Education

ವಿದ್ಯಾರ್ಥಿಗಳ ವಿಶಿಷ್ಟ ಗುರುತಿನ ಚೀಟಿ ‘ಅಪಾರ್ ಐಡಿ’ ನೋಂದಣಿ ಡಲ್ APAAR ID Registration

ವಿದ್ಯಾರ್ಥಿಗಳ ವಿಶಿಷ್ಟ ಗುರುತಿನ ಚೀಟಿ ‘ಅಪಾರ್ ಐಡಿ’ ನೋಂದಣಿ ಡಲ್ APAAR ID Registration

ರಾಜ್ಯದಲ್ಲಿ ವಿದ್ಯಾರ್ಥಿಗಳ ‘ಅಪಾರ್ ಐಡಿ’ (Automated Permanent Academic Account Registry) ನೋಂದಣಿ ಕಾರ್ಯ ಮಂದಗತಿಯಲ್ಲಿ ಸಾಗಿದ್ದು; ರಾಜ್ಯಾದ್ಯಂತ ಕೇವಲ ಶೇ.52.19 ವಿದ್ಯಾರ್ಥಿಗಳು ಮಾತ್ರ ನೋಂದಣಿ ಮಾಡಿಕಂಡಿದ್ದಾರೆ.  ದಕ್ಷಿಣ ಕನ್ನಡ ಜಿಲ್ಲೆ ಶೇ.76.98 ನೋಂದಣಿಯಾಗಿ ಪ್ರಥಮ ಸ್ಥಾನದಲ್ಲಿದ್ದರೆ, ಹಾವೇರಿ ಜಿಲ್ಲೆ ಶೇ. 33.97 ಮೂಲಕ ಕೊನೆಯ ಸ್ಥಾನದಲ್ಲಿದೆ.


ಏನಿದು ಅಪಾರ್ ಐಡಿ ಕಾರ್ಡ್? : ಶಾಲಾ-ಕಾಲೇಜು ವಿದ್ಯಾರ್ಥಿಗಳ ಸಂಪೂರ್ಣ ಶೈಕ್ಷಣಿಕ ದಾಖಲೆಗಳನ್ನು ಒಳಗೊಂಡಿರುವ 12 ಅಂಕಿಗಳ ಡಿಜಿಟಲ್ ಕಾರ್ಡ್ ಇದು. ಕೇಂದ್ರ ಶಿಕ್ಷಣ ಸಚಿವಾಲಯ ರಾಷ್ಟ್ರೀಯ ಶಿಕ್ಷಣ ನೀತಿ (National Education Policy - NEP) ಅನ್ವಯ 2023ರಂದು ವಿದ್ಯಾರ್ಥಿ ಕಾರ್ಡ್ ರಚಿಸಲು ಸೂಚಿಸಿದೆ.


‘ಒಂದು ದೇಶ ಒಂದು ವಿದ್ಯಾರ್ಥಿ’ (One Nation One Student ID Card) ಎಂದು ಕರೆಯುವ ‘ಅಪಾರ್ ಐಡಿ’ ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆ, ಶಾಲಾ ವಿವರ, ಅಂಕಪಟ್ಟಿ ಸೇರಿದಂತೆ ಎಲ್ಲ ವಿವರಗಳನ್ನು ಒಳಗೊಂಡಿರುತ್ತದೆ.


ಇದನ್ನೂ ಓದಿ: ಮನೆಗೆ 20 ವರ್ಷ ಉಚಿತ ಸೋಲಾರ್ ವಿದ್ಯುತ್ ಪಡೆಯಲು ಹೀಗೆ ಅರ್ಜಿ ಸಲ್ಲಿಸಿ... 


ನೋಂದಣಿ ಕುಂಠಿತಕ್ಕೆ ಕಾರಣವೇನು? : ಪ್ರಸ್ತುತ ಕರ್ನಾಟಕ ರಾಜ್ಯಾದ್ಯಂತ 1,15,17,573 ವಿದ್ಯಾರ್ಥಿಗಳಿದ್ದಾರೆ. ಈ ಪೈಕಿ 60,11,496 ವಿದ್ಯಾರ್ಥಿಗಳಿಂದ  ಮಾತ್ರ ಅಪಾರ್ ಕಾರ್ಡ್ ನೋಂದಣಿಯಾಗಿದೆ. ರಾಜ್ಯಾದ್ಯಂತ 54,33,055 ಮಕ್ಕಳ ನೋಂದಣಿ ಇನ್ನೂ ಬಾಕಿ ಇದೆ. 


ಅಪಾರ ಐಡಿ ಜನರೇಟ್ ಮಾಡಲು ಆಯಾ ವಿದ್ಯಾರ್ಥಿಗಳ ಪೋಷಕರ ಒಪ್ಪಿಗೆ ಕಡ್ಡಾಯವಾಗಿದೆ. ಸರ್ಕಾರಿ, ಖಾಸಗಿ ಅನುದಾನಿತ ಶಾಲೆ-ಕಾಲೇಜುಗಳು ಈಗಾಗಲೇ ಪೋಷಕರ ಒಪ್ಪಿಗೆಯ ಪಡೆದು ಕಾರ್ಡ್ ನೋಂದಣಿ ಮಾಡುತ್ತಿವೆ. ಆದರೆ, ಪಾಲಕರಲ್ಲಿ ತಿಳಿವಳಿಕೆ ಕೊರತೆಯಿಂದಾಗಿ ನೋಂದಣಿ ಕಾರ್ಯ ಚುರುಕು ಪಡೆಯುತ್ತಿಲ್ಲ ಎನ್ನಲಾಗುತ್ತಿದೆ.


ಇದನ್ನೂ ಓದಿ: 10ನೇ ತರಗತಿ ಪಾಸಾದವರಿಗೆ ಕಾನ್‌ಸ್ಟೆಬಲ್/ಡ್ರೈವರ್ ಹುದ್ದೆಗಳು | ಈಗಲೇ ಅರ್ಜಿ ಸಲ್ಲಿಸಿ... 


ಅಪಾರ್ ಕಾರ್ಡ್’ನಿಂದ ಏನು ಪ್ರಯೋಜನ? : ಇದು ವಿದ್ಯಾರ್ಥಿಗಳಿಗೆ ಹಲವು ರೀತಿಯಲ್ಲಿ ಪ್ರಯೋಜನಕಾರಿಯಾಗಿದ್ದು, ಸಂಪೂರ್ಣ ಶೈಕ್ಷಣಿಕ ಮಾಹಿತಿ ಒಳಗೊಂಡಿರುತ್ತದೆ. ವರ್ಗವಾರು ಸರ್ಟಿಫಿಕೇಟ್‌ಗಳು, ವಿದ್ಯಾರ್ಥಿ ವೇತನ, ಶೈಕ್ಷಣಿಕ ಸಾಧನೆ, ಕ್ರೀಡಾ ಸಾಧನೆ, ಶೈಕ್ಷಣಿಕ ಸಾಲ, ಶಾಲಾ ದಾಖಲಾತಿ ಸೇರಿದಂತೆ ಸಂಪೂರ್ಣ ದಾಖಲೆಗಳು ಅಪಾರ್ ಐಡಿಯಲ್ಲಿ ಡಿಜಿಟಲ್ ರೂಪದಲ್ಲಿ ಸಂಗ್ರಹಗೊಳ್ಳಲಿವೆ.


ವಿದ್ಯಾರ್ಥಿ ಪಡೆದ ಅಂಕ, ಪತ್ಯೇತರ ಚಟುವಟಿಕೆ, ಪ್ರಸ್ತುತ ಶಾಲೆಯಲ್ಲಿ ಕಲಿಯುತ್ತಿರುವ ಶೈಕ್ಷಣಿಕ ಮಾಹಿತಿ ಅಪಾರ್ ಐಡಿಯಲ್ಲಿ ಡಿಜಿಟಲ್ ರೂಪದಲ್ಲಿ ಸಂಗ್ರಹಗೊಳ್ಳುತ್ತವೆ. ಇದು ವಿದ್ಯಾರ್ಥಿಗಳು ಒಂದು ಶಾಲೆಯಿಂದ ಮತ್ತೊಂದು ಶಾಲೆಗೆ ವರ್ಗಾವಣೆಗೊಳ್ಳಲು ಸಹಕಾರಿಯಾಗುತ್ತದೆ. ಶಾಲೆಗಳಲ್ಲಿ ವಿದ್ಯಾರ್ಥಿಗಳ ಆಪಾರ್ ಐಡಿ ಬಳಸಿ ವಿದ್ಯಾರ್ಥಿಯ ಸಂಪೂರ್ಣ ಶೈಕ್ಷಣಿಕ ವಿವರವನ್ನು ತಕ್ಷಣ ಪರಿಶೀಲಿಸಬಹುದು.


ಇದನ್ನೂ ಓದಿ: ಕರ್ನಾಟಕ ಅಂಚೆ ವೃತ್ತ ನೇಮಕಾತಿ 2025: 10ನೇ ತರಗತಿ ಪಾಸಾದವರಿಗೆ ಪೋಸ್ಟಾಫೀಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ