ಒಟ್ಟು 140 ಹೋಮ್‌ಗಾರ್ಡ್ (Home Guard) ಹುದ್ದೆಗಳಿಗೆ 10ನೇ ತರಗತಿ ಪಾಸಾದ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಗೃಹರಕ್ಷಕ ದಳದಲ್ಲಿ ಸೇವೆ ಸಲ್ಲಿಸಲು ಇಚ್ಛೆಯುಳ್ಳ ಅರ್ಹ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳು ನಿಗದಿತ ದಿನಾಂಕದೊಳಗೆ ಅರ್ಜಿ ಸಲ್ಲಿಸಲು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ನೇಮಕಾತಿ ಕುರಿತ ಸಂಕ್ಷಿಪ್ತ ವಿವರ : ಗೃಹರಕ್ಷಕ ದಳ, ಉತ್ತರ ಕನ್ನಡ ಜಿಲ್ಲೆಯ ಗೃಹರಕ್ಷಕ ಹಾಗೂ ಗೃಹರಕ್ಷಕಿಯರ 140 ಹುದ್ದೆಗಳ ಭರ್ತಿಗೆ ಆಫ್‌ಲೈನ್ ಮುಖಾಂತರ ಅರ್ಜಿ ಕರೆಯಲಾಗಿದೆ. ಉತ್ತರ ಕನ್ನಡ ಜಿಲ್ಲೆಯ ವಿವಿಧ ತಾಲ್ಲೂಕುಗಳಲ್ಲಿ ಉದ್ಯೋಗ ನಿರ್ವಹಿಸಲು ಬಯಸುವವರು ಈ ಅವಕಾಶ ಬಳಸಿಕೊಳ್ಳಬಹುದಾಗಿದೆ.
ಇದನ್ನೂ ಓದಿ: ಸೂರ್ಯ ಘರ್ ಯೋಜನೆಯಡಿ ರಾಜ್ಯದಲ್ಲಿ 4,407 ಮನೆಗಳಿಗೆ ಸಹಾಯಧನ
ವಯೋಮಿತಿ ಮತ್ತು ವಿದ್ಯಾರ್ಹತೆ : ಗೃಹರಕ್ಷಕ ಹುದ್ದೆಗಳಿಗೆ 18 ರಿಂದ 45 ವರ್ಷ ವಯೋಮಿತಿ ನಿಗದಿಪಡಿಸಲಾಗಿದ್ದು; ಈ ವಯಸ್ಸಿನೊಳಗಿರುವ 10ನೇ ತರಗತಿ ಪಾಸಾಗಿರುವ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಗೃಹರಕ್ಷಕ ಹುದ್ದೆಗಳಿಗೆ ಅರ್ಜಿ ಸಲ್ಲಿಸುವವರ ವಿರುದ್ಧ ಯಾವುದೇ ಪೊಲೀಸ್ ಪ್ರಕರಣ ಇರಬಾರದು ಮತ್ತು ಅಭ್ಯರ್ಥಿಗಳು ಯಾವುದೇ ರಾಜಕೀಯ ಪಕ್ಷ-ಸಂಘ ಸಂಸ್ಥೆಗಳ ಸದಸ್ಯರು, ಕಾರ್ಯಕರ್ತರು ಆಗಿರಬಾರದು.
ದೈಹಿಕ ಮತ್ತು ಮಾನಸಿಕವಾಗಿ ಸದೃಢವಾಗಿರಬೇಕು. ವಿಶೇಷ ವೃತ್ತಿ ಕೌಶಲ್ಯ ಹೊಂದಿದವರಿಗೆ ಪ್ರಮುಖ ಆದ್ಯತೆ ನೀಡಲಾಗುವುದು. ನೆರೆ ರಕ್ಷಣೆ, ಅಗ್ನಿಶಮನ ತರಬೇತಿ, ಪ್ರಥಮ ಚಿಕಿತ್ಸೆ, ರೈಫಲ್ ಟ್ರೈನಿಂಗ್, ಸಂಚಾರ ನಿಯಂತ್ರಣ, ಶಸ್ತ್ರಾಸ್ತ್ರ ತರಬೇತಿ ಮೊದಲಾದ ತರಬೇತಿ ನೀಡಿ ತುರ್ತು ಸಂದರ್ಭಗಳಲ್ಲಿ ಅವರನ್ನು ಸೇವೆಗೆ ಬಳಸಿಕೊಳ್ಳಲಾಗುತ್ತದೆ.
ಇದನ್ನೂ ಓದಿ: ವಿಶೇಷ ವೈಯಕ್ತಿಕ ಸಾಲ ಯೋಜನೆಗಳು | ಯಾವುದಕ್ಕೆಲ್ಲ ಸಾಲ ಸಿಗುತ್ತೆ ಗೊತ್ತಾ?
ಅರ್ಜಿ ಸಲ್ಲಿಕೆ ಹೇಗೆ? : ಆಸಕ್ತ ಅಭ್ಯರ್ಥಿಗಳು ಇದೇ ಮಾರ್ಚ್ 7ರ ಒಳಗಾಗಿ ಅರ್ಜಿ ಸಲ್ಲಿಸಲು ಕೋರಲಾಗಿದೆ. ಅರ್ಜಿ ನಮೂನೆಯನ್ನು ಉತ್ತರ ಕನ್ನಡ ಜಿ¯ ಕಾರವಾರದ ಕೋಡಿಬಾಗದಲ್ಲಿರುವ ಗೃಹ ರಕ್ಷಕದಳದ ಜಿಲ್ಲಾ ಸಮಾದೇಷ್ಟರ ಕಚೇರಿಯಲ್ಲಿ ಪಡೆದು ಭರ್ತಿ ಮಾಡಿ ಅಗತ್ಯ ದಾಖಲಾತಿಗಳೊಂದಿಗೆ ಭರ್ತಿ ಮಾಡಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಗೃಹರಕ್ಷಕ ದಳ ಕಚೇರಿಯ ದೂರವಾಣಿ: 08382-200137, 94808 98775 ಸಂಖ್ಯೆಗೆ ಸಂಪರ್ಕಿಸಬಹುದಾಗಿದೆ.
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ : 07-03-2025
ಇದನ್ನೂ ಓದಿ: ಹಸು, ಎಮ್ಮೆ ಶೆಡ್ ನಿರ್ಮಾಣಕ್ಕೆ ₹57,000 ಆರ್ಥಿಕ ನೆರವು | ಹೀಗೆ ಅರ್ಜಿ ಸಲ್ಲಿಸಿ...