ಅಂಚೆ ಇಲಾಖೆಯ (IndiaPost) ಈ ಯೋಜನೆ ಹೂಡಿದ ಹಣವನ್ನು ಡಬಲ್ (Double the money) ಮಾಡುವ ಮೂಲಕ ನಿಶ್ಚಿತ ಆದಾಯ ನೀಡುತ್ತದೆ. ಏನಿದು ದುಡ್ಡು ಡಬಲ್ ಮಾಡುವ ಸ್ಕೀಮು? ಈ ಯೋಜನೆಯ ಲಾಭ ಪಡೆಯುವುದು ಹೇಗೆ? ಇದರಿಂದ ಏನೆಲ್ಲ ಅನುಕೂಲಗಳಿವೆ? ಇತ್ಯಾದಿ ಸಂಪೂರ್ಣ ಮಾಹಿತಿ ಇಲ್ಲಿದೆ...
ಅಂಚೆ ಇಲಾಖೆಯ ಈ ಯೋಜನೆ (IndiaPost savings scheme) ಅತ್ಯಂತ ಸುರಕ್ಷಿತ; ಮಾತ್ರವಲ್ಲ ಲಾಭದಾಯಕ ಕೂಡ ಹೌದು. ಏಕೆಂದರೆ ಇಲ್ಲಿ ಹೂಡಿದ ಹಣ 10 ವರ್ಷಗಳಲ್ಲಿ ಡಬಲ್ ಆಗುತ್ತದೆ. 50,000 ತೊಡಗಿಸಿ ಲಕ್ಷ ರೂಪಾಯಿ ಪಡೆಯಬಹುದು. 5 ಲಕ್ಷ ತೊಡಗಿಸಿ ನಿಶ್ಚಿತವಾಗಿ 10 ಲಕ್ಷ ರೂಪಾಯಿ ಪಡೆಯಬಹುದು. ಹೀಗೆ ಸಾವಿರ ರೂಪಾಯಿಯಿಂದ ಆರಂಭಿಸಿ ಕೋಟಿಗಟ್ಟಲೇ ಹಣ ಹೂಡಿಕೆ ಮಾಡಬಹುದು.
ಏನಿದು ಕಿಸಾನ್ ವಿಕಾಸ್ ಪತ್ರ ಸ್ಕೀಮು?
ಭಾರತೀಯ ಅಂಚೆ ಇಲಾಖೆಯು ಕೆವಿಪಿ ಅರ್ಥಾತ್ ಕಿಸಾನ್ ವಿಕಾಸ್ ಪತ್ರ (Kisan Vikas Patra-KVP) ಎಂದು ಕರೆಯಲ್ಪಡುವ ಈ ಉಳಿತಾಯ ಯೋಜನೆನ್ನು 1988ರಲ್ಲಿ ಸಣ್ಣ ಉಳಿತಾಯ ಪ್ರಮಾಣಪತ್ರ ಯೋಜನೆಯಾಗಿ ಪರಿಚಯಿಸಿದೆ. ಇದು ಸುರಕ್ಷತೆ ಮತ್ತು ಲಾಭದ ವಿಚಾರದಲ್ಲಿ ಹೆಚ್ಚು ಆಕರ್ಷಕವಾಗಿದೆ. ಇಲ್ಲಿ ವಯಸ್ಕರರು ಮಾತ್ರವಲ್ಲದೇ ಅಪ್ರಾಪ್ತ ವಯಸ್ಕಕರರು ಕೂಡ ತೊಡಗಿಸಬಹುದು.
‘ಕಿಸಾನ್ ವಿಕಾಸ್ ಪತ್ರ’ ಉಳಿತಾಯ ಯೋಜನೆಯಡಿ ಗ್ಯಾರಂಟಿ ಆದಾಯ ಬಯಸುವವರು ನಿಸ್ಸಂದೇಹವಾಗಿ ಹೂಡಿಕೆ ಮಾಡಬಹುದು. ಜನರಲ್ಲಿ ದೀರ್ಘಾವಧಿಯ ಆರ್ಥಿಕ ಶಿಸ್ತನ್ನು ಉತ್ತೇಜಿಸುವುದು ಇದರ ಪ್ರಾಥಮಿಕ ಉದ್ದೇಶವಾಗಿದೆ. ಇತ್ತೀಚಿನ ಅಪ್‌ಡೇಟ್ ಪ್ರಕಾರ, ಈ ಯೋಜನೆಯಡಿ ಈಗ 09 ವರ್ಷ 05 ತಿಂಗಳಿಗೆ ಹೂಡಿಕೆದಾರರ ಹಣ ದ್ವಿಗುಣವಾಗುತ್ತದೆ. ಅಂದರೆ 115 ತಿಂಗಳಲ್ಲಿ ಹೂಡಿಕೆ ಡಬಲ್ ಆಗುತ್ತದೆ.
ಕನಿಷ್ಠ ಹೂಡಿಕೆ ಎಷ್ಟು?
ಕಿಸಾನ್ ವಿಕಾಸ ಪತ್ರ ಯೋಜನೆಗೆ ಕನಿಷ್ಠ 1,000 ರೂಪಾಯಿ ಹಣ ಹೂಡಿಕೆ ಮಾಡಬೇಕಾಗುತ್ತದೆ. ಹಣ ಹೂಡಿಕೆಗೆ ಯಾವುದೇ ಗರಿಷ್ಠ ಮಿತಿ ಇಲ್ಲ. ವಾರ್ಷಿಕ ಶೇ. 7.5 ಬಡ್ಡಿ ಸಿಗುತ್ತದೆ. ಯಾವುದೇ ಭಾರತೀಯ ನಾಗರಿಕರು ಈ ಯೋಜನೆಯಡಿ ಹಣ ಹೂಡಿಕೆ ಮಾಡಬಹುದು. ಇದರಲ್ಲಿ ಟ್ರಸ್ಟ್ಗಳು ಕೂಡ ಹಣ ಹೂಡಿಕೆ ಮಾಡಬಹುದು. ಆದರೆ, ಅನಿವಾಸಿ ಭಾರತೀಯರು (ಎನ್‌ಆರ್‌ಐ) ಇದರಲ್ಲಿ ಹಣ ಹೂಡಿಕೆ ಮಾಡುವಂತಿಲ್ಲ.
ಖಾತೆ ತೆರೆಯಲು ಕನಿಷ್ಠ 18 ವರ್ಷ ಆಗಿರಬೇಕು. ಮೂವರು ವಯಸ್ಕರು ಒಟ್ಟಿಗೆ ಜಂಟಿ ಖಾತೆಯನ್ನು ತೆರೆಯಬಹುದು. ಅಪ್ರಾಪ್ತ ವಯಸ್ಕರು ಅಥವಾ ಮಾನಸಿಕ, ದೈಹಿಕ ದುರ್ಬಲರ ಪರವಾಗಿ ಅವರ ಪೋಷಕರು ಖಾತೆಯನ್ನು ತೆರೆಯಲು ಅವಕಾಶವಿದೆ. ಇಂಥವರಿಗಾಗಿ ಸಿಂಗಲ್ ಹೋಲ್ಡರ್, ಜಾಯಿಂಟ್ ಎ ಹಾಗೂ ಜಾಯಿಂಟ್ ಬಿ ಎಂದು ಮೂರು ವಿಧಗಳು ಕಿಸಾನ್ ವಿಕಾಸ ಪತ್ರ ಯೋಜನೆಯಲ್ಲಿವೆ.
ಖಾತೆ ತೆರೆಯಲು ಬೇಕಾದ ದಾಖಲೆಗಳು
* ಪಾಸ್ಪೋರ್ಟ್ ಸೈಜ್ ಫೋಟೋಗಳು
* ಗುರುತಿನ ಚೀಟಿ (ಪಾನ್ ಕಾರ್ಡ್/ ಆಧಾರ್ ಕಾರ್ಡ್/ ಡ್ರೆöÊವಿಂಗ್ ಲೈಸೆನ್ಸ್/ ಪಾಸ್ಪೋರ್ಟ್)
* ಮನೆಯ ವಿಳಾಸ ಪತ್ರ (ವಿದ್ಯುತ್ ಬಿಲ್, ಬ್ಯಾಂಕ್ ಪಾಸ್ ಬುಕ್, ಟೆಲಿಫೋನ್ ಬಿಲ್ ಇತ್ಯಾದಿ)
* ಪಾನ್ ಕಾರ್ಡ್ ಹಾಗೂ ಆಧಾರ್ ಕಾರ್ಡ್ ನಂಬರ್ (50 ಸಾವಿರಕ್ಕಿಂತ ಹೆಚ್ಚು ಹೂಡಿಕೆ ಮಾಡುವಾಗ)
ಇದರಿಂದ ಆಗುವ ಅನುಕೂಲಗಳೇನು?
ಬಹುಮುಖ್ಯವಾಗಿ ಕಿಸಾನ್ ವಿಕಾಸ ಪತ್ರ ಯೋಜನೆಯಲ್ಲಿ ಹೂಡಿದ ಹಣ ಸುರಕ್ಷಿತವಾಗಿರುತ್ತದೆ; ಸುಭದ್ರವಾಗಿರುತ್ತದೆ. ನಿಗದಿತ ಅವಧಿಗೆ ದುಪ್ಪಟ್ಟಾಗುವ ಮೂಲಕ ನಿಶ್ಚಿತ ಆದಾಯ ನೀಡುತ್ತದೆ. ಒಬ್ಬ ವ್ಯಕ್ತಿ ಎಷ್ಟು ಬೇಕಾದರೂ ಕಿಸಾನ್ ವಿಕಾಸ್ ಪತ್ರಗಳನ್ನು ಖರೀದಿಸಬಹುದು. ಈ ಪತ್ರವನ್ನು ಸಂಬಂಸಿದ ಅಂಚೆ ಕಚೇರಿಯಲ್ಲಿ ಸ್ವೀಕೃತಿ ಪತ್ರವಾಗಿ ಪಡೆದು ಭದ್ರತೆಯಾಗಿ ಅಡಮಾನವನ್ನೂ ಇಡಬಹುದು.
ಒಂದು ಅಂಚೆ ಕಚೇರಿಯಿಂದ ಮತ್ತೊಂದು ಕಚೇರಿಗೆ ವರ್ಗಾಯಿಸಬಹುದು. ಹೂಡಿಕೆ ಮಾಡಿದ ಎರಡೂವರೆ ವರ್ಷಗಳ ನಂತರ ವಾಪಾಸು ತೆಗೆದುಕೊಳ್ಳುವ ಅವಕಾಶವೂ ಇದೆ. ಒಂದು ವೇಳೆ ಖಾತೆದಾರರು ಆಕಸ್ಮಿಕವಾಗಿ ಸಾವನ್ನಪ್ಪದರೆ ಅವಧಿಗೆ ಮುನ್ನವೇ ಅವರ ಹೂಡಿಕೆಯನ್ನು ಹಿಂತೆಗೆದುಕೊAಡು ಖಾತೆಯನ್ನು ಸ್ಥಗಿತಗೊಳಿಸಬಹುದು.
ಗಮನಾರ್ಹವೆಂದರೆ ಈ ಯೋಜನೆಯಲ್ಲಿ ಹೂಡಿಕೆ ಮಾಡಿದ ಹಣ ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 80ಸಿ ಕಡಿತದ ವ್ಯಾಪ್ತಿಗೆ ಬರುವುದಿಲ್ಲ. ಆದರೆ ಹಣವನ್ನು ವಾಪಾಸು ಪಡೆಯುವಾಗ ಟಿಡಿಎಸ್ ಕಡಿತ ಮಾಡಲಾಗುತ್ತದೆ. ಅಂದರೆ ಪೂಣಾವಧಿ ನಂತರ ವಾಪಾಸು ಪಡೆಯುವ ಹಣದ ಮೇಲೆ ಟಿಡಿಎಸ್ ಕಡಿತಗೊಳಿಸಲಾಗುತ್ತದೆ.
ಆಸಕ್ತರು ಕೂಡಲೇ ಹತ್ತಿರದ ಅಂಚೆ ಕಚೇರಿಯಲ್ಲಿ ಕಿಸಾನ್ ವಿಕಾಸ್ ಪತ್ರ ಯೋಜನೆ ಕುರಿತು ವಿಚಾರಿಸಬಹುದು. ಹೆಚ್ಚಿನ ಮಾಹಿತಿ ಭಾರತೀಯ ಅಂಚೆ ಇಲಾಖೆಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ...
ಕೆವಿಕೆ ಕಸ್ಟಮರ್ ಕೇರ್ ಸಂಖ್ಯೆ: 1800 266 6868