Education

AICTE Yashasvi Scholarship Scheme - ಪದವೀಧರರಿಗೆ 50,00, ಡಿಪ್ಲೊಮಾದವರಿಗೆ 30,000 ರೂ. ಧನಸಹಾಯ | ‘ಯಶಸ್ವಿ’ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ

AICTE Yashasvi Scholarship Scheme - ಪದವೀಧರರಿಗೆ 50,00, ಡಿಪ್ಲೊಮಾದವರಿಗೆ 30,000 ರೂ. ಧನಸಹಾಯ | ‘ಯಶಸ್ವಿ’ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ

ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ (All India Board of Technical Education - AICTE) ಇಂಜನಿಯರಿಂಗ್ ಹಾಗೂ ಇತರ ವೃತ್ತಿಪರ ಕೋರ್ಸ್’ಗಳಿಗೆ ಪ್ರವೇಶಾತಿ ಪಡೆಯುವ ವಿದ್ಯಾರ್ಥಿಗಳಿಗೆ Yashasvi Scholarship Scheme ಮೂಲಕ ವಿದ್ಯಾರ್ಥಿವೇತನ ನೀಡಲಿದೆ. 


ಪ್ರಸ್ತುತ ಎಐಸಿಟಿಇ ಮಾನ್ಯತೆ ಪಡೆದ ಸಂಸ್ಥೆಗಳಲ್ಲಿ ಮೊದಲ ವರ್ಷದ ಇಂಜನಿಯರಿಂಗ್ ಪದವಿ ಮತ್ತು ಡಿಪ್ಲೊಮಾ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಈ ವಿದ್ಯಾರ್ಥಿವೇತನ ನೀಡಲು ಅರ್ಜಿ ಆಹ್ವಾನಿಸಲಾಗಿದೆ.  ಕರ್ನಾಟಕದ 147 ಪದವಿ ಹಾಗೂ 129 ಡಿಪ್ಲೊಮಾ ವಿದ್ಯಾರ್ಥಿಗಳು ಯಶಸ್ವಿ ವಿದ್ಯಾರ್ಥಿವೇತನದ ಫಲಾನುಭವಿಗಳಾಗಲಿದ್ದಾರೆ.


ಇದನ್ನೂ ಓದಿ: ಎಸ್ಸೆಸ್ಸೆಲ್ಸಿ, ಪಿಯುಸಿ ಪಾಸಾದವರಿಗೆ ಕೇಂದ್ರ ಸರ್ಕಾರಿ ಉದ್ಯೋಗ | ಕರಾವಳಿ ರಕ್ಷಣಾ ಪಡೆಯ 300 ಹುದ್ದೆಗಳಿಗೆ ಅರ್ಜಿ ಆಹ್ವಾನ


ಯಾರೆಲ್ಲ ಅರ್ಜಿ ಸಲ್ಲಿಸಬಹುದು? : ಈ ನೆರವು ಪಡೆಯಲು ಅಭ್ಯರ್ಥಿಯು ಪ್ರಥಮ ವರ್ಷದ ಪದವಿ, ಡಿಪ್ಲೊಮಾ ಹಂತದ ಕೋರ್ಸ್ಗೆ ದಾಖಲಾತಿ ಪಡೆದಿರಬೇಕು. ಲ್ಯಾಟರಲ್ ಎಂಟ್ರಿ ಮೂಲಕ 2ನೇ ವರ್ಷದ ಪ್ರವೇಶಾತಿ ಪಡೆದಿರುವವರೂ ಅರ್ಹರಾಗಿರುತ್ತಾರೆ.


ಯಶಸ್ವಿ ವಿದ್ಯಾರ್ಥಿವೇತನ ಯೋಜನೆಯಡಿ ಆರ್ಥಿಕ ನೆರವು ಪಡೆಯಲಿಚ್ಛಿಸುವ ಅಭ್ಯರ್ಥಿಯ ಕುಟುಂಬದ ಆದಾಯವು 8 ಲಕ್ಷ ರೂ. ಮೀರಿರಬಾರದು. 10/12ನೇ ತರಗತಿಯಲ್ಲಿ ಉತ್ತೀರ್ಣರಾಗಿ 2 ವರ್ಷದೊಳಗೆ ಕೋರ್ಸ್’ಗೆ ಪ್ರವೇಶ ಪಡೆದಿರಬೇಕು.


ಯಾರಿಗೆ ಎಷ್ಟೆಷ್ಟು ಧನಸಹಾಯ ಸಿಗಲಿದೆ? : ಇಂಜನಿಯರಿಂಗ್ ಪದವಿ ಅಭ್ಯರ್ಥಿಗಳು ನಾಲ್ಕು ವರ್ಷಗಳ ವರೆಗೆ ಪ್ರತಿ ವರ್ಷ 50,000 ರೂ. ಪಡೆಯಲಿದ್ದಾರೆ. ಲ್ಯಾಟರಲ್ ಎಂಟ್ರಿ ವಿದ್ಯಾರ್ಥಿಗಳಿಗೆ ಮೂರು ವರ್ಷಗಳ ಸ್ಕಾಲರ್‌ಶಿಪ್ ನೀಡಲಾಗುತ್ತದೆ.


ಡಿಪ್ಲೊಮಾ ವಿದ್ಯಾರ್ಥಿಗಳಿಗೆ 30,000 ರೂ. ವಿದ್ಯಾರ್ಥಿವೇತನವನ್ನು ಗರಿಷ್ಠ ಮೂರು ವರ್ಷ, ಲ್ಯಾಟರಲ್ ಎಂಟ್ರಿಯವರಿಗೆ ಎರಡು ವರ್ಷ ನೀಡಲಾಗುತ್ತದೆ.


ಇದನ್ನೂ ಓದಿ: ಸೂರ್ಯ ಘರ್ ಯೋಜನೆಯಡಿ ರಾಜ್ಯದಲ್ಲಿ 4,407 ಮನೆಗಳಿಗೆ ಸಹಾಯಧನ


ನವೀಕರಣ ಮಾಡುವುದು ಹೇಗೆ? : ಉತ್ತೀರ್ಣ ಪ್ರಮಾಣಪತ್ರ, ಅಂಕಪಟ್ಟಿಯೊ೦ದಿಗೆ ಸಂಸ್ಥೆಯ ಮುಖ್ಯಸ್ಥರ ದೃಢೀಕೃತ ಪತ್ರವನ್ನು ಮುಂದಿನ ಶೈಕ್ಷಣಿಕ ವರ್ಷದಲ್ಲಿ ವೆಬ್‌ಸೈಟ್‌ಗೆ ಅಪ್ಲೋಡ್ ಮಾಡುವ ಮೂಲಕ ವಿದ್ಯಾರ್ಥಿವೇತನವನ್ನು ನವೀಕರಿಸಬಹುದು. ವಿದ್ಯಾರ್ಥಿಯು ಅನುತ್ತೀರ್ಣರಾದಲ್ಲಿ ವಿದ್ಯಾರ್ಥಿವೇತನವನ್ನು ನಿಲ್ಲಿಸಲಾಗುತ್ತದೆ.


ಆಯ್ಕೆ ಪ್ರಕ್ರಿಯೆ ಹೇಗೆ? :  ಪದವಿ ವಿದ್ಯಾರ್ಥಿಗಳಿಗೆ 12ನೇ ತರಗತಿ ಹಾಗೂ ಡಿಪ್ಲೊಮಾ ವಿದ್ಯಾರ್ಥಿಗಳನ್ನು 10ನೇ ತರಗತಿ ಅಂಕಗಳ ಮೇಲೆ ಮೆರಿಟ್  ಆಧಾರದಲ್ಲಿ ವಿದ್ಯಾರ್ಥಿವೇತನಕ್ಕೆ ಆಯ್ಕೆ ಮಾಡಲಾಗುತ್ತದೆ. ಲ್ಯಾಟರಲ್ ಎಂಟ್ರಿ ಅಭ್ಯರ್ಥಿಗಳನ್ನು ಡಿಪ್ಲೊಮಾ ಆರು ಸೆಮಿಸ್ಟರ್ ಅಂಕಗಳ ಆಧಾರದಲ್ಲಿ ಆಯ್ಕೆ ಮಾಡಲಾಗುತ್ತದೆ.


ವಿಶೇಷ ಸೂಚನೆ : ಕಾಲೇಜಿನಿಂದ ಹೊರಗೆ ಉಳಿದಲ್ಲಿ ನಂತರದ ವರ್ಷದಿಂದ ವಿದ್ಯಾರ್ಥಿವೇತನ ನೀಡಲಾಗುವುದಿಲ್ಲ. ಒಂದು ವೇಳೆ ಇಂಜನಿಯರಿಂಗ್ ಬಿಟ್ಟು ಬೇರೆ ಯಾವುದೇ ಪ್ರೋಗ್ರಾಂಗೆ ವಿದ್ಯಾರ್ಥಿಯು ವರ್ಗಾವಣೆಯಾದಲ್ಲಿ ಕೂಡ ಸಂಪೂರ್ಣ ವಿದ್ಯಾರ್ಥಿ ವೇತನವನ್ನು ವಾಪಾಸು ಮಾಡಬೇಕಾಗುತ್ತದೆ.


ಅಧಿಸೂಚನೆ: Download

ಅರ್ಜಿ ಲಿಂಕ್: Apply Now


ಇದನ್ನೂ ಓದಿ: ವಿಶೇಷ ವೈಯಕ್ತಿಕ ಸಾಲ ಯೋಜನೆಗಳು | ಯಾವುದಕ್ಕೆಲ್ಲ ಸಾಲ ಸಿಗುತ್ತೆ ಗೊತ್ತಾ? Personal Loans Schemes