ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ (BESCOM) ಒಂದು ವರ್ಷದ ಅವಧಿಗೆ ಡಿಪ್ಲೊಮಾ, ಬಿಇ, ಬಿ.ಟೆಕ್, ಬಿಎ ಸೇರಿ ಇತರ ಯಾವುದೇ ಪದವಿ ಪೂರ್ಣಗೊಳಿಸಿರುವ ಅಭ್ಯರ್ಥಿಗಳಿಗಾಗಿ ಶಿಶಿಕ್ಷು ತರಬೇತಿಗೆ (Apprenticeship) ಅಧಿಸೂಚನೆ ಹೊರಡಿಸಿದೆ.
ಸ್ಥಾನಗಳ ವಿವರ : ಇಂಜಿನಿಯರಿ೦ಗ್ ಪದವೀಧರರಿಗೆ 130 ಸ್ಥಾನಗಳು, ನಾನ್ ಇಂಜನಿಯರಿ೦ಗ್ ಪದವೀಧರರಾದ ಬಿಎ, ಬಿಕಾಂ, ಬಿಎಸ್‌ಸಿ, ಬಿಬಿಎ, ಬಿಸಿಎ ಮತ್ತು ಬಿಬಿಎಂ ಅಭ್ಯರ್ಥಿಗಳಿಗೆ 305 ಸ್ಥಾನಗಳು ಮತ್ತು ಡಿಪ್ಲೊಮಾ ಅಭ್ಯರ್ಥಿಗಳಿಗೆ 25 ಸ್ಥಾನಗಳು ಸೇರಿ ಒಟ್ಟು 510 ಸ್ಥಾನಗಳಿಗೆ ಅವಕಾಶ ನೀಡಲಾಗಿದೆ.
ಇದನ್ನೂ ಓದಿ: ನಿಮ್ಮ ಹೆಸರಿನಲ್ಲಿ ಯಾರಾದರೂ ನಕಲಿ ಸಿಮ್ ಖರೀದಿಸಿದ್ದಾರಾ? ಮೋಸ ಹೋಗುವ ಮೊದಲು ಮೊಬೈಲ್‌ನಲ್ಲೇ ಚೆಕ್ ಮಾಡಿಕೊಳ್ಳಿ...
ಯಾರು ಅರ್ಹರು? : ಅಭ್ಯರ್ಥಿಯು 2020, 2021, 2022, 2023 ಹಾಗೂ 2024ರಲ್ಲಿ ಕನಿಷ್ಠ ಉತ್ತೀರ್ಣ ಅಂಕವನ್ನು ಗಳಿಸಿ ಪದವಿ ಅಥವಾ ಡಿಪ್ಲೊಮಾವನ್ನು ಪೂರ್ಣಗೊಳಿಸಿರಬೇಕು. ಈಗಾಗಲೇ ಅಪ್ರೆಂಟೀಸ್‌ಶಿಪ್ ಪಡೆದಿರುವವರು, ಒಂದು ವರ್ಷಕ್ಕೂ ಹೆಚ್ಚಿನ ಉದ್ಯೋಗ ಅನುಭವ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವಂತಿಲ್ಲ.
ವಯೋಮಿತಿ ವಿವರ: ಬೆಸ್ಕಾಂ ಅಫ್ರೆಂಟೀಸ್ ಸ್ಥಾನಕ್ಕೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯ ವಯೊಮಿತಿ 18 ವರ್ಷ ಮೇಲ್ಪಟ್ಟಿರಬೇಕು. ಎಲ್ಲ ಸ್ಥಾನಗಳಿಗೂ ಆಯಾ ವರ್ಗದ ಮೀಸಲಾತಿ ಅನ್ವಯವಾಗಲಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವಾಗ ನಮೂದಿಸಲಾದ ಮೀಸಲಾತಿಯನ್ನಷ್ಟೇ ಪರಿಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಇದಕ್ಕಾಗಿ ಪೂರಕ ದಾಖಲೆಗಳನ್ನು ಒದಗಿಸಬೇಕು. ಇಲ್ಲದಿದ್ದರೆ ಸಾಮಾನ್ಯ ವರ್ಗದ ಅಭ್ಯರ್ಥಿ ಎಂದು ಪರಿಗಣಿಸಲಾಗುತ್ತದೆ.
ವಿದ್ಯಾರ್ಹತೆ : ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಹಾಗೂ ಉನ್ನತ ಶಿಕ್ಷಣ ಸಂಸ್ಥೆಯಿ೦ದ ಬಿಇ, ಬಿಟೆಕ್ - ಇ ಆ್ಯಂಡ್ ಇ ಇಂಜಿನಿಯರಿ೦ಗ್‌ನಲ್ಲಿ ಟೆಕ್ನಿಕಲ್ ಕೋರ್ಸ್, ಬಿಎ, ಬಿಎಸಿ, ಬಿಕಾಮ್, ಬಿಬಿಎ, ಬಿಸಿಎ, ಬಿಬಿಎಂ, ಬಿಇ ಅಥವಾ ಬಿಟೆಕ್ ಪದವಿಯಲ್ಲಿ ತೇರ್ಗಡೆ ಹೊಂದಿರಬೇಕು.
ಡಿಪ್ಲೊಮಾ ಉತ್ತೀರ್ಣರು ಯಾವುದೇ ವಿಭಾಗದಲ್ಲಿ ಪಾಲಿಟೆಕ್ನಿಕ್ ಕಾಲೇಜುಗಳಲ್ಲಿ ಮೂರು ವರ್ಷದ ಶಿಕ್ಷಣ ಪೂರೈಸಿರಬೇಕು. ಅರ್ಜಿ ಸಲ್ಲಿಸುವ ಅಂತಿಮ ದಿನಾಂಕದ ಮೊದಲು ಶೈಕ್ಷಣಿಕ ಪ್ರಮಾಣಪತ್ರವನ್ನು ಹೊಂದಿರಬೇಕು.
ಇದನ್ನೂ ಓದಿ: ಗ್ರಾಮ ಪಂಚಾಯತಿ ಸಮಸ್ಯೆಗಳಿಗೆ ವಾಟ್ಸಾಪ್’ನಲ್ಲೇ ಪರಿಹಾರ ಪಡೆಯಿರಿ | ಈ ವಾಟ್ಸಾಪ್ ನಂಬರ್‌ಗೆ ಮೆಸೇಜ್ ಮಾಡಿದರೆ ಪರಿಹಾರ ಗ್ಯಾರಂಟಿ
ಆಯ್ಕೆ ಪ್ರಕ್ರಿಯೆ ಹೇಗೆ?: ಚೆನ್ನೈನಲ್ಲಿರುವ ದಕ್ಷಿಣ ವಿಭಾಗದ ಬೋರ್ಡ್ ಸಂಸ್ಥೆಗೆ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಯ ಹೊಣೆಗಾರಿಕೆ ನೀಡಲಾಗಿದೆ. ಅಭ್ಯರ್ಥಿಗಳು ಪಡೆದಿರುವ ಅಂಕಗಳ ಆಧಾರದಲ್ಲಿ ಆನ್‌ಲೈನ್‌ನಲ್ಲಿ ಸಲ್ಲಿಕೆಯಾಗಿರುವ ಅರ್ಜಿಗಳನ್ನು ಪರಿಷ್ಕರಿಸಲಾಗುತ್ತದೆ. ಆಯ್ಕೆಯಾದವರಿಗೆ ಇ-ಮೇಲ್ ಮೂಲಕ ಮಾಹಿತಿ ನೀಡಲಾಗುತ್ತದೆ.
ಇ-ಮೇಲ್ ಸ್ವೀಕರಿಸಿದವರು ದಾಖಲೆಗಳ ಪರಿಶೀಲನೆಗೆ ಉಪ ಪ್ರಧಾನ ವ್ಯವಸ್ಥಾಪಕರ ಕಚೇರಿ, ಮಾನವ ಸಂಪನ್ಮೂಲ ಅಭಿವೃದ್ಧಿ ಕೇಂದ್ರ, ಬೆ.ವಿ.ಕಂ. ಟ್ರೀ ಪಾರ್ಕ್ ಎದುರು, ಬಿಜಿಎಸ್ ವರ್ಲ್ಡ್ ಸ್ಕೂಲ್ ಹಿಂಭಾಗ, ಬಿಎಂ ರಸ್ತೆ, ರಾಮನಗರ-562159 ಈ ವಿಳಾಸಕ್ಕೆ ಖುದ್ದಾಗಿ ಹಾಜರಾಗಬೇಕು.
ಇದನ್ನೂ ಓದಿ: ಕಡಿಮೆ ಬಡ್ಡಿ ದರದಲ್ಲಿ ಗೃಹ ಸಾಲ ಪಡೆಯುವ ಸರಳ ವಿಧಾನ | ಸರಳ ಬಡ್ಡಿಯಲ್ಲಿ ಗೃಹಸಾಲ ನೀಡುವ ಬ್ಯಾಂಕ್‌ಗಳ ಪಟ್ಟಿ
ಅರ್ಜಿ ಸಲ್ಲಿಕೆ ಹೇಗೆ?: ಆಸಕ್ತ ಅಭ್ಯರ್ಥಿಗಳು bescom.org ಪೋರ್ಟಲ್‌ಗೆ ಭೇಟಿ ನೀಡಿ ಇ-ಮೇಲ್ ಹಾಗೂ ಇತರ ಮಾಹಿತಿ ದಾಖಲಿಸಿ ಬೆವಿಕಂ ಲಾಗಿನ್ ಐಡಿ ರಚಿಸಿಕೊಳ್ಳಬೇಕು. ಬಳಿಕ ಸ್ಟುಡೆಂಟ್ ಲಾಗಿನ್‌ನಲ್ಲಿ ಬೆಂಗಳೂರು ಎಲೆಕ್ಟ್ರಿಸಿಟಿ ಸಪ್ಲೈ ಕಂಪನಿ ಲಿಮಿಟೆಡ್’ನಲ್ಲಿನ ಅವಕಾಶಗಳಿಗೆ Apply ಮಾಡಬೇಕು.
ಈಗಾಗಲೇ ಎನ್‌ಎಟಿಎಸ್ ಸ್ಟುಡೆಂಟ್ ಲಾಗಿನ್ ಹೊಂದಿರುವವರು ನೇರವಾಗಿ ಈ ತರಬೇತಿಗೆ ನೋಂದಣಿ ಮಾಡಿಕೊಳ್ಳಬಹುದು. ವೆಬ್ ಪೋರ್ಟಲ್‌ನಲ್ಲಿ ಅರ್ಜಿ ಸಲ್ಲಿಸುವ ಸಂಬ೦ಧಿತ ಪ್ರಶ್ನೆಗಳಿಗೆ tudentquery@boat-srp.com ಹಾಗೂ knplacement@boat-srp.com ಈ ಇ-ಮೇಲ್’ಗೆ ಸಂಪರ್ಕಿಸಬಹುದು. ನಿಗದಿತ ದಿನಾಂಕದ ಮೊದಲು ಅಥವಾ ನಂತರ ಬಂದ ಅರ್ಜಿ ಅಥವಾ ಯಾವುದೇ ಅಪೂರ್ಣ, ತಪ್ಪಾದ ಆನ್‌ಲೈನ್ ಅರ್ಜಿಯನ್ನು ಗಣನೆಗೆ ತೆಗೆದುಕೊಳ್ಳುವುದಿಲ್ಲ.
ಸ್ಟೈಪೆಂಡ್ ಎಷ್ಟು?: ಪದವೀಧರರಿಗೆ 9,008 ರೂ. ಹಾಗೂ ಡಿಪ್ಲೊಮಾ 8000 ರೂ. ಸ್ಟೈಪೆಂಡ್ ನೀಡಲಾಗುತ್ತದೆ. ತರಬೇತಿ ಹೊಂದಲು ಆಸಕ್ತಿ ಮತ್ತು ಅರ್ಹತೆ ಹೊಂದಿರುವ ಅಭ್ಯರ್ಥಿಗಳು ಫೆಬ್ರವರಿ 20ರೊಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಪ್ರಮುಖ ದಿನಾಂಕಗಳು
* ಅರ್ಜಿ ಸಲ್ಲಿಸಲು ಕೊನೇ ದಿನಾಂಕ: 20-02-2025
* ಆಯ್ಕೆಯಾದ ಅಭ್ಯರ್ಥಿಗಳ ಪಟ್ಟಿ ಪ್ರಕಟಣೆ: 01-03-2025
* ದಾಖಲಾತಿ ಪರಿಶೀಲನೆ: 10-03-2025 ರಿಂದ 12-03-2025
ಅಧಿಸೂಚನೆ : Download
ಇದನ್ನೂ ಓದಿ: ಹುಬ್ಬಳ್ಳಿಯ ನೈಋತ್ಯ ರೈಲ್ವೆಯಲ್ಲಿ 503 ಹುದ್ದೆಗಳಿಗೆ ಅರ್ಜಿ ಆಹ್ವಾನ | ಎಸ್ಸೆಸ್ಸೆಲ್ಸಿ ಪಾಸಾಗಿದ್ರೆ ಅರ್ಜಿ ಹಾಕಿ...