ಭಾರತೀಯ ಕೈಗಾರಿಕಾಭಿವೃದ್ಧಿ ಬ್ಯಾಂಕ್ (Industrial Development Bank of India - IDBI) ಜೂನಿಯರ್ ಅಸಿಸ್ಟೆಂಟ್ ಮ್ಯಾನೇಜರ್ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಕರ್ನಾಟಕ ಸೇರಿದಂತೆ ದೇಶದಾದ್ಯಂತ ಒಟ್ಟು 650 ಹುದ್ದೆಗಳ ನೇಮಕಾತಿ ನಡೆಯಲಿದೆ.
ಅರ್ಜಿ ಸಲ್ಲಿಕೆ ಪ್ರಕ್ರಿಯೆ ಮಾರ್ಚ್ 1ರಿಂದ ಆರಂಭವಾಗಲಿದ್ದು, ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಮಾರ್ಚ್ 13 ಕೊನೆಯ ದಿನವಾಗಿರುತ್ತದೆ. ಏಪ್ರಿಲ್ 6ರಂದು ಪರೀಕ್ಷೆ ನಡೆಸಲಾಗುವುದು ಎಂದು ಅಧಿಸೂಚನೆಯಲ್ಲಿ ಮಾಹಿತಿ ನೀಡಲಾಗಿದೆ.
ಇದನ್ನೂ ಓದಿ: ಇನ್ಮುಂದೆ ಗೂಗಲ್ ಪೇ ಪಾವತಿಗೆ ಶುಲ್ಕ | ಯಾವುದಕ್ಕೆ ಎಷ್ಟು ಶುಲ್ಕ? ಇಲ್ಲಿದೆ ಮಾಹಿತಿ
ಅರ್ಹತೆಗಳೇನು?: ಈ ಹುದ್ದೆಗಳಿಗೆ ಯಾವುದೇ ವಿಷಯದಲ್ಲಿ ಪದವಿ ಪಡೆದಿರುವ 20ರಿಂದ 25 ವರ್ಷದೊಳಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಎಸ್ಸಿ-ಎಸ್‌ಟಿ, ಒಬಿಸಿ, ವಿಶೇಷಚೇತನರು ಮತ್ತು ಮಾಜಿ ಸೈನಿಕ ಅಭ್ಯರ್ಥಿಗಳಿಗೆ ಸರಕಾರದ ನಿಯಮಾನುಸಾರ ವಯೋಮಿತಿ ಸಡಿಲಿಕೆ ಇರುತ್ತದೆ.
ಅಭ್ಯರ್ಥಿಗಳು ಭಾರತ ಸರಕಾರದಿಂದ ಅಂಗೀಕೃತಗೊAಡ ಸಂಸ್ಥೆಯಿ೦ದ ನಿಗದಿತ ವಿದ್ಯಾರ್ಹತೆ ಪಡೆದಿರಬೇಕು. ಕಂಪ್ಯೂಟರ್ ಜ್ಞಾನ ಹೊಂದಿರುವುದು ಹಾಗೂ ಸ್ಥಳೀಯ ಭಾಷೆಗಳಲ್ಲಿ ಹಿಡಿತ ಹೊಂದಿರುವುದು ಕಡ್ಡಾಯ. ಈ ಹುದ್ದೆಗಳಿಗೆ ಯಾವುದೇ ಡಿಪ್ಲೊಮಾ ವಿದ್ಯಾರ್ಹತೆಯನ್ನು ಪರಿಗಣಿಸಲಾಗುವುದಿಲ್ಲ.
ಅರ್ಜಿ ಶುಲ್ಕ: ಎಸ್ಸಿ/ಎಸ್‌ಟಿ, ವಿಶೇಷ ಚೇತನ ಅಭ್ಯರ್ಥಿಗಳು ಇಂಟಿಮೇಶನ್ ಫೀ 250 ರೂ. ಪಾವತಿಸಬೇಕು. ಉಳಿದ ಅಭ್ಯರ್ಥಿಗಳು ಇಂಟಿಮೇಶನ್ ಫೀ ಸೇರಿದಂತೆ 1,050 ರೂ. ಶುಲ್ಕ ರೂಪದಲ್ಲಿ ಪಾವತಿಸಲು ಸೂಚಿಸಲಾಗಿದೆ.
ಇದನ್ನೂ ಓದಿ: ಪೋಸ್ಟ್ ಆಫೀಸ್’ನಲ್ಲಿ ಕೇವಲ 399 ರೂ. ಕಟ್ಟಿದರೆ ಸಿಗಲಿದೆ 10 ಲಕ್ಷ ರೂ. ಆರ್ಥಿಕ ಸಹಾಯ | ಸಂಪೂರ್ಣ ಮಾಹಿತಿ ಇಲ್ಲಿದೆ...
ಒಂದು ವರ್ಷದ ಕೋರ್ಸ್ : ಭಾರತೀಯ ಕೈಗಾರಿಕಾಭಿವೃದ್ಧಿ ಬ್ಯಾಂಕ್ ಮಣಿಪಾಲ್ ಗ್ಲೋಬಲ್ ಎಜುಕೇಶನ್ ಸರ್ವೀಸ್ ಪ್ರೈವೇಟ್ ಲಿಮಿಟೆಡ್ ಬೆಂಗಳೂರು ಹಾಗೂ ನಿಟ್ಟೆ ಎಜುಕೇಶನ್ ಇಂಟರ್ ನ್ಯಾಷನಲ್ ಪ್ರೈವೇಟ್ ಲಿಮಿಟೆಡ್ ಗ್ರೇಟರ್ ನೋಯ್ಡಾ ಇವುಗಳ ಸಹಯೋಗದಲ್ಲಿ ತರಬೇತಿ ಮೂಲಕ 650 ಜೂನಿಯರ್ ಅಸಿಸ್ಟೆಂಟ್ ಮ್ಯಾನೇಜರ್’ಗಳ ನೇಮಕ ನಡೆಯಲಿದೆ.
ಇದು ಒಂದು ವರ್ಷದ ಕೋರ್ಸ್ ಆಗಿದ್ದು; ಇದನ್ನು ‘ಪೋಸ್ಟ್ ಗ್ರಾಜುಯೇಟ್ ಡಿಪ್ಲೋಮಾ ಇನ್ ಬ್ಯಾಂಕಿ೦ಗ್ ಆ್ಯಂಡ್ ಫೈನಾನ್ಸ್ (ಪಿಜಿಡಿಬಿಎಸ್)’ ಎಂದು ಕರೆಯಲಾಗುತ್ತದೆ. ಇದರಲ್ಲಿ ಅಭ್ಯರ್ಥಿಗಳಿಗೆ ಆರು ತಿಂಗಳು ತರಗತಿ ಪಾಠ ಇರುತ್ತದೆ. ಈ ಅವಧಿಯಲ್ಲಿ 5,000 ರೂ. ಸ್ಟೈಪೆಂಡ್ ನೀಡಲಾಗುತ್ತದೆ.
2 ತಿಂಗಳು ಇಂಟರ್ನ್’ಷಿಪ್ ಹಾಗೂ 4 ತಿಂಗಳು ಜಾಬ್ ಟ್ರೇನಿಂಗ್ ಇರುತ್ತದೆ. ಈ ಅವಧಿಯಲ್ಲಿ 15,000 ರೂ. ಸ್ಟೈಪೆಂಡ್ ನಿಗದಿ ಮಾಡಲಾಗಿದೆ. ಟ್ರೈನಿಂಗ್ ಅನ್ನು ಐಡಿಬಿಐ ಬ್ಯಾಂಕಿನ ಯಾವುದೇ ಶಾಖೆಗಳಲ್ಲಿ ಪಡೆಯಬಹುದು. ಇವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದವರನ್ನು ಬ್ಯಾಂಕ್ ಜೂನಿಯರ್ ಅಸಿಸ್ಟೆಂಟ್ ಮ್ಯಾನೇಜರ್ ಆಗಿ ನೇಮಕ ಮಾಡಿಕೊಳ್ಳುತ್ತದೆ. ನೇಮಕವಾದ ಬಳಿಕವೂ ಒಂದು ವರ್ಷ ಪ್ರೊಬೆಷನರಿ ಅವಧಿಯಲ್ಲಿ ಕಾರ್ಯ ನಿರ್ವಹಿಸಬೇಕು.
ಪಿಜಿಡಿಬಿಎಫ್ ಕೋರ್ಸ್’ಗೂ ಶುಲ್ಕ ಪಾವತಿಸಬೇಕಾಗುತ್ತದೆ. ಇದರ ವೆಚ್ಚ ಮೂರು ಲಕ್ಷ ಎಂದು ಬ್ಯಾಂಕ್ ತಿಳಿಸಿದೆ. ಅಭ್ಯರ್ಥಿಗಳಿಗೆ ಕೋರ್ಸ್ ಪೂರ್ಣಗೊಳಿಸಲು ಐಡಿಬಿಐ ಬ್ಯಾಂಕ್‌ನಿ೦ದ ಸಾಲ ಸೌಲಭ್ಯವನ್ನೂ ಪಡೆಯಬಹುದು.
ಇದನ್ನೂ ಓದಿ: ಮನೆಗೆ ಉಚಿತ ಸೋಲಾರ್ ಕರೆಂಟ್ ಪಡೆಯಲು ಈಗಲೇ ಅರ್ಜಿ ಹಾಕಿ | ಕರ್ನಾಟಕದಲ್ಲಿ 5,14 ಲಕ್ಷ ಕುಟುಂಬಗಳು ನೋಂದಣಿ
ನೇಮಕ ಹೇಗೆ ನಡೆಯಲಿದೆ?: ಅರ್ಜಿ ಸಲ್ಲಿಸಿರುವ ಅರ್ಹ ಅಭ್ಯರ್ಥಿಗಳಿಗೆ ಆನ್‌ಲೈನ್ ಪರೀಕ್ಷೆ ನಡೆಸಲಾಗುತ್ತದೆ. ಇದು ವಸ್ತುನಿಷ್ಠ ಮಾದರಿಯ ಪರೀಕ್ಷೆಯಾಗಿರುತ್ತದೆ. ಇದರಲ್ಲಿ ಲಾಜಿಕಲ್ ರೀಸನಿಂಗ್, ಡೇಟಾ ಅನಾಲಿಸಿಸ್ ಮತ್ತು ಇಂಟರ್ ಪ್ರಿಟೇಷನ್‌ಗೆ 60 ಅಂಶಗಳ 60 ಪ್ರಶ್ನೆಗಳು.
ಇಂಗ್ಲಿಷ್ ಲಾಂಗೇಜ್ ಮತ್ತು ಕ್ವಾಂಟಿಟೇಟಿವ್ ಅಪ್ಟಿಟ್ಯೂಡ್ ವಿಷಯಕ್ಕೆ ತಲಾ 40 ಅಂಕಗಳ 40 ಪ್ರಶ್ನೆಗಳು ಹಾಗೂ ಜನರಲ್/ ಎಕಾನಮಿ/ಬ್ಯಾಂಕಿAಗ್ ಅವೇರ್ನೆಸ್’ಗೆ ಸಂಬAಧಿಸಿದAತೆ 60 ಅಂಕಗಳ 60 ಪ್ರಶ್ನೆಗಳಿಗೆ 2 ಗಂಟೆ ಅವಧಿಯಲ್ಲಿ ಉತ್ತರಿಸಬೇಕಾಗುತ್ತದೆ.
ತಪ್ಪು ಉತ್ತರಕ್ಕೆ 0.25 ಅಂಕಗಳನ್ನು ಕಳೆಯಲಾಗುತ್ತದೆ. ಇದರಲ್ಲಿ ಅರ್ಹತೆ ಪಡೆದವರಿಗೆ 100 ಅಂಕಗಳ ಸಂದರ್ಶನವೂ ಇರುತ್ತದೆ. ಇದರಲ್ಲಿ ಅರ್ಹತೆ ಪಡೆದರೆ ಮಾತ್ರ ಅಭ್ಯರ್ಥಿಗಳನ್ನು ಕೋರ್ಸ್ ಪಡೆಯಲು ಅರ್ಹರು ಎಂದು ಪರಿಗಣಿಸಲಾಗುತ್ತದೆ.
ರಾಜ್ಯದಲ್ಲಿನ ಪರೀಕ್ಷಾ ಕೇಂದ್ರಗಳು: ಕರ್ನಾಟಕದಲ್ಲಿ ರಾಜಧಾನಿ ಬೆಂಗಳೂರು, ಬೆಳಗಾವಿ, ಧಾರವಾಡ, ಕಲಬುರಗಿ, ಹಾಸನ, ಹುಬ್ಬಳ್ಳಿ, ಮಂಗಳೂರು, ಮೈಸೂರು, ಶಿವಮೊಗ್ಗ ಮತ್ತು ಉಡುಪಿಗಳಲ್ಲಿ ಪರೀಕ್ಷಾ ಕೇಂದ್ರಗಳು ಇರಲಿವೆ.
ಅರ್ಜಿ ಸಲ್ಲಿಸಲು ಕೊನೇ ದಿನಾಂಕ: 12-03-2025
ಅಧಿಸೂಚನೆ : Download
ಇದನ್ನೂ ಓದಿ: ವಿಶೇಷ ವೈಯಕ್ತಿಕ ಸಾಲ ಯೋಜನೆಗಳು | ಯಾವುದಕ್ಕೆಲ್ಲ ಸಾಲ ಸಿಗುತ್ತೆ ಗೊತ್ತಾ?