ಕರ್ನಾಟಕದ ವಿವಿಧ ಜಿಲ್ಲೆಗಳ ‘ಆಧಾರ್ ಸೇವಾ ಕೇಂದ್ರ’ದಲ್ಲಿ (Aadhaar Seva Kendra) ಖಾಲಿ ಇರುವ ಆಧಾರ್ ಮೇಲ್ವಿಚಾರಕ/ಆಪರೇಟರ್ (Aadhaar Seva Kendra Supervisor) ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಇದೇ ಫೆಬ್ರವರಿ 28, 2025ರ ಒಳಗೆ ಅರ್ಜಿ ಸಲ್ಲಸುವ ಮೂಲಕ ಈ ಅವಕಾಶ ಬಳಸಿಕೊಳ್ಳಬಹುದಾಗಿದೆ.
ಹುದ್ದೆಗಳ ವಿವರ: ಕರ್ನಾಟಕ ಆಧಾರ್ ಸೇವಾ ಕೇಂದ್ರದ ಒಟ್ಟು 08 ಹುದ್ದೆಗಳ ನೇಮಕಾತಿ ನಡೆಯಲಿದ್ದು; ಬಾಗಲಕೋಟೆ, ಬೆಳಗಾವಿ, ಚಿಕ್ಕಮಗಳೂರು, ಗದಗ, ಕೊಪ್ಪಳ, ಉಡುಪಿ, ಉತ್ತರ ಕನ್ನಡ, ಯಾದಗೀರಿ ಜಿಲ್ಲೆಗಳಲ್ಲಿ ತಲಾ ಒಂದೊ೦ದು ಹುದ್ದೆಗಳ ಭರ್ತಿ ನಡೆಯಲಿದೆ.
ಇದನ್ನೂ ಓದಿ: ಮನೆಗೆ 20 ವರ್ಷ ಉಚಿತ ಸೋಲಾರ್ ವಿದ್ಯುತ್ ಪಡೆಯಲು ಹೀಗೆ ಅರ್ಜಿ ಸಲ್ಲಿಸಿ...
ಶೈಕ್ಷಣಿಕ ಅರ್ಹತೆ: ಕರ್ನಾಟಕ ಆಧಾರ್ ಸೇವಾ ಕೇಂದ್ರದ ಅಧಿಕೃತ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿಗಳು ಅಥವಾ ವಿಶ್ವವಿದ್ಯಾಲಯಗಳಿಂದ 10ನೇ ತರಗತಿ, ಐಟಿಐ, 12ನೇ ತರಗತಿ, ಡಿಪ್ಲೊಮಾವನ್ನು ಪೂರ್ಣಗೊಳಿಸಿರುವ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ.
ಅನುಭವ ಮತ್ತು ವಯೋಮಿತಿ ವಿವರ : ಆಧಾರ್ ಸೇವಾ ಕೇಂದ್ರದ ಮೇಲ್ವಿಚಾರಕ/ಆಪರೇಟರ್ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕನಿಷ್ಠ ಒಂದು ವರ್ಷದ ಅನುಭವ ಮತ್ತು ಆಧಾರ್ ಮೇಲ್ವಿಚಾರಕರ ಪ್ರಮಾಣ ಪತ್ರವನ್ನು ಹೊಂದಿರಬೇಕು.
ಕರ್ನಾಟಕ ಆಧಾರ್ ಸೇವಾ ಕೇಂದ್ರದ ನೇಮಕಾತಿ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಯ ಕನಿಷ್ಠ ವಯಸ್ಸು 18 ವರ್ಷಗಳಾಗಿರಬೇಕು. ಕರ್ನಾಟಕ ಆಧಾರ್ ಸೇವಾ ಕೇಂದ್ರದ ನಿಯಮಗಳ ಪ್ರಕಾರ ವಯೋಮಿತಿ ಸಡಿಲಿಕೆ ಇದೆ.
ಅರ್ಜಿ ಶುಲ್ಕ ಮತ್ತು ಆಯ್ಕೆ ಪ್ರಕ್ರಿಯೆ: ಆಧಾರ್ ಸೇವಾ ಕೇಂದ್ರದ ಮೇಲ್ವಿಚಾರಕ/ಆಪರೇಟರ್ ಹುದ್ದೆಗೆ ಅರ್ಜಿ ಸಲ್ಲಿಸಲು ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ. ಎಲ್ಲಾ ವರ್ಗದ ಅಭ್ಯರ್ಥಿಗಳು ಉಚಿತವಾಗಿ ಅರ್ಜಿ ಸಲ್ಲಸಬಹುದು. ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ನೇಮಕಾತಿ ಮಾಡಿಕೊಳ್ಳಲಾಗುತ್ತದೆ.
ಅರ್ಜಿ ಸಲ್ಲಿಕೆ ಹೇಗೆ? : ಕೆಳಗೆ ನೀಡಿರುವ ಕರ್ನಾಟಕ ಆಧಾರ್ ಸೇವಾ ಕೇಂದ್ರದ ನೇಮಕಾತಿ ಅರ್ಜಿ ಲಿಂಕ್ ಮೂಲಕ ಅಭ್ಯರ್ಥಿಗಳು ಅರ್ಜಿ ಸಲ್ಲಸಬಹುದು.
ಅರ್ಜಿ ಸಲ್ಲಿಕೆ ಕೊನೇ ದಿನಾಂಕ: 28-02-2025
* ಅಧಿಕೃತ ಅಧಿಸೂಚನೆ: Download
* ಅರ್ಜಿ ಲಿಂಕ್: Apply Now
ಇದನ್ನೂ ಓದಿ: ಕರ್ನಾಟಕ ಅಂಚೆ ವೃತ್ತ ನೇಮಕಾತಿ 2025: 10ನೇ ತರಗತಿ ಪಾಸಾದವರಿಗೆ ಪೋಸ್ಟಾಫೀಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ