ಭಾರತ ಸರ್ಕಾರದ ಶಿಕ್ಷಣ ಸಚಿವಾಲಯದ ಸ್ವಾಯತ್ತ ಸಂಸ್ಥೆಯಾದ ಧಾರವಾಡದ ಪ್ರಧಾನಮಂತ್ರಿ ಶ್ರೀ ಕೇಂದ್ರಿಯ ವಿದ್ಯಾಲಯದಲ್ಲಿ (Pradhanamantri Sri Kendriya Vidyalaya, Dharwad) ಖಾಲಿ ಇರುವ ವಿವಿಧ ಶಿಕ್ಷಕರ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ.
2025-26ರ ಶೈಕ್ಷಣಿಕ ಅವಧಿಗೆ ಅರೆಕಾಲಿಕ ಗುತ್ತಿಗೆ ಆಧಾರಿತ ಶಿಕ್ಷಕರ ಹುದ್ದೆಗಳ ನೇಮಕಾತಿ ಸಂದರ್ಶನಕ್ಕೆ ಅರ್ಜಿ ಆಹ್ವಾನಿಸಲಾಗಿದ್ದು; ಆಸಕ್ತ ಅಭ್ಯರ್ಥಿಗಳು ಮಾರ್ಚ್ 06, 2025ರಂದು ಸಂದರ್ಶನಕ್ಕೆ ಹಾಜರಾಗುವ ಮೂಲಕ ಈ ಅವಕಾಶ ಬಳಸಿಕೊಳ್ಳಬಹುದಾಗಿದೆ.
ಇದನ್ನೂ ಓದಿ: ವಿಶೇಷ ವೈಯಕ್ತಿಕ ಸಾಲ ಯೋಜನೆಗಳು | ಯಾವುದಕ್ಕೆಲ್ಲ ಸಾಲ ಸಿಗುತ್ತೆ ಗೊತ್ತಾ?
ವಿಷಯವಾರು ಹುದ್ದೆಗಳ ವಿವರ : ಪಿಜಿಟಿ - ಇಂಗ್ಲೀಷ, ಭೌತಶಾಸ್ತ್ರ, ರಸಾಯನಶಾಸ್ತ್ರ, ಜೀವಶಾಸ್ತ್ರ, ಗಣಿತ, ಕಂಪ್ಯೂಟರ್ ವಿಜ್ಞಾನ ಶಿಕ್ಷಕರು ಹುದ್ದೆಗಳು. ಟಿಜಿಟಿ - ಇಂಗ್ಲೀಷ್, ಹಿಂದಿ, ಗಣಿತ, ವಿಜ್ಞಾನ, ಸಮಾಜ ವಿಜ್ಞಾನ, ಸಂಸ್ಕೃತ ಶಿಕ್ಷಕರ ಹುದ್ದೆಗಳು. ಪ್ರಾಥಮಿಕ ಮತ್ತು ಮಾಧ್ಯಮಿಕ ಕಂಪ್ಯೂಟರ್ ಬೋಧಕರು ಹಾಗೂ ಪಿಆರ್‌ಟಿ/ಟಿಜಿಟಿ - ಕನ್ನಡ, ಬಾಲವಾಟಿಕೆ ಶಿಕ್ಷಕರು, ಕ್ರೀಡಾ ತರಬೇತಿದಾರರು, ಯೋಗ ತರಬೇತಿಗಾರರು, ಟಿಜಿಟಿ- ಕುಶಲ ಶಿಕ್ಷಕರು (ಕಲಾ ಶಿಕ್ಷಣ), ನರ್ಸ್, ಶೈಕ್ಷಣಿಕ ಸಲಹೆಗಾರರು, ವಿಶೇಷ ಶಿಕ್ಷಕರು ಹುದ್ದೆಗಳು.
ಸ್ವ-ಧೃಢೀಕರಿಸಿದ ಸೂಕ್ತ ದಾಖಲಾತಿಗಳನ್ನು ಭರ್ತಿ ಮಾಡಿದ ಸ್ವವಿವರದ (ಬಯೋಡೆಟಾ) ದಾಖಲಾತಿಗಳನ್ನು ಸಂದರ್ಶನದ ಸಮಯದಲ್ಲಿ ಸಲ್ಲಿಸಬೇಕು. ಸ್ವವಿವರದ ನಮೂನೆಯನ್ನು ಶಾಲೆಯ ವೆಬ್‌ಸೈಟ್‌ನಿಂದ ಡೌನ್‌ಲೋಡ್ ಮಾಡಿಕೊಳ್ಳಬಹುದು.
ಅರ್ಜಿ ಸಲ್ಲಿಸಲು ಬಯಸುವ ಎಲ್ಲಾ ಅಭ್ಯರ್ಥಿಗಳು ಶಾಲಾ ವೆಬ್‌ಸೈಟ್’ನ ಪ್ರಕಟಣೆಯಲ್ಲಿರುವ ನೊಂದಣಿ ಲಿಂಕ್ ಮೂಲಕ 05-03-2025ರ ಒಳಗಾಗಿ ನೊಂದಾಯಿಸಿಕೊಳ್ಳಬೇಕು.
ಇದನ್ನೂ ಓದಿ: 8 ಲಕ್ಷ ರೂಪಾಯಿ ವರೆಗೆ ಗೂಗಲ್ ಪೇ ಲೋನ್ | ಮೊಬೈಲ್‌ನಲ್ಲೇ ಅರ್ಜಿ ಸಲ್ಲಿಸಿ ಪಡೆಯಿರಿ...
ನೇಮಕಾತಿ ಸಂದರ್ಶನ ನಡೆಯುವ ಸ್ಥಳ: ಪ್ರಧಾನಮಂತ್ರಿ ಶ್ರೀ ಕೇಂದ್ರಿಯ ವಿದ್ಯಾಲಯ, ಸೋಮೇಶ್ವರ ದೇವಸ್ಥಾನ ರಸ್ತೆ, ಧಾರವಾಡ-580002 (ಕರ್ನಾಟಕ), ದೂರವಾಣಿ: 836 2440110
ನೇಮಕಾತಿ ಸಂದರ್ಶನದ ದಿನಾಂಕ: 06-03-2025
ಕೆಳಗೆ ನೀಡಿರುವ ಶಾಲೆಯ ವೆಬ್‌ಸೈಟ್ ಲಿಂಕ್ ಬಳಸಿಕೊಂಡು ಕೇಂದ್ರಿಯ ವಿದ್ಯಾಲಯದ ಶಿಕ್ಷಕರ ಹುದ್ದೆಗಳ ನೇಮಕಾತಿ ಸಂದರ್ಶನದ ಅರ್ಹತಾ ಮಾನದಂಡಗಳು ಮತ್ತು ಇತರ ವಿವರಗಳನ್ನು ತಿಳಿಯಲು ಪ್ರಚಾರ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಧಿಸೂಚನೆ: Download
ಶಾಲಾ ವೆಬ್‌ಸೈಟ್ ಲಿಂಕ್: Click Here
ಇದನ್ನೂ ಓದಿ: ಸೂರ್ಯ ಘರ್ ಯೋಜನೆಯಡಿ ರಾಜ್ಯದಲ್ಲಿ 4,407 ಮನೆಗಳಿಗೆ ಸಹಾಯಧನ