ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ (Karnataka Residential Educational Institutions Society - kreis) ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ಉಚಿತ ವಸತಿ ಶಾಲೆಗಳಾದ ಮುರಾರ್ಜಿ ದೇಸಾಯಿ, ಕಿತ್ತೂರಾಣಿ ಚೆನ್ನಮ್ಮ ಸೇರಿದಂತೆ 821 ವಸತಿ ಶಾಲೆಗಳಿಗೆ 2025-26ನೇ ಶೈಕ್ಷಣಿಕ ಸಾಲಿನ 6ನೇ ತರಗತಿಯ ಪ್ರವೇಶಾತಿ ಪಡೆಯಲು ಅರ್ಹ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.
ಇದನ್ನೂ ಓದಿ: ದ್ವಿಚಕ್ರ ವಾಹನ ಖರೀದಿಗೆ 15,000 ರೂಪಾಯಿ ಸಹಾಯಧನ | ಪಿಎಂ ಇ-ಡ್ರೈವ್ ಯೋಜನೆ PM E Drive Scheme Subsidy
ಯಾವೆಲ್ಲ ಶಾಲೆಗಳು?
ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದಡಿ ಕಾರ್ಯನಿರ್ವಹಿಸುತ್ತಿರುವ ರಾಜ್ಯದ 821 ವಸತಿ ಶಾಲೆಗಳಲ್ಲಿ ಪ್ರವೇಶಾತಿ ಪಡೆಯಬಹುದಾಗಿದೆ. ಉಚಿತ ವಸತಿ ಶಾಲೆಗಳ ಪಟ್ಟಿ ಈ ಕೆಳಕಂಡ೦ತಿದೆ:
* ಮುರಾರ್ಜಿ ದೇಸಾಯಿ
* ಕಿತ್ತೂರು ರಾಣಿ ಚೆನ್ನಮ್ಮ
* ಡಾ.ಬಿ.ಆರ್.ಅಂಬೇಡ್ಕರ್
* ಅಟಲ್ ಬಿಹಾರಿ ವಾಜಪೇಯಿ
* ಮಾಸ್ತಿ ವೆಂಕಟೇಶ್ ಅಯ್ಯಂಗಾರ್
* ಇಂದಿರಾಗಾಂಧಿ
* ನಾರಾಯಣಗುರು
* ಏಕಲವ್ಯ ಮಾದರಿ ವಸತಿ ಶಾಲೆಗಳು
ಆದಾಯ ಮಿತಿ ಎಷ್ಟರಬೇಕು?
ಪ.ಜಾತಿ, ಪ.ವರ್ಗ ಹಿಂದುಳಿದ ವರ್ಗದ ಪ್ರವರ್ಗ-1 ಅಭ್ಯರ್ಥಿಗಳಿಗೆ ಕುಟುಂಬದ ಆದಾಯ ಮಿತಿ 2,50,000 ರೂ., ಹಿಂದುಳಿದ ವರ್ಗ 2ಎ, 2ಬಿ, 3ಎ ಹಾಗೂ 3ಬಿ ಅಭ್ಯರ್ಥಿಗಳಿಗೆ 1 ಲಕ್ಷ ರೂ. ಆದಾಯ ಮಿತಿ ನಿಗದಿಪಡಿಸಲಾಗಿದೆ.
ಇದನ್ನೂ ಓದಿ: ಮನೆಗೆ ಉಚಿತ ಸೋಲಾರ್ ಕರೆಂಟ್ ಪಡೆಯಲು ಈಗಲೇ ಅರ್ಜಿ ಹಾಕಿ | ಕರ್ನಾಟಕದಲ್ಲಿ 5,14 ಲಕ್ಷ ಕುಟುಂಬಗಳು ನೋಂದಣಿ
ಪ್ರವೇಶ ಪರೀಕ್ಷೆಯ ಮುಖ್ಯ ಮಾಹಿತಿ
ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KEA) ಪ್ರವೇಶ ಪರೀಕ್ಷೆ ಹಾಗೂ ಆನ್‌ಲೈನ್ ಕೌನ್ಸೆಲಿಂಗ್ ನಡೆಸಿ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿಕೊಳ್ಳುತ್ತದೆ. ಈ ಸಂಬ೦ಧ ವೇಳಾಪಟ್ಟಿಯನ್ನೂ ನೀಡಲಾಗಿದ್ದು, ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಫೆಬ್ರವರಿ 15ರಂದು ಪರೀಕ್ಷೆ ನಡೆಸಲಾಗುತ್ತಿದೆ. ಮಧ್ಯಾಹ್ನ 2.30ರಿಂದ 4.30ರ ವರೆಗೆ 100 ಅಂಕಗಳಿಗೆ ಪ್ರವೇಶ ಪರೀಕ್ಷೆ ನಡೆಸಲಾಗುತ್ತದೆ. ಒಎಂಆರ್ ಪತ್ರಿಕೆಯಲ್ಲಿ ಆಯ್ಕೆ ಟಿಕ್ ಮಾಡಬೇಕು. ಇದಾದ ಬಳಿಕ ಆನ್‌ಲೈನ್ ಕೌನ್ಸೆಲಿಂಗ್ ಇರಲಿದೆ. ಫೆಬ್ರವರಿ 6ರಂದು ಅರ್ಜಿ ಸಲ್ಲಿಸಿದವರಿಗೆ ಪ್ರವೇಶಪತ್ರ ಡೌನ್‌ಲೋಡ್ ಮಾಡಿಕೊಳ್ಳಲು ಅವಕಾಶ ನೀಡಲಾಗುತ್ತದೆ.
ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವಾಗ ತಮ್ಮ ಇಚ್ಛೆಯ ಶಾಲೆಗಳನ್ನು ಆದ್ಯತಾ ಕ್ರಮದಲ್ಲಿ ಆಯ್ಕೆ ಮಾಡಿಕೊಳ್ಳಬೇಕು. ಈ ಆಯ್ಕೆಗಳನ್ನು ಸೀಟು ಹಂಚಿಕೆ ಪ್ರಕ್ರಿಯೆಗೆ ಪರಿಗಣಿಸಲಾಗುತ್ತದೆ. ಸೀಟು ಹಂಚಿಕೆಯ ಅವಕಾಶಗಳನ್ನು ಹೆಚ್ಚಿಸಿಕೊಳ್ಳಲು ಅಭ್ಯರ್ಥಿಗಳು ತಮ್ಮ ಜಿಲ್ಲೆಯಲ್ಲಿರುವ kreis ವಸತಿ ಶಾಲೆಗಳನ್ನು ಆದ್ಯತಾ ಕ್ರಮದಲ್ಲಿ ನಮೂದಿಸುವಂತೆ ಸೂಚಿಸಲಾಗಿದೆ.
ಏನೆಲ್ಲ ದಾಖಲೆಗಳು ಬೇಕು?
* ಈಗಾಗಲೇ 5ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಶಾಲೆಯಿಂದ ಸ್ಯಾಟ್ಸ್ ಸಂಖ್ಯೆ
* ಪೋಷಕರ ಮೊಬೈಲ್ ಸಂಖ್ಯೆ
* ಇತ್ತೀಚಿನ ಭಾವಚಿತ್ರ
* ಮೀಸಲಾತಿಗೆ ಸಂಬ೦ಧಿಸಿದ ಎಲ್ಲ ಮೂಲ ದಾಖಲೆ ಅಥವಾ ಪ್ರತಿಗಳು
* ಆಧಾರ್ ಕಾರ್ಡ್, ರೇಷನ್ ಕಾರ್ಡ್, ಸ್ಥಳೀಯ ಪ್ರಮಾಣಪತ್ರ
* ವಿಶೇಷ ವರ್ಗಕ್ಕೆ ಸೇರಿದ ಅಭ್ಯರ್ಥಿಗಳು ಸಕ್ಷಮ ಪ್ರಾಧಿಕಾರದ ಪ್ರಮಾಣಪತ್ರ
ಆಯ್ಕೆ ಪ್ರಕ್ರಿಯೆ ಹೇಗೆ?
ಕಂಪ್ಯೂಟರೈಸ್ಡ್ ಆಟೋ ಸೆಲೆಕ್ಷನ್ ಮೂಲಕ ಸೀಟು ಹಂಚಿಕೆ ಮಾಡಲಾಗುತ್ತದೆ. ಪ್ರವೇಶ ಪರೀಕ್ಷೆಯಲ್ಲಿ ಗಳಿಸಿದ ಮೆರಿಟ್, ಮೀಸಲಾತಿ ಹಾಗೂ ಶಾಲೆಗಳ ಆದ್ಯತಾ ಕ್ರಮದ ಆಧಾರದಲ್ಲಿ ಸೀಟು ಹಂಚಿಕೆ ಮಾಡಲಾಗುತ್ತದೆ.
ಅರ್ಜಿ ಸಲ್ಲಿಸುವುದು ಹೇಗೆ?
ನಾವು ಕೆಳಗೆ ನೀಡಿರುವ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ ನಿಗದಿತ ದಿನಾಂಕದ ಒಳಗಾಗಿ ಅಗತ್ಯ ದಾಖಲಾತಿಗಳೊಂದಿಗೆ, ನಿಖರವಾದ ಮಾಹಿತಿಯನ್ನು ಭರ್ತಿ ಮಾಡಿ ವಿದ್ಯಾರ್ಥಿಗಳು ಆನ್ ಲೈನ್ ಮುಕಾಂತರ ಅರ್ಜಿ ಸಲ್ಲಿಸಬಹುದು.
* ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ : 25-1-2025
* ಅರ್ಜಿ ಸಲ್ಲಿಸುವ ಜಾಲತಾಣದ ಲಿಂಕ್ : ಇಲ್ಲಿ ಕ್ಲಿಕ್ ಮಾಡಿ
* ಅಧಿಸೂಚನೆ : Download