10ನೇ ತರಗತಿ (SSLC) ಪಾಸಾದ ಅಭ್ಯರ್ಥಿಗಳಿಗೆ ಗ್ರಾಮೀಣ ಅಂಚೆ ಸೇವಕರಾಗಲು ಭಾರತೀಯ ಅಂಚೆ ಇಲಾಖೆಯು (IndiaPost) ಅವಕಾಶ ನೀಡಿದೆ. ಈ ಸಂಬ೦ಧ ಭಾರತದ ಎಲ್ಲಾ ರಾಜ್ಯಗಳಲ್ಲೂ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.
ಈ ಪೈಕಿ ಕರ್ನಾಟಕ ಅಂಚೆ ವೃತ್ತದಲ್ಲಿ ಬರೋಬ್ಬರಿ 1,135 ಗ್ರಾಮೀಣ ಡಾಕ್ ಸೇವಕ್ (BPM/ABPM) ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಎಸ್‌ಎಸ್‌ಎಲ್‌ಸಿ ಪಾಸಾದ ಅಭ್ಯರ್ಥಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದಾಗಿದೆ.
ಇದನ್ನೂ ಓದಿ: ಕಡಿಮೆ ಬಡ್ಡಿ ದರದಲ್ಲಿ ಗೃಹ ಸಾಲ ಪಡೆಯುವ ಸರಳ ವಿಧಾನ | ಸರಳ ಬಡ್ಡಿಯಲ್ಲಿ ಗೃಹಸಾಲ ನೀಡುವ ಬ್ಯಾಂಕ್‌ಗಳ ಪಟ್ಟಿ
ಜಿಲ್ಲಾವಾರು ಖಾಲಿ ಹುದ್ದೆಗಳ ವಿವರ : ಬಾಗಲಕೋಟೆ 24, ಬಳ್ಳಾರಿ 41, ಬೆಂಗಳೂರು ಜಿಪಿಒ 04, ಬೆಳಗಾವಿ 27, ಬೆಂಗಳೂರು ಪೂರ್ವ 54, ಬೆಂಗಳೂರು ದಕ್ಷಿಣ 49, ಬೆಂಗಳೂರು ಪಶ್ಚಿಮ 13, ಬೀದರ್ 24, ಚನ್ನಪಟ್ಟಣ 30, ಚಿಕ್ಕಮಗಳೂರು 37, ಚಿಕ್ಕೋಡಿ 18, ಚಿತ್ರದುರ್ಗ 35, ದಾವಣಗೆರೆ ರಿಯಲ್ ಕಚೇರಿ 34, ಧಾರವಾಡ 29, ಗದಗ: 09, ಗೋಕಾಕ್ 03, ಹಾಸನ 50
ಹಾವೇರಿ 20, ಕಲಬುರಗಿ 27, ಕಾರವಾರ 32, ಕೊಡಗು 33, ಕೋಲಾರ 50, ಕೊಪ್ಪಳ 22, ಮಂಡ್ಯ 43, ಮಂಗಳೂರು 23, ಮೈಸೂರು 45, ನಂಜನಗೂಡು 35, ಪುತ್ತೂರು 50, ರಾಯಚೂರು 13, ಆರ್‌ಎಂಎಸ್ ಬಿಜಿ 24, ಆರ್‌ಎಂಎಸ್ ಎಚ್‌ಬಿ 02, ಆರ್‌ಎಂಎಸ್‌ಕ್ಯೂ 02, ಶಿವಮೊಗ್ಗ 36, ಸಿರ್ಸಿ 33, ತುಮಕೂರು 64, ಉಡುಪಿ 56, ವಿಜಯಪುರ 26, ಯಾದಗಿರಿ 18
ಇದನ್ನೂ ಓದಿ: ಯಶಸ್ವಿಯಾದ ಯಶಸ್ವಿನಿ ಉಚಿತ ಆರೋಗ್ಯ ವಿಮೆ ಯೋಜನೆ | ಯೋಜನೆಗೆ ನೋಂದಣಿ ನೀರಸ
ಮಾಸಿಕ ವೇತನ : ಗ್ರಾಮೀಣ ಡಾಕ್ ಸೇವಕ್ (ಬ್ರಾಂಚ್ ಪೋಸ್ಟ್ ಮಾಸ್ಟರ್) ಹುದ್ದೆಗೆ 12,000 ರಿಂದ 29,380 ರೂ. ಹಾಗೂ ಗ್ರಾಮೀಣ ಡಾಕ್ ಸೇವಕ್ (ಸಹಾಯಕ ಶಾಖೆಯ ಪೋಸ್ಟ್ಮಾಸ್ಟರ್/ಡಾಕ್ ಸೇವಕ್) ಹುದ್ದೆಗೆ 10,000 24,470 ರೂ. ಮಾಸಿಕ ಸಂಬಳ ನಿಗದಿಪಡಿಸಲಾಗಿದೆ.
ಶೈಕ್ಷಣಿಕ ಅರ್ಹತೆ: ಕರ್ನಾಟಕ ಅಂಚೆ ವೃತ್ತದ ಅಧಿಕೃತ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿಗಳು ಅಥವಾ ವಿಶ್ವವಿದ್ಯಾಲಯಗಳಿಂದ 10ನೇ ತರಗತಿಯನ್ನು ಪೂರ್ಣಗೊಳಿಸಿರಬೇಕು.
ಇದನ್ನೂ ಓದಿ: ಹುಬ್ಬಳ್ಳಿಯ ನೈಋತ್ಯ ರೈಲ್ವೆಯಲ್ಲಿ 503 ಹುದ್ದೆಗಳಿಗೆ ಅರ್ಜಿ ಆಹ್ವಾನ | ಎಸ್ಸೆಸ್ಸೆಲ್ಸಿ ಪಾಸಾಗಿದ್ರೆ ಅರ್ಜಿ ಹಾಕಿ...
ವಯೋಮಿತಿ: ಅಭ್ಯರ್ಥಿಯು 03 ಮಾರ್ಚ್ 2025ರಂತೆ ಕನಿಷ್ಠ 18 ವರ್ಷಗಳು ಮತ್ತು ಗರಿಷ್ಠ 40 ವರ್ಷ ವಯೋಮಿತಿ ಹೊಂದಿರಬೇಕು.ಒಬಿಸಿ ಅಭ್ಯರ್ಥಿಗಳಿಗೆ 03 ವರ್ಷಗಳು, ಎಸ್‌ಸಿ/ ಎಸ್‌ಟಿ ಅಭ್ಯರ್ಥಿಗಳಿಗೆ 05 ವರ್ಷಗಳು, ಪಿಡಬ್ಲ್ಯೂಡಿ (ಸಾಮಾನ್ಯ) ಅಭ್ಯರ್ಥಿಗಳಿಗೆ 10 ವರ್ಷಗಳು, ಪಿಡಬ್ಲ್ಯೂಡಿ (ಒಬಿಸಿ) ಅಭ್ಯರ್ಥಿಗಳಿಗೆ 13 ವರ್ಷಗಳು, ಪಿಡಬ್ಲ್ಯೂಡಿ (ಎಸ್‌ಸಿ/ಎಸ್‌ಟಿ) ಅಭ್ಯರ್ಥಿಗಳಿಗೆ 15 ವರ್ಷಗಳು ವಯೋಮಿತಿ ಸಡಿಲಿಕೆ ಇದೆ.
ಅರ್ಜಿ ಶುಲ್ಕ: ಎಸ್‌ಸಿ/ಎಸ್‌ಟಿ, ಪಿಡಬ್ಲ್ಯೂಡಿ, ಮಹಿಳಾ ಅಭ್ಯರ್ಥಿಗಳಿಗೆ ಯಾವುದೇ ಶುಲ್ಕವಿಲ್ಲ. ಇತರ ಎಲ್ಲಾ ಅಭ್ಯರ್ಥಿಗಳಿಗೆ 100 ರೂ. ಅರ್ಜಿ ಶುಲ್ಕ ನಿಗದಿಪಡಿಸಲಾಗಿದ್ದು; ಆನ್‌ಲೈನ್ ಮೂಲಕ ಪಾವತಿಸಲು ತಿಳಿಸಲಾಗಿದೆ.
ಇದನ್ನೂ ಓದಿ: ಹೈನುಗಾರಿಕೆಗೆ ₹10 ಲಕ್ಷದ ವರೆಗೂ ಮೇಲಾಧಾರ ಮುಕ್ತ ಸಾಲ ಸೌಲಭ್ಯ HDFC Bank Dairy Farming Loan
ಅರ್ಜಿ ಸಲ್ಲಿಕೆ ಹೇಗೆ? : ಕರ್ನಾಟಕ ಅಂಚೆ ವೃತ್ತ ಗ್ರಾಮೀಣ ಡಾಕ್ ಸೇವಕ್ (ಬಿಪಿಎಂ/ಎಬಿಪಿಎಂ) ಹುದ್ದೆಗಳಿಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ ಅರ್ಜಿ ಸಲ್ಲಿಸಬಹುದು.
* ಅರ್ಜಿ ಸಲ್ಲಿಕೆ ಪ್ರಾರಂಭ ದಿನಾಂಕ: 10-02-2025
* ಅರ್ಜಿ ಸಲ್ಲಿಕೆ ಕೊನೇ ದಿನಾಂಕ: 03-03-2025
ಅಧಿಕೃತ ಅಧಿಸೂಚನೆ: Download
ಆನ್‌ಲೈನ್ ಅರ್ಜಿ ಲಿಂಕ್: Apply Now