Schemes

Panchamitra whatsapp chat karnataka : ಗ್ರಾಮ ಪಂಚಾಯತಿ ಸಮಸ್ಯೆಗಳಿಗೆ ವಾಟ್ಸಾಪ್’ನಲ್ಲೇ ಪರಿಹಾರ ಪಡೆಯಿರಿ | ಈ ವಾಟ್ಸಾಪ್ ನಂಬರ್‌ಗೆ ಮೆಸೇಜ್ ಮಾಡಿದರೆ ಪರಿಹಾರ ಗ್ಯಾರಂಟಿ

Panchamitra whatsapp chat karnataka : ಗ್ರಾಮ ಪಂಚಾಯತಿ ಸಮಸ್ಯೆಗಳಿಗೆ ವಾಟ್ಸಾಪ್’ನಲ್ಲೇ ಪರಿಹಾರ ಪಡೆಯಿರಿ | ಈ ವಾಟ್ಸಾಪ್ ನಂಬರ್‌ಗೆ ಮೆಸೇಜ್ ಮಾಡಿದರೆ ಪರಿಹಾರ ಗ್ಯಾರಂಟಿ

ಇತ್ತೀಚೆಗೆ ರಾಜ್ಯ ಸರ್ಕಾರ ರಾಜ್ಯದ ಗ್ರಾಮ ಪಂಚಾಯತಿಗಳ (Gram Panchayat) ಸಮಸ್ಯೆಗಳಿಗೆ ಪರಿಹಾರ ಪಡೆಯಲು ಮತ್ತು ಸೇವೆಗಳಿಗಾಗಿ ಆರಂಭಿಸಿರುವ ‘ಪಂಚಮಿತ್ರ ವ್ಯಾಟ್ಸಪ್ ಚಾಟ್’ (Panchmitra Whatsapp Chat) ಮತ್ತು ‘ಪಂಚಮಿತ್ರ ಪೋರ್ಟಲ್’ (Panchmitra Portal) ಗ್ರಾಮೀಣಾಭಿವೃದ್ಧಿಯ ಚಹರೆಯನ್ನೇ ಬದಲಿಸಿದೆ. 


ಈ ವೇದಿಕೆಯ ಮೂಲಕ ಸಾರ್ವಜನಿಕರು ಗ್ರಾಮೀಣಾಭಿವೃದ್ಧಿ ಇಲಾಖೆಗೆ ಸಂಬಂಧಿಸಿದ ಬೇರೆ ಬೇರೆ ಇಲಾಖೆಗಳ ಹಲವು ಸೇವೆಗಳನ್ನು ವಾಟ್ಸಾಪ್ ಚಾಟ್ ಮುಖಾಂತರವೇ ಪಡೆಯಬಹುದು. ಕುಂದು-ಕೊರತೆಗಳ ದೂರು ದಾಖಲಿಸಿ ಮೊಬೈಲ್‌ನಲ್ಲಿಯೇ ಪರಿಹಾರ ಪಡೆಯಬಹುದಾಗಿದೆ.


ಕುಳಿತಲ್ಲೇ ಹಲವು ಸೇವೆಗಳು


ರಾಜ್ಯದ 5,991 ಗ್ರಾಮ ಪಂಚಾಯತಿಗಳಲ್ಲಿ ಈ ಸೇವೆ ಆರಂಭವಾಗಿದ್ದು; ಗ್ರಾಮ ಪಂಚಾಯಿತಿಗಳಿಗೆ ಸಂಬAಧಿಸಿದ ಸೇವೆಗಳಿಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು, ಸಲ್ಲಿಸಿದ ಅರ್ಜಿಗಳ ಸ್ಥಿತಿಗತಿ ಪರಿಶೀಲಿಸಲು ಹಾಗೂ ಗ್ರಾಮ ಪಂಚಾಯತಿಗಳಿಗೆ ಸಂಬ೦ಧಿಸಿದ ಕುಂದುಕೊರತೆ ದಾಖಲಿಸಬಹುದಾಗಿದೆ.


ಇಲ್ಲಿ ದಾಖಲಾಗುವ ದೂರುದಾರರ ಹೆಸರನ್ನು ಕೂಡ ಗೌಪ್ಯವಾಗಿ ಇಡಲಾಗುತ್ತದೆ. ಹೀಗಾಗಿ ಜನರು ತಮ್ಮ ಗ್ರಾಮ ಪಂಚಾಯತಿಯ ಸಮಸ್ಯೆಗಳ ಬಗ್ಗೆ ನಿರ್ಭಯವಾಗಿ ದೂರು ನೀಡಬಹುದಾಗಿದೆ.


ಇದನ್ನೂ ಓದಿ: ಪೋಸ್ಟ್ ಆಫೀಸ್’ನಲ್ಲಿ ಕೇವಲ 399 ರೂ. ಕಟ್ಟಿದರೆ ಸಿಗಲಿದೆ 10 ಲಕ್ಷ ರೂ. ಆರ್ಥಿಕ ಸಹಾಯ | ಸಂಪೂರ್ಣ ಮಾಹಿತಿ ಇಲ್ಲಿದೆ...


ಯಾವೆಲ್ಲ ಸೇವೆಗಳು ಸಿಗಲಿವೆ?


ಗ್ರಾಮ ಪಂಚಾಯಿತಿಗೆ ಸಂಬ೦ಧಿಸಿದ೦ತೆ 17 ಸೇವೆಗಳು ಮತ್ತು ಸರ್ಕಾರದ ಇತರೆ ಇಲಾಖೆ ಸಂಬ೦ಧಿಸಿದ 72 ಸೇವೆಗಳು ಸೇರಿ ಒಟ್ಟು 89 ಸರ್ಕಾರಿ ಸೇವೆಗಳು ಪಂಚಮಿತ್ರ ಪೋರ್ಟಲ್ ಮತ್ತು ಪಂಚಮಿತ್ರ ವಾಟ್ಸಪ್ ಚಾಟ್ ಮುಖಾಂತರ ಸಾರ್ವಜನಿಕರಿಗೆ ಲಭ್ಯವಿರಲಿವೆ. ಪ್ರಮುಖ ಸೇವೆಗಳ ವಿವರ ಕೆಳಗಿನಂತಿದೆ:


* ಕಟ್ಟಡ ನಿರ್ಮಾಣ ಪರವಾನಗಿ

* ಹೊಸ ನೀರು ಪೂರೈಕೆ ಸಂಪರ್ಕ

* ನೀರು ಸರಬರಾಜಿನ ಸಂಪರ್ಕ ಕಡಿತ

* ಕುಡಿಯುವ ನೀರಿನ ನಿರ್ವಹಣೆ

* ಬೀದಿ ದೀಪದ ನಿರ್ವಹಣೆ

* ಗ್ರಾಮ ನೈರ್ಮಲ್ಯ ನಿರ್ವಹಣೆ

* ಉದ್ದಿಮೆ ಪರವಾನಗಿ

* ಸ್ವಾಧೀನ ಪ್ರಮಾಣ ಪತ್ರ

* ನಾನಾ ಸೇವೆ ಸಂಬ೦ಧ ರಸ್ತೆ ಅಗೆತಕ್ಕೆ ಅನುಮತಿ

* ಕೈಗಾರಿಕೆ, ಕೃಷಿ ಆಧಾರಿತ ಉತ್ಪಾದನಾ ಘಟಕ ಸ್ಥಾಪನೆಗೆ ಅನುಮತಿ

* ನಿರಾಕ್ಷೇಪಣಾ ಪತ್ರ

* ನರೇಗಾ ಯೋಜನೆಯಡಿ ಜಾಬ್ ಕಾರ್ಡ್ ವಿತರಣೆ

* ಕಾರ್ಮಿಕರಿಗೆ ಉದ್ಯೋಗ ಕಲ್ಪಿಸುವುದು

* ಹೊಸ ಇಲ್ಲವೇ ಅಸ್ತಿತ್ವದಲ್ಲಿರುವ ದೂರಸಂಪರ್ಕ ಮೂಲಸೌಕರ್ಯ ಗೋಪುರಕ್ಕೆ ಅನುಮತಿ

* ನೆಲದ ಒಳಗಿನ ಕೇಬಲ್ ಅಳವಡಿಕೆಗೆ ಅನುಮತಿ

* ಜತೆಗೆ ನಮೂನೆ 9/11ಎ, ನಮೂನೆ 11ಬಿ


ಇದನ್ನೂ ಓದಿ: ಸೋಲಾರ್ ಕರೆಂಟ್ ಕೃಷಿ | ಬೆಸ್ಕಾಂ ಸೋಲಾರ್ ಸ್ಕೀಮ್ | ನಿಮ್ಮ ಮನೆ ಮೇಲೆಯೇ ವಿದ್ಯುತ್ ಉತ್ಪಾದಿಸಿ ಮಾರಾಟ ಮಾಡಿ...


ಗ್ರಾಮ ಪಂಚಾಯತಿ ಸಮಸ್ಯೆಗಳಿಗೆ ಪರಿಹಾರ


ವಾಟ್ಸಾಪ್ ಮೂಲಕ ಗ್ರಾಮ ಪಂಚಾಯತಿಗಳಿಗೆ ಸಂಬ೦ಧಿಸಿದ೦ತೆ ಕುಡಿಯುವ ನೀರು, ರಸ್ತೆ ಮತ್ತು ಸೇತುವೆಗಳ ದುರಸ್ತಿ, ಉದ್ಯೋಗ ಖಾತ್ರಿ ಯೋಜನೆಗೆ ಮತ್ತು ಪಂಚಾಯತ್ ರಾಜ್ ವಿಷಯಗಳಿಗೆ ಸಂಬAಧಿತ ಕುಂದುಕೊರತೆ ದಾಖಲಿಸಿ ಪರಿಹಾರ ಕಂಡುಕೊಳ್ಳಬಹುದಾಗಿದೆ. ಕುಂದು-ಕೊರತೆಯ ಸ್ಥಿತಿ-ಗತಿಯನ್ನು ಕಾಲಕಾಲಕ್ಕೆ ಪರಿಶೀಲಿಸಲೂ ಅವಕಾಶ ಕಲ್ಪಿಸಲಾಗಿದೆ.


ಇವುಗಳ ಜೊತೆಗೆ ಚುನಾಯಿತ ಪ್ರತಿನಿಧಿಗಳ ವಿವರ, ಸಿಬ್ಬಂದಿ ಮಾಹಿತಿ, ಪೂರ್ಣಗೊಂಡ ಗ್ರಾಪಂ ಸಭೆಗಳ ನಡಾವಳಿ, ಗ್ರಾಪಂ ಮುಂಬರುವ ಸಭೆಗಳ ಮಾಹಿತಿ, ಆದಾಯ ಸಂಗ್ರಹ ವಿವರ, ಸೇವೆಗಳ ವಿವರಗಳು, ಸ್ವ ಸಹಾಯ ಗುಂಪಿನ ವಿವರ ಸೇರಿದಂತೆ ಹಲವು ಮಾಹಿತಿಯನ್ನು ಕೂಡ ಪಡೆದುಕೊಳ್ಳಬಹುದಾಗಿದೆ.


ಇದನ್ನೂ ಓದಿ: ಮನೆಗೆ ಉಚಿತ ಸೋಲಾರ್ ಕರೆಂಟ್ ಪಡೆಯಲು ಈಗಲೇ ಅರ್ಜಿ ಹಾಕಿ | ಕರ್ನಾಟಕದಲ್ಲಿ 5,14 ಲಕ್ಷ ಕುಟುಂಬಗಳು ನೋಂದಣಿ


ವಾಟ್ಸಪ್ ಚಾಟ್‌ನಲ್ಲಿ ಸೇವೆ ಪಡೆಯುವುದು ಹೇಗೆ?


ಹಂತ 1: ರಾಜ್ಯ ಸರ್ಕಾರದ ‘ಪಂಚಮಿತ್ರ ವಾಟ್ಸಪ್ ಚಾಟ್’ ವ್ಯವಸ್ಥೆಯನ್ನು ಬಳಸಿಕೊಂಡು ಎಲ್ಲಾ ಸೇವೆಗಳನ್ನು ಪಡೆಯಲು 82775 06000 ವಾಟ್ಸಪ್ ನಂಬರಿಗೆ ಮೊದಲು ‘ಹಾಯ್’ (Hi) ಎಂಬ ಸಂದೇಶ ಕಳುಹಿಸಿ.


ಹಂತ 2: ನಂತರದಲ್ಲಿ ನಿಮಗೆ ಭಾಷೆಗಳ ಪಟ್ಟಿಯನ್ನು ತೋರಿಸಲಾಗುತ್ತದೆ. ಅದರಲ್ಲಿ ನಿಮಗೆ ಅನುಕೂಲಕರವಾದ ಭಾಷೆ ಆಯ್ಕೆ ಮಾಡಿ, ಜಿಲ್ಲೆ, ತಾಲ್ಲೂಕು ಮತ್ತು ಗ್ರಾಮ ಪಂಚಾಯಿತಿಯನ್ನು ಸೆಲೆಕ್ಟ್ ಮಾಡಿಕೊಳ್ಳಬೇಕು.


ಹಂತ 3: ನೀವು ಸೆಲೆಕ್ಟ್ ಮಾಡಿಕೊಂಡ ಗ್ರಾಮ ಪಂಚಾಯಿತಿಯಲ್ಲಿ ನಿಮಗೆ ಬೇಕಾಗಿರುವ ಸೇವೆಗಳ ಮಾಹಿತಿ ಅಥವಾ ಕುಂದು ಕೊರತೆಯನ್ನು ಸೆಲೆಕ್ಟ್ ಮಾಡಿಕೊಳ್ಳುವ ಮೂಲಕ ಅಹವಾಲು ಸಲ್ಲಿಸಬಹುದಾಗಿದೆ.