ಚಿನ್ನದ ಬೆಲೆ (Gold Price) ಏರಿಕೆಯಲ್ಲಿ ಇತಿಹಾಸ ಸೃಷ್ಟಿಯಾಗಿದೆ. ಅಖಿಲ ಭಾರತ ಸರಾಫ್ ಅಸೋಸಿಯೇಷನ್ (All India Saraf Association) ಮಾಹಿತಿ ಪ್ರಕಾರ ವರ್ಷ ತುಂಬುವುದರೊಳಗೇ ಅಂದರೆ, ಕಳೆದ ಹನ್ನೊಂದು ತಿಂಗಳುಗಳಲ್ಲಿ 10 ಗ್ರಾಂ ಚಿನ್ನ ಬೆಲೆಯು ಬರೋಬ್ಬರಿ 20,180 ರೂ. ಏರಿಕೆ ಕಂಡಿದೆ.
2024 ಫೆಬ್ರವರಿ 23ರಂದು ಬಂಗಾರದ ಬೆಲೆ 62,720 ರೂ. ಇತ್ತು. ಈ ವರ್ಷ ಜನವರಿ 23ರ ವೇಳೆಗೆ ಈ ಬೆಲೆ ಅನಾಮತ್ತು 82,900 ರೂ.ಗೆ ಜಂಪ್ ಆಗಿದೆ. ಅಂದರೆ ಶೇ.32ರಷ್ಟು ಏರಿಕೆಯಾಗಿದೆ ಎಂದು ಅಖಿಲ ಭಾರತ ಸರಾಫ್ ಅಸೋಸಿಯೇಷನ್ ತಿಳಿಸಿದೆ.
ಇದನ್ನೂ ಓದಿ: ನಿಮ್ಮ ಮನೆಗೆ ಸೋಲಾರ್ ಕರೆಂಟ್ ಪಡೆಯಲು ಕೇವಲ ಐದೇ ನಿಮಿಷದಲ್ಲಿ ಅರ್ಜಿ ಹಾಕಿ | ಇಲ್ಲಿದೆ ಕಂಪ್ಲೀಟ್ ಡಿಟೈಲ್ಸ್...
ಜನವರಿ 23ರ ಗುರುವಾರದಂದು ದೆಹಲಿಯ ಚಿನಿವಾರ ಪೇಟೆಯಲ್ಲಿ ಶೇ 99.9 ಪರಿಶುದ್ಧತೆಯ 10 ಗ್ರಾಂ ಚಿನ್ನದ ಬೆಲೆಯು 170 ರೂ. ಹೆಚ್ಚಳವಾಗಿ 82,900 ರೂ.ಗೆ ಮಾರಾಟವಾಗಿದೆ. ಇದು ಇದು ವರೆಗಿನ ಸಾರ್ವಕಾಲಿಕ ಗರಿಷ್ಠ ಮಿತಿಯಾಗಿದೆ.
ಶೇ.99.5 ಪರಿಶುದ್ಧತೆಯ ಸ್ಟ್ಯಾಂಡರ್ಡ್ ಚಿನ್ನದ ಬೆಲೆ ಕೂಡ ಇಷ್ಟೇ ಪ್ರಮಾಣದಲ್ಲಿ ಏರಿಕೆಯಾಗಿ 10 ಗ್ರಾಂ.ಗೆ 82,500 ರೂ.ಗೆ ಮಾರಾಟವಾಗಿದೆ. ಬೆಳ್ಳಿ ಬೆಲೆ ಮಾತ್ರ ಜನವರಿ 23ರಂದು 500 ರೂ. ಕಡಿಮೆಯಾಗಿ ಕೆ.ಜಿಗೆ 93,500 ರೂ.ಗೆ ಮಾರಾಟವಾಗಿದೆ.
ಆಭರಣ ತಯಾರಕರು ಮತ್ತು ಚಿಲ್ಲರೆ ಮಾರಾಟಗಾರರಿಂದ ಚಿನ್ನದ ಖರೀದಿ ಹೆಚ್ಚಳವಾಗಿದೆ. ಜೊತೆಗೆ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲೂ ಚಿನ್ನಕ್ಕೆ ಬೇಡಿಕೆ ಹೆಚ್ಚಾಗಿದೆ. ಇದರಿಂದ ಹಳದಿ ಲೋಹದ ದರ ಏರಿಕೆಯಾಗಿದೆ ಎಂದು ಅಖಿಲ ಭಾರತ ಸರಾಫ್ ಅಸೋಸಿಯೇಷನ್ ತಿಳಿಸಿದೆ.
ಇದನ್ನೂ ಓದಿ: ಕೋಳಿ ಸಾಕಣೆಗೆ 25 ಲಕ್ಷ, ಕುರಿ-ಮೇಕೆ ತಳಿ ಸಂವರ್ಧನೆಗೆ 50 ಲಕ್ಷ ಆರ್ಥಿಕ ನೆರವು