ಜಿಲ್ಲಾ ಪಂಚಾಯತಿ ವಿವಿಧ ಹುದ್ದೆಗಳಿಗೆ ಪದವೀಧರರಿಂದ ಅರ್ಜಿ ಆಹ್ವಾನ Zilla Panchayat Mandya MGNREGA Recruitment 2024

WhatsApp
Telegram
Facebook
Twitter
LinkedIn

Zilla Panchayat Mandya MGNREGA Recruitment 2024 : ರಾಜ್ಯದ ವಿವಿಧ ಜಿಲ್ಲಾ ಪಂಚಾಯತಿ ಅಧೀನದಲ್ಲಿ ಆಯಾ ಜಿಲ್ಲೆಯ ನರೇಗಾ ಯೋಜನೆಯಡಿ (Mahatma Gandhi National Rural Employment Guarantee Scheme – MGNREGA) ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗುತ್ತಿದೆ. ಈಗಾಗಲೇ ಹಲವು ಜಿಲ್ಲಾ ಪಂಚಾಯತಿ ನೇಮಕಾತಿ ಪ್ರಕ್ರಿಯೆ ಮುಗಿದಿದ್ದು; ಇದೀಗ ಮಂಡ್ಯ ಜಿಲ್ಲಾ ಪಂಚಾಯತಿಯಿಂದ ಅರ್ಜಿ ಆಹ್ವಾನಿಸಲಾಗಿದೆ.

ನರೇಗಾ ಯೋಜನೆಯ ಕೃಷಿ, ತೋಟಗಾರಿಕೆ, ರೇಷ್ಮೆ ಮತ್ತು ಅರಣ್ಯ ವಿಭಾಗಗಳ ತಾಂತ್ರಿಕ ಸಹಾಯಕರು ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು; ಆಸಕ್ತ ಪದವೀಧರ ಅಭ್ಯರ್ಥಿಗಳು ಆನ್‌ಲೈ ಅರ್ಜಿ ಸಲ್ಲಿಸಿ ಈ ಅವಕಾಶವನ್ನು ಬಳಸಿಕೊಳ್ಳಬಹುದಾಗಿದೆ.

ನೇಮಕಾತಿ ಸಂಕ್ಷಿಪ್ತ ವಿವರ
  • ನೇಮಕಾತಿ ಇಲಾಖೆ : ಮಂಡ್ಯ ಜಿಲ್ಲಾ ಪಂಚಾಯತಿ
  • ಉದ್ಯೋಗ ಸಂಸ್ಥೆ : ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (MGNREGA – Karnataka)
  • ಹುದ್ದೆಗಳ ಹೆಸರು : ನರೇಗಾ ತಾಂತ್ರಿಕ ಸಹಾಯಕರು
  • ಅರ್ಜಿ ಸಲ್ಲಿಕೆ : ಆನ್‌ಲೈನ್ ಮುಖಾಂತರ
  • ಉದ್ಯೋಗ ಸ್ಥಳ : ಮಂಡ್ಯ ಜಿಲ್ಲೆ
ಹುದ್ದೆಗಳ ಸಂಪೂರ್ಣ ವಿವರ

ಮಂಡ್ಯ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಕಳೆದ ಸೆಪ್ಟೆಂಬರ್ 24, 2024ರಂದು ನರೇಗಾ ಯೋಜನೆಯ ಕೃಷಿ, ತೋಟಗಾರಿಕೆ, ರೇಷ್ಮೆ, ಅರಣ್ಯ, ಆಡಳಿ ಹಾಗೂ ತಾಂತ್ರಿಕ ಸಹಾಯಕರು ಹುದ್ದೆಗಳ ಕುರಿತ ಅಧಿಕೃತ ಅಧಿಸೂಚನೆಯನ್ನು ಬಿಡುಗಡೆ ಮಾಡಿದ್ದಾರೆ.

ಕಂಪ್ಯೂಟರ್ ಜ್ಞಾನ ಹಾಗೂ ಕನ್ನಡ – ಇಂಗ್ಲಿಷ್ ಭಾಷೆ ತಿಳಿದಿರುವ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಈ ಹುದ್ದೆಗಳ ಕುರಿತ ವಿದ್ಯಾರ್ಹತೆ, ವಯೋಮಿತಿ, ಮಾಸಿಕ ವೇತನ, ಪ್ರಯಾಣ ಭತ್ಯೆ, ಅರ್ಜಿ ಸಲ್ಲಿಕೆ ವಿಧಾನ ಕುರಿತ ಮಾಹಿತಿ ಈ ಕೆಳಗಿನಂತಿದೆ:

ತಾಂತ್ರಿಕ ಸಹಾಯಕರು (ಕೃಷಿ)
ಒಟ್ಟು ಹುದ್ದೆಗಳು : 05
ವಿದ್ಯಾರ್ಹತೆ : B.Sc (Agriculture)
ವೇತನ : 28,000 + ಪ್ರಯಾಣ ಭತ್ಯೆ 2,000 ರೂ.,
ವಯೋಮಿತಿ : 21 ರಿಂದ 40 (31-07-2024ಕ್ಕೆ 40 ವರ್ಷ ಮೀರಿರಬಾರದು)

ತಾಂತ್ರಿಕ ಸಹಾಯಕರು (ತೋಟಗಾರಿಕೆ)
ಒಟ್ಟು ಹುದ್ದೆಗಳು : 04
ವಿದ್ಯಾರ್ಹತೆ : B.Sc (Horticulture)
ವೇತನ : 28,000 + ಪ್ರಯಾಣ ಭತ್ಯೆ 2,000 ರೂ.,
ವಯೋಮಿತಿ : 21 ರಿಂದ 40 (31-07-2024ಕ್ಕೆ 40 ವರ್ಷ ಮೀರಿರಬಾರದು)

ತಾಂತ್ರಿಕ ಸಹಾಯಕರು (ಅರಣ್ಯ)
ಒಟ್ಟು ಹುದ್ದೆಗಳು : 03
ವಿದ್ಯಾರ್ಹತೆ : B.Sc (Forestry)
ವೇತನ : 28,000 + ಪ್ರಯಾಣ ಭತ್ಯೆ 2,000 ರೂ.,
ವಯೋಮಿತಿ : 21 ರಿಂದ 40 (31-07-2024ಕ್ಕೆ 40 ವರ್ಷ ಮೀರಿರಬಾರದು)

ತಾಂತ್ರಿಕ ಸಹಾಯಕರು (ರೇಷ್ಮೆ)
ಒಟ್ಟು ಹುದ್ದೆಗಳು : 02
ವಿದ್ಯಾರ್ಹತೆ : BSc (Sericulture)
ವೇತನ : 28,000 + ಪ್ರಯಾಣ ಭತ್ಯೆ 2,000 ರೂ.,
ವಯೋಮಿತಿ : 21 ರಿಂದ 40 (31-07-2024ಕ್ಕೆ 40 ವರ್ಷ ಮೀರಿರಬಾರದು)

ಆಡಳಿತ ಸಹಾಯಕರು
ಒಟ್ಟು ಹುದ್ದೆಗಳು : 04
ವಿದ್ಯಾರ್ಹತೆ : Bcom,, ಕಂಪ್ಯೂಟರ್ ಜ್ಞಾನದ ಜೊತೆಗೆ ಕನ್ನಡ, ಇಂಗ್ಲೀಷ್ ಟೈಪಿಂಗ್ ಪರಿಣಿತಿ ಹೊಂದಿರಬೇಕು.
ವೇತನ : 28,000
ವಯೋಮಿತಿ : 21 ರಿಂದ 35 (31-07-2024ಕ್ಕೆ 45 ವರ್ಷ ಮೀರಿರಬಾರದು)

ತಾಂತ್ರಿಕ ಸಹಾಯಕರು 
ಒಟ್ಟು ಹುದ್ದೆಗಳು : 01
ವಿದ್ಯಾರ್ಹತೆ : B.E/B.Tech in Civil engineering
ವೇತನ : 28,000 + ಪ್ರಯಾಣ ಭತ್ಯೆ 2,000 ರೂ.,
ವಯೋಮಿತಿ : 21-45 (31-07-2024ಕ್ಕೆ 45 ವರ್ಷ ಮೀರಿರಬಾರದು)

ಅರ್ಜಿ ಸಲ್ಲಿಕೆ ಪ್ರಮುಖ ದಿನಾಂಕಗಳು
  • ಅರ್ಜಿ ಸಲ್ಲಿಕೆ ಆರಂಭ ದಿನಾಂಕ :
    01-10-2024
  • ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ :
    20-10-2024

ಅಧಿಸೂಚನೆ : Download
ಅರ್ಜಿ ಸಲ್ಲಿಕೆ ಲಿಂಕ್ : Apply ಮಾಡಿ

Samagra Krushi   About Us
Samagra Krushi samagrakrushi.com - Comprehensive Kannada website for govt scheme, education, jobs information Read More
For Feedback - [email protected]

LATEST Post

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

WhatsApp Icon Telegram Icon