ಇದು ಅಂಚೆ ಇಲಾಖೆಯ ವಿಶೇಷ ಅಪಘಾತ ವಿಮಾ (Post Office Accident Insurance Scheme) ಯೋಜನೆ. ವಾರ್ಷಿಕ ಕೇವಲ 399 ರೂಪಾಯಿ ಕಂತು ಕಟ್ಟಿ ಬರೋಬ್ಬರಿ 10 ಲಕ್ಷ ರೂಪಾಯಿ ಪರಿಹಾರ ಪಡೆಯಿರಿ. ಏನಿದು ಅಂಚೆ ಇಲಾಖೆ ವಿಮಾ ಯೋಜನೆ? ಈ ವಿಮಾ ಪಾಲಸಿ ಪಡೆಯುವುದು ಹೇಗೆ? ಏನೆಲ್ಲ ಅನುಕೂಲಗಳಿವೆ? ಇತ್ಯಾದಿ ವಿವರ ಈ ಲೇಖನದಲ್ಲಿದೆ...
ಭಾರತೀಯ ಅಂಚೆ ಇಲಾಖೆ ಅತಿ ಕಡಿಮೆ ಕಂತು ಪಾವತಿಸಿ ಅತಿ ಹೆಚ್ಚು ಪರಿಹಾರ ಪಡೆಯುವ ಬಂಪರ್ ಅಪಘಾತ ವಿಮೆಯೊಂದನ್ನು ಪರಿಚಯಿಸಿದೆ. ಜೀವ ಹಾನಿ, ಶಾಶ್ವತ ಅಂಗ ವೈಕಲ್ಯ, ಅಲ್ಪ ಅಂಗ ವೈಕಲ್ಯ, ಆಸ್ಪತ್ರೆ ವೆಚ್ಚ, ಕುಟುಂಬದ ಆಸ್ಪತ್ರೆ ಪ್ರಯಾಣ ವೆಚ್ಚ, ಮೃತರ ಮಕ್ಕಳ ಶಿಕ್ಷಣಕ್ಕೆ ಆರ್ಥಿಕ ನೆರವು, ಶವ ಸಂಸ್ಕಾರಕ್ಕೆ ನೆರವು ಸೇರಿದಂತೆ ಬಹಳಷ್ಟು ವಿಶೇಷತೆಯನ್ನು ಹೊಂದಿರುವ ಈ ವಿಮಾ ಯೋಜನೆೆಯ ಹೆಸರು ‘ಸಮೂಹ ಅಪಘಾತ ಸುರಕ್ಷಾ ಪಾಲಸಿ’ ಎಂದು.
ಇದನ್ನೂ ಓದಿ: ಸೂರ್ಯ ಘರ್ ಯೋಜನೆಯಡಿ ರಾಜ್ಯದಲ್ಲಿ 4,407 ಮನೆಗಳಿಗೆ ಸಹಾಯಧನ
ಸದರಿ ಸಮೂಹ ಅಪಘಾತ ಸುರಕ್ಷಾ ಪಾಲಸಿಯಲ್ಲಿ ಎರಡು ಆಯ್ಕೆಗಳಿದ್ದು; ಆಸಕ್ತರು ಯಾವುದನ್ನು ಬೇಕಾದರೂ ಆಯ್ದುಕೊಳ್ಳಬಹುದು. ಸಣ್ಣ ಪುಟ್ಟ ಬದಲಾವಣೆಯ ಹೊರತಾಗಿ ಎರಡೂ ಗುಂಪುಗಳು 10 ಲಕ್ಷ ರೂಪಾಯಿ ಕವರೇಜ್ ಹೊಂದಿವೆ.
ಆಕಸ್ಮಿಕ ಅವಘಡಗಳಿಗೆ ತುತ್ತಾದಾಗ ಅತ್ಯಂತ ಕಡಿಮೆ ಹಣದಲ್ಲಿ ಭಾರಿ ಮೊತ್ತದ ಈ ಅಪಘಾತ ವಿಮೆ ಆರ್ಥಿಕವಾಗಿ ಸಹಾಯಕ್ಕೆ ಬರಲಿದೆ. ಕನಿಷ್ಠ 18ರಿಂದ ಗರಿಷ್ಠ 65 ವರ್ಷದ ಒಳಗಿನವರು ಕೂಡಲೇ ಈ ವಿಮೆಯ ಅನುಕೂಲ ಪಡೆಯಬಹುದಾಗಿದೆ.
ವಿಮೆ ಪಡೆಯಲು ಏನು ಮಾಡಬೇಕು?
ವಿಮೆಯ ಪ್ರಯೋಜನ ಪಡೆಯಲು ನಿಮ್ಮ ಹತ್ತಿರದ ಅಂಚೆ ಕಚೇರಿಗೆ ತೆರಳಿ ವಾರ್ಷಿಕವಾಗಿ ನಿಮಗೆ ಅಗತ್ಯವಾದ ಆಯ್ಕೆ ಗುರುತಿಸಿಕೊಂಡು ಆ ಪ್ರಕಾರ 299 ಅಥವಾ 399 ರೂಪಾಯಿ ಹಣ ಕಟ್ಟಿದರೆ 10 ಲಕ್ಷ ರೂಪಾಯಿ ಅಪಘಾತ ವಿಮೆಗೆ ಅರ್ಹರಾಗುತ್ತೀರಿ. ಇದಕ್ಕಾಗಿ ಅಂಚೆ ಇಲಾಖೆಯಲ್ಲಿ ‘ಇಂಡಿಯಾ ಪೋಸ್ಟ್ ಪೇಮೆಂಟ್’ ಖಾತೆ ಹೊಂದಿರುವುದು ಕಡ್ಡಾಯವಾಗಿದೆ.
ನೀವು ಈಗಾಗಲೇ ‘ಇಂಡಿಯಾ ಪೋಸ್ಟ್ ಪೇಮೆಂಟ್’ ಖಾತೆ ಹೊಂದಿದ್ದರೆ ನಿಗದಿತ ಆಯ್ಕೆಗಳಲ್ಲಿ ಯಾವುದಾರೂ ಒಂದನ್ನು ಸೆಲೆಕ್ಟ್ ಮಾಡಿಕೊಂಡು ಅದಕ್ಕೆ ತಕ್ಕಂತೆ ವಾರ್ಷಿಕ ಕಂತು ಪಾವತಿಸಿದರೆ ನೀವು ಪಾಲಸಿದಾರರಾಗುತ್ತೀರಿ. ಒಂದು ವೇಳೆ ಈ ಖಾತೆ ಹೊಂದಿರದಿದ್ದರೆ ಕೂಡಲೇ 100 ರೂಪಾಯಿ ಕಟ್ಟಿ ಹತ್ತಿರದ ಅಂಚೆ ಕಚೇರಿಯಲ್ಲಿ ಒಂದೇ ದಿನದಲ್ಲಿ ‘ಇಂಡಿಯಾ ಪೋಸ್ಟ್ ಪೇಮೆಂಟ್’ ಅಕೌಂಟ್ ತೆರೆಯುವ ಮೂಲಕ ‘ಸಮೂಹ ಅಪಘಾತ ಸುರಕ್ಷಾ ಪಾಲಸಿ’ ಮಾಡಿಸಿಕೊಳ್ಳಬಹುದು.
ಇದನ್ನೂ ಓದಿ: ಸಣ್ಣ ಉದ್ಯಮ ಆರಂಭಿಸಲು ಸಿಗುತ್ತೆ ₹20 ಲಕ್ಷ ಮುದ್ರಾ ತರುಣ್ ಲೋನ್ | ಈಗಲೇ ಅರ್ಜಿ ಸಲ್ಲಿಸಿ...
ಈ ಪಾಲಸಿಯ ಅನುಕೂಲಗಳೇನು?
ಸಮೂಹ ಅಪಘಾತ ಸುರಕ್ಷಾ ಪಾಲಸಿಯ ಫಲಾನುಭವಿಯು ಆಕಸ್ಮಿಕ ಸಾವನ್ನಪ್ಪಿದರೆ ಅವರ ಕುಟುಂಬಸ್ಥರಿಗೆ ಹತ್ತು ಲಕ್ಷ ರೂಪಾಯಿ ಪರಿಹಾರ ನೀಡಲಾಗುತ್ತದೆ. ರಸ್ತೆ ಅಪಘಾತಗಳು, ಹಾವು ಕಡಿತ, ವಿದ್ಯುತ್ ಅಪಘಾತ, ಬೆಂಕಿ ಆಕಸ್ಮಿಕ, ಮನೆ ಮಹಡಿಯಿಂದ ಆಕಸ್ಮಿಕವಾಗಿ ಬಿದ್ದು ಸಾವು ಸೇರಿದಂತೆ ವಿವಿಧ ಆಕಸ್ಮಿಕವಾಗಿ ಸಾವು ಸಂಭವಿಸಿದರೆ ಈ ಪರಿಹಾರ ಪಡೆಯಬಹುದು. ಆರ್ಥಿಕ ನೆರವಿನ ವಿವರ ಈ ಕೆಳಗಿನಂತಿದೆ....
* ಅಪಘಾತದಿಂದ ಮರಣ ಹೊಂದಿದಲ್ಲಿ 10 ಲಕ್ಷ ರೂಪಾಯಿ ಸಹಾಯ.
* ಶಾಶ್ವತವಾಗಿ ಅಂಗ ವೈಕಲ್ಯವಾದರೆ 10 ಲಕ್ಷ ರೂಪಾಯಿ ಸಹಾಯ.
* ಆಸ್ಪತ್ರೆ ವೆಚ್ಚಕ್ಕಾಗಿ 60,000 ರೂಪಾಯಿಗೆ ಅರ್ಹರಾಗಿರುತ್ತಾರೆ.
* ಮೃತರ ಮಕ್ಕಳ ಶಿಕ್ಷಣಕ್ಕಾಗಿ ಪ್ರತಿ ಮಗುವಿಗೆ ರೂ. 1 ಲಕ್ಷ ವರೆಗೆ ಸಹಾಯ (ಸಂಪೂರ್ಣ ಶಿಕ್ಷಣಕ್ಕೆ ಗರಿಷ್ಠ 2 ಲಕ್ಷ ರೂಪಾಯಿ)
* ಒಪಿಡಿ ವೆಚ್ಚಕ್ಕೆಂದು 30,000 ರೂಪಾಯಿ ಸಹಾಯ
* ಅಪಘಾತದಲ್ಲಿ ಪಾರ್ಶ್ವವಾಯು ಉಂಟಾದರೆ 10 ಲಕ್ಷ ರೂಪಾಯಿ ನೀಡಿಕೆ
* ಕುಟುಂಬದವರ ಆಸ್ಪತ್ರೆ ಪ್ರಯಾಣ ವೆಚ್ಚಕ್ಕೆ 25,000 ರೂಪಾಯಿ ಸಹಾಯ
* ಅಂತಿಮ ಸಂಸ್ಕಾರಕ್ಕೆ 5,000 ಆರ್ಥಿಕ ನೆರವು
...ಹೀಗೆ ಸಮೂಹ ಅಪಘಾತ ಸುರಕ್ಷಾ ಪಾಲಸಿಯ ಎರಡೂ ವಿಮೆಗಳು ಸಣ್ಣ ಪುಟ್ಟ ಬದಲಾವಣೆಯೊಂದಿಗೆ 10 ಲಕ್ಷ ರೂಪಾಯಿ ಕವರೇಜ್ ಹೊಂದಿವೆ. ಜನಸಾಮಾನ್ಯರಿಗೆ ಇದೊಂದು ಅತ್ಯಲ್ಪ ಮೊತ್ತದ ಅತೀ ಹೆಚ್ಚು ಪರಿಹಾರ ಲಭಿಸುವ ವಿಮೆಯಾಗಿದೆ.
ಮಿಸ್ ಮಾಡದೇ ಇಂದೇ ಈ ಪಾಲಿಸಿದಾರರಾಗಿ. ಆಸಕ್ತರು ಇಂಡಿಯಾ ಪೋಸ್ಟ್ ಪೇಮೆಂಟ್ ಅಕೌಂಟ್ ಖಾತೆ ತೆರೆಯಲು ಹಾಗೂ ಈ ವಿಮಾ ಯೋಜನೆಯ ಲಾಭ ಪಡೆದುಕೊಳ್ಳಲು ನಿಮ್ಮ ಹತ್ತಿರದ ಅಂಚೆ ಕಚೇರಿಗೆ ಭೇಟಿ.
ಇದನ್ನೂ ಓದಿ: ಎಸ್‌ಎಸ್‌ಎಲ್‌ಸಿ ಪಾಸಾದ ಮಹಿಳೆಯರಿಗೆ ಎಲ್‌ಐಸಿ ಬಿಮಾ ಸಖಿ ನೇಮಕಾತಿಗೆ ಅರ್ಜಿ ಆಹ್ವಾನ | ಕೇಂದ್ರ ಸರ್ಕಾರದ ಹೊಸ ಯೋಜನೆ