ಪ್ರಸಕ್ತ ಸಾಲಿನಲ್ಲಿ ಇಂಜಿನಿಯರಿ೦ಗ್, ಪಶುವೈದ್ಯಕೀಯ ಸೇರಿದಂತೆ ಇತರ ವೃತ್ತಿಪರ ಕೋರ್ಸ್ ಪ್ರವೇಶಕ್ಕೆ ನಡೆಸಲಾಗುವ ಸಾಮಾನ್ಯ ಪ್ರವೇಶ ಪರೀಕ್ಷೆಯ ದಿನಾಂಕವನ್ನು ಏಪ್ರಿಲ್ 16 ಮತ್ತು 17ರಂದು ನಿಗದಿ ಮಾಡಲಾಗಿದೆ.
ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ವೇಳಾಪಟ್ಟಿಯನ್ನು ಪ್ರಕಟಿಸಿದ್ದು, ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಜನವರಿ 23ರಿಂದ ಫೆಬ್ರವರಿ 21ರ ವರೆಗೆ ಅವಕಾಶ ನೀಡಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ. ಎಂ ಸಿ ಸುಧಾಕರ ಮಾಹಿತಿ ನೀಡಿದ್ದಾರೆ.
ಡಿಪ್ಲೊಮಾ ಸಾಮಾನ್ಯ ಪ್ರವೇಶ ಪರೀಕ್ಷೆ (ಡಿಸಿಪಾಟಿ), ಪಿಜಿಸಿಇಟಿ ಮತ್ತು ಎಂ.ಫಾರ್ಮಾ ಕೋರ್ಸ್ಗಳ ಪ್ರವೇಶ ಪರೀಕ್ಷೆಗಳ ದಿನವನ್ನು ಸಚಿವರು ಘೋಷಣೆ ಮಾಡಿದ್ದಾರೆ. ಇದೇ ಮೊದಲ ಬಾರಿಗೆ ವರ್ಷದಲ್ಲಿ ನಡೆಯುವ ಎಲ್ಲ ವೃತ್ತಿಪರ ಕೋರ್ಸ್ಗಳ ಪ್ರವೇಶ ಪರೀಕ್ಷೆಗಳ ಬಗ್ಗೆ ಏಕಕಾಲದಲ್ಲಿ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಪರ್ಸನಲ್ ಲೋನ್ ಪಡೆಯುವ ಮುನ್ನ ಈ ಮಹತ್ವದ ಮಾಹಿತಿ ತಿಳಿದಿರಿ... Personal Loan Important Information
ಸಾಮಾನ್ಯ ಪ್ರವೇಶ ಅರ್ಜಿ
ಸಿಇಟಿ-2025ರ ಅರ್ಜಿಯು ಎಲ್ಲ ಕೋರ್ಸ್’ಗಳಿಗೆ ಸಾಮಾನ್ಯ ಅರ್ಜಿಯಾಗಿರುವುದರಿಂದ ವೈದ್ಯಕೀಯ, ದಂತ ವೈದ್ಯಕೀಯ ಮತ್ತು ಆಯುಷ್ ಪ್ರವೇಶಾತಿಗೂ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ನೊಂದಾಯಿಸಿಕೊ೦ಡು, ಅರ್ಜಿ ಶುಲ್ಕ ಪಾವತಿಸುವುದು ಹಡ್ಡಾಯ. ಅದೇ ರೀತಿ ಆರ್ಕಿಟಿಕ್ಟರ್, ಬಿಪಿಟಿ, ಬಿಪಿಒ, ಬಿಎಸ್‌ಸಿ ಅಲೈಡ್ ಹೆಲ್ತ್ ಸೈನ್ಸ್ ಕೋರ್ಸ್ ಗಳಿಗಾಗಿಯೂ ಇದೇ ಅರ್ಜಿ ಅನ್ವಯವಾಗಲಿದೆ.
ದಾಖಲೆ ಅಪ್‌ಲೋಡ್ ಮಾಡಬೇಕಿಲ್ಲ...
ಈ ಬಾರಿ ವಿದ್ಯಾರ್ಥಿಗಳು ತಮ್ಮ ದಾಖಲೆಗಳನ್ನು ಆನ್‌ಲೈನ್‌ನಲ್ಲಿ ಅಪಲೋಡ್ ಮಾಡಬೇಕಿಲ್ಲ. ಸ್ಯಾಟ್ಸ್ ಸಂಖ್ಯೆ ಆಧಾರದಲ್ಲಿ ಅಭ್ಯರ್ಥಿಯ ವ್ಯಾಸಂಗದ ವಿವರ ಪಡೆಯಲಾಗುವುದು. ನಂತರ ಅಭ್ಯರ್ಥಿಗಳಿಗೆ ಕ್ಲೈಮ್ಸ್ ಸರ್ಟಿಫಿಕೇಟ್ ಡೌನ್‌ಲೋಡ್ ಮಾಡಿಕೊಳ್ಳಲು ಅವಕಾಶ ನೀಡಲಾಗುವುದು.
ಇದರಲ್ಲಿ ಸಕ್ಸಸ್‌ಪುಲೀ ವೆರಿಫೈಡ್ ಎಂದು ಬರೆದಿದ್ದರೆ ಅಂಥವರು ದಾಖಲೆ ಪರಿಶೀಲನೆಗೆ ಯಾವುದೇ ಕಚೇರಿ/ ಕಾಲೇಜಿಗೆ ಹೋಗಬೇಕಿಲ್ಲ. ಕ್ಲೈಮ್ಡ್ ನಾಟ್ ವೆರಿಫೈಡ್ ಎಂದಿದ್ದಲ್ಲಿ ಅಂತಹ ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ಮತ್ತು ಕ್ಲೈಮ್ ಮಾಡಿರುವ ಮೂಲ ದಾಖಲೆಗಳನ್ನು ತಮ್ಮ ಕಾಲೇಜಿನ ಪ್ರಾಂಶುಪಾಲರಿಗೆ ತೋರಿಸಿ ಒಂದು ಸೆಟ್ ಪ್ರತಿಗಳನ್ನು ಕ್ಲೈಮ್ಸ್ ಸರ್ಟಿಫಿಕೇಟ್ ಜತೆ ಸಲ್ಲಿಸುವುದು ಕಡ್ಡಾಯವಾಗಿದೆ.
ಕಾಲೇಜಿನವರು ಕ್ಲೈಮ್ಸ್ ಸರ್ಟಿಫಿಕೇಟ್‌ನೊಂದಿಗೆ ಪರಿಶೀಲಿಸಿ ಅಭ್ಯರ್ಥಿಯ ವಿವರಗಳನ್ನು ಅನುಮೋದಿಸುತ್ತಾರೆ. ಅಂತೆಯೇ, ಅಭ್ಯರ್ಥಿಯು ನಮೂದಿಸುವ ಜಾತಿ, ಆದಾಯ, ಇತರ ಪ್ರಮಾಣ ಪತ್ರಗಳ ಆರ್‌ಡಿ ಸಂಖ್ಯೆ ಆಧಾರದ ಮೇಲೆ ಅಭ್ಯರ್ಥಿಗಳ ಮೀಸಲಾತಿ ವಿವರಗಳನ್ನು ಪಡೆಯಲಾಗುವುದು.
ಇದನ್ನೂ ಓದಿ: ಫೋನ್ ಪೇ, ಗೂಗಲ್ ಪೇ ಮೂಲಕ ಬೇರೆಯವರಿಗೆ ತಪ್ಪಾಗಿ ಹಣ ಕಳಿಸಿದರೆ ವಾಪಾಸು ಪಡೆಯೋದು ಹೇಗೆ?
ಮೊಬೈಲ್ ಸಂಖ್ಯೆಗೆ ಒಟಿಪಿ
ಅಭ್ಯರ್ಥಿಗಳು ಲಾಗಿನ್ ಸಂದರ್ಭದಲ್ಲಿ ನಮೂದಿಸುವ ಮೊಬೈಲ್ ಸಂಖ್ಯೆಗೆ ಒಟಿಪಿ ಕಳುಹಿಸಿ ದೃಡೀಕರಿಸಿದ ನಂತರ ಅರ್ಜಿ ಭರ್ತಿ ಮಾಡಲು ಅವಕಾಶ ನೀಡಲಾಗುತ್ತದೆ. ಆದ್ದರಿಂದ ಅಭ್ಯರ್ಥಿಗಳು ಅವರದೇ ಮೊಬೈಲ್ ಸಂಖ್ಯೆಯನ್ನು ಮಾತ್ರ ನೀಡಬೇಕು.
ಒಂದು ಮೊಬೈಲ್ ಸಂಖ್ಯೆಯನ್ನು ಒಬ್ಬ ಅಭ್ಯರ್ಥಿ ಮಾತ್ರ ಉಪಯೋಗಿಸಬಹುದು. ಮೊಬೈಲ್ ಸಂಖ್ಯೆ ಬದಲಾವಣೆ ಯಾವುದೇ ಹಂತದಲ್ಲಿ ಪರಿಗಣಿಸುವುದಿಲ್ಲ. ಪ್ರತಿ ಹಂತದ ಪ್ರಕ್ರಿಯೆ ಕುರಿತು ಅಭ್ಯರ್ಥಿಯ ಮೊಬೈಲ್‌ಗೆ ಸಂದೇಶ ರವಾನೆಯಾಗುತ್ತದೆ.
ಅರ್ಜಿ ಸಲ್ಲಿಕೆ ಮತ್ತು ಪರೀಕ್ಷೆ ದಿನಾಂಕಗಳು
ಸಿಇಟಿ
* ಅರ್ಜಿ ಸಲ್ಲಿಕೆ : ಜನವರಿ 23ರಿಂದ ಫೆಬ್ರವರಿ 21
* ಪರೀಕ್ಷೆ : ಏಪ್ರಿಲ್ 16ರಿಂದ 18
ಡಿಸಿಇಟಿ
* ಅರ್ಜಿ ಸಲ್ಲಿಕೆ : ಎಪ್ರಿಲ್ 24ರಿಂದ ಮೇ 10
* ಪರೀಕ್ಷೆ : ಮೇ 31
ಎಂಇ, ಎಂಟೆಕ್, ಎಂ.ಆರ್ಕಿಟೆಕ್ಚರ್
* ಅರ್ಜಿ ಸಲ್ಲಿಕೆ : ಏಪ್ರಿಲ್ 24ರಿಂದ ಮೇ 10
* ಪರೀಕ್ಷೆ : ಮೇ 31
ಎಂಸಿಎ ಮತ್ತು ಎಂಪಿಎ ಕೋರ್ಸ್
* ಅರ್ಜಿ ಸಲ್ಲಿಕೆ : ಏಪ್ರಿಲ್ 24ರಿಂದ ಜೂನ್ 10
* ಪರೀಕ್ಷೆ : ಜೂನ್ 22
ಎಂ.ಫಾರ್ಮ್ ಮತ್ತು ಫಾರ್ಮಾ-ಡಿ
* ಅರ್ಜಿ ಸಲ್ಲಿಕೆ : ಏಪ್ರಿಲ್ 24ರಿಂದ ಜೂನ್ 10
* ಪರೀಕ್ಷೆ : ಜೂನ್ 22
ಇದನ್ನೂ ಓದಿ: ಪ್ರಧಾನ ಮಂತ್ರಿ ಆವಾಸ್ ಯೋಜನೆ | ಸ್ವಂತ ಮನೆ ಕಟ್ಟಲು ಸಾಲ ಮತ್ತು ಸಬ್ಸಿಡಿ ನೆರವು PMAY Scheme Awas Yojane