Finance

ಪರ್ಸನಲ್ ಲೋನ್ ಪಡೆಯುವ ಮುನ್ನ ಈ ಮಹತ್ವದ ಮಾಹಿತಿ ತಿಳಿದಿರಿ... Personal Loan Important Information

ಪರ್ಸನಲ್ ಲೋನ್ ಪಡೆಯುವ ಮುನ್ನ ಈ ಮಹತ್ವದ ಮಾಹಿತಿ ತಿಳಿದಿರಿ... Personal Loan Important Information

ಹಣದ ತುರ್ತು ಅಗತ್ಯಕ್ಕೆ ಪರ್ಸನಲ್ ಲೋನ್ ಅಥವಾ ವೈಯಕ್ತಿಕ ಸಾಲ (Personal loan) ಅತ್ಯಂತ ಉಪಯುಕ್ತ. ಸಾಮಾನ್ಯವಾಗಿ ಯಾವುದೇ ಅಡಮಾನ ಅಥವಾ ಸೆಕ್ಯೂರಿಟಿ ಸಿಗುವುದರಿಂದ ಅನೇಕರು ವೈಯಕ್ತಿಕ ಸಾಲಕ್ಕೆ ಮೊರೆ ಹೋಗುತ್ತರೆ.


ನಿಮ್ಮ ಸಿಬಿಲ್ ಅಥವಾ ಕ್ರೆಡಿಟ್ ಸ್ಕೋರ್ ಚೆನ್ನಾಗಿದ್ದರೆ ಹಣಕಾಸು ಸಂಸ್ಥೆಗಳೇ ಫೋನ್, ಮೇಸೇಜ್ ಮಾಡಿ ಪರ್ಸನಲ್ ಲೋನ್ ನೀಡಲು ಪ್ರೇರೇಪಿಸುವುದುಂಟು. ಸುಲಭವಾಗಿ ಸಿಗುವುದಲ್ಲದೇ, ಖುದ್ದು ಸಾಲ ನೀಡುವವರೇ ಪ್ರೇರೇಪಿಸುವುದರಿಂದ ಅನೇಕರು ವೈಯಕ್ತಿಕ ಸಾಲದ ಸುಳಿಗೆ ಸಿಲುಕುತ್ತಾರೆ.


ಇದನ್ನೂ ಓದಿ: ಫೋನ್ ಪೇ, ಗೂಗಲ್ ಪೇ ಮೂಲಕ ಬೇರೆಯವರಿಗೆ ತಪ್ಪಾಗಿ ಹಣ ಕಳಿಸಿದರೆ ವಾಪಾಸು ಪಡೆಯೋದು ಹೇಗೆ? 


ಸುಲಭ ಸಾಲ, ಆದರೆ ಮರುಪಾವತಿ ಕಠಿಣ


ಪರ್ಸನಲ್ ಲೋನ್ ಸುಲಭವಾಗಿ ಸಿಗುತ್ತದೆನೋ ನಿಜ. ಆದರೆ ಅದರ ಮರುಪಾವತಿ ಅಷ್ಟು ಸುಲಭವಲ್ಲ ಎಂಬುವುದನ್ನು ಸಾಲ ಪಡೆಯುವವರು ಮೊದಲೇ ಗಂಭೀರವಾಗಿ ಗಮನಿಸಬೇಕು. ಏಕೆಂದರೆ ಈ ಸಾಲಕ್ಕೆ ವಿಧಿಸಲಾಗುವ ಬಡ್ಡಿದರ ಬಹಳ ಅಧಿಕವಾಗಿರುತ್ತದೆ.


ಉತ್ತಮ ಕ್ರೆಡಿಟ್ ಸ್ಕೋರ್ ಹೊಂದಿದ್ದರೆ ಶೇ.12ರ ದರದಲ್ಲಿ ಸಾಲ ಸಿಗಬಹುದು. ಕ್ರೆಡಿಟ್ ಸ್ಕೋರ್ ಕಡಿಮೆ ಇದ್ದಷ್ಟೂ ಬಡ್ಡಿದರ ಹೆಚ್ಚುತ್ತದೆ. ಕೆಲವು ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಗಳು ಪರ್ಸನಲ್ ಲೋನ್​ಗೆ ಶೇ. 18ಕ್ಕಿಂತಲೂ ಹೆಚ್ಚು ಬಡ್ಡಿ ವಿಧಿಸುತ್ತವೆ. 


ಇದನ್ನೂ ಓದಿ: ವಿಶೇಷ ವೈಯಕ್ತಿಕ ಸಾಲ ಯೋಜನೆಗಳು | ಯಾವುದಕ್ಕೆಲ್ಲ ಸಾಲ ಸಿಗುತ್ತೆ ಗೊತ್ತಾ? Personal Loans Schemes


ಆರಂಭಿಕ ಕಂತುಗಳಲ್ಲೇ ಅಧಿಕ ಬಡ್ಡಿ ಕಡಿತ


ಆರ್ಥಿಕ ತಜ್ಞರು ಹೆಚ್ಚಿನ ಬಡ್ಡಿದರದ ವೈಯಕ್ತಿಕ ಸಾಲಗಳು ಯಾವತ್ತಿಗೂ ನಿಮ್ಮ ಕೊನೆಯ ಆಯ್ಕೆ ಆಗಿರಬೇಕು ಎನ್ನುತ್ತಾರೆ. ಅಂದರೆ, ಬೇರೆ ದಾರಿಯೇ ಇಲ್ಲ ಎಂಬ೦ಥ ಪರಿಸ್ಥಿಯಲ್ಲಿ ಮಾತ್ರ ಇಂತಹ ಸಾಲ ಪಡೆಯುವ ದುಸ್ಸಾಹಸ ಮಾಡಬೇಕು. ಹೀಗೆ ಕಷ್ಟ ಕಾಲದಲ್ಲಿ, ತುರ್ತು ಪರಿಸ್ಥಿತಿಯಲ್ಲಿ ಪರ್ಸನಲ್ ಲೋನ್ ಪಡೆದಿದ್ದರೆ ಆದಷ್ಟೂ ಬೇಗ ಅದನ್ನು ತೀರಿಸುವತ್ತ ನಿಮ್ಮ ಗಮನ ಇರಲಿ.


ಪರ್ಸನಲ್ ಲೋನ್ ಅನ್ನು ಅಡಮಾನ ಅಥವಾ ಸೆಕ್ಯೂರಿಟಿ ಇಲ್ಲದೇ ನೀಡುವುದರಿಂದ ಬಹುತೇಕ ಹಣಕಾಸು ಸಂಸ್ಥೆಗಳು ಸಾಲ ನೀಡುವಾಗ ನಿಗದಿಯಾಗುವ ಮಾಸಿಕ ಕಂತುಗಳಲ್ಲಿ (EMI) ಆರಂಭದ ಕಂತುಗಳಲ್ಲಿ ಹೆಚ್ಚಿನ ಬಡ್ಡಿ ವಿಧಿಸುತ್ತವೆ. ಅಂದರೆ ನೀವು ಒಂದು ವರ್ಷ ಒಟ್ಟು 2 ಲಕ್ಷ ರೂಪಾಯಿ ಇಎಂಐ ಕಟ್ಟಿದ್ದಲ್ಲಿ ಅದರಲ್ಲಿ ಅಸಲು ಹಣ 50,000 ರೂಪಾಯಿ ಮಾತ್ರವೇ ತೀರಿರಬಹುದು. ಉಳಿದ ಹಣ ಬಡ್ಡಿಗೆ ಕಡಿತವಾಗಿರುತ್ತದೆ. 


ಇದನ್ನೂ ಓದಿ: ಕಡೆಗೂ ಜಿಪಂ, ತಾಪಂ ಚುನಾವಣೆಗೆ ಮೂಹುರ್ತ ಫಿಕ್ಸ್ ZP TP Election karnataka


ಪ್ರೀಪೇಮೆಂಟ್ ಮಾಡುವ ಪ್ರಯತ್ನ ಮಾಡಿ


ಯಾವುದೇ ಸಾಲವನ್ನು ಮುಂಗಡವಾಗಿ ಕಟ್ಟಿ ತೀರಿಸಲು ಅವಕಾಶ ಇರುತ್ತದೆ. ಸಾಲ ಪಡೆಯುವ ಮೊದಲೇ ಬ್ಯಾಂಕಿನಲ್ಲಿ ಪ್ರೀಪೇಮೆಂಟ್ ಅವಧಿ ಮತ್ತು ಶುಲ್ಕ ಇತ್ಯಾದಿ ಮಾಹಿತಿ ಕೇಳಿ ತಿಳಿದುಕೊಳ್ಳುವುದು ಉತ್ತಮ. ಬಹಳಷ್ಟು ಬ್ಯಾಂಕುಗಳಲ್ಲಿ ಇದಕ್ಕೆ ಚಾರ್ಜಸ್ ಇರುತ್ತದೆ. ಕೆಲವೇ ಬ್ಯಾಂಕುಗಳಲ್ಲಷ್ಟೇ ಪ್ರೀಪೇಮೆಂಟ್ ಚಾರ್ಜಸ್ ಇರುವುದಿಲ್ಲ. 


ನೀವು ಪಡೆದ ವೈಯಕ್ತಿಕ ಸಾಲವನ್ನು ಪ್ರೀಪೇ ಮಾಡಿದರೆ ಸಾಲ ಬೇಗ ತೀರುತ್ತದೆ. ಬಡ್ಡಿ ಭಾರ ಕಡಿಮೆ ಆಗುತ್ತದೆ. ಉದಾಹರಣೆಗೆ ನೀವು ಐದು ಲಕ್ಷ ರೂಪಾಯಿ ಪರ್ಸನಲ್ ಲೋನ್ ಪಡೆದುಕೊಂಡು 5 ವರ್ಷ ಇಎಂಐ ಇದ್ದರೆ ಈ ಐದು ವರ್ಷದಲ್ಲಿ ಭರ್ತಿ 2 ಲಕ್ಷ ರೂಪಾಯಿಯನ್ನಾರೂ ಬಡ್ಡಿ ಕಟ್ಟಿರುತ್ತೀರಿ.


ಹೀಗಾಗಿ, ಈ ಬಡ್ಡಿಹೊರೆಯಿಂದ ಪಾರಾಗಲು ಬೇರೆಲ್ಲಾದರೂ ಹಣ ಇದ್ದರೆ ಅದನ್ನು ತೆಗೆದು ಪರ್ಸನಲ್ ಲೋನ್‌ಗೆ ಅಡ್ವಾನ್ಸಾಗಿ ಪಾವತಿಸುವ ಪ್ರಯತ್ನ ಮಾಡಿ. ಲೋನ್ ಪ್ರೀಪೇಮೆಂಟ್ ಮಾಡುವುದರಿಂದ ನಿಮ್ಮ ಕ್ರೆಡಿಟ್ ಸ್ಕೋರ್ ಉತ್ತಮಗೊಳ್ಳುತ್ತದೆ. ಜೊತೆಗೆ ಬಡ್ಡಿಹೊರೆ, ಸಾಲಬಾಧೆಯೂ ಕಮ್ಮಿಯಾಗುತ್ತದೆ.