ಎಸ್‌ಎಸ್‌ಎಲ್‌ಸಿ ಪಾಸಾದ ಮಹಿಳೆಯರಿಗೆ ಸರ್ಕಾರಿ ಸ್ವಾಮ್ಯದ ಭಾರತೀಯ ಜೀವ ವಿಮಾ ನಿಗಮದಲ್ಲಿ (life insurance corporation of india) ಕೆಲಸ ಮಾಡುವ ಅವಕಾಶವನ್ನು ಕೇಂದ್ರ ಸರ್ಕಾರ ಕಲ್ಪಿಸಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಕಳೆದ ಡಿಸೆಂಬರ್ 10ರಂದು ‘ಬಿಮಾ ಸಖಿ ಯೋಜನೆ’ಯನ್ನು (LIC’s BIMA SAKHI) ಅನುಷ್ಠಾನಗೊಳಿಸಿದ್ದು; ಅರ್ಹ ಮಹಿಳೆಯರಿಂದ ಅರ್ಜಿ ಆಹ್ವಾನಿಸಲಾಗಿದೆ.
ಏನಿದು ‘ಬಿಮಾ ಸಖಿ’ (LIC’s BIMA SAKHI) ಯೋಜನೆ?
ಮುಂದಿನ ಮೂರು ವರ್ಷಗಳಲ್ಲಿ ಈ ಯೋಜನೆಯಡಿ ಭಾರತೀಯ ಜೀವ ವಿಮಾ ನಿಗಮಕ್ಕೆ ಬರೋಬ್ಬರಿ 2 ಲಕ್ಷ ಮಹಿಳಾ ಏಜೆಂಟ್’ಗಳನ್ನು ನೇಮಕ ಮಾಡುವ ಗುರಿ ಹೊಂದಲಾಗಿದೆ. ಇನ್ನು 12 ತಿಂಗಳಲ್ಲಿ 1 ಲಕ್ಷ ಏಜೆಂಟರು ನೇಮಕವಾಗಲಿದ್ದಾರೆ. ಆಸಕ್ತ ಮಹಿಳೆಯರಿಗೆ ನೋಂದಣಿಗೆ ಅವಕಾಶ ಕಲ್ಪಿಸಲಾಗಿದೆ.
ಸರ್ಕಾರದಿಂದ ಮೂರು ವರ್ಷ ತರಬೇತಿಯನ್ನು ಪಡೆದ ಬಳಿಕ ಅವರು ಕಾಯಂ ಎಲ್‌ಐಸಿ ಏಜೆಂಟ್ ಆಗಿ ಕೆಲಸ ಮಾಡಬಹುದು. ಪದವಿ ಪಡೆದ ಬಿಮಾ ಸಖಿಗಳು ಎಲ್‌ಐಸಿಯಲ್ಲಿ ಡೆವಲಪ್ಟೆಂಟ್ ಆಫೀಸರ್’ಗಳಾಗಿ ಕೂಡ ಕಾರ್ಯ ನಿರ್ವಹಿಸಬಹುದು. ನೇಮಕ ಆಗುವ ಬಿಮಾ ಸಖಿಗಳಿಗೆ ಮೋದಿ ನೇಮಕ ಪತ್ರ ನೀಡಲಿದ್ದಾರೆ.
ಮಾಸಿಕ ಭತ್ಯೆ ಎಷ್ಟು ಸಿಗಲಿದೆ?
ಮೂರು ವರ್ಷಗಳ ತರಬೇತಿ ಅವಧಿಯಲ್ಲಿ ಕೇಂದ್ರ ಸರ್ಕಾರವು ‘ಬಿಮಾ ಸಖಿ’ ಯೋಜನೆಯಡಿ ತರಬೇತಿ ಪಡೆಯುವ ಮಹಿಳೆಯರಿಗೆ ಸ್ಟೈಪೆಂಡ್ ನೀಡಲಿದೆ. ಮಾಸಿಕ ಭತ್ಯೆ ಈ ಕೆಳಗಿನಂತಿದೆ:
* ಮೊದಲ ವರ್ಷ : 7,000 ರು.,
* ಎರಡನೇ ವರ್ಷ : 6,000 ರು.,
* ಮೂರನೇ ವರ್ಷ : 5,000 ರು.,
1ನೇ ವರ್ಷದಲ್ಲಿ ಹೇಳಿಕೊಡಲಾಗುವ ಪಾಲಿಸಿಗಳಲ್ಲಿ ಶೇಕಡಾ 65ಕ್ಕೂ ಹೆಚ್ಚು ಭಾಗವನ್ನು ಬಿಮಾ ಸಖಿಯರು ಕಲಿತಿದ್ದರೆ 2ನೇ ವರ್ಷದಲ್ಲಿ ಸ್ಟೈಪೆಂಡ್ ಸಿಗುತ್ತದೆ. ಅದೇ ರೀತಿ 2ನೇ ಮತ್ತು 3ನೇ ವರ್ಷದಲ್ಲಿ ಕೂಡ ಈ ನಿಯಮ ಅನ್ವಯವಾಗುತ್ತದೆ. ಮೂರೂ ವರ್ಷಗಳನ್ನು ಯಶಸ್ವಿಯಾಗಿ ತರಬೇತಿ ಪಡೆದು ನಿಗದಿತ ಗುರಿಯಷ್ಟು ಪಾಲಿಸಿಗಳನ್ನು ಮಾರುವ ಅಭ್ಯರ್ಥಿಗಳಿಗೆ ಈಗ ಎಲ್‌ಐಸಿ ಏಜೆಂಟ್’ಗಳಿಗೆ ಲಭ್ಯವಾಗುವ ಕಮೀಷನ್ ಜೊತೆಗೆ ಇತರ ಸೌಲಭ್ಯಗಳು ಬಿಕೂಡ ಸಿಗುತ್ತವೆ.
ಯಾರೆಲ್ಲ ಅರ್ಹರು? ಅರ್ಜಿ ಸಲ್ಲಿಕೆ ಹೇಗೆ?
ಮೊದಲೇ ಹೇಳಿದಂತೆ ಬಿಮಾ ಸಖಿಯರಾಗಲು 18ರಿಂದ 70 ವರ್ಷದ ವರೆಗಿನ ಮಹಿಳೆಯರು ಅರ್ಹರಾಗಿದ್ದು; ಕನಿಷ್ಠ 10ನೇ ಕ್ಲಾಸ್ ಪಾಸಾದವರಿಗೆ ಏಜೆಂಟ್ ಆಗುವ ಅವಕಾಶ ಕಲ್ಪಿಸಲಾಗಿದೆ. ಮಹಿಳೆಯರಲ್ಲಿ ಆರ್ಥಿಕ ಸಾಕ್ಷರತೆ ಮತ್ತು ವಿಮಾ ಜಾಗೃತೆಯನ್ನು ಉತ್ತೇಜಿಸಲು ಮೊದಲ 3 ವರ್ಷದಲ್ಲಿ ಅವರಿಗೆ ತರಬೇತಿ ನೀಡಲಾಗುತ್ತದೆ.
‘ಬಿಮಾ ಸಖಿ’ಯರಾಗಲು ಆಸಕ್ತಯುಳ್ಳ ಮಹಿಳೆಯರು ಅಧಿಕೃತ LIC ಇಂಡಿಯಾ ವೆಬ್‌ಸೈಟ್‌ಗೆ ಭೇಟಿ ನೀಡಿ ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ. ಅಥವಾ ನಾವು ಕೆಳಗೆ ನೀಡಿರುವ ಲಿಂಕ್ ಬಳಸಿಕೊಂಡು ಕೂಡ ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ.
ಕೆಳಗಿನ ಲಿಂಕ್ ಕ್ಲಿಕ್ ಮಾಡಿದರೆ LIC’s BIMA SAKHI ವೆಬ್ ಪುಟದಲ್ಲಿ lead application for lic’s bima sakhi scheme ತೆರೆದುಕೊಳ್ಳುತ್ತದೆ. ಅಲ್ಲಿ ಕೇಳಲಾದ ಹೆಸರು, ಹುಟ್ಟಿದ ದಿನಾಂಕ, ಸಂಪರ್ಕ ಮಾಹಿತಿ, ಇತ್ಯಾದಿ ಅಗತ್ಯವಿರುವ ವಿವರಗಳನ್ನು ಭರ್ತಿ ಮಾಡಿ ಸಬ್‌ಮಿಟ್ ಮಾಡಿದರೆ ಅರ್ಜಿ ಸಲ್ಲಿಕೆಯಾದಂತೆ.
ಅರ್ಜಿ ಸಲ್ಲಿಕೆ ಲಿಂಕ್ : Apply ಮಾಡಿ