ಭಾರತೀಯ ರೈಲ್ವೆ ನೇಮಕಾತಿ ಮಂಡಳಿ (Railway Recruitment Board - RRB) ಗ್ರೂಪ್ ‘ಡಿ’ ವೃಂದದ ಬೃಹತ್ ನೇಮಕಾತಿಗೆ ಅಧಿಸೂಚನೆ ಪ್ರಕಟಿಸಿದ್ದು; ದೇಶಾದ್ಯಂತ ಬರೋಬ್ಬರಿ 32,428 ಹುದ್ದೆಗಳ ಭರ್ತಿಗೆ ಎಸ್ಸೆಸ್ಸೆಲ್ಸಿ ಪಾಸಾದ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.
ರಾಜ್ಯದ ಹುಬ್ಬಳ್ಳಿಯ ನೈಋತ್ಯ ರೈಲ್ವೆಯಲ್ಲಿ (Hubli South West Zone) ಒಟ್ಟು 503 ಹುದ್ದೆಗಳಿಗೆ ನೇಮಕ ನಡೆಯಲಿದೆ. ಕನ್ನಡ, ಕೊಂಕಣಿ ಸೇರಿದಂತೆ ದೇಶದ ವಿವಿಧ 13 ಪ್ರಾದೇಶಿಕ ಭಾಷೆಗಳಲ್ಲಿ ಪರೀಕ್ಷೆ ಬರೆಯಲು ಅವಕಾಶ ನೀಡಲಾಗಿದೆ.
ಇದನ್ನೂ ಓದಿ: 5 ಲಕ್ಷ ರೂಪಾಯಿ ಉಚಿತ ಚಿಕಿತ್ಸೆಗೆ ಆಯುಷ್ಮಾನ್ ಕಾರ್ಡ್ ನಿಮ್ಮ ಮೊಬೈಲ್’ನಲ್ಲಿಯೇ ಪಡೆಯಿರಿ
ಹುದ್ದೆಗಳ ವಿವರ : ವರ್ಕ್ಶಾಪ್, ಬ್ರಿಜ್, ಕ್ಯಾರಿಯೇಜ್, ಲೋಕೋ ಶೆಡ್, ಆಪರೇಷನ್ಸ್, ಟಿಎಲ್ ಆ್ಯಂಡ್ ಎಸಿ. ಮಷಿನ್, ಟಿಆರ್‌ಡಿ ವಿಭಾಗಗಳಲ್ಲಿ ಅಸಿಸ್ಟೆಂಟ್ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಅದೇ ರೀತಿ ಪಾಯಿಂಟ್ಸ್ ಮನ್ ಮತ್ತು ಟ್ರಾಕ್ಸ್ ಮೆಂಟೇನರ್ ಹುದ್ದೆಗಳೂ ಖಾಲಿ ಇವೆ ಎಂದು ಆರ್‌ಆರ್‌ಬಿ ತಿಳಿಸಿದೆ.
ವಿದ್ಯಾರ್ಹತೆ : ಮೇಲ್ಕಾಣಿಸಿದ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಎಸ್ಸೆಸ್ಸೆಲ್ಸಿ ತೇರ್ಗಡೆಯಾಗಿರಬೇಕು ಅಥವಾ ಇದಕ್ಕೆ ಪೂರಕ ವಿದ್ಯಾರ್ಹತೆ ಹೊಂದಿರಬೇಕು. ಎನ್‌ಸಿವಿಟಿ ನೀಡುವ ನ್ಯಾಷನಲ್ ಅಪ್ರೆಂಟಿಸ್‌ಷಿಪ್ ಟ್ರೇನಿಂಗ್ ಅಥವಾ ಐಟಿಐ ಪೂರ್ಣಗೊಳಿಸಿದವರೂ ಅರ್ಜಿ ಸಲ್ಲಿಸುವ ಅವಕಾಶವಿದೆ.
ವಯೋಮಿತಿ : 18ರಿಂದ 36 ವರ್ಷದೊಳಗಿನ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಮೀಸಲಾತಿ ವ್ಯಾಪ್ತಿಗೆ ಒಳಪಡುವ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿಯಲ್ಲಿ ಸಡಿಲಿಕೆ ನೀಡಲಾಗುತ್ತದೆ.
ಇದನ್ನೂ ಓದಿ: ₹8 ಲಕ್ಷ ರೂಪಾಯಿ ವರೆಗೆ ಗೂಗಲ್ ಪೇ ಲೋನ್ | ಮೊಬೈಲ್‌ನಲ್ಲೇ ಅರ್ಜಿ ಸಲ್ಲಿಸಿ ಪಡೆಯಿರಿ...
ಅರ್ಜಿ ಶುಲ್ಕ ಎಷ್ಟು?: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ವಿಶೇಷಚೇತನರು, ಮಹಿಳೆಯರು, ತೃತೀಯ ಲಿಂಗಿಗಳು, ಮಾಜಿ ಸೈನಿಕ ಅಭ್ಯರ್ಥಿಗಳಿಗೆ 250 ರೂ. ಹಾಗೂ ಉಳಿದವರು 500 ರೂ. ಶುಲ್ಕ ನಿಗದಿಪಡಿಸಲಾಗಿದೆ. ಇದರಲ್ಲಿ 250 ರೂ. ಶುಲ್ಕವನ್ನು ಸಂಪೂರ್ಣವಾಗಿ ಅಭ್ಯರ್ಥಿಗಳಿಗೆ ಹಿಂತಿರುಗಿಸಲಾಗುತ್ತದೆ. 500 ರೂ. ಶುಲ್ಕ ಪಾವತಿಸಿದ ವಿವಿಧ ವರ್ಗಗಳ ಅಭ್ಯರ್ಥಿಗಳಿಗೆ ಪರೀಕ್ಷೆಯ ನಂತರ 400 ರೂ. ಅನ್ನು ರೀಫಂಡ್ ಮಾಡಲಾಗುತ್ತದೆ.
ಆಯ್ಕೆ ವಿಧಾನ ಹೇಗೆ?: ಕಂಪ್ಯೂಟರ್ ಆಧರಿತ ಪರೀಕ್ಷೆ ಮೂಲಕ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ. ಸಾಮಾನ್ಯ ಅಭ್ಯರ್ಥಿಗಳು ಶೇ.40ರಷ್ಟು, ಒಬಿಸಿ, ಎಸ್‌ಟಿ /ಎಸ್‌ಟಿ ಸೇರಿದಂತೆ ಮೀಸಲಾತಿ ವ್ಯಾಪ್ತಿಗೆ ಒಳಪಡುವ ಇತರ ಅಭ್ಯರ್ಥಿಗಳು ಕನಿಷ್ಠ ಶೇ.30ರಷ್ಟು ಅಂಕ ಪಡೆದರೆ ತೇರ್ಗಡೆ ಎಂದು ಪರಿಗಣಿಸಲಾಗುತ್ತದೆ.
ಇದನ್ನೂ ಓದಿ: ಪದವೀಧರರಿಗೆ 50,00, ಡಿಪ್ಲೊಮಾದವರಿಗೆ 30,000 ರೂ. ಧನಸಹಾಯ | ‘ಯಶಸ್ವಿ’ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ
ಮಾಸಿಕ ವೇತನವೆಷ್ಟು? : ಆರಂಭಿಕ ಮಾಸಿಕ ವೇತನವು 18,000 ರೂ. ಇರಲಿದ್ದು; ವೇತನದ ಜೊತೆಗೆ ಇತರ ಭತ್ಯೆಗಳು ಮತ್ತು ಕೇಂದ್ರ ಸರ್ಕರಿ ಸೌಲಭ್ಯಗಳು ಅನ್ವವಾಗಲಿವೆ.
* ಅರ್ಜಿ ಸಲ್ಲಿಕೆಯ ಕೊನೇ ದಿನಾಂಕ : 22-02-2025
* ಶುಲ್ಕ ಪಾವತಿಗೆ ಕೊನೇ ದಿನಾಂಕ : 23-02-2025
* ಅರ್ಜಿ ತಿದ್ದುಪಡಿ : ಫೆಬ್ರವರಿ 25 - ಮಾರ್ಚ್ 6
ಅಧಿಸೂಚನೆ: Downlod
ಇದನ್ನೂ ಓದಿ: ಸೂರ್ಯ ಘರ್ ಯೋಜನೆಯಡಿ ರಾಜ್ಯದಲ್ಲಿ 4,407 ಮನೆಗಳಿಗೆ ಸಹಾಯಧನ