ದೇಶಾದ್ಯಂತ ಸೈಬರ್ ವಂಚನೆಗಳು ಮಿತಿ ಮೀರುತ್ತಿವೆ. ಹಣಕಾಸು ಸೈಬರ್ ಕ್ರೈಮ್ ಅಂತೂ ಸರ್ವೇಸಾಮಾನ್ಯ ಅನ್ನುವಂತಾಗಿದೆ. ಇಂತಹ ವಂಚನೆಗಳನ್ನು ತಡೆಗಟ್ಟಲು ಸರ್ಕಾರ ವಿವಿಧ ಕ್ರಮಗಳನ್ನು ಕೈಗೊಳ್ಳುತ್ತಿದ್ದು; ಈ ಸಂಬಂಧ ಮೊಬೈಲ್ ಸಿಮ್ ಕಾರ್ಡ್ (Mobile SIM Card) ಖರೀದಿ ವಿಚಾರದಲ್ಲಿ ಹೊಸ ನಿಯಮ ಜಾರಿಗೊಳಿಸಿದೆ.
ಸರ್ಕಾರ ಸಿಮ್ ಕಾರ್ಡ್ ಖರೀದಿ ನಿಯಮಗಳನ್ನು ಮತ್ತಷ್ಟು ಬಿಗಿಗೊಳಿಸಿದ್ದು; ಇದೇ ಏಪ್ರಿಲ್ 1ರಿಂದ ಹೊಸ ಸಿಮ್ ಕಾರ್ಡ್ ಖರೀದಿ ಕ್ರಮ ಬಹಳಷ್ಟು ಕಠಿಣವಾಗಲಿದೆ. ದೇಶದ ಎಲ್ಲಾ ಟೆಲಿಕಾಂ ಕಂಪನಿಗಳು ಗ್ರಾಹಕರಿಗೆ ಸಿಮ್ ಕಾರ್ಡ್ಗಳನ್ನು ಮಾರಾಟ ಮಾಡುವವರನ್ನು ನೋಂದಾಯಿಸಬೇಕು ಎಂಬ ನಿಯಮ ಈ ಹಿಂದೆಯೇ ಜಾರಿಯಾಗಿದ್ದು; ಇದಕ್ಕಾಗಿ ಮಾರ್ಚ್ 31, 2025ರ ವರೆಗೆ ಗಡುವು ವಿಸ್ತರಿಸಲಾಗಿದೆ.
ಇದನ್ನೂ ಓದಿ: ಮನೆಗೆ ಉಚಿತ ಸೋಲಾರ್ ಕರೆಂಟ್ ಪಡೆಯಲು ಈಗಲೇ ಅರ್ಜಿ ಹಾಕಿ | ಕರ್ನಾಟಕದಲ್ಲಿ 5,14 ಲಕ್ಷ ಕುಟುಂಬಗಳು ನೋಂದಣಿ
ಹೊಸ ನಿಯಮಗಳೇನು?: ಹೊಸ ನಿಯಮಗಳ ಪ್ರಕಾರ, ಟೆಲಿಕಾಂ ಕಂಪನಿಗಳು ತಮ್ಮ ಕಂಪನಿಯ ಸಿಮ್ ಕಾರ್ಡ್ ವಿತರಕರು, ಏಜೆಂಟರು ಹಾಗೂ ಮಾಲೀಕರನ್ನು ನೋಂದಾಯಿಸಬೇಕು. ನೋಂದಣಿಗೆ ಮಾರ್ಚ್ 31 ಅಂತಿಮ ಗಡುವಾಗಿದ್ದು; ಅಷ್ಟರೊಳಗೆ ನೋಂದಣಿ ಮಾಡಿಕೊಳ್ಳದಿದ್ದರೆ ಅಂಥವರು ಏಪ್ರಿಲ್ 1ರ ನಂತರ ಸಿಮ್ ಕಾರ್ಡ್ಗಳನ್ನು ಮಾರಾಟ ಮಾಡಲು ಸಾಧ್ಯವಿಲ್ಲ.
ಅದೇ ರೀತಿ ಒಬ್ಬ ವ್ಯಕ್ತಿ ಒಂಬತ್ತು ಸಿಮ್ ಕಾರ್ಡುಗಳನ್ನು ಹೊಂದಲು ಮಾತ್ರ ಅವಕಾಶವಿದೆ. ನಿಯಮ ಮೀರಿ ಹೆಚ್ಚಿನ ಸಿಮ್ ಕಾರ್ಡ್ ಹೊಂದಿದ ವ್ಯಕ್ತಿಯ ವಿರುದ್ಧ ಕ್ರಮ ಜರುಗಿಸಲಾಗುತ್ತದೆ. ಮಾತ್ರವಲ್ಲ ಅಂಥವರಿಗೆ ಹೆಚ್ಚಿನ ಸಿಮ್ ಕಾರ್ಡ್ ಮಾರಾಟ ಮಾಡಿದವರ ಅನುಮತಿ ಕೂಡ ರದ್ದಾಗಲಿದೆ. ಪ್ರಸ್ತುತ, ಒಬ್ಬ ವ್ಯಕ್ತಿಯು ಒಂಬತ್ತು ಸಿಮ್ ಕಾರ್ಡ್ಗಳನ್ನು ಮಾತ್ರ ಹೊಂದಬಹುದು.
ಇದನ್ನೂ ಓದಿ: ಗೃಹಲಕ್ಷ್ಮಿ ಯೋಜನೆ ಹಣ ಜಮಾ | ಮಹಿಳಾ ಸಚಿವರು ಹೇಳಿದ್ದೇನು?
ನೋಂದಣಿ ಕಾರ್ಯ ಚುರುಕು: ಈಗಾಗಲೇ ಖಾಸಗಿ ಟೆಲಿಕಾಂ ಕಂಪನಿಗಳಾದ ರಿಲಯನ್ಸ್ ಜಿಯೋ, ವೊಡಾಫೋನ್ ಐಡಿಯಾ ಮತ್ತು ಭಾರತಿ ಏರ್‌ಟೆಲ್ ತಮ್ಮ ಕಂಪನಿ ಸಿಮ್ ಕಾರ್ಡ್ ವಿತರಕರು, ಮಾರಾಟಗಾರ ಹಾಗೂ ಏಜೆಂಟರುಗಳನ್ನು ನೋಂದಾಯಿಸುತ್ತಿವೆ. ಈ ಪಟ್ಟಿಯಲ್ಲಿ ಸರ್ಕಾರಿ ಸ್ವಾಮ್ಯದ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (BSNL) ಹಿಂದೆ ಉಳಿದಿದೆ.
BSNL ಕಂಪನಿಗೆ ಸಹಾಯ ಮಾಡಲು, ಕೇಂದ್ರ ಸರ್ಕಾರ ಸಿಮ್ ಡೀಲರ್ ನೋಂದಣಿ ಅವಧಿಯನ್ನು ಮತ್ತೆ ಎರಡು ತಿಂಗಳು ವಿಸ್ತರಿಸಿದೆ. ಏಪ್ರಿಲ್ 1, 2025 ರಿಂದ, ಅಧಿಕೃತ ಸಿಮ್ ಕಾರ್ಡ್ ಸಗಟು ವ್ಯಾಪಾರಿಗಳು ಮಾತ್ರ ಗ್ರಾಹಕರಿಗೆ ಸಿಮ್ ಕಾರ್ಡ್’ಗಳನ್ನು ಮಾರಾಟ ಮಾಡಲು ಅನುಮತಿಸಲಾಗುತ್ತದೆ. ಈ ಕ್ರಮವು ಸೈಬರ್ ವಂಚನೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಇದನ್ನೂ ಓದಿ: ವಿಶೇಷ ವೈಯಕ್ತಿಕ ಸಾಲ ಯೋಜನೆಗಳು | ಯಾವುದಕ್ಕೆಲ್ಲ ಸಾಲ ಸಿಗುತ್ತೆ ಗೊತ್ತಾ?