ಭಾರತೀಯ ಸಾರ್ವಜನಿಕ ವಲಯದ ಬ್ಯಾಂಕ್ ಆಗಿರುವ ಬ್ಯಾಂಕ್ ಆಫ್ ಇಂಡಿಯಾವು (Bank of India- BOI) ಭಾರತದಾದ್ಯಂತ ಒಟ್ಟು 180 ಆಫೀಸರ್ (Specialist Officer) ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ ಮಾಡಿದೆ. ಅಭ್ಯರ್ಥಿಗಳು ಮಾರ್ಚ್ 23ರೊಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ಶೈಕ್ಷಣಿಕ ಅರ್ಹತೆ: ಹುದ್ದೆಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಹುದ್ದೆಗಳಿಗೆ ಅನುಗುಣವಾಗಿ ಬಿಎಸ್ಪಿ, ಬಿಇ ಅಥವಾ ಬಿಟೆಕ್, ಎಂಸಿಎ, ಎಂಎಸ್ಸಿ, ಎಂಟೆಕ್, ಬಿಎಸ್ಸಿ, ಕಾನೂನು ಪದವಿ, ಸಿಎ, ಐಸಿಡಬ್ಲ್ಯುಎ, ಎಂಬಿಎ ಅಥವಾ ತತ್ಸಮಾನ ವಿದ್ಯಾರ್ಹತೆಯನ್ನು ಪೂರ್ಣಗೊಳಿಸಿರಬೇಕು.
ಇದನ್ನೂ ಓದಿ: ಹೈನುಗಾರಿಕೆಗೆ ₹10 ಲಕ್ಷದ ವರೆಗೂ ಮೇಲಾಧಾರ ಮುಕ್ತ ಸಾಲ ಸೌಲಭ್ಯ HDFC Bank Dairy Farming Loan
ವಯೋಮಿತಿ: ಮುಖ್ಯ ವ್ಯವಸ್ಥಾಪಕರ ಹುದ್ದೆಗೆ 28-45 ವರ್ಷ, ಹಿರಿಯ ವ್ಯವಸ್ಥಾಪಕರ ಹುದ್ದೆಗೆ 25-40 ವರ್ಷ, ಕಾನೂನು ಅಧಿಕಾರಿ ಹುದ್ದೆಗೆ 25-32 ವರ್ಷ, ವ್ಯವಸ್ಥಾಪಕ ಹುದ್ದೆಗೆ ಕನಿಷ್ಠ 25 ಗರಿಷ್ಠ 35 ವರ್ಷ ನಿಗದಿ ಮಾಡಲಾಗಿದೆ. ಎಸ್ಸಿ/ಎಸ್ಪಿ ಅಭ್ಯರ್ಥಿಗಳಿಗೆ 5 ವರ್ಷ, ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ, ಅಂಗವಿಕಲರಿಗೆ 10 ವರ್ಷ ವಯೋಮಿತಿಯಲ್ಲಿ ಸಡಿಲಿಕೆ ಅನ್ವಯವಾಗಲಿದೆ.
ಆಯ್ಕೆ ಪ್ರಕ್ರಿಯೆ ಹೇಗೆ?: ಹುದ್ದೆಗೆ ಸಲ್ಲಿಕೆಯಾದ ಅರ್ಜಿಗಳನ್ನು ಆಧರಿಸಿ ಆನ್‌ಲೈನ್ ಪರೀಕ್ಷೆ ಮತ್ತು ವೈಯಕ್ತಿಕ ಸಂದರ್ಶನ ನಡೆಸುವ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಆನ್‌ಲೈನ್ ಪರೀಕ್ಷೆಯನ್ನು ಇಂಗ್ಲಿಷ್ ಭಾಷೆ 25 ಅಂಕ, ಹುದ್ದೆಗೆ ಸಂಬ೦ಧಿಸಿದ ಜ್ಞಾನ 100 ಅಂಕ, ಜನರಲ್ ಅವೇರ್‌ನೆಸ್ 25 ಅಂಕಕ್ಕೆ ನಡೆಸಲಾಗುತ್ತದೆ.
ಇದನ್ನೂ ಓದಿ: Kendriya Vidyalaya Recruitment- ಕೇಂದ್ರೀಯ ವಿದ್ಯಾಲಯ ವಿವಿಧ ಶಿಕ್ಷಕರ ಹುದ್ದೆಗಳಿಗೆ ಅರ್ಜಿ ಆಹ್ವಾನ
ಅರ್ಜಿ ಶುಲ್ಕ ಮತ್ತು ಅರ್ಜಿ ಸಲ್ಲಿಕೆ ಹೇಗೆ?: ಆಸಕ್ತ ಅಭ್ಯರ್ಥಿಗಳು ಬ್ಯಾಂಕ್ ಆಫ್ ಇಂಡಿಯಾದ bankofindia.co.inಗೆ ಭೇಟಿ ನೀಡುವ ಮೂಲಕ ಆನ್‌ಲೈನ್ ಅರ್ಜಿ ಸಲ್ಲಿಸಬಹುದು. ಎಸ್ಸಿ/ಎಸ್ಟಿ, ಅಂಗವಿಕಲ ಅಭ್ಯರ್ಥಿಗಳಿಗೆ 175 ರೂ. ಸಾಮಾನ್ಯ ಮತ್ತು ಇತರ ವರ್ಗದ ಅಭ್ಯರ್ಥಿಗಳು 850 ರೂ. ಅರ್ಜಿ ಶುಲ್ಕ ಆನ್‌ಲೈನ್ ಮೂಲಕ ಪಾವತಿಸಬೇಕು.
ಮಾಸಿಕ ವೇತನ: ಮುಖ್ಯ ವ್ಯವಸ್ಥಾಪಕರ ಹುದ್ದೆಗೆ ಆಯ್ಕೆಯಾದವರಿಗೆ 1,02,300-1,20,940 ರೂ., ಹಿರಿಯ ವ್ಯವಸ್ಥಾಪಕರು ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ 85,920-1,05,280 ರೂ., ಕಾನೂನು ಅಧಿಕಾರಿ ಮತ್ತು ವ್ಯವಸ್ಥಾಪಕ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ 64,820-93,960 ರೂ. ವೇತನವನ್ನು ನಿಗದಿಪಡಿಸಲಾಗಿದೆ.
ಅರ್ಜಿ ಸಲ್ಲಿಕೆ ಕೊನೇ ದಿನಾಂಕ: 23-03-2025
ಅಧಿಸೂಚನೆ: Download
ಇದನ್ನೂ ಓದಿ: ನಿಮ್ಮ ಮನೆಗೆ ಸೋಲಾರ್ ಕರೆಂಟ್ ಪಡೆಯಲು ಕೇವಲ ಐದೇ ನಿಮಿಷದಲ್ಲಿ ಅರ್ಜಿ ಹಾಕಿ | ಇಲ್ಲಿದೆ ಕಂಪ್ಲೀಟ್ ಡಿಟೈಲ್ಸ್...