ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಪಾಸಾದ ಅಭ್ಯರ್ಥಿಗಳಿಂದ ಕೇಂದ್ರ ಸರ್ಕಾರದ ರಕ್ಷಣಾ ಸಚಿವಾಲಯದ (Department Of Defence) ಗ್ರೂಪ್ ‘ಸಿ’ ವೃಂದದ ನಾಗರಿಕ (ಸಿವಿಲಿಯನ್) ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಬರಲಿರುವ ಫೆಬ್ರವರಿ 6ರೊಳಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.
ರಕ್ಷಣಾ ಸಚಿವಾಲಯವು ರಾಷ್ಟ್ರೀಯ ಭದ್ರತೆ ಮತ್ತು ಭಾರತೀಯ ಸಶಸ್ತ್ರ ಪಡೆಗಳಿಗೆ ಸಂಬಂಧಿಸಿದ ಸರ್ಕಾರದ ಎಲ್ಲ ಏಜೆನ್ಸಿಗಳು ಮತ್ತು ಕಾರ್ಯಗಳನ್ನು ಸಮನ್ವಯಗೊಳಿಸುವ ಮತ್ತು ಮೇಲ್ವಿಚಾರಣೆ ಮಾಡುವ ಕಾರ್ಯನಿರ್ವಹಿಸುತ್ತಿದೆ. ಇಂತಹ ಪ್ರತಿಷ್ಠಿತ ಇಲಾಖೆಯ ಖಾಲಿ ಹುದ್ದೆಗಳಿಗೆ ಇದೀಗ ಅರ್ಜಿ ಕರೆಯಲಾಗಿದೆ.
ಹುದ್ದೆಗಳ ವಿವರ
* ಅಕೌಂಟೆಂಟ್ : 01
* ಸ್ಟೆನೋಗ್ರಾಫರ್ (ಗ್ರೇಡ್ 1) : 01
* ಕೆಳದರ್ಜೆಯ ಗುಮಾಸ್ತ : 11
* ಸ್ಟೋರ್ ಕೀಪರ್ : 24
* ಫೋಟೋಗ್ರಾಫರ್ : 01
* ಫೈರ್‌ಮನ್ : 05
* ಕುಕ್ : 04
* ಲ್ಯಾಬ್ ಅಟೆಂಡೆಂಟ್ : 01
* ಎಂಟಿಎಸ್ : 29
* ಟ್ರೇಡ್ಸ್ ಮನ್ : 31
* ವಾಷರ್‌ಮನ್ : 02
* ಕಾರ್ಪೆಂಟರ್ ಆ್ಯಂಡ್ ಜಾಯ್ಕರ್ : 02
* ಟಿನ್ ಸ್ಮಿತ್ : 01
ವಿದ್ಯಾರ್ಹತೆ ಎಷ್ಟರಬೇಕು?
ಮೊದಲೇ ಹೇಳಿದಂತೆ ರಕ್ಷಣಾ ಸಚಿವಾಲಯದ ಖಾಲಿ ಹುದ್ದೆಗಳಿಗೆ ಅನುಗುಣವಾಗಿ 10ನೇ ತರಗತಿ, 12ನೇ ತರಗತಿ, ಡಿಪ್ಲೊಮಾ, ಪದವಿ ಪಡದರಿರಬೇಕು. ಹುದ್ದೆಗೆ ಸಂಬಂಧಿಸಿದ ಕೆಲಸದಲ್ಲಿ ಅನುಭವವನ್ನು ಹೊಂದಿರಬೇಕು.
ವಯೋಮಿತಿ, ವೇತನ ಮಾಹಿತಿ
ರಕ್ಷಣಾ ಸಚಿವಾಲಯದ ಹುದ್ದೆಗಳಿಗೆ ನೇಮಕವಾಗುವ ಅಭ್ಯರ್ಥಿಗಳಿಗೆ 18,000- 92,300 ರೂ. ವರೆಗೂ ವೇತನ ನಿಗದಿಪಡಿಸಲಾಗಿದೆ. ಇದರ ಜೊತೆಗೆ ಇತರ ಕೇಂದ್ರ ಸರ್ಕಾರಿ ಸವಲತ್ತುಗಳು ಅನ್ವಯವಾಗಲಿವೆ.
ಕನಿಷ್ಠ 18 - ಗರಿಷ್ಠ 27 ವರ್ಷದೊಳಗಿರಬೇಕು. ಎಸ್ಸಿ/ಎಸ್ಟಿ ಅಭ್ಯರ್ಥಿಗಳಿಗೆ 5 ವರ್ಷ, ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ, ಅಂಗವಿಕಲ ಅಭ್ಯರ್ಥಿಗಳಿಗೆ 10-15 ವರ್ಷ ವಯೋಮಿತಿ ಸಡಿಲಿಕೆ ಇದೆ.
ಆಯ್ಕೆ ಪ್ರಕ್ರಿಯೆ ಹೇಗೆ?
ಲಿಖಿತ ಪರೀಕ್ಷೆ, ಟ್ರೇಡ್ ಸ್ಪೆಸಿಫಿಕ್ ಟೆಸ್ಟ್ ನಡೆಸುವ ಮೂಲಕ ಅಭ್ಯರ್ಥಿಗಳನ್ನು ಹುದ್ದೆಗೆ ಆಯ್ಕೆ ಮಾಡಲಾಗುತ್ತದೆ. ಲಿಖಿತ ಪರೀಕ್ಷೆಯು ಇಂಗ್ಲಿಷ್ ಅಥವಾ ಹಿಂದಿ ಭಾಷೆಯಲ್ಲಿ ಇರುತ್ತದೆ. ಈ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ ಅಭ್ಯರ್ಥಿಗಳಿಗೆ ಟ್ರೇಡ್ ಸ್ಪೆಸಿಫಿಕ್ ಟೆಸ್ಟ್ ನಡೆಸಲಾಗುತ್ತದೆ. ಪರೀಕ್ಷೆಯನ್ನು ಫೆಬ್ರವರಿ/ ಮಾರ್ಚ್’ನಲ್ಲಿ ನಡೆಸುವ ಸಾಧ್ಯತೆ ಇದೆ.
ಅರ್ಜಿ ಸಲ್ಲಿಕೆ ಹೇಗೆ?
ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ಆನ್‌ಲೈನ್ ಅರ್ಜಿಯನ್ನು ಫೆ.6ರೊಳಗೆ ಸಲ್ಲಿಸಬೇಕು.
ಪ್ರಮುಖ ದಿನಾಂಕಗಳು
* ಅರ್ಜಿ ಸಲ್ಲಿಕೆ ಆರಂಭ ದಿನಾಂಕ : 07-01-2025
* ಅರ್ಜಿ ಸಲ್ಲಿಕೆ ಕೊನೇ ದಿನಾಂಕ : 06-02-2025
ಅಧಿಸೂಚನೆ : Download
ಅರ್ಜಿ ಲಿಂಕ್ : Apply Now