ಕೇಂದ್ರ ಸಶಸ್ತ್ರ ಪೊಲೀಸ್ ಪಡೆಯಾದ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಯು (Central Industrial Security Force-CISF) ದೇಶಾದ್ಯಂತ ಖಾಲಿ ಇರುವ ಕಾನ್‌ಸ್ಟೆಬಲ್/ಡ್ರೈವರ್ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಿದೆ.
ಒಟ್ಟು 1,124 ಹುದ್ದೆಗಳನ್ನು ನೇಮಕಾತಿ ಮಾಡಿಕೊಳ್ಳಲಾಗುತ್ತಿದ್ದು, 10ನೇ ತರಗತಿ ಪೂರ್ಣಗೊಳಿಸಿದ, ಚಾಲನಾ ಅರ್ಹತೆಯನ್ನು ಹೊಂದಿರುವ ಅಭ್ಯರ್ಥಿಗಳು ಮಾರ್ಚ್ 4ರೊಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಇದನ್ನೂ ಓದಿ: ಮನೆಗೆ 20 ವರ್ಷ ಉಚಿತ ಸೋಲಾರ್ ವಿದ್ಯುತ್ ಪಡೆಯಲು ಹೀಗೆ ಅರ್ಜಿ ಸಲ್ಲಿಸಿ...
ಹುದ್ದೆಗಳ ವಿವರ : 845 ಕಾನ್‌ಸ್ಟೆಬಲ್ / ಡ್ರೈವರ್ (ಡೈರೆಕ್ಟ್) ಹುದ್ದೆಗಳಿದ್ದು, 279 ಕಾನ್‌ಸ್ಟೆಬಲ್/ (ಡ್ರೈವರ್ ಆ್ಯಂಡ್ ಪಂಪ್ ಆಪರೇಟರ್) ಹುದ್ದೆಗಳು ಸೇರಿ ಒಟ್ಟು 1,124 ಹುದ್ದೆಗಳಿಗೆ ನೇಮಕ ನಡೆಯಲಿದೆ.
ಒಟ್ಟು ಹುದ್ದೆಗಳಲ್ಲಿ ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 460, ಎಸ್ಸಿ ಅಭ್ಯರ್ಥಿಗಳಿಗೆ 167, ಎಸ್‌ಟಿ ಅಭ್ಯರ್ಥಿಗಳಿಗೆ 83, ಒಬಿಸಿ ಅಭ್ಯರ್ಥಿಗಳಿಗೆ 303, ಇಡಬ್ಲ್ಯುಎಸ್ ಅಭ್ಯರ್ಥಿಗಳಿಗೆ 111 ಮೀಸಲಿರಿಸಲಾಗಿದೆ.
ಶೈಕ್ಷಣಿಕ ಅರ್ಹತೆ : ಹುದ್ದೆಗೆ ಅರ್ಜಿ ಸಲ್ಲಿಸಲು ಇಚ್ಛಿಸುವ ಇಚ್ಛಿಸುವ ಅಭ್ಯರ್ಥಿಗಳು ಎಸ್‌ಎಸ್‌ಎಲ್‌ಸಿ ಪಾಸ್ ಮಾಡಿದ್ದು; ಹಗುರ ಹಾಗೂ ಭಾರಿ ಮೋಟಾರು ವೆಹಿಕಲ್‌ಗಳ ಡ್ರೈವಿಂಗ್ ಲೈಸನ್ಸ್ ಹೊಂದಿರಬೇಕು. ವಾಹನಗಳಲ್ಲಿ ಸಣ್ಣಪುಟ್ಟ ರಿಪೇರಿ ಮಾಡಲು ಸಮರ್ಥರಾಗಿರಬೇಕು. ಕನಿಷ್ಠ ಮೂರು ವರ್ಷ ವಾಹನಗಳನ್ನು ಚಲಾಯಿಸಿರುವ ಅನುಭವವಿದ್ದು, ಈ ಸಂಬ೦ಧ ಅಧಿಕೃತ ಅನುಭವ ಪತ್ರ ಪ್ರಸ್ತುತಪಡಿಸಬೇಕು.
ಇದನ್ನೂ ಓದಿ: ಕರ್ನಾಟಕ ಅಂಚೆ ವೃತ್ತ ನೇಮಕಾತಿ 2025: 10ನೇ ತರಗತಿ ಪಾಸಾದವರಿಗೆ ಪೋಸ್ಟಾಫೀಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ
ಅರ್ಜಿ ಶುಲ್ಕವೆಷ್ಟು? : ಎಸ್ಸಿ/ಎಸ್ಟಿ, ಮಾಜಿ ಸೈನಿಕ ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ. ಸಾಮಾನ್ಯ, ಇಡಬ್ಲ್ಯುಎಸ್, ಒಬಿಸಿ ಅಭ್ಯರ್ಥಿಗಳು 100 ರೂ. ಶುಲ್ಕವನ್ನು ಆನ್‌ಲೈನ್ ಮೂಲಕ ಪಾವತಿಸಬೇಕು.
ವಯೋಮಿತಿ, ವೇತನ ವಿವರ : ಅಭ್ಯರ್ಥಿಯು 2025ರ ಮಾರ್ಚ್ 4ನೇ ತಾರೀಖಿಗೆ ಅನ್ವಯವಾಗುವಂತೆ ಕನಿಷ್ಠ 21ರಿಂದ ಗರಿಷ್ಠ 27 ವರ್ಷದೊಳಗಿರಬೇಕು. ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ, ಎಸ್ಸಿ/ಎಸ್ಪಿ ವರ್ಗದವರಿಗೆ 5 ವರ್ಷ ವಯೋಮಿತಿ ಸಡಿಲಿಕೆ ಇದೆ.
ಕಾನ್‌ಸ್ಟೆಬಲ್ / ಡ್ರೈವರ್ ಹುದ್ದೆಗಳಿಗೆ ನೇಮಕವಾಗುವ ಅಭ್ಯರ್ಥಿಗಳಿಗೆ ಪೇ ಲೆವಲ್ 3ರ ಅನ್ವಯ 21,700-69,100 ರೂ. ವರೆಗಿನ ವೇತನ ಶ್ರೇಣಿ ನಿಗದಿಪಡಿಸಲಾಗಿದೆ. ಜೊತೆಗೆ ಇತರ ಸರ್ಕಾರಿ ಸೌಲತ್ತುಗಳು ಅನ್ವಯವಾಗಲಿವೆ.
ಇದನ್ನೂ ಓದಿ: ಕಡಿಮೆ ಬಡ್ಡಿ ದರದಲ್ಲಿ ಗೃಹ ಸಾಲ ಪಡೆಯುವ ಸರಳ ವಿಧಾನ | ಸರಳ ಬಡ್ಡಿಯಲ್ಲಿ ಗೃಹಸಾಲ ನೀಡುವ ಬ್ಯಾಂಕ್‌ಗಳ ಪಟ್ಟಿ
ಆಯ್ಕೆ ಪ್ರಕ್ರಿಯೆ ಹೇಗೆ?: ದೈಹಿಕ ದಕ್ಷತೆ ಪರೀಕ್ಷೆ (ಪಿಇಟಿ), ದೈಹಿಕ ಗುಣಮಟ್ಟದ ಪರೀಕ್ಷೆ(ಪಿಎಸ್‌ಟಿ), ದಾಖಲೆ ಪರಿಶೀಲನೆ, ಲಿಖಿತ ಪರೀಕ್ಷೆ ಹಾಗೂ ವೈದ್ಯಕೀಯ ಪರೀಕ್ಷೆಯ ಮೂಲಕ ಆಯ್ಕೆ ನಡೆಯಲಿದೆ.
ಲಿಖಿತ ಪರೀಕ್ಷೆಯನ್ನು ಕಂಪ್ಯೂಟರ್ ಅಥವಾ ಒಎಂಆರ್ ಮಾದರಿಯಲ್ಲಿ ನಡೆಸಲಾಗುತ್ತದೆ. ಅಬ್ಬೆಕ್ಟಿವ್ ಮಾದರಿಯ 100 ಅಂಕದ ಪ್ರಶ್ನೆಗಳಿರುತ್ತವೆ. ಈ ಪರೀಕ್ಷೆಯನ್ನು ಇಂಗ್ಲಿಷ್ ಅಥವಾ ಹಿಂದಿಯಲ್ಲಿ ನಡೆಸಲಾಗುತ್ತದೆ. ತಪ್ಪು ಉತ್ತರಗಳಿಗೆ ಯಾವುದೇ ಋಣಾತ್ಮಕ ಅಂಕಗಳಿರುವುದಿಲ್ಲ.
ಅರ್ಜಿ ಸಲ್ಲಿಕೆ ಹೇಗೆ? : ಸಿಐಎಸ್‌ಫ್ ವೆಬ್‌ಸೈಟ್ https://cisfrectt.cisf.gov.inಗೆ ಭೇಟಿ ನೀಡಿ ‘Login’ ಎಂದಿರುವಲ್ಲಿ ಕ್ಲಿಕ್ ಮಾಡಿ. ಆಗ ಹೊಸ ವೆಬ್‌ಪೇಜ್ ಓಪನ್ ಆಗುತ್ತದೆ. ‘New Registration’ ಎಂದಿರುವಲ್ಲಿ ಕ್ಲಿಕ್ ಮಾಡಿ. ಅಲ್ಲಿ ಕೇಳಿದ ಮಾಹಿತಿಯನ್ನು ನೀಡಿ ನೋಂದಣಿ ಮಾಡಿಕೊಳ್ಳಿ. ನಂತರ ಮತ್ತೆ ಲಾಗಿನ್ ಆಗಿ ಅರ್ಜಿ ಭರ್ತಿ ಮಾಡಿ ಸಲ್ಲಿಸಿ.
ಅರ್ಜಿಯ ಮುದ್ರಿತ ಪ್ರತಿ ಕಳುಹಿಸಬೇಕಾದ ವಿಳಾಸ : DIG, CISF (South Zone) HQrs., ‘D’ Block, Rajaji Bhawan, Basant Nagar, Chennai, Tamil Nadu-600090. (E-mail: digsz@cisf.gov.in)
ಅರ್ಜಿ ಸಲ್ಲಿಕೆ ಕೊನೇ ದಿನಾಂಕ: 04-03-2025
ಅಧಿಸೂಚನೆ: Download
ಇದನ್ನೂ ಓದಿ: ಹೈನುಗಾರಿಕೆಗೆ ₹10 ಲಕ್ಷದ ವರೆಗೂ ಮೇಲಾಧಾರ ಮುಕ್ತ ಸಾಲ ಸೌಲಭ್ಯ HDFC Bank Dairy Farming Loan