Jobs

KPTCL Powerman Recruitment - ಕರ್ನಾಟಕ ವಿದ್ಯುತ್ ಇಲಾಖೆ ನೇಮಕಾತಿ | 10ನೇ ತರಗತಿ ಪಾಸಾದವರಿಗೆ 3,000 ಲೈನ್‌ಮ್ಯಾನ್ ಹುದ್ದೆಗಳು

KPTCL Powerman Recruitment - ಕರ್ನಾಟಕ ವಿದ್ಯುತ್ ಇಲಾಖೆ ನೇಮಕಾತಿ | 10ನೇ ತರಗತಿ ಪಾಸಾದವರಿಗೆ 3,000 ಲೈನ್‌ಮ್ಯಾನ್ ಹುದ್ದೆಗಳು

ಕಳೆದ ವರ್ಷ ಅಕ್ಟೋಬರ್’ನಲ್ಲಿ 2,975 ಕಿರಿಯ ಲೈನ್‌ಮನ್ (Junior Powerman) ಹಾಗೂ ಕಿರಿಯ ಸ್ಟೇಷನ್ ಪರಿಚಾರಕ (Junior Station Attendant) ಹುದ್ದೆಗಳ ಭರ್ತಿ ಪ್ರಕ್ರಿಯೆ ನಡೆಸಿದ್ದ ಇಂಧನ ಇಲಾಖೆ ಇದೀಗ ಪುನಃ 3,000 ಲೈನ್‌ಮನ್ ಹುದ್ದೆಗಳ ನೇಮಕಾತಿಗೆ ಸಿದ್ಧತೆ ನಡೆಸಿದೆ.


ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತದ (Karnataka Electricity Transmission Corporation Limited - KPTCL) ಈ ಹುದ್ದೆಗಳಿಗೆ 10ನೇ ತರಗತಿ ಅಥವಾ ಎಸ್ಸೆಸ್ಸೆಲ್ಸಿ ಪೂರ್ಣಗೊಳಿಸಿದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.


ಇದನ್ನೂ ಓದಿ: ಬಂಗಾರದ ಬೆಲೆ ವರ್ಷದಲ್ಲಿ ₹20,180 ಹೆಚ್ಚಳ | ₹82,900ಗೆ 10 ಗ್ರಾಂ ಚಿನ್ನ


ಮೂರು ಸಾವಿರ ಖಾಲಿ ಹುದ್ದೆಗಳು : ಖಾಲಿ ಇರುವ ಮೂರು ಸಾವಿರ ಲೈನ್‌ಮೆನ್ ಹುದ್ದೆಗಳನ್ನು ಭರ್ತಿ ಮಾಡುವ ಪ್ರಕ್ರಿಯೆ ಆರಂಭಗೊ೦ಡಿದ್ದು; ಬರುವ ಏಪ್ರಿಲ್‌ನೊಳಗೆ ನೇಮಕಾತಿ ಪ್ರಕ್ರಿಯೆ ಮುಗಿಯಲಿದೆ.


ಮೊದಲ ಬಾರಿಗೆ ಇಡೀ ರಾಜ್ಯದಲ್ಲಿ ಒಂದೇ ದಿನ ದೈಹಿಕ ಪರೀಕ್ಷೆ ನಡೆಸಲು ನಿರ್ಧರಿಸಲಾಗಿದೆ. ಬಳಿಕ ಎಇಇ, ಜೆಇ ಸೇರಿದಂತೆ ಇತರೆ ಹುದ್ದೆಗಳನ್ನು ಹಂತ ಹಂತವಾಗಿ ತುಂಬಲಾಗುವುದು ಎಂದು ಇಂಧನ ಸಚಿವರಾದ ಕೆ.ಜೆ.ಜಾರ್ಜ್ ತಿಳಿಸಿದ್ದಾರೆ. 


ವೇತನ ಶ್ರೇಣಿ ಎಷ್ಟು? : ಲೈನ್‌ಮನ್ (ಪವರ್‌ಮನ್) ಹುದ್ದೆಗಳಿಗೆ ನೇಮಕವಾಗುವ ಅಭ್ಯರ್ಥಿಗಳಿಗೆ ಮೊದಲು 3 ವರ್ಷ ಕ್ರೋಢೀಕೃತ ಸಂಭಾವನೆ ನೀಡಲಾಗುತ್ತದೆ. ಮೂರು ವರ್ಷ ತರಬೇತಿ ನಂತರ ಮಾಸಿಕ 28,550 ರೂ. - 63,000 ರೂ. ವೇತನ ಶ್ರೇಣಿ ಇರಲಿದೆ. ಜೊತೆಗೆ ಸರ್ಕಾರದ ಎಲ್ಲ ಸವಲತ್ತುಗಳು ಅನ್ವಯವಾಗಲಿವೆ.


ಇದನ್ನೂ ಓದಿ: ಇಂಟರ್‌ನೆಟ್ ಇಲ್ಲದೇ ಮೊಬೈಲ್‌ನಲ್ಲಿ ಹಣ ಕಳಿಸುವುದು ಹೇಗೆ? ಇಲ್ಲಿದೆ ಸರಳ ವಿಧಾನ...


ಶೈಕ್ಷಣಿಕ ಅರ್ಹತೆ ಏನಿರಬೇಕು? : ಮೊದಲೇ ಹೇಳಿದಂತೆ ಲೈನ್‌ಮನ್ (ಪವರ್‌ಮನ್) ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಛಿಸುವ ಅಭ್ಯರ್ಥಿಗಳು ಎಸ್‌ಎಸ್‌ಎಲ್‌ಸಿ ಅಥವಾ 10ನೇ ತರಗತಿ ಪೂರ್ಣಗೊಳಿಸಿರಬೇಕು. 


ವಯೋಮಿತಿ ವಿವರ : ಅಭ್ಯರ್ಥಿಯ ಕನಿಷ್ಠ ವಯಸ್ಸು 18 ವರ್ಷ, ಎಸ್ಸಿ/ಎಸ್ಟಿ, ಓಬಿಸಿ, ಅಂಗವಿಕಲ, ಮಾಜಿ ಸೈನಿಕ, ವಿಧವೆ ಅಭ್ಯರ್ಥಿಗಳ ಗರಿಷ್ಠ ವಯಸ್ಸಿನಲ್ಲಿ ವಯೋಮಿತಿ ಸಡಿಲಿಕೆ ಅನ್ವಯವಾಗಿಲಿದೆ. 


ಆಯ್ಕೆ ಪ್ರಕ್ರಿಯೆ ಹೇಗೆ? : ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಮೊದಲ ಹಂತದಲ್ಲಿ ವಿದ್ಯುತ್ ಕಂಬ ಏರುವ, ಓಟ, ಸ್ಕಿಪ್ಪಿಂಗ್, ಶಾಟ್‌ಫುಟ್’ನಂತಹ ಸಹನ ಪರೀಕ್ಷೆ ಶಕ್ತಿ ನಡೆಸಲಾಗುತ್ತದೆ. 


ಸಹನ ಶಕ್ತಿ ಪರೀಕ್ಷೆಯಲ್ಲಿ ಕನಿಷ್ಠ ಮೂರು ಸ್ಪರ್ಧೆಗಳಲ್ಲಿ ಅರ್ಹತೆ ಹೊಂದುವ ಅಭ್ಯರ್ಥಿಗಳನ್ನು 10ನೇ ತರಗತಿಯ ಪರೀಕ್ಷೆಯ ವಿದ್ಯಾರ್ಹತೆಯಲ್ಲಿ ಗಳಿಸಿರುವ ಶೇಕಡಾವಾರು ಅಂಕಗಳ ಜೇಷ್ಠತೆ ಆಧಾರದ ಮೇಲೆ ರಾಜ್ಯ ಸರ್ಕಾರದಲ್ಲಿ ಚಾಲ್ತಿಯಲ್ಲಿರುವ ಮೀಸಲಾತಿ ನಿಯಮಗಳನ್ವಯ ಆಯ್ಕೆ ಮಾಡಲಾಗುತ್ತದೆ.


ಅರ್ಜಿ ಶುಲ್ಕ, ಅರ್ಜಿ ಸಲ್ಲಿಕೆ ವಿವರ ಹಾಗೂ ನೇಮಕಾತಿ ಕುರಿತ ಅಧಿಕೃತ ಅಧಿಸೂಚನೆ ಶೀಘ್ರದಲ್ಲಿಯೇ ಬಿಡುಗಡೆಯಾಗಲಿದ್ದು; ಸಂಪೂರ್ಣ ಮಾಹಿತಿಯನ್ನು ನಿಮ್ಮ ಮುಂದಿಡಲಿದ್ದೇವೆ.


ಇದನ್ನೂ ಓದಿ: ನಿಮ್ಮ ಮನೆಗೆ ಸೋಲಾರ್ ಕರೆಂಟ್ ಪಡೆಯಲು ಕೇವಲ ಐದೇ ನಿಮಿಷದಲ್ಲಿ ಅರ್ಜಿ ಹಾಕಿ | ಇಲ್ಲಿದೆ ಕಂಪ್ಲೀಟ್ ಡಿಟೈಲ್ಸ್...