ಭಾರತ ಸರ್ಕಾರದ ಶಿಕ್ಷಣ ಸಚಿವಾಲಯದ ಸ್ವಾಯತ್ತ ಸಂಸ್ಥೆಯಾದ ಪ್ರಧಾನಮಂತ್ರಿ ಶ್ರೀ ಕೇಂದ್ರಿಯ ವಿದ್ಯಾಲಯದಲ್ಲಿ (Pradhanamantri Sri Kendriya Vidyalaya) ಖಾಲಿ ಇರುವ ವಿವಿಧ ಶಿಕ್ಷಕರ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ.
2025-26ನೇ ಸಾಲಿನ ಶೈಕ್ಷಣಿಕ ಅವಧಿಗೆ ಗುತ್ತಿಗೆ ಆಧಾರದ ಮೇಲೆ ಶಿಕ್ಷಕರ ನೇಮಕಾತಿಯ ನೇರ ಸಂದರ್ಶನವು ದಿನಾಂಕ 18-03-2025ರ ಮಂಗಳವಾರದ೦ದು ಕೆವಿ ಹಾವೇರಿಯಲ್ಲಿ ಆಯೋಜಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಮಾರ್ಚ್ 18ರಂದು ಬೆಳಿಗ್ಗೆ 8:30 ರಿಂದ 9:30ರ ವರೆಗೆ ನೋಂದಣಿ ಮಾಡಿಕೊಳ್ಳಬಹುದಾಗಿದೆ.
ಇದನ್ನೂ ಓದಿ: ನಿಮ್ಮ ಮನೆಗೆ ಸೋಲಾರ್ ಕರೆಂಟ್ ಪಡೆಯಲು ಕೇವಲ ಐದೇ ನಿಮಿಷದಲ್ಲಿ ಅರ್ಜಿ ಹಾಕಿ | ಇಲ್ಲಿದೆ ಕಂಪ್ಲೀಟ್ ಡಿಟೈಲ್ಸ್...
ವಿಷಯವಾರು ಹುದ್ದೆಗಳ ವಿವರ: ಪ್ರಾಥಮಿಕ ಶಿಕ್ಷಕರು, ಸಂಗೀತ ಶಿಕ್ಷಕರು, ಟಿಜಿಟಿ- ಇಂಗ್ಲಿಷ್, ಹಿಂದಿ, ಸಂಸ್ಕೃತ, ಗಣಿತ, ವಿಜ್ಞಾನ, ಸಮಾಜ ವಿಜ್ಞಾನ, ದೈಹಿಕ ಶಿಕ್ಷಕರು, ಎಐ ಬೋಧಕರು, ಕನ್ನಡ ಶಿಕ್ಷಕರು, ಕ್ರೀಡಾ ತರಬೇತುದಾರರು, ವಿಶೇಷ ಶಿಕ್ಷಕರು (Special Educator), ಶೈಕ್ಷಣಿಕ ಸಲಹೆಗಾರರು (Educational Counsellor), ಯೋಗ ಶಿಕ್ಷಕರು, ಸ್ಟಾಫ್ ನರ್ಸ ಹುದ್ದೆಗಳ ನೇಮಕಾತಿ ನಡೆಯಲಿದೆ.
ಸ್ವ-ಧೃಢೀಕರಿಸಿದ ಸೂಕ್ತ ದಾಖಲಾತಿಗಳನ್ನು ಭರ್ತಿ ಮಾಡಿದ ಸ್ವವಿವರದ (ಬಯೋಡೆಟಾ) ದಾಖಲಾತಿಗಳನ್ನು ಸಂದರ್ಶನದ ಸಮಯದಲ್ಲಿ ಸಲ್ಲಿಸಬೇಕು. ಅರ್ಜಿ ಸಲ್ಲಿಸಲು ಬಯಸುವ ಎಲ್ಲಾ ಅಭ್ಯರ್ಥಿಗಳು ಶೃಕ್ಷಣಿಕ ದಾಖಲಾತಿಗಳೊಂದಿಗೆ 18-03-2025ರಂದು ನೊಂದಾಯಿಸಿಕೊಳ್ಳಬೇಕು.
ಇದನ್ನೂ ಓದಿ: ರಾಜ್ಯದ 37 ಲಕ್ಷ ರೈತರಿಗೆ 28,000 ಕೋಟಿ ರೂ. ಸೊಸೈಟಿ ಸಾಲ
ನೇಮಕಾತಿ ಸಂದರ್ಶನ ನಡೆಯುವ ಸ್ಥಳ: ಕೇಂದ್ರೀಯ ವಿದ್ಯಾಲಯ, ಡಯಟ್ ಕ್ಯಾಂಪಸ್, ಕರಜಗಿ ರೋಡ್, ಹಾವೇರಿ, ಕರ್ನಾಟಕ-581110, ದೂರವಾಣಿ: 08375-297366, Email: kvhaveri@gmail.com
ನೇಮಕಾತಿ ಸಂದರ್ಶನದ ದಿನಾಂಕ: 18-03-2025
ಅಧಿಸೂಚನೆ: Download
ಶಾಲಾ ವೆಬ್‌ಸೈಟ್ ಲಿಂಕ್: https://haveri.kvs.ac.in
ಇದನ್ನೂ ಓದಿ: SSLC, PUC ಪಾಸಾದ ಮಹಿಳೆಯರಿಗೆ ಅಂಗನವಾಡಿ ಹುದ್ದೆಗಳಿಗೆ ಅರ್ಜಿ ಆಹ್ವಾನ | 491 ಹುದ್ದೆಗಳು