Jobs

Teachers Recruitment-ಶರಣಬಸವೇಶ್ವರ ವಿದ್ಯಾವರ್ಧಕ ಸಂಘ | ಪ್ರಾಥಮಿಕ ಶಾಲೆ, ಪ್ರೌಢ ಶಾಲೆ ಶಿಕ್ಷಕರು ಹಾಗೂ ಪಿಯು ಕಾಲೇಜ್ ಲೆಕ್ಟರರ್ ಹುದ್ದೆಗಳಿಗೆ ಅರ್ಜಿ ಆಹ್ವಾನ

Teachers Recruitment-ಶರಣಬಸವೇಶ್ವರ ವಿದ್ಯಾವರ್ಧಕ ಸಂಘ | ಪ್ರಾಥಮಿಕ ಶಾಲೆ, ಪ್ರೌಢ ಶಾಲೆ ಶಿಕ್ಷಕರು ಹಾಗೂ ಪಿಯು ಕಾಲೇಜ್ ಲೆಕ್ಟರರ್ ಹುದ್ದೆಗಳಿಗೆ ಅರ್ಜಿ ಆಹ್ವಾನ

ರಾಜ್ಯದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲೊ೦ದಾದ ಕಲಬುರಗಿಯ ಶರಣ ಬಸವೇಶ್ವರ ವಿದ್ಯಾವರ್ಧಕ ಸಂಘದ (Sharnbasveshwar Vidya Vardhak Sangha) ನೇತೃತ್ವದಲ್ಲಿ ನಡೆಸಲ್ಪಡುವ ರೆಸಿಡೆನ್ಶಿಯಲ್ ಪಬ್ಲಿಕ್ ಸ್ಕೂಲ್, ಮಾಂಟೆಸ್ಸರಿ ನರ್ಸರಿ, 1 ರಿಂದ 10 ಮತ್ತು ಕಾಂಪೋಸಿಟ್ ಪಿಯು ಕಾಲೇಜುಗಳ ವಿವಿಧ ಶಿಕ್ಷಕರು ಹಾಗೂ ಉಪನ್ಯಾಸಕರ ಖಾಲಿ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ.


ಹುದ್ದೆಗಳ ವಿವರ: ಮಾಂಟೆಸ್ಸರಿ ಶಿಕ್ಷಕರು, ಪ್ರಾಥಮಿಕ ಶಾಲಾ ಶಿಕ್ಷಕರು, ಪ್ರೌಢ ಶಾಲಾ ಶಿಕ್ಷಕರು, ಪಿಯು ಕಾಲೇಜ್ ಉಪನ್ಯಾಸಕರು, NEET, IIT, JEE ಮತ್ತು KCET ಉಪನ್ಯಾಸಕರುಗಳ ಖಾಲಿ ಹುದ್ದೆಗಳಿಗೆ ಅರ್ಹ ಅಬ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.


ಇದನ್ನೂ ಓದಿ: ಧಾರವಾಡದ ಕೇಂದ್ರೀಯ ವಿದ್ಯಾಲಯ ಶಿಕ್ಷಕರ ಹುದ್ದೆಗಳಿಗೆ ಅರ್ಜಿ ಆಹ್ವಾನ


ಶೈಕ್ಷಣಿಕ ಅರ್ಹತೆ: ಮಾಂಟೆಸ್ಸರಿ ಶಿಕ್ಷಕರು ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾಂಟೆಸ್ಸರಿ ಮತ್ತು ನರ್ಸರಿ ತರಬೇತಿ ಪಡೆದಿರಬೇಕು. ನಿರರ್ಗಳವಾಗಿ ಇಂಗ್ಲಿಷ್ ಮಾತನಾಡಲು ಬರಬೇಕು.


ಪ್ರಾಥಮಿಕ ಶಾಲಾ ಶಿಕ್ಷಕರು ಹುದ್ದೆಗೆ ಪದವೀಧರರು, ಪ್ರೌಢಶಾಲಾ ಶಿಕ್ಷಕರು ಹುದ್ದೆಗೆ ಸ್ನಾತಕೋತ್ತರ ಪದವೀಧರರು, ಪಿಯು ಕಾಲೇಜಿಗೆ ಭೌತಶಾಸ್ತ್ರ, ರಸಾಯನಶಾಸ್ತ್ರ, ಜೀವಶಾಸ್ತ್ರ ಮತ್ತು ಗಣಿತ ವಿಷಯಗಳಿಗೆ ಅನುಭವಿ ಸ್ನಾತಕೋತ್ತರ ಪದವೀಧರರು ಅರ್ಜಿ ಸಲ್ಲಿಸಬಹುದಾಗಿದೆ.


ಇನ್ನು NEET, IIT, JEE ಮತ್ತು KCET ಪರೀಕ್ಷೆಗಳಿಗೆ ವಿದ್ಯಾರ್ಥಿಗಳನ್ನು ಸಿದ್ಧಪಡಿಸಲು ತಜ್ಞ ಮತ್ತು ಪ್ರೇರಕ ಉಪನ್ಯಾಸಕರು ಹುದ್ದೆಗೆ ಸ್ನಾತಕೋತ್ತರ ಪದವೀಧರರು ಅರ್ಜಿ ಸಲ್ಲಿಸಲು ಅರ್ಹರು. ಈ ಎಲ್ಲಾ ಹುದ್ದೆಗಳಿಗೆ ಅನುಭವಿಗಳಿಗೆ ಆದ್ಯತೆ ನೀಡಲಾಗುವುದು.


ಇದನ್ನೂ ಓದಿ: ನಿಮ್ಮ ಮನೆಗೆ ಸೋಲಾರ್ ಕರೆಂಟ್ ಪಡೆಯಲು ಕೇವಲ ಐದೇ ನಿಮಿಷದಲ್ಲಿ ಅರ್ಜಿ ಹಾಕಿ | ಇಲ್ಲಿದೆ ಕಂಪ್ಲೀಟ್ ಡಿಟೈಲ್ಸ್...


ವೇತನದ ವಿವರ : ಮಾಂಟೆಸ್ಸರಿ ಮತ್ತು ನರ್ಸರಿ ಶಿಕ್ಷಕರಿಗೆ 15,000 ದಿಂದ 25,000 ರೂ. ಮಾಸಿಕ ವೇತನ ನಿಗದಿಪಡಿಸಲಾಗಿದೆ. ಪ್ರಾಥಮಿಕ ಶಾಲಾ ಶಿಕ್ಷಕರಿಗೆ 20,000 ದಿಂದ 30,000 ರೂ. ವೇತನ, ಪ್ರೌಢಶಾಲಾ ಶಿಕ್ಷಕರಿಗೆ 25,000 ದಿಂದ 40,000 ರೂ. ವೇತನ, ಪಿ.ಯು ಕಾಲೇಜ್ ಉಪನ್ಯಾಸಕರಿಗೆ 30,000 ದಿಂದ 50,000 ರೂ. ವೇತನ ಹಾಗೂ NEET, IIT, JEE ಮತ್ತು KCET ಉಪನ್ಯಾಸಕರಿಗೆ 50,000 ದಿಂದ 80,000 ರೂ. ಮಾಸಿಕ ವೇತನವನ್ನು ನಿಗದಿಪಡಿಸಲಾಗಿದೆ.


ಮೇಲ್ಕಾಣಿಸಿದ ಎಲ್ಲಾ ಹುದ್ದೆಗಳಿಗೆ ನೇಮಕವಾಗುವ ಅರ್ಹ ಅಭ್ಯರ್ಥಿಗಳಿಗೆ ಸಂಬಳದ ಜೊತೆಗೆ ವಿವಿಧ ಸವಲತ್ತುಗಳು ಕೂಡ ಸಿಗಲಿವೆ. ಪ್ರಮುಖವಾಗಿ ಏಕ ಶಿಕ್ಷಕರಿಗೆ ಹಾಸ್ಟೆಲ್ ಸೌಲಭ್ಯ ಇರಲಿದೆ. ಜೊತೆಗೆ ಖಿಔ ಮತ್ತು ಈಖಔ ಶುಲ್ಕಗಳನ್ನು ಕೂಡ ನೀಡಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.


ಆಸಕ್ತ, ಅರ್ಹ ಅಭ್ಯರ್ಥಿಗಳು ಇದೇ ಮಾರ್ಚ್ 7, 2025ರೊಳಗೆ sbrpucollege.glb2004@gmail.com ಹಾಗೂ sbrs_glb2004@yahoo.co.inಗೆ ಇಮೇಲ್ ಮೂಲಕ ನಿಮ್ಮ ರೆಸ್ಯೂಮ್ ಕಳುಹಿಸಿಕೊಡಬೇಕು. ಹೆಚ್ಚಿನ ಮಾಹಿತಿಗೆ 9901455232, 9986131542, 9845891829 ದೂರವಾಣಿ ಸಂಪರ್ಕಿಸಬಹುದಾಗಿದೆ.


ನೇಮಕಾತಿ ಪ್ರಕಟಣೆ:  Download


ಇದನ್ನೂ ಓದಿ: ಪೋಸ್ಟ್ ಆಫೀಸ್’ನಲ್ಲಿ ಕೇವಲ 399 ರೂ. ಕಟ್ಟಿದರೆ ಸಿಗಲಿದೆ 10 ಲಕ್ಷ ರೂ. ಆರ್ಥಿಕ ಸಹಾಯ | ಸಂಪೂರ್ಣ ಮಾಹಿತಿ ಇಲ್ಲಿದೆ...