ಇನ್ಮುಂದೆ ನೀವು ಗೂಗಲ್ ಪೇ (Google Pay) ಮೂಲಕ ವಿದ್ಯುತ್ ಬಿಲ್, ಗ್ಯಾಸ್ ಬಿಲ್ ಕಟ್ಟುತ್ತಿದ್ದರೆ ಇದಕ್ಕಾಗಿ ನಿಗದಿತ ಶುಲ್ಕ ಪಾವತಿಸಬೇಕಾಗುತ್ತದೆ. ಭಾರತದಲ್ಲಿ ಅತಿ ಹೆಚ್ಚು ಬಳಕೆಯಲ್ಲಿರುವ ಗೂಗಲ್ ಪೇ ಇನ್ನು ಮುಂದೆ ಕೆಲ ಆನ್‌ಲೈನ್ ಪಾವತಿಗಳಿಗೆ ಸೇವಾ ಶುಲ್ಕ ವಿಧಿಸಲು ನಿರ್ಧರಿಸಿದೆ.
ಕಳೆದ ವರ್ಷ ಗೂಗಲ್ ಪೇ ಮೊಬೈಲ್ ರೀಚಾರ್ಚ್ಗೆ 3 ರೂ. ಅನಕೂಲಕರ ಶುಲ್ಕ (Convenience fee) ವಿಧಿಸಲು ಆರಂಭಿಸಿತ್ತು. ಇದೀಗ ಗ್ಯಾಸ್ ಬುಕಿಂಗ್, ವಿದ್ಯುತ್ ಬಿಲ್ ಪಾವತಿ ಸೇರಿದಂತೆ ಕೆಲ ಪಾವತಿಗಳಿಗೂ ಶುಲ್ಕ ವಿಧಿಸಲು ಮುಂದಾಗಿದೆ.
ಇದನ್ನೂ ಓದಿ: ವಿಶೇಷ ವೈಯಕ್ತಿಕ ಸಾಲ ಯೋಜನೆಗಳು | ಯಾವುದಕ್ಕೆಲ್ಲ ಸಾಲ ಸಿಗುತ್ತೆ ಗೊತ್ತಾ?
ಅನುಕೂಲಕರ ಶುಲ್ಕ : ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ಬಳಸಿ ವಿದ್ಯುತ್ ಮತ್ತು ಗ್ಯಾಸ್ ಬಿಲ್ ಪಾವತಿಸುವವರು ಇನ್ನು ಮುಂದೆ ಶೇ. 0.5ರಿಂದ ಶೇ. 1ರಷ್ಟು ಹೆಚ್ಚುವರಿ ಅನುಕೂಲಕರ ಶುಲ್ಕ ನೀಡಬೇಕಾಗುತ್ತದೆ.
ಗೂಗಲ್ ಪೇ ಆನ್‌ಲೈನ್ ವಹಿವಾಟಿನಲ್ಲಿ ಶೇ.37ರಷ್ಟು ಪಾಲು ಹೊಂದಿದ್ದು; ಯುಪಿಐ ಪಾವತಿಗಳಲ್ಲಿ 2ನೇ ಸ್ಥಾನ ಹೊಂದಿದೆ. ವಾಲ್‌ಮಾರ್ಟ್ ಒಡೆತನದ ಫೋನ್‌ಪೇ ಮೊದಲ ಸ್ಥಾನದಲ್ಲಿದೆ. ಕಳೆದ ಜನವರಿಯಲ್ಲಿ ಗೂಗಲ್ ಪೇ ಸುಮಾರು 8.26 ಲಕ್ಷ ಕೋಟಿ ರೂ. ವಹಿವಾಟು ನಡೆಸಿದೆ.
ಇದನ್ನೂ ಓದಿ: 8 ಲಕ್ಷ ರೂಪಾಯಿ ವರೆಗೆ ಗೂಗಲ್ ಪೇ ಲೋನ್ | ಮೊಬೈಲ್‌ನಲ್ಲೇ ಅರ್ಜಿ ಸಲ್ಲಿಸಿ ಪಡೆಯಿರಿ...
ಕಾರ್ಡ್ ಮೂಲಕ ಬಿಲ್ ಪಾವತಿಗೆ ಮಾತ್ರ ಶುಲ್ಕ : ಫೋನ್ ಪೇ ಈಗಾಗಲೇ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಮೂಲಕ ನೀರು, ವಿದ್ಯುತ್ ಮತ್ತು ಗ್ಯಾಸ್ ಬಿಲ್‌ಗೆ ಪಾವತಿಗೆ ಅನುಕೂಲಕರ ಶುಲ್ಕ ವಿಧಿಸುತ್ತಿದೆ. ಪೇಟಿಎಂ ಕೂಡ ಯುಪಿಐ ಮತ್ತು ಬಿಲ್ ಪಾವತಿಗೆ 1 ರೂ. ಯಿಂದ 40 ರೂ.ವರೆಗೆ ಶುಲ್ಕ ವಿಧಿಸುತ್ತಿದೆ. ಇದೀಗ ಗೂಗಲೇ ಪೇ ಕೂಡ ಇದೇ ಹಾದಿ ಹಿಡಿದಿದೆ.
ಅಂದಹಾಗೇ ಕಾರ್ಡ್ ಮೂಲಕ ಬಿಲ್ ಪಾವತಿಸಿದರೆ ಮಾತ್ರ ಈ ಶುಲ್ಕ ಅನ್ವಯವಾಗಲಿದೆ. ಬ್ಯಾಂಕ್‌ಗೆ ಲಿಂಕ್ ಆಗಿರುವ ಯುಪಿಐ ಮೂಲಕ ಬಿಲ್ ಪಾವತಿಸಿದರೆ ಹೆಚ್ಚುವರಿ ಶುಲ್ಕ ಇರುವುದಿಲ್ಲ. ಈ ಸೇವೆ ಉಚಿತವಾಗಿ ಮುಂದುವರಿಯಲಿದೆ ಎಂದು ಗೂಗಲ್ ಪೇ ಹೇಳಿದೆ.
ಇದನ್ನೂ ಓದಿ: ಸೂರ್ಯ ಘರ್ ಯೋಜನೆಯಡಿ ರಾಜ್ಯದಲ್ಲಿ 4,407 ಮನೆಗಳಿಗೆ ಸಹಾಯಧನ