EducationJobsNews

ಪಿಯುಸಿ ಪಾಸಾದವರಿಗೆ ರಾಜ್ಯ ಸರ್ಕಾರದಿಂದ ಕೌಶಲ್ಯ ತರಬೇತಿ | ಐಟಿ ಕಂಪನಿಗಳಲ್ಲಿ ಉದ್ಯೋಗ ಅವಕಾಶ TechBee KSDC Skill Training

WhatsApp Group Join Now
Telegram Group Join Now

TechBee KSDC Skill Training : ರಾಜ್ಯ ಸರ್ಕಾರವು ಕರ್ನಾಟಕ ಕೌಶಲಾಭಿವೃದ್ಧಿ ನಿಗಮದ (Karnataka Skill Development Corporation -KSDC) ಮೂಲಕ ವಿದ್ಯಾರ್ಥಿಗಳ ಕೌಶಲ ಹೆಚ್ಚಳಕ್ಕೆ ಕೆಲ ಮಹತ್ವದ ಯೋಜನೆಗಳ ಜಾರಿಗೆ ಮುಂದಾಗಿದೆ. 2023-2024ನೇ ಶೈಕ್ಷಣಿಕ ಸಾಲಿನ ದ್ವಿತೀಯ ಶೇ.70ಕ್ಕಿಂತ ಹೆಚ್ಚು ಅಂಕ ಪಡೆದು ಕಲಾ, ವಾಣಿಜ್ಯ ಮತ್ತು ವಿಜ್ಞಾನ ವಿಭಾಗದಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಹಾಗೂ ಉದ್ಯೋಗಕ್ಕೆ ಪೂರಕ ತರಬೇತಿ (Skill Training) ನೀಡಲು ಸನ್ನದ್ಧವಾಗಿದೆ.

ದೇಶದ ಅತಿದೊಡ್ಡ ಸಾಫ್ಟ್‌ವೇರ್ ಕಂಪನಿಗಳಲ್ಲಿ ಒಂದಾಗಿರುವ ಎಚ್‌ಸಿಎಲ್- ಟೆಕ್ ಬೀ (HCL TechBee) ಸಂಸ್ಥೆಯು ವಿದ್ಯಾರ್ಥಿಗಳಿಗೆ ತರಬೇತಿ, ಉದ್ಯೋಗಾವಕಾಶ ಮತ್ತು ಹಣಕಾಸಿನ ನೆರವಿನೊಂದಿಗೆ ಉನ್ನತ ಪದವಿ ಶಿಕ್ಷಣ ಪಡೆಯಲು ಅವಕಾಶ ಕಲ್ಪಿಸಿದೆ. ತಂತ್ರಜ್ಞಾನೇತರ ಕ್ಷೇತ್ರದಲ್ಲಿ ವೃತ್ತಿ ಜೀವನ ಆರಂಭಿಸಲು ಬಯಸುವ ವಿದ್ಯಾರ್ಥಿಗಳಿಗೆ ತರಬೇತಿ ನೀಡಲಿದೆ.

ಇದನ್ನೂ ಓದಿ: ಪಿಯುಸಿ, ಪದವೀಧರರಿಗೆ ಇನ್ಸ್‌ಪೆಕ್ಟರ್, ಹೆಡ್ ಕಾನ್ಸ್‌ಟೇಬಲ್ ಹುದ್ದೆಗಳಿಗೆ ಅರ್ಜಿ ಆಹ್ವಾನ | ಇಲ್ಲಿದೆ ಸಂಪೂರ್ಣ ಮಾಹಿತಿ National Investigation Agency Recruitment 2024

TechBee KSDC Skill Training

ವಾರ್ಷಿಕ ₹2.2 ಲಕ್ಷ ಸಂಬಳದ ಉದ್ಯೋಗಾವಕಾಶ

ಎಚ್‌ಸಿಎಲ್-ಟೆಕ್ ಬೀನಲ್ಲಿ ಇಂಟರ್ನ್ ಶಿಪ್‌ಗೆ (HCL-TechBee Internship) ಆಯ್ಕೆಯಾಗುವ ವಿದ್ಯಾರ್ಥಿಗಳಿಗೆ ಮಾಸಿಕ 10,000 ರೂ. ಸ್ಟೈಪೆಂಡ್ ನೀಡಲಾಗುತ್ತಿದೆ. ಬಳಿಕ ಅದೇ ಸಂಸ್ಥೆಯಲ್ಲಿ ಉದ್ಯೋಗ ದೊರೆತರೆ ವಾರ್ಷಕ್ಕೆ 1.7 ಲಕ್ಷ ದಿಂದ 2.2 ಲಕ್ಷ ರೂಪಾಯಿ ವರೆಗೂ ಸಂಬಳ ನೀಡಲಾಗುತ್ತದೆ. ಮಾತ್ರವಲದಲ, ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಉನ್ನತ ಪದವಿ ಶಿಕ್ಷಣ ಪಡೆಯುವ ಸದಾವಕಾಶವನ್ನೂ ನೀಡಲಾಗುತ್ತದೆ. ಪಡೆಯಲು ತರಬೇತಿ ಶುಲ್ಕ ನಿಗದಿಪಡಿಸಲಾಗಿದೆ.

2017ರಲ್ಲಿ ಸಂಸ್ಥೆಯು ಈ ಯೋಜನೆ ಆರಂಭಿಸಿದೆ. 2023-2024 ಶೈಕ್ಷಣಿಕ ಸಾಲಿನಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳು ಹಾಗೂ 2025ರಲ್ಲಿ ಪರೀಕ್ಷೆ ಬರೆಯಲಿರುವ ವಿದ್ಯಾರ್ಥಿಗಳು ಕೂಡಲೇ TechBeeKSDC ಗೆ ಭೇಟಿ ನೀಡಿ ನೋಂದಣಿ ಮಾಡಿಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ 9845454471/ 8722790340 ಮೊಬೈಲ್ ಸಂಖ್ಯೆ ಸಂಪರ್ಕಿಸಬಹುದಾಗಿದೆ.

ನೋಂದಣಿಗಾಗಿ ಇಲ್ಲಿ ಕ್ಲಿಕ್ ಮಾಡಿ…

ಇದನ್ನೂ ಓದಿ: ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ₹7 ಲಕ್ಷದ ವರೆಗೂ ಎಸ್‌ಬಿಐ ಆಶಾ ಸ್ಕಾಲರ್‌ಶಿಪ್ ಆರ್ಥಿಕ ನೆರವು | ಅರ್ಜಿ ಆಹ್ವಾನ SBI Asha Scholarship Program 2024

WhatsApp Group Join Now
Telegram Group Join Now

Related Posts