ಗೆಜೆಟೆಡ್ ಪ್ರೊಬೆಷನರಿ ಗ್ರೂಪ್ ‘ಎ’ ಮತ್ತು ಗ್ರೂಪ್ ‘ಬಿ’ ವೃಂದದ 354 ಹುದ್ದೆಗಳ ನೇಮಕಕ್ಕೆ ಕರ್ನಾಟಕ ಲೋಕಸೇವಾ ಆಯೋಗವು ಮುಖ್ಯ ಪರೀಕ್ಷೆ ದಿನಾಂಕವನ್ನು ನಿಗದಿಪಡಿಸಿವೆ. ಅದರಂತೆ ಮಾರ್ಚ್ 28, 29 ಮತ್ತು ಎಪ್ರಿಲ್ 1 ಮತ್ತು 2ರಂದು ಮುಖ್ಯ ಪರೀಕ್ಷೆಗಳನ್ನು ನಡೆಸಲಾಗುವುದು.
ಕೆಎಎಸ್ ಮುಖ್ಯ ಪರೀಕ್ಷೆಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಫೆಬ್ರವರಿ 17ರಿಂದ ಆರಂಭವಾಗಿದ್ದು; ಅರ್ಜಿ ಸಲ್ಲಿಕೆಗೆ ಮಾರ್ಚ್ 03 ಕೊನೆಯ ದಿನವಾಗಿದೆ ಎಂದು ಆಯೋಗ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಇದನ್ನೂ ಓದಿ: ಕರ್ನಾಟಕ ಅಂಚೆ ವೃತ್ತ ನೇಮಕಾತಿ 2025: 10ನೇ ತರಗತಿ ಪಾಸಾದವರಿಗೆ ಪೋಸ್ಟಾಫೀಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ
ಮುಖ್ಯ ಪರೀಕ್ಷೆಗೆ ಅರ್ಜಿ ಸಲ್ಲಿಸಲು ಯಾರೆಲ್ಲ ಅರ್ಹರು?: ಆಯೋಗವು ಪೂರ್ವಭಾವಿ ಪರೀಕ್ಷೆಯಿಂದ ಮುಖ್ಯ ಪರೀಕ್ಷೆಗೆ 1:15ರ ಅನುಪಾತದಲ್ಲಿ ಅರ್ಹರಾದವರ 5,760 ಅಭ್ಯರ್ಥಿಗಳ ಪಟ್ಟಿಯನ್ನು ಇದೇ 10ರಂದು ಪ್ರಕಟಿಸಿತ್ತು. ಅವರೆಲ್ಲರಿಗೂ ಮುಖ್ಯ ಪರೀಕ್ಷೆಗೆ ಅರ್ಜಿ ಸಲ್ಲಿಸಲು ಅವಕಾಶವಿದೆ. ಅಲ್ಲದೆ, ಅಭ್ಯರ್ಥಿಗಳು ಅರ್ಜಿಯಲ್ಲಿ ಅಧಿಸೂಚಿಸಿರುವ ಹುದ್ದೆಗಳನ್ನು ಆದ್ಯತಾ ಅನುಕ್ರಮದಲ್ಲಿ ಭರ್ತಿ ಮಾಡಬೇಕು. ಆದ್ಯತೆ ನೀಡದಿರುವ ಹುದ್ದೆಗಳನ್ನು ಆಯ್ಕೆಗೆ ಪರಿಗಣಿಸಲಾಗುವುದು ಎಂದು ಆಯೋಗ ಸ್ಪಷ್ಟಪಡಿಸಿದೆ.
ಮುಖ್ಯ ಪರೀಕ್ಷೆಯನ್ನು ಬೆಂಗಳೂರು ಮತ್ತು ಧಾರವಾಡದಲ್ಲಿ ಮಾತ್ರ ನಡೆಸಲಾಗುವುದು. ಅಭ್ಯರ್ಥಿಗಳು ಎಲ್ಲಾ ದಾಖಲೆಗಳನ್ನು ಅಪ್ ಲೋಡ್ ಮಾಡಬೇಕು. ಆ ವೇಳೆ ಸೂಕ್ಷ್ಮವಾಗಿ 12 ಪುಟಗಳ ಎಲ್ಲಾ ಸೂಚನೆಗಳನ್ನು ಓದಿಕೊಳ್ಳಬೇಕು ಎಂದು ಆಯೋಗ ಸೂಚನೆ ನೀಡಿದೆ.
ಒಟ್ಟು 1,275 ಅಂಕಗಳಿಗೆ ಮರುಪರೀಕ್ಷೆ ಮತ್ತು 25 ಅಂಕಗಳಿಗೆ ಸಂದರ್ಶನ ನಡೆಸಲಾಗುವುದು. ಪಠ್ಯಕ್ರಮದ ವಿವರಗಳು ಆಯೋಗದ ವೆಬ್ ಸೈಟ್‌ನಲ್ಲಿ ಲಭ್ಯವಿದೆ. ಉತ್ತರ ಪತ್ರಿಕೆಗಳನ್ನು ಡಿಜಿಟಲ್ ಮೌಲ್ಯಮಾಪನ ಮಾಡಲಾಗುವುದು ಎಂದು ಕೆಪಿಎಸ್‌ಸಿ ಹೇಳಿದೆ.
ಇದನ್ನೂ ಓದಿ: ಬೆಸ್ಕಾಂನಲ್ಲಿ ಪದವೀಧರರು, ಡಿಪ್ಲೊಮಾ ಅಭ್ಯರ್ಥಿಗಳಿಗೆ ಉದ್ಯೋಗಾವಕಾಶ
ವಿವಿಧ ಪರೀಕ್ಷೆಗಳ ವೇಳಾಪಟ್ಟಿ: ಕರ್ನಾಟಕ ಲೋಕಸೇವಾ ಆಯೋಗವು ಇದೇ ವೇಳೆ ವಿವಿಧ ಹುದ್ದೆಗಳಿಗೆ ನಡೆಯುವ ಪರೀಕ್ಷೆಗಳ ವೇಳಾಪಟ್ಟಿಯನ್ನು ಕೂಡ ಪ್ರಕಟಿಸಿದೆ. ಲೋಕೋಪಯೋಗಿ ಇಲಾಖೆಯಲ್ಲಿನ ಉಳಿಕೆ ಮೂಲ ವೃಂದದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಗ್ರೂಪ್ ‘ಎ’ ವೃಂದದ 30 ಹುದ್ದೆಗಳಿಗೆ ಫೆಬ್ರವರಿ 24ರಿಂದ 28ರ ತನಕ ಪರೀಕ್ಷೆ ನಡೆಯಲಿದೆ. ಇದೇ ಇಲಾಖೆಯ ಹೈ-ಕ ವಿಭಾಗದ 12 ಹುದ್ದೆಗಳಿಗೆ ಮಾರ್ಚ್ 18ರಿಂದ 23ರ ತನಕ ಪರೀಕ್ಷೆ ನಡೆಯಲಿದೆ.
ಅದೇ ರೀತಿ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯಲ್ಲಿನ ಉಳಿಕೆ ಮೂಲ ವೃಂದದ ಸಹಾಯಕ ನಿಯಂತ್ರಕರ ಗ್ರೂಪ್ ‘ಎ’ ವೃಂದದ 43 ಮತ್ತು ಗ್ರೂಪ್ ‘ಬಿ’ ವೃಂದದ 54 ಹುದ್ದೆಗಳಿಗೆ ಏಪ್ರಿಲ್ 22ರಿಂದ 25ರ ತನಕ ಪರೀಕ್ಷೆ ನಡೆಸಲಾಗುತ್ತದೆ. ಇದೇ ಇಲಾಖೆಯಲ್ಲಿ ಗ್ರೂಪ್ ‘ಎ’ (ಹೈ-ಕ) 15 ಹುದ್ದೆಗಳಿಗೆ ಏಪ್ರಿಲ್ 15ರಿಂದ 19ರ ತನಕ ನಡೆಯಲಿದೆ ಎಂದು ಕೆಪಿಎಸ್‌ಸಿ ಪ್ರಕಟಣೆಯಲ್ಲಿ ತಿಳಿಸಿದೆ.
ಯಾವ ಪತ್ರಿಕೆಗೆ ಯಾವ ದಿನದಂದು ಪರೀಕ್ಷೆ ನಡೆಯಲಿದೆ ಎಂಬ ವಿವರಗಳನ್ನು ಆಯೋಗದ ವೆಬ್‌ಸೈಟ್‌ನಲ್ಲಿ www.kpsc.kar.nic.in ವಿವರವಾಗಿ ನೀಡಲಾಗಿದೆ.
ಇದನ್ನೂ ಓದಿ: ಮನೆಗೆ 20 ವರ್ಷ ಉಚಿತ ಸೋಲಾರ್ ವಿದ್ಯುತ್ ಪಡೆಯಲು ಹೀಗೆ ಅರ್ಜಿ ಸಲ್ಲಿಸಿ...