ಸೋಲಾರ್ ವಿದ್ಯುತ್ (Solar Power) ಈಗ ಹೆಚ್ಚು ಜನಪ್ರಿಯವಾಗತೊಡಗಿದೆ. ರಾಜ್ಯದಲ್ಲಿ ‘ಗೃಹಜ್ಯೋತಿ’ ಉಚಿತ ವಿದ್ಯುತ್ ಯೋಜನೆ ಜಾರಿಯಲ್ಲಿದ್ದರೂ ಕೂಡ ರೈತರು, ನಗರವಾಸಿಗಳಲ್ಲಿ ಸೋಲಾರ್ ಘಟಕ ಕುರಿತ ಆಸಕ್ತಿ ತೀವ್ರವಾಗುತ್ತಿದೆ. ಈ ವರ್ಷ ಬರಗಾಲ ಆವರಿಸಿ ವಿದ್ಯುತ್ ಸಮಸ್ಯೆ ಎಡೆಬಿಡದೇ ಕಾಡುತ್ತಿರುವುದರಿಂದ ರೈತರು ನೀರಾವರಿ ಬೇಸಾಯಕ್ಕೂ ಕುತ್ತು ಎದುರಾಗಿದೆ.
ಅಂತರ್ಜಲ ಇದ್ದರೂ ವಿದ್ಯುತ್ ಸಮಸ್ಯೆಯಿಂದಾಗಿ ರೈತರು ಬೆಳೆಗಳಿಗೆ ನೀರು ಹಾಯಿಸಲು ರಾತ್ರಿಯಲ್ಲಾ ಹೆಣಗಾಡಬೇಕಾದ ದುಸ್ಥಿತಿ ನಿರ್ಮಾಣವಾಗಿದೆ. ಇಂತಹ ರೈತರು ಇದೀಗ ಸೋಲಾರ್ ಘಟಕ ಅಳವಡಿಯತ್ತ ಮನಸ್ಸು ಮಾಡುತ್ತಿದ್ದಾರೆ. ಇದಕ್ಕಾಗಿ ಸರಕಾರದ ಭರ್ಜರಿ ಸಬ್ಸಿಡಿ ಸಹ ಸಿಗುತ್ತಿದೆ.
ಇದನ್ನೂ ಓದಿ: ಮುರಾರ್ಜಿ ಸೇರಿ ವಿವಿಧ ಉಚಿತ ವಸತಿ ಶಾಲೆಗಳಿಗೆ ಅರ್ಜಿ ಆಹ್ವಾನ | 2025-26ನೇ ಸಾಲಿನ ಅಡ್ಮಿಷನ್ ಪ್ರಾರಂಭ
ಮನೆ ಮೇಲೆಯೇ ವಿದ್ಯುತ್ ಕೃಷಿ
ಇನ್ನೊಂದೆಡೆ ನಗರವಾಸಿಗಳು ತಮ್ಮ ಮನೆ ಟೇರಸ್ ಮೇಲೆಯೇ ‘ಸೋಲಾರ್ ವಿದ್ಯುತ್ ಕೃಷಿ’ ನಡೆಸಬಹುದಾದ ಯೋಜನೆ ಕೂಡ ಈಗೀಗ ಹೆಚ್ಚು ಪ್ರಸಿದ್ಧವಾಗುತ್ತಿದೆ. ಬೆಸ್ಕಾಂ ಅರ್ಥಾತ್ ಬೆಂಗಳೂರು ವಿದ್ಯುತ್ ಸರಬರಾಜು ಕಂಪೆನಿ ನಿಯಮಿತವು (ಬೆವಿಕಂ) ಈ ಯೋಜನೆಯನ್ನು ತೀವ್ರಗತಿಯಲ್ಲಿ ಜಾರಿಗೊಳಿಸುತ್ತಿದೆ.
ಟೆರೇಸ್ ಮೇಲೆ ಸೌರ ಘಟಕ ಅಳವಡಿಸುವ ಗ್ರಾಹಕರಿಗೆ ಸಹಾಯಧನ ಸೌಲಭ್ಯ ಮತ್ತು ಹೆಚ್ಚುವರಿ ವಿದ್ಯುತ್ ಮಾರಾಟದ ಮಾಹಿತಿಯುಳ್ಳ ಕರಪತ್ರ ಹಂಚಲಾಗುತ್ತಿದೆ. ಬೆಸ್ಕಾಂ ಮೂಲಗಳ ಪ್ರಕಾರ ಇದಕ್ಕೆ ಸಾರ್ವಜನಿಕರಿಂದ ಸಾಕಷ್ಟು ಸ್ಪಂದನೆ ಸಿಗುತ್ತಿದ್ದು; ಬಹುತೇಕರು ಈ ಯೋಜನೆಯ ಪ್ರಯೋಜನ ಪಡೆಯಲು ಮುಂದಾಗುತ್ತಿದ್ದಾರೆ.
ಇದನ್ನೂ ಓದಿ: ದ್ವಿಚಕ್ರ ವಾಹನ ಖರೀದಿಗೆ 15,000 ರೂಪಾಯಿ ಸಹಾಯಧನ | ಪಿಎಂ ಇ-ಡ್ರೈವ್ ಯೋಜನೆ PM E Drive Scheme Subsidy
ಬೆಸ್ಕಾಂ ಸೌರಗೃಹ ಯೋಜನೆ
ಮನೆ ಛಾವಣಿಯ ಮೇಲೆ ಸೋಲಾರ್ ಪ್ಯಾನೆಲ್‌ಗಳನ್ನು ಅಳವಡಿಸಿ ಅದರಿಂದ ವಿದ್ಯುತ್ ಉತ್ಪಾದಿಸಿ ಬಳಸಿಕೊಳ್ಳುವುದಲ್ಲದೇ, ಹೆಚ್ಚುವರಿ ವಿದ್ಯುತ್ ಅನ್ನು ಮಾರಾಟ ಮಾಡಿ ಹಣ ಗಳಿಸುವ ವಿಶಿಷ್ಟ ಯೋಜನೆ ಇದು. ಇದಕ್ಕಾಗಿ ಸರ್ಕಾರದಿಂದ ಸಹಾಯಧನವನ್ನು ನೀಡಲಾಗುತ್ತದೆ.
ಈ ಘಟಕ ಅಳವಡಿಕೆಯಿಂದ ಲೋಡ್ ಶೆಡ್ಡಿಂಗ್, ವಿದ್ಯುತ್ ದುರಸ್ತಿ ಸೇರಿದಂತೆ ವಿವಿಧ ಕಾರಣಕ್ಕೆ ಪದೇ ಪದೆ ಪವರ್ ಕಟ್ ಸಮಸ್ಯೆ ಇರುವುದಿಲ್ಲ. ತಿಂಗಳು ತಿಂಗಳು ಬಿಲ್ಲು ಪಾವತಿಸುವ ಗೊಡವೆ ಇಲ್ಲ. ಒಂದೊಮ್ಮೆ ಸಬ್ಸಿಡಿ ಸಹಿತ ಬಂಡವಾಳ ಹಾಕಿದರೆ 20 ವರ್ಷಗಳ ಕಾಲ ನಿರಂತರ ನಿತ್ಯ ವಿದ್ಯುತ್ ಪಡೆಯಬಹುದು. ಹೆಚ್ಚಾಗಿದ್ದನ್ನು ಮಾರಾಟ ಮಾಡಬಹುದು.
ವಿದ್ಯುತ್ ಮಾರಾಟ ಹೇಗೆ ಮತ್ತು ಬೆಲೆ ಎಷ್ಟು?
ಸೋಲಾರ್ ಘಟಕದಿಂದ ಉತ್ಪಾದಿಸಿದ ಹೆಚ್ಚುವರಿ ವಿದ್ಯುತ್ ಅನ್ನು ಬೆಸ್ಕಾಂಗೆ ಮಾರಾಟ ಮಾಡಬಹುದು. ಒಂದು ಕಿಲೋವ್ಯಾಟ್ ಸೌರಘಟಕ ಸ್ಥಾಪನೆಗೆ 10 ಚದರ ಮೀಟರ್ ಜಾಗ ಬೇಕಾಗಿದ್ದು; ಒಂದು ಕಿಲೋವ್ಯಾಟ್ ಸೌರ ಘಟಕದಿಂದ 4 ಯೂನಿಟ್ ವಿದ್ಯುತ್ ಉತ್ಪಾದಿಸಬಹುದು ಎನ್ನಲಾಗುತ್ತಿದೆ. 25 ವರ್ಷಗಳ ತನಕ ಬೆಸ್ಕಾಂ ಜತೆಗೆ ವಿದ್ಯುತ್ ಖರೀದಿ ಒಪ್ಪಂದ ಮಾಡಿಕೊಳ್ಳಬಹುದಾಗಿದೆ.
ಸಬ್ಸಿಡಿ ಯೋಜನೆಯಡಿ ಸೌರಘಟಕ ಅಳವಡಿಸಿಕೊಂಡ ವಸತಿ ಗ್ರಾಹಕರಿಗೆ 1 ರಿಂದ 10 ಕಿಲೋ ವ್ಯಾಟ್ ವರೆಗೆ ಪ್ರತಿ ಯೂನಿಟ್‌ಗೆ 2.97 ರೂಪಾಯಿ ದರ ನಿಗದಿಪಡಿಸಲಾಗಿದೆ. ಇನ್ನು ಸಬ್ಸಿಡಿ ಇಲ್ಲದೇ ಸ್ವಂತ ಖರ್ಚಿನಲ್ಲಿ ಘಟಕ ಅಳವಡಿಸಿಕೊಳ್ಳುವ ವಸತಿ ಗ್ರಾಹಕರಿಗೆ ಪ್ರತಿ ಯೂನಿಟ್‌ಗೆ 4.50 ರೂಪಾಯಿ ನಿಗದಿಯಾಗಿದೆ. ಇತರ ಗ್ರಾಹಕರಿಗೆ 1ರಿಂದ 2,000 ಕಿಲೋವ್ಯಾಟ್ ವರೆಗೆ ಪ್ರತಿ ಯೂನಿಟ್’ಗೆ 3.74 ರೂಪಾಯಿ ಬೆಲೆ ನಿಗದಿಪಡಿಸಲಾಗಿದೆ.
ಇದನ್ನೂ ಓದಿ: ಮನೆಗೆ ಉಚಿತ ಸೋಲಾರ್ ಕರೆಂಟ್ ಪಡೆಯಲು ಈಗಲೇ ಅರ್ಜಿ ಹಾಕಿ | ಕರ್ನಾಟಕದಲ್ಲಿ 5,14 ಲಕ್ಷ ಕುಟುಂಬಗಳು ನೋಂದಣಿ
ಯಾರೆಲ್ಲ ಅರ್ಹರು?
ಸದ್ಯಕ್ಕೆ ಬೆಸ್ಕಾಂ ವ್ಯಾಪ್ತಿಯ ಎಲ್ಲ ಗ್ರಾಹಕರು ಈ ಯೋಜನೆಗೆ ಅರ್ಹರು. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ, ದಾವಣಗೆರೆ, ತುಮಕೂರು, ಚಿತ್ರದುರ್ಗ ಮತ್ತು ರಾಮನಗರ ಹೀಗೆ ರಾಜ್ಯದ ಎಂಟು ಜಿಲ್ಲೆಗಳು ಬೆಸ್ಕಾಂ ವ್ಯಾಪ್ತಿಗೆ ಬರಲಿವೆ.
ಈ ಜಿಲ್ಲೆಯ ಗ್ರಾಮೀಣ ಮತ್ತು ನಗರ ಪ್ರದೇಶದ ಇಚ್ಛೆಯುಳ್ಳ ಯಾರು ಬೇಕಾದರೂ ಈ ಯೋಜನೆಯ ಪ್ರಯೋಜನ ಪಡೆಯಬಹುದಾಗಿದೆ.ಕೇವಲ ವಸತಿ ಮನೆಗಳು ಮಾತ್ರವಲ್ಲದೆ ವಾಣಿಜ್ಯ, ಕೈಗಾರಿಕೆ ಹಾಗೂ ಶಿಕ್ಷಣ ಸಂಸ್ಥೆಗಳು ಸೇರಿದಂತೆ ವಿವಿಧ ಕಟ್ಟಡಗಳ ಟೇರಸ್ ಅನ್ನು ಕೂಡ ಈ ಯೋಜನೆಗೆ ಬಳಸಿಕೊಳ್ಳಬಹುದು.
ಸೋಲಾರ್ ಘಟಕ ಅಳವಡಿಕೆಗೆ ಸಬ್ಸಿಡಿ ಎಷ್ಟು?
ವಸತಿ ಗ್ರಾಹಕರು 1 ಕಿಲೋ ವ್ಯಾಟ್‌ನಿಂದ 3 ಕಿಲೋ ವ್ಯಾಟ್ ವಿದ್ಯುತ್ ಉತ್ಪಾದಿಸುವ ಸೌರಫಲಕ ಅಳವಡಿಸಿಕೊಂಡರೆ, ಪ್ರತಿ ಕಿಲೋ ವ್ಯಾಟ್ 18,000 ರೂಪಾಯಿ ಸಬ್ಸಿಡಿ ಸಿಗಲಿದೆ. 3 ರಿಂದ 10 ಕಿಲೋ ವ್ಯಾಟ್ ವರೆಗೆ ಸೋಲಾರ ವಿದ್ಯುತ್ ಉತ್ಪಾದಿಸಲು ಅವಕಾಶವಿದ್ದು, ಪ್ರತಿ ಕಿಲೋ ವ್ಯಾಟ್’ಗೆ ಹೆಚ್ಚುವರಿ 9,000 ರೂಪಾಯಿ ಸಬ್ಸಿಡಿ ದೊರೆಯಲಿದೆ.
ವಸತಿಯೇತರ ಗ್ರಾಹಕರು ಅಂದರೆ ಕಲ್ಯಾಣ ಮಂಟಪ, ಶಿಕ್ಷಣ ಸಂಸ್ಥೆ, ಇತರ ಸಂಘ ಸಂಸ್ಥೆಯ ಗ್ರಾಹಕರು ಗರಿಷ್ಟ 500 ಕಿಲೋವ್ಯಾಟ್ ವರೆಗೆ ವಿದ್ಯುತ್ ಉತ್ಪಾದನೆ ಸಾಮರ್ಥ್ಯದ ಸೋಲಾರ ಘಟಕ ಸ್ಥಾಪಿಸಿಕೊಳ್ಳಬಹುದಾಗಿದೆ. ಇವರಿಗೆ ಪ್ರತಿ ಕಿಲೋವ್ಯಾಟ್‌ಗೆ 9,000 ರೂಪಾಯಿ ಸಹಾಯಧನ ಸಿಗಲಿದೆ.