ಕೇಂದ್ರ ಸಶಸ್ತ್ರ ಪೊಲೀಸ್ ಪಡೆಯಾದ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಯಲ್ಲಿ (Central Industrial Security Force - CISF) ದೇಶಾದ್ಯಂತ ಖಾಲಿ ಇರುವ ಕಾನ್‌ಸ್ಟೆಬಲ್/ಟ್ರೇಡ್ಸ್’ಮನ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಒಟ್ಟು 1,167 ಹುದ್ದೆಗಳನ್ನು ನೇಮಕಾತಿ ಮಾಡಿಕೊಳ್ಳಲಾಗುತ್ತಿದ್ದು, 10ನೇ ತರಗತಿ ಪೂರ್ಣಗೊಳಿಸಿದ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ಹುದ್ದೆಗಳ ವಿವರ: ವಿವಿಧ ಪದನಾಮದ ಒಟ್ಟು 1,161 ಹುದ್ದೆಗಳಿಗೆ ನೇಮಕಾತಿ ನಡೆಯಲಿದ್ದು; ಇದರಲ್ಲಿ ಪುರುಷ ಅಭ್ಯರ್ಥಿಗಳಿಗೆ 945, ಮಹಿಳಾ ಅಭ್ಯರ್ಥಿಗಳಿಗೆ 103, ಇಎಸ್‌ಎಂ ಅಭ್ಯರ್ಥಿಗಳಿಗೆ 113 ಹುದ್ದೆಗಳನ್ನು ವಿಭಾಗಿಸಲಾಗಿದೆ. ಕರ್ನಾಟಕವನ್ನು ಒಳಗೊಂಡ ದಕ್ಷಿಣ ವಲಯಕ್ಕೆ ಪುರುಷ 205 ಹಾಗೂ ಮಹಿಳೆ 22 ಸೇರಿ ಒಟ್ಟು 227 ಹುದ್ದೆಗಳನ್ನು ಮೀಸಲಿಡಲಾಗಿದೆ.
ಇದನ್ನೂ ಓದಿ: ನಿಮ್ಮ ಮನೆಗೆ ಸೋಲಾರ್ ಕರೆಂಟ್ ಪಡೆಯಲು ಕೇವಲ ಐದೇ ನಿಮಿಷದಲ್ಲಿ ಅರ್ಜಿ ಹಾಕಿ | ಇಲ್ಲಿದೆ ಕಂಪ್ಲೀಟ್ ಡಿಟೈಲ್ಸ್...
ಶೈಕ್ಷಣಿಕ ಅರ್ಹತೆ: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಛಿಸುವ ಅಭ್ಯರ್ಥಿಯು ಮಾನ್ಯತೆ ಹೊಂದಿರುವ ಶಿಕ್ಷಣ ಮಂಡಳಿಯಿ೦ದ ಎಸ್‌ಎಸ್‌ಎಲ್‌ಸಿ ಪೂರ್ಣಗೊಳಿಸಿರಬೇಕು. ಆಯಾ ಟ್ರೇಟ್’ನಲ್ಲಿ ಐಟಿಐ ಪೂರೈಸಿದ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುತ್ತದೆ.
ವಯೋಮಿತಿ, ವೇತನ ಶ್ರೇಣಿ: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 18-23 ವರ್ಷದೊಳಗಿರಬೇಕು. ವಿವಿಧ ಮೀಸಲಾತಿಯನ್ವಯ ವಯೋಮಿತಿ ಸಡಿಲಿಕೆ ಇರಲಿದೆ. ಆಯ್ಕೆಯಾದವರಿಗೆ 21,700-69,100 ರೂ. ವರೆಗಿನ ವೇತನಶ್ರೇಣಿ ಇದಲಿದೆ.
ಇದನ್ನೂ ಓದಿ: ರಾಜ್ಯಾದ್ಯಂತ ಹೆಚ್ಚಿದ ಬಿಸಿಲಬ್ಬರ | ಈ ಜಿಲ್ಲೆಗಳಿಗೆ ಹವಾಮಾನ ಇಲಾಖೆ ಕಟ್ಟೆಚ್ಚರ
ದೈಹಿಕ ಕ್ಷಮತೆ ಪರೀಕ್ಷೆ: ಅಭ್ಯರ್ಥಿಗಳು ನಿಗದಿತ ದೈಹಿಕ ಮಾನದಂಡಗಳನ್ನು ಪೂರೈಸಬೇಕು. ಪುರುಷರು 165 ಸೆಂ.ಮೀ. ಹಾಗೂ ಮಹಿಳೆಯರು 155 ಸೆಂ.ಮೀ. ಎತ್ತರವಿರಬೇಕು. ಎತ್ತರ ಪರೀಕ್ಷೆ ಬಳಿಕ ದೈಹಿಕ ಸಹಿಷ್ಣುತಾ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಪುರುಷರು 1.6 ಕಿ.ಮೀ ದೂರವನ್ನು 6 ನಿಮಿಷ 30 ಸೆಕೆಂಡುಗಳಲ್ಲಿ ಪೂರೈಸಬೇಕು. ಮಹಿಳೆಯರು 800 ಮೀಟರ್ ದೂರವನ್ನು ನಾಲ್ಕು ನಿಮಿಷಗಳಲ್ಲಿ ಓಡಬೇಕು.
ಎಲ್ಲ ವರ್ಗದ ಅಭ್ಯರ್ಥಿಗಳಿಗೂ ಈ ಪರೀಕ್ಷೆ ಕಡ್ಡಾಯವಾಗಿದ್ದು, ಯಾವುದೇ ವಿನಾಯ್ತಿ ನೀಡಲಾಗುವುದಿಲ್ಲ. ಇದರಲ್ಲಿ ಪಾಸಾದವರ ದಾಖಲಾತಿಗಳನ್ನು ಪರಿಶೀಲಿಸಿ ಕೌಶಲ ಪರೀಕ್ಷೆ ಅಥವಾ ಟ್ರೇಡ್ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಬಳಿಕ ಲಿಖಿತ ಅಥವಾ ಕಂಪ್ಯೂಟರ್ ಆಧಾರಿತ ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕು.
ಆಯ್ಕೆ ಪ್ರಕ್ರಿಯೆ: ದೈಹಿಕ ದಕ್ಷತೆ ಪರೀಕ್ಷೆ (ಪಿಇಟಿ), ದೈಹಿಕ ಗುಣಮಟ್ಟದ ಪರೀಕ್ಷೆ (ಪಿಎಸ್‌ಟಿ), ದಾಖಲೆ ಪರಿಶೀಲನೆ, ಟ್ರೇಡ್ಸ್ ಟೆಸ್ಟ್, ಲಿಖಿತ ಪರೀಕ್ಷೆ ಹಾಗೂ ವೈದ್ಯಕೀಯ ಪರೀಕ್ಷೆ ಮೂಲಕ ಆಯ್ಕೆ ನಡೆಯಲಿದೆ. ಲಿಖಿತ ಪರೀಕ್ಷೆಯನ್ನು ಕಂಪ್ಯೂಟರ್ ಅಥವಾ ಒಎಂಆರ್ ಮಾದರಿಯಲ್ಲಿ ಇಂಗ್ಲಿಷ್ ಮತ್ತು ಹಿಂದಿ ಭಾಷೆಯಲ್ಲಿ ನಡೆಸಲಾಗುತ್ತದೆ. ಪಿಇಟಿ, ಪಿಎಸ್‌ಟಿ, ಟ್ರೇಡ್, ದಾಖಲೆ ಪರೀಶೀಲನೆಗೆ ಹಾಜರಾಗುವ ಅಭ್ಯರ್ಥಿಗಳು ಅಧಿಸೂಚನೆಯಲ್ಲಿ ತಿಳಿಸಿದ ಮೂಲ ದಾಖಲೆಗಳನ್ನು ಹಾಜರುಪಡಿಸಬೇಕು.
ಅರ್ಜಿ ಸಲ್ಲಿಕೆ ಆರಂಭ : 05-03-2025
ಅರ್ಜಿ ಸಲ್ಲಿಕೆ ಕೊನೆ : 03-04-2025
ಅಧಿಸೂಚನೆ ಲಿಂಕ್: Download
ಇದನ್ನೂ ಓದಿ: ಪೋಸ್ಟ್ ಆಫೀಸ್’ನಲ್ಲಿ ಕೇವಲ 399 ರೂ. ಕಟ್ಟಿದರೆ ಸಿಗಲಿದೆ 10 ಲಕ್ಷ ರೂ. ಆರ್ಥಿಕ ಸಹಾಯ | ಸಂಪೂರ್ಣ ಮಾಹಿತಿ ಇಲ್ಲಿದೆ...