಂದ 69,100 ರೂಪಾಯಿ ವರೆಗಿನ ಸಂಬಳ ಇರಲಿದೆ.

ವಯೋಮಿತಿ ವಿವರ

ಎಲ್ಲ ಹುದ್ದೆಗಳಿಗೂ 18 ರಿಂದ 23ರ ವರೆಗಿನ ವಯೋಮಿತಿ ನಿಗದಿಯಾಗಿದೆ. ಅಂದರೆ 02-01-2002 ಹಾಗೂ 01-01-2007ರ ನಡುವೆ ಜನಿಸಿರಬೇಕು. ವಿವಿಧ ಮೀಸಲಾತಿಯನ್ವಯ ವಯೋಮಿತಿಯಲ್ಲಿ ಸಡಿಲಿಕೆ ಇದೆ. 01-01-2025ಕ್ಕೆ ಅನ್ವಯವಾಗುವಂತೆ ವಯಸ್ಸನ್ನು ಎಸ್‌ಎಸ್‌ಎಲ್‌ಸಿ ಅಥವಾ 10ನೇ ತರಗತಿಯಲ್ಲಿ ಅಂಕಪಟ್ಟಿಯಲ್ಲಿ ನಮೂದಾಗಿರುವುದನ್ನೇ ಪರಿಗಣಿಸಲಾಗುತ್ತದೆ.

ವಿದ್ಯಾರ್ಹತೆ ವಿವರ

ಎಸ್‌ಎಸ್‌ಎಲ್‌ಸಿ ಅಥವಾ 10ನೇ ತರಗತಿ ಪಾಸಾಗಿರಬೇಕು. 2025ರ ಜನವರಿ 1ರೊಳಗೆ ಈ ಅರ್ಹತೆ ಪಡೆಯುವವರು ಅರ್ಜಿ ಸಲ್ಲಿಸಬಹುದು. ದೂರಶಿಕ್ಷಣ ಹಾಗೂ ಮುಕ್ತಶಾಲೆಯ ಮೂಲಕ ಶಿಕ್ಷಣ ಪಡೆದವರು ನೇಮಕಾತಿಗೆ ಅರ್ಹರು.

SSC 39481 Constable Recruitment 2024
ಎನ್‌ಸಿಸಿ ವಿದ್ಯಾರ್ಥಿಗಳಿಗೆ ಹೆಚ್ಚುವರಿ ಅಂಕ

ಎನ್‌ಸಿಸಿ ‘ಸಿ’ ಸರ್ಟಿಫಿಕೇಟ್ ಪಡೆದಿದ್ದರೆ ಶೇ.5, ‘ಬಿ’ ಸರ್ಟಿಫಿಕೇಟ್ ಶೇ.3, ‘ಎ’ ಸರ್ಟಿಫಿಕೇಟ್‌ಗೆ ಶೇ.2 ಅಂಕಗಳನ್ನು ಹೆಚ್ಚುವರಿಯಾಗಿ ನೀಡಲಾಗುತ್ತದೆ. ಅರ್ಜಿ ಸಲ್ಲಿಕೆ ಮಾಡುವ ಸಮಯದಲ್ಲಿಯೇ ಎನ್‌ಸಿಸಿ ಪ್ರಮಾಣಪತ್ರ ಹೊಂದಿರುವ ಬಗ್ಗೆ ನಮೂದಿಸಬೇಕು. ಆನಂತರದಲ್ಲಿ ಈ ಸೌಲಭ್ಯಕ್ಕೆ ಪರಿಗಣಿಸಲಾಗುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ. ಆದರೆ, ಈ ಪ್ರೋತ್ಸಾಹವು ಮಾಜಿ ಸೈನಿಕರಿಗೆ ಅನ್ವಯಿಸುವುದಿಲ್ಲ.

ದೈಹಿಕ ಸಾಮರ್ಥ್ಯ ಪರೀಕ್ಷೆ ಮತ್ತು ನೇಮಕ ಪ್ರಕ್ರಿಯೆ

ಅಭ್ಯರ್ಥಿಗಳು ನಿಗದಿತ ದೇಹದಾರ್ಡ್ಯತೆ ಹೊಂದಿರಬೇಕು. ಲಿಖಿತ ಪರೀಕ್ಷೆಯಲ್ಲಿ ಆಯ್ಕೆಯಾದವರಿಗೆ ದೈಹಿಕ ಸಾಮರ್ಥ್ಯದ ಪರೀಕ್ಷೆ ನಡೆಸಲಾಗುತ್ತದೆ. ಪುರುಷರು 24 ನಿಮಿಷದಲ್ಲಿ 5 ಕಿ.ಮೀ. ಓಟ, ಮಹಿಳೆಯರು ಎಂಟೂವರೆ ನಿಮಿಷದಲ್ಲಿ 1.6 ಕಿ.ಮೀ. ಓಟ ಪೂರೈಸಬೇಕಿದೆ.

ಮಹಿಳೆ ಹಾಗೂ ಪುರುಷ ಅಭ್ಯರ್ಥಿಗಳ ರಾಜ್ಯವಾರು, ಪ್ರಾದೇಶಿಕ ಹಾಗೂ ವರ್ಗವಾರು ಮೆರಿಟ್ ಪಟ್ಟಿಯನ್ನು ಸಿದ್ಧಪಡಿಸಲಾಗುತ್ತದೆ. ದೈಹಿಕ ಸಾಮರ್ಥ್ಯ ಪರೀಕ್ಷೆಯಲ್ಲಿ ಅರ್ಹರಾದವರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಅಂತಿಮವಾಗಿ ದಾಖಲಾತಿ ಪರಿಶೀಲನೆ ನಡೆಸಿ ಆಯ್ಕೆ ಮಾಡಲಾಗುತ್ತದೆ.

ಪರೀಕ್ಷಾ ವಿವರ

ಕನ್ನಡ ಭಾಷೆ ಸೇರಿ ಒಟ್ಟು 13 ಪ್ರಾದೇಶಿಕ ಭಾಷೆಗಳಲ್ಲಿ ಪರೀಕ್ಷೆ ಬರೆಯಲು ಅವಕಾಶವಿದೆ. ಕರ್ನಾಟಕದಲ್ಲಿ ಬೆಂಗಳೂರು, ಬೆಳಗಾವಿ, ಕಲಬುರಗಿ, ಮಂಗಳೂರು, ಮೈಸೂರು, ಶಿವಮೊಗ್ಗ, ಹುಬ್ಬಳ್ಳಿ ಮತ್ತು ಉಡುಪಿ ಸೇರಿ 8 ಪರೀಕ್ಷಾ ಕೇಂದ್ರಗಳು ಇರಲಿವೆ.

ಒಟ್ಟು 80 ಪ್ರಶ್ನೆಗಳನ್ನು 4 ವಿಭಾಗಗಳಲ್ಲಿ ವಿಂಗಡಿಸಿ ಕಂಪ್ಯೂಟರ್ ಆಧರಿತ ಪರೀಕ್ಷೆ ನಡೆಸಲಾಗುತ್ತದೆ. ಮೊದಲ ಭಾಗದಲ್ಲಿ ಸಾಮಾನ್ಯ ಬುದ್ಧಿಮತ್ತೆ ಮತ್ತು ರೀಸನಿಂಗ್ 20 ಪ್ರಶ್ನೆ, ಸಾಮಾನ್ಯ ಜ್ಞಾನ ಮತ್ತು ಸಾಮಾನ್ಯ ತಿಳಿವಳಿಕೆ 20 ಪ್ರಶ್ನೆ, ಪ್ರಾಥಮಿಕ ಗಣಿತ 20 ಹಾಗೂ ಇಂಗ್ಲಿಷ್ ಭಾಷೆಯ 20 ಪ್ರಶ್ನೆಗಳಿರುತ್ತವೆ.

ಪ್ರತಿ ಪ್ರಶ್ನೆಗೆ ತಲಾ ಎರಡು ಅಂಕಗಳ೦ತೆ ಒಟ್ಟು 160 ಅಂಕಗಳಿಗೆ 60 ನಿಮಿಷಗಳಲ್ಲಿ ಉತ್ತರಿಸಬೇಕಾಗುತ್ತದೆ. ತಪ್ಪು ಉತ್ತರಗಳಿಗೆ ಶೇ.0.25 ಅಂಕಗಳನ್ನು ಕಳೆಯಲಾಗುತ್ತದೆ. ಸಾಮಾನ್ಯ ಅಭ್ಯರ್ಥಿಗಳು ಶೇ.30, ಒಬಿಸಿ ಹಾಗೂ ಆರ್ಥಿಕವಾಗಿ ಹಿಂದುಳಿದ ವರ್ಗದವರಿಗೆ ಶೇ.25 ಹಾಗೂ ಉಳಿದೆಲ್ಲ ವರ್ಗದವರಿಗೆ ಶೇ.20 ಅರ್ಹತಾ ಅಂಕಗಳನ್ನು ನಿಗದಿ ಮಾಡಲಾಗಿದೆ.

ಪ್ರಮುಖ ದಿನಾಂಕಗಳು
  • ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ :
    14-10-2024
  • ಶುಲ್ಕ ಪಾವತಿ ಕೊನೆಯ ದಿನಾಂಕ :
    15-10-2024
  • ಅರ್ಜಿ ತಿದ್ದುಪಡಿಗೆ ಅವಕಾಶ :
    ನವೆಂಬರ್ 5 ರಿಂದ 7ರ ವರೆಗೆ
  • ಸಂಭಾವ್ಯ ಪರೀಕ್ಷಾ ಅವಧಿ :
    ಜನವರಿ-ಫೆಬ್ರವರಿ 2025

ಅಧಿಸೂಚನೆ : Download

Samagra Krushi   About Us
For Feedback - [email protected]

LATEST Post

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

WhatsApp Icon Telegram Icon