ಕಳೆದ 1948ರಿಂದಲೂ ಶೈಕ್ಷಣಿಕ ರಂಗದಲ್ಲಿ ಗಮನಾರ್ಹ ಸೇವೆ ಸಲ್ಲಿಸುತ್ತ ಬರುತ್ತಿರುವ ಪ್ರತಿಷ್ಠಿತ ಶ್ರೀ ಅನ್ನದಾನ ವಿಜಯ ವಿದ್ಯಾಪ್ರಸಾರಕ ಸಮಿತಿಯ ಸಹಯೋಗದಲ್ಲಿ ಹೊಸದಾಗಿ ಆರಂಭಿಸಲಾಗುತ್ತಿರುವ ಪದವಿ ಪೂರ್ವ ಕಾಲೇಜಿನ ವಿವಿಧ ವಿಷಯಗಳ ಬೋದಕ ಮತ್ತು ಬೋದಕೇತರ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಗದಗ ಜಿಲ್ಲೆ, ಗಜೇಂದ್ರಗಡ ತಾಲ್ಲೂಕು ನರೇಗಲ್ಲನ ಶ್ರೀ ಅನ್ನದಾನ ವಿಜಯ ವಿದ್ಯಾಪ್ರಸಾರಕ ಸಮಿತಿಯ ಅಂಗ ಸಂಸ್ಥೆಯಾದ ಶ್ರೀ ಅನ್ನದಾನೇಶ್ವರ ಬಿಸಿಎ ಕಾಲೇಜು ಹಾಗೂ ಗದಗ ನಗರದಲ್ಲಿ ಹೊಸದಾಗಿ ಪ್ರಾರಂಭಿಸಲು ಉದ್ದೇಶಿಸಿರುವ ಶ್ರೀ ಅನ್ನದಾನೇಶ್ವರ ಪದವಿ ಪೂರ್ವ ಕಾಲೇಜಿನಲ್ಲಿ ಕಾರ್ಯ ನಿರ್ವಹಿಸಲು ಬೋಧಕ ಹಾಗೂ ಬೋಧಕೇತರ ಹುದ್ದೆಗಳ ನೇಮಕಾತಿ ನಡೆಯಲಿದೆ.
ಇವು ಪೂರ್ಣ/ಅರೆಕಾಲಿಕ ಹುದ್ದೆಗಳಾಗಿದ್ದು; ಇದೇ ದಿನಾಂಕ: 23-02-2025ರ ರವಿವಾರ ದಿನದಂದು ಬೆಳಿಗ್ಗೆ 10 ಗಂಟೆಗೆ ನೇರ ಸಂದರ್ಶನವನ್ನು ಏರ್ಪಡಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಪೂರಕ ದಾಖಲೆಗಳು ಹಾಗೂ ಸ್ವ-ವಿವರಗಳೊಂದಿಗೆ ಸಂದರ್ಶನಕ್ಕೆ ನೇರವಾಗಿ ಹಾಜರಾಗಬಹುದು ಎಂದು ಸಂಸ್ಥೆಯ ಅಧ್ಯಕ್ಷರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದು: ಕರ್ನಾಟಕ ಅಂಚೆ ವೃತ್ತ ನೇಮಕಾತಿ 2025: 10ನೇ ತರಗತಿ ಪಾಸಾದವರಿಗೆ ಪೋಸ್ಟಾಫೀಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ
ಹುದ್ದೆಗಳ ವಿವರ : ಗದಗ ನಗರದಲ್ಲಿ ನೂತನವಾಗಿ ಆರಂಭಿಸಲಾಗುತ್ತಿರುವ ನಿಯೋಜಿತ ವಸತಿ ಸಹಿತ ಶ್ರೀ ಅನ್ನದಾನೇಶ್ವರ ಪದವಿ ಪೂರ್ವ ಕಾಲೇಜಿನ ಹುದ್ದೆಗಳ ವಿವರ ಈ ಕೆಳಗಿನಂತಿವೆ:
ಕನ್ನಡ ಉಪನ್ಯಾಸಕ 02, ಇಂಗ್ಲೀಷ್ ಉಪನ್ಯಾಸಕ 02, ಭೌತಶಾಸ್ತ್ರ ಉಪನ್ಯಾಸಕ 02, ರಸಾಯನಶಾಸ್ತ್ರ ಉಪನ್ಯಾಸಕ 02, ಗಣಿತಶಾಸ್ತ್ರ ಉಪನ್ಯಾಸಕ 02, ಜೀವಶಾಸ್ತ್ರ ಉಪನ್ಯಾಸಕ 02, ಕ್ಲರ್ಕ್ ಕಂ ಕಂಪ್ಯೂಟರ್ ಆಪರೇಟರ್ 02, ಅಟೆಂಡರ್ 01, ಮಹಿಳಾ/ಪುರುಷ ವಸತಿ ನಿಲಯದ ವಾರ್ಡನ್ 04 ಹುದ್ದೆಗಳು ಸೇರಿ ಒಟ್ಟು 19 ಹುದ್ದೆಗಳ ನೇಮಕಾತಿ ನಡೆಯಲಿದೆ.
ಇದನ್ನೂ ಓದು: ಸೂರ್ಯ ಘರ್ ಯೋಜನೆಗೆ ವರ್ಷ | ಒಂದು ಕೋಟಿ ಮನೆಗಳಿಗೆ ಸೋಲಾರ್ ಕರೆಂಟ್
ವಿದ್ಯಾರ್ಹತೆ: ಕನ್ನಡ ಉಪನ್ಯಾಸಕ ಹಾಗೂ ಇಂಗ್ಲೀಷ್ ಉಪನ್ಯಾಸಕ ಹುದ್ದೆಗಳಿಗೆ ಎಂಎ., ಬಿ.ಇಡಿ ಪದವಿ ನಿಗದಿಪಡಿಸಲಾಗಿದೆ. ಉಳಿದ ವಿವಿಧ ವಿಷಯಗಳ ಉಪನ್ಯಾಸಕ ಹುದ್ದೆಗಳಿಗೆ ಎಂಎಸ್‌ಸಿ., ಬಿ.ಇಡಿ ಪದವೀಧರರು ಅರ್ಜಿ ಸಲ್ಲಿಸಬಹುದಾಗಿದೆ.
ಇನ್ನು ಕ್ಲರ್ಕ್ ಕಂ ಕಂಪ್ಯೂಟರ್ ಆಪರೇಟರ್ ಹುದ್ದೆಗಳಿಗೆ ಯಾವುದೇ ಪದವಿ ಮತ್ತು ಕಂಪ್ಯೂಟರ್ ಜ್ಞಾನ ಅಪೇಕ್ಷಣಿಯವಾಗಿದೆ. ಅದೇ ರೀತಿ ಮಹಿಳಾ/ಪುರುಷ ವಸತಿ ನಿಲಯದ ವಾರ್ಡನ್ ಹುದ್ದೆಗೆ ಯಾವುದೇ ಪದವಿಧರರಾಗಿರಬೇಕು. ಅಟೆಂಡರ್ ಹುದ್ದೆಗೆ ಎಸ್.ಎಸ್.ಎಲ್.ಸಿ ಪಾಸಾದವರು ಅರ್ಜಿ ಸಲ್ಲಿಸಬಹುದಾಗಿದೆ.
ಮಾಸಿಕ ವೇತನ : ಈ ಹುದ್ದೆಗಳಿಗೆ ನೇಮಕವಾಗುವ ಅಭ್ಯರ್ಥಿಗಳಿಗೆ ಸಾಮರ್ಥ್ಯಕ್ಕೆ ಅನುಗುಣವಾಗಿ ಸಂಬಳವನ್ನು ನಿಗದಿಪಡಿಸಲಾಗುವುದು. ಸಾಮಾನ್ಯವಾಗಿ ಉಪನ್ಯಾಸಕ ಹುದ್ದೆಗಳಿಗೆ 20,000 ರೂ. ದಿಂದ 80,000 ರೂ. ವರೆಗೆ ಮಾಸಿಕ ವೇತನ ಇರಲಿದೆ.
ಇದನ್ನೂ ಓದು: 8 ಲಕ್ಷ ರೂಪಾಯಿ ವರೆಗೆ ಗೂಗಲ್ ಪೇ ಲೋನ್ | ಮೊಬೈಲ್‌ನಲ್ಲೇ ಅರ್ಜಿ ಸಲ್ಲಿಸಿ ಪಡೆಯಿರಿ...
ಸೂಚನೆಗಳು: ಕೆ.ಸಿಇಟಿ (KCET) ಹಾಗೂ ನೀಟ್ (NEET) ತರಬೇತಿ ನೀಡುವ ಸಾಮರ್ಥ್ಯ ಹೊಂದಿದವರಿಗೆ ಮತ್ತು ಅನುಭವಿಕರಿಗೆ ಮೊದಲ ಆದ್ಯತೆ ನೀಡಲಾಗುವುದು. ಮೇಲಿನ ಎಲ್ಲ ಹುದ್ದೆಗಳಿಗೆ ಕಂಪ್ಯೂಟರ್ ನಿರ್ವಹಣಾ ಕೌಶಲ್ಯ ಇರಬೇಕು. ಅನುಭವಿಕರಿಗೆ ಮೊದಲ ಆದ್ಯತೆ ನೀಡಲಾಗುವುದು.
ಸಂದರ್ಶನ ಸ್ಥಳ: ಶ್ರೀ ಅನ್ನದಾನ ವಿಜಯ ವಿದ್ಯಾಪ್ರಸಾರಕ ಸಮಿತಿ, ಕೋಡಿಕೊಪ್ಪ-ನರೇಗಲ್ಲ, ತಾ: ಗಜೇಂದ್ರಗಡ, ಜಿ: ಗದಗ ಮೊ: 9916337700, 9342019979
ನೇಮಕಾತಿ ಅಧಿಸೂಚನೆ: Download
ಇದನ್ನೂ ಓದು: ಮನೆಗೆ 20 ವರ್ಷ ಉಚಿತ ಸೋಲಾರ್ ವಿದ್ಯುತ್ ಪಡೆಯಲು ಹೀಗೆ ಅರ್ಜಿ ಸಲ್ಲಿಸಿ...