Jobs

Indian Railway Recruitment 2025 : ಎಸ್‌ಎಸ್‌ಎಲ್‌ಸಿ ಪಾಸಾದವರಿಗೆ ರೈಲ್ವೆ ಇಲಾಖೆಯಲ್ಲಿ 32,000 ಹುದ್ದೆಗಳು | ಪುರುಷರು, ಮಹಿಳೆಯರಿಗೆ ಭರ್ಜರಿ ಅವಕಾಶ

Indian Railway Recruitment 2025 : ಎಸ್‌ಎಸ್‌ಎಲ್‌ಸಿ ಪಾಸಾದವರಿಗೆ ರೈಲ್ವೆ ಇಲಾಖೆಯಲ್ಲಿ 32,000 ಹುದ್ದೆಗಳು | ಪುರುಷರು, ಮಹಿಳೆಯರಿಗೆ ಭರ್ಜರಿ ಅವಕಾಶ

ರೈಲ್ವೆ ಇಲಾಖೆಯಲ್ಲಿ ಈಗಾಗಲೇ 45,000ಕ್ಕೂ ಅಧಿಕ ಹುದ್ದೆಗಳಿಗೆ ಭರ್ತಿ ಪ್ರಕ್ರಿಯೆ ನಡೆಯುತ್ತಿದೆ. ಇದೀಗ ಇನ್ನೂ 32,000 ಹುದ್ದೆಗಳ ಭರ್ತಿಗಾಗಿ ಆಯ್ಕೆ ಪ್ರಕ್ರಿಯೆ ತಯಾರಿ ನಡೆದಿದ್ದು; ಎಸ್‌ಎಸ್‌ಎಲ್‌ಸಿ, ಐಟಿಐ ಪಾಸಾದವರು ಭರ್ಜರಿ ಉದ್ಯೋಗವಕಾಶ ಸಿಗಲಿದೆ.


‘ಡಿ’ ಗ್ರೂಪ್ ಹುದ್ದೆಗಳು ಇವಾಗಿದ್ದು, ಕೆಲ ದಿನಗಳಲ್ಲಿಯೇ ವಿವರವಾದ ಅಧಿಸೂಚನೆ ಹೊರಬೀಳಲಿದೆ. ಅರ್ಜಿ ಸಲ್ಲಿಕೆಗೆ ಜನವರಿ 23ರಿಂದ ಅವಕಾಶ ನೀಡಲಾಗುತ್ತದೆ ಎಂದು ತಿಳಿಸಲಾಗಿದೆ.


ಇದನ್ನೂ ಓದಿ: ಮುರಾರ್ಜಿ ಸೇರಿ ವಿವಿಧ ಉಚಿತ ವಸತಿ ಶಾಲೆಗಳಿಗೆ ಅರ್ಜಿ ಆಹ್ವಾನ | 2025-26ನೇ ಸಾಲಿನ ಅಡ್ಮಿಷನ್ ಪ್ರಾರಂಭ


ಯಾವ್ಯಾವ ಹುದ್ದೆಗಳು?


ಬೆಂಗಳೂರು ಸೇರಿ ದೇಶದ ಎಲ್ಲ 16 ರೈಲ್ವೆ ನೇಮಕಾತಿ ಮಂಡಳಿಗಳ ವ್ಯಾಪ್ತಿಯಲ್ಲಿ ಒಟ್ಟು 17 ವಿಧದ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. 32,000 ಹುದ್ದೆಗಳೆಂದು ಅಂದಾಜು ಮಾಡಲಾಗಿದ್ದು, ಪರಿಷ್ಕರಣೆ ಬಳಿಕ ಇವುಗಳ ಸಂಖ್ಯೆಯಲ್ಲಿ ಇನ್ನೂ ಹೆಚ್ಚಳವಾಗಬಹುದು. ಹುದ್ದೆಗಳ ವಿವರ ಈ ಕೆಳಗಿನಂತಿದೆ:

 

* ಅಸಿಸ್ಟೆಂಟ್ (ಲೋಕೋ ಷೆಡ್, ಡೀಸೆಲ್, ಎಲೆಕ್ಟಿಕ್, ಮೆಕಾನಿಕಲ್, ವರ್ಕ್ ಶಾಪ್, ಸ್ಟೊರ‍್ಸ್)

* ಅಸಿಸ್ಟೆಂಟ್ ಪಾಯಿಂಟ್ಸ್ಮನ್

* ಅಸಿಸ್ಟೆಂಟ್ ಬ್ರಿಜ್

* ಅಸಿಸ್ಟೆಂಟ್ ಟ್ರ‍್ಯಾಕ್ ಮಷಿನ್

* ಅಸಿಸ್ಟೆಂಟ್ ಸಿಗ್ನಲ್ ಆ್ಯಂಡ್ ಟೆಲಿಕಾಮ್ ಟ್ಯಾಕ್ ಮೆಂಟೇನೆನ್ಸ್ (ಗ್ರೇಡ್-4)

* ಹಾಸ್ಪಿಟಲ್ ಅಸಿಸ್ಟೆಂಟ್


ಇದನ್ನೂ ಓದಿ: ದ್ವಿಚಕ್ರ ವಾಹನ ಖರೀದಿಗೆ 15,000 ರೂಪಾಯಿ ಸಹಾಯಧನ | ಪಿಎಂ ಇ-ಡ್ರೈವ್ ಯೋಜನೆ  PM E Drive Scheme Subsidy


ಬೆಗಳೂರು ವಲಯದಲ್ಲಿ 500 ಹುದ್ದೆಗಳು


ಹಿಂದಿನ ಬಾರಿ 2019ರಲ್ಲಿ ನಡೆಸಿ ನೇಮಕಾತಿಯಲ್ಲಿ 1,03,769 ಹುದ್ದೆಗಳಿದ್ದವು. ಬೆಂಗಳೂರು ನೇಮಕಾತಿ ಮಂಡಳಿ ವ್ಯಾಪ್ತಿಯಲ್ಲೇ 7,167 ಹುದ್ದೆಗಳಿದ್ದವು. ಇದಕ್ಕಾಗಿ ಒಂದು ಕೋಟಿಗೂ ಹೆಚ್ಚು ಜನರು ಅರ್ಜಿ ಸಲ್ಲಿಸಿದ್ದರು. ಇದಕ್ಕೂ ಮುನ್ನ 2018ರಲ್ಲಿ ನಡೆದಿದ್ದ ಈ ಹುದ್ದೆಗಳ ನೇಮಕಾತಿಯಲ್ಲಿ 12,445 ಹುದ್ದೆಗಳಿದ್ದವು. ಬೆಂಗಳೂರಿನಲ್ಲಿ 457 ಹುದ್ದೆಗಳಷ್ಟೇ ಇದ್ದವು. ಈ ಬಾರಿಯೂ 500ಕ್ಕೂ ಅಧಿಕ ಹುದ್ದೆಗಳು ಲಭ್ಯವಾಗಬಹುದು ಎಂದು ಅಂದಾಜಿಸಲಾಗಿದೆ.


ಶೈಕ್ಷಣಿಕ ಅರ್ಹತೆ


ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕನಿಷ್ಠ 10ನೇ ತರಗತಿ ಪಾಸಾಗಿರಬೇಕು. ಆಯಾ ವಿಭಾಗದಲ್ಲಿ ಐಟಿಐ ಪೂರೈಸಿರಬೇಕು ಅಥವಾ ರಾಷ್ಟ್ರೀಯ ವೃತ್ತಿಪರ ತರಬೇತಿ ಮಂಡಳಿಯಿ೦ದ ಪ್ರಮಾಣಪತ್ರ ಪಡೆದಿರಬೇಕು ಅಥವಾ ರಾಷ್ಟ್ರೀಯ ಅಫ್ರೆಂಟೀಸ್‌ಶಿಪ್ ಪ್ರಮಾಣಪತ್ರ ಹೊಂದಿರಬೇಕು ಎಂದು ಹಿಂದಿನ ಅಧಿಸೂಚನೆಯಲ್ಲಿ ತಿಳಿಸಲಾಗಿತ್ತು.


ಇದನ್ನೂ ಓದಿ:  ಮನೆಗೆ ಉಚಿತ ಸೋಲಾರ್ ಕರೆಂಟ್ ಪಡೆಯಲು ಈಗಲೇ ಅರ್ಜಿ ಹಾಕಿ | ಕರ್ನಾಟಕದಲ್ಲಿ 5,14 ಲಕ್ಷ ಕುಟುಂಬಗಳು ನೋಂದಣಿ


ದೈಹಿಕ ಸಹಿಷ್ಣುತೆ ಅರ್ಹತೆ


ಪುರುಷರು 100 ಮೀಟರ್ ದೂರವನ್ನು 35 ಕೆಜಿ ಭಾರ ಹೊತ್ತು ಎರಡು ನಿಮಿಷಗಳಲ್ಲಿ ಕ್ರಮಿಸಬೇಕಿದೆ. 1000 ಮೀಟರ್ ದೂರದ ಟವರ್ ಅನ್ನು 4 ನಿಮಿಷ 15 ಸೆಕೆಂಡುಗಳಲ್ಲಿ ಒಂದೇ ಪ್ರಯತ್ನದಲ್ಲಿ ಓಡಬೇಕು. ಇನ್ನು ಮಹಿಳೆಯರು 20 ಕೆಜಿ ಭಾರವನ್ನು ಹೊತ್ತು 100 ದೂರವನ್ನು 2 ನಿಮಿಷಗಳಲ್ಲಿ ಸಾಗಬೇಕು. 1000 ಮೀಟರ್ ದೂರವನ್ನು 5 ನಿಮಿಷ 40 ಸೆಕೆಂಡುಗಳಲ್ಲಿ ಓಡಬೇಕು ಎಂದು 2019ರ ನೇಮಕಾತಿ ವೇಳೆ ನಿಗದಿ ಮಾಡಲಾಗಿತ್ತು.


ಅರ್ಜಿ ಶುಲ್ಕವೆಷ್ಟು?


ಪರಿಶಿಷ್ಟರು, ಅಂಗವಿಕಲರು, ಮಾಜಿ ಸೈನಿಕರಿಗೆ 250 ರೂ. ಅರ್ಜಿ ಶುಲ್ಕ ಇರಲಿದೆ. ಉಳಿದವರು 500 ರೂ. ಪಾವತಿಸಬೇಕಿದ್ದು, ಪರೀಕ್ಷೆಗೆ ಹಾಜರಾದಲ್ಲಿ 400 ರೂ. ಹಾಗೂ 250 ರೂ. ಪಾವತಿಸಿದವರಿಗೆ ಪೂರ್ಣ ಮೊತ್ತ ಹಿಂದಿರುಗಿಸಲಾಗುತ್ತದೆ.


ಮಾಸಿಕ ವೇತನವೆಷ್ಟು?


ವೇತನ ಆಯೋಗದ ಒಂದನೇ ಹಂತದ ವೇತನಶ್ರೇಣಿಯ ವಿವಿಧ ಹುದ್ದೆಗಳು ಇವಾಗಿವೆ. ಆರಂಭಿಕ ವೇತನ 18,000 ರೂ. ಇರಲಿದ್ದು, ಇತರ ಭತ್ಯೆ ಹಾಗೂ ಸೌಲಭ್ಯಗಳು ಅನ್ವಯಿಸಲಿವೆ. ಶೀಘ್ರದಲ್ಲಿಯೇ ಈ ನೇಮಕಾತಿ ಕುರಿತ ವಿವರವಾದ ಅಧಿಸೂಚನೆ ಪ್ರಕಟವಾಗಲಿದೆ.


ಇದನ್ನೂ ಓದಿ: ಹಣ ಡಬಲ್ ಮಾಡುವ ಕಿಸಾನ್ ವಿಕಾಸ್ ಪತ್ರ | ₹5 ಲಕ್ಷಕ್ಕೆ ₹10 ಲಕ್ಷ ಗ್ಯಾರಂಟಿ