ರಾಜ್ಯ ಸರ್ಕಾರದ ಅಧೀನದ ಮಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತದಲ್ಲಿ (Mangalore Electricity Supply Company - MESCOM) 200 ಅಪ್ರೆಂಟೀಸ್ ಸ್ಥಾನಗಳ ಉದ್ಯೋಗ ತರಬೇತಿಗೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಹ, ಆಸಕ್ತ ಅಭ್ಯರ್ಥಿಗಳು ಅಪ್ರೆಂಟೀನ್ ಪೋರ್ಟಲ್’ನಲ್ಲಿ ನೋಂದಾಯಿತರಾಗಿ ಅರ್ಜಿ ಸಲ್ಲಿಸಬಹುದಾಗಿದೆ.
ಸ್ಥಾನಗಳ ವಿವರ : ಗ್ರಾಜುಯೇಟ್ ಅಪ್ರೆಂಟೀಸ್ 70 ಸ್ಥಾನಗಳು, ಟೆಕ್ನಿಷಿಯನ್ (ಡಿಪ್ಲೊಮಾ) ಅಫ್ರೆಂಟೀಸ್ 55 ಸ್ಥಾನಗಳು ಹಾಗೂ ಜನರಲ್ ಸ್ಟೀಮ್ ಗ್ರಾಜುಯೇಟ್ ಅಫ್ರೆಂಟೀಸ್ 65 ಸ್ಥಾನಗಳು ಸೇರಿ ಒಟ್ಟು 200 ಸ್ಥಾನಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
ಇದನ್ನೂ ಓದಿ: 8 ಲಕ್ಷ ರೂಪಾಯಿ ವರೆಗೆ ಗೂಗಲ್ ಪೇ ಲೋನ್ | ಮೊಬೈಲ್‌ನಲ್ಲೇ ಅರ್ಜಿ ಸಲ್ಲಿಸಿ ಪಡೆಯಿರಿ...
ಅವಧಿ ಮತ್ತು ಸ್ಟೈಪೆಂಡ್ : ಈ ತರಬೇತಿಯು ಒಂದು ವರ್ಷದ ಅವಧಿ ಹೊಂದಿದ್ದು, ಆಯ್ಕೆಯಾಗುವ ಅಭ್ಯರ್ಥಿಗಳಿಗೆ 8,000 ರೂ.ದಿಂದ 9,000 ರೂ. ಸ್ಟೈಪೆಂಡ್ ನೀಡಲಾಗುವುದು. ಅಪ್ರೆಂಟೀಸ್‌ಶಿಪ್ ನಿಯಮದನ್ವಯ ವಯೋಮಿತಿ ಹಾಗೂ ಮೀಸಲಾತಿ ನಿಗದಿಯಾಗಿದೆ. 1992ರ ಅಫ್ರೆಂಟೀಸ್ ನಿಯಮದನ್ವಯ ದೈಹಿಕ ಮಾನದಂಡ ನಿಗದಿಪಡಿಸಲಾಗಿದೆ. ಮೀಸಲಾತಿ ಕೋರುವವರು ಅಗತ್ಯ ದಾಖಲೆ ಸಲ್ಲಿಸಬೇಕು.
ವಿದ್ಯಾರ್ಹತೆ ವಿವರ : ಮಾನ್ಯತೆ ಪಡೆದ ಕಾಲೇಜು/ ವಿಶ್ವವಿದ್ಯಾಲಯ/ ಸಂಸ್ಥೆಗಳಲ್ಲಿ ಎಲೆಕ್ನಿಕಲ್ ಆ್ಯಂಡ್ ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ ಅಥವಾ ಟೆಕ್ನಾಲಜಿಯಲ್ಲಿ ಪದವಿ ಪಡೆದಿರಬೇಕು. ಇಲ್ಲವಾದಲ್ಲಿ ಇಂಜಿನಿಯರಿAಗ್ ಅಥವಾ ಟೆಕ್ನಾಲಜಿಯಲ್ಲಿ ಡಿಪ್ಲೊಮಾ ಪಡೆದಿರಬೇಕು. ಅಥವಾ ಬಿಎ/ಬಿಎಸ್ಸಿ/ ಬಿಕಾಮ್/ಬಿಬಿಎ/ಬಿಸಿಎ ಪೂರ್ಣಗೊಳಿಸಿರಬೇಕು.
ಅರ್ಜಿ ಸಲ್ಲಿಸುವ ಅಂತಿಮ ದಿನಾಂಕದ ಮೊದಲು ಮೇಲ್ಕಾಣಿಸಿದ ಶೈಕ್ಷಣಿಕ ಪ್ರಮಾಣಪತ್ರ ಹೊಂದಿರಬೇಕು. ಅಭ್ಯರ್ಥಿಯು ಕನಿಷ್ಠ ಉತ್ತೀರ್ಣ ಅಂಕವನ್ನು ಗಳಿಸಿ ಪದವಿ ಅಥವಾ ಡಿಪ್ಲೊಮಾವನ್ನು 2020, 2021, 2022, 2023 ಹಾಗೂ 2024ರಲ್ಲಿ ಪೂರ್ಣಗೊಳಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರು.
ಇದನ್ನೂ ಓದಿ: ಮನೆಗೆ 20 ವರ್ಷ ಉಚಿತ ಸೋಲಾರ್ ವಿದ್ಯುತ್ ಪಡೆಯಲು ಹೀಗೆ ಅರ್ಜಿ ಸಲ್ಲಿಸಿ...
ಆಯ್ಕೆ ಪ್ರಕ್ರಿಯೆ : ಅಭ್ಯರ್ಥಿಗಳ ಶೈಕ್ಷಣಿಕ ಅಂಕ ಆಧರಿಸಿ ಶಾರ್ಟ್ ಲಿಸ್ಟ್ ಮಾಡಲಾದ ಅಭ್ಯರ್ಥಿಗಳನ್ನು ದಾಖಲೆ ಪರಿಶೀಲನೆಗೆ ಮೆಸ್ಕಾಂ ಕೇಂದ್ರ ಕಚೇರಿ ಹೊಂದಿರುವ ಮಂಗಳೂರಿಗೆ ಆಹ್ವಾನಿಸಲಾಗುವುದು. ಆಯ್ಕೆಯಾದವರಿಗೆ ಇ-ಮೇಲ್ ಮೂಲಕ ಮಾಹಿತಿ ನೀಡಲಾಗುತ್ತದೆ.
ಶಾರ್ಟ್ ಲಿಸ್ಟ್ ಆದವರು ದಾಖಲೆ ಪರಿಶೀಲನೆಗೆ ಮಂಗಳೂರು ವಿದ್ಯುತ್ ಸರಬರಾಜು ಕಂಪನಿ, ಗೋಪಾಲಕೃಷ್ಣ ದೇವಾಲಯದ ಹತ್ತಿರ, ಶಕ್ತಿನಗರ ಮUಂಗಳೂರು -575016 ಇಲ್ಲಿಗೆ ಮಾರ್ಚ್ 20, 21-ರಂದು ಭೇಟಿ ನೀಡಬೇಕು.
ಅರ್ಜಿ ಸಲ್ಲಿಕೆ ಹೇಗೆ?: ಆಸಕ್ತ ಅಭ್ಯರ್ಥಿಗಳು mescom.karnataka.gov.in ಪೋರ್ಟಲ್‌ಗೆ ಭೇಟಿ ನೀಡಿ ಇ-ಮೇಲ್ ಹಾಗೂ ಇತರ ಮಾಹಿತಿ ದಾಖಲಿಸಿ ಲಾಗಿನ್ ಐಡಿ ರಚಿಸಿಕೊಳ್ಳಬೇಕು. ಬಳಿಕ ಸ್ಟುಡೆಂಟ್ ಲಾಗಿನ್’ನಲ್ಲಿ ಮಂಗಳೂರು ಎಲೆಕ್ಟ್ರಿಸಿಟಿ ಸಪ್ಲೈ ಕಂಪನಿ ಲಿಮಿಟೆಡ್‌ನಲ್ಲಿನ ಅವಕಾಶಗಳಿಗೆ ಅಪ್ಲೈ ಮಾಡಬೇಕು. ಈಗಾಗಲೇ ಎನ್‌ಎಟಿಎಸ್ ಸ್ಟುಡೆಂಟ್ ಲಾಗಿನ್ ಹೊಂದಿರುವವರು ನೇರವಾಗಿ ಈ ತರಬೇತಿಗೆ ನೋಂದಣಿ ಮಾಡಿಕೊಳ್ಳಬಹುದು.
ಇದನ್ನೂ ಓದಿ: ಕರ್ನಾಟಕ ಆಧಾರ್ ಸೇವಾ ಕೇಂದ್ರಗಳ ಆಪರೇಟರ್ ಹುದ್ದೆಗಳಿಗೆ ಅರ್ಜಿ ಆಹ್ವಾನ | SSLC, ITI, PUC, ಡಿಪ್ಲೊಮಾ ಅಭ್ಯರ್ಥಿಗಳಿಗೆ ಅವಕಾಶ
ವೆಬ್ ಪೋರ್ಟಲ್‌ನಲ್ಲಿ ಅರ್ಜಿ ಸಲ್ಲಿಸುವ ಸಂಬ೦ಧಿತ ಪ್ರಶ್ನೆಗಳಿಗೆ studentquery@boat-srp.com ಹಾಗೂ knplacement@boat-srp.com ಸಂಪರ್ಕಿಸಬಹುದು. ನಿಗದಿತ ದಿನಾಂಕದ ಮೊದಲು ಅಥವಾ ನಂತರ ಬಂದ ಅರ್ಜಿ ಅಥವಾ ತಪ್ಪಾದ ಆನ್‌ಲೈನ್ ಅರ್ಜಿಯನ್ನು ಗಣನೆಗೆ ತೆಗೆದುಕೊಳ್ಳುವುದಿಲ್ಲ.
ಅರ್ಜಿ ಸಲ್ಲಿಸಲು ಕೊನೆಯ ದಿನ: 03-03-2025 | ಆಯ್ಕೆಯಾದ ಅಭ್ಯರ್ಥಿಗಳ ಪಟ್ಟಿ ಪ್ರಕಟಣೆ: 10-03-2025
ಅಧಿಸೂಚನೆ: Download