Schemes

Surya Ghar Scheme - ಸೂರ್ಯ ಘರ್ ಯೋಜನೆಗೆ ವರ್ಷ | ಒಂದು ಕೋಟಿ ಮನೆಗಳಿಗೆ ಸೋಲಾರ್ ಕರೆಂಟ್

Surya Ghar Scheme - ಸೂರ್ಯ ಘರ್ ಯೋಜನೆಗೆ ವರ್ಷ | ಒಂದು ಕೋಟಿ ಮನೆಗಳಿಗೆ ಸೋಲಾರ್ ಕರೆಂಟ್

ಮನೆಗಳಿಗೆ ಸೋಲಾರ್ ವಿದ್ಯುತ್ (Solar Power) ಒದಗಿಸುವ ಕೇಂದ್ರ ಸರ್ಕಾರದ ‘ಪ್ರಧಾನಮಂತ್ರಿ ಸೂರ್ಯ ಫರ್: ಮುಫ್ತ್ ಬಿಜ್ಲಿ’ (PMSGMBY) ಯೋಜನೆ ಕಳೆದ ಫೆಬ್ರವರಿ 13ಕ್ಕೆ ಒಂದು ವರ್ಷವನ್ನು ಪೂರೈಸಿದೆ. 2024ರ ಫೆಬ್ರವರಿ 13ರಂದು ಕೇಂದ್ರ ಸರ್ಕಾರ ಪ್ರಾರಂಭಿಸಿದ ಈ ಯೋಜನೆಯು ಮಾರ್ಚ್ 2027ರ ವೇಳೆಗೆ ಒಂದು ಕೋಟಿ ಮನೆಗಳಲ್ಲಿ ಮೇಲ್ಛಾವಣಿ ಸೌರ ಫಲಕಗಳನ್ನು (Rooftop solar panel) ಸ್ಥಾಪಿಸುವ ಗುರಿಯನ್ನು ಹೊಂದಿದೆ.


ಸದರಿ ಸೂರ್ಯ ಘರ್ ಯೋಜನೆಯು ವಿದ್ಯುತ್ ವೆಚ್ಚವನ್ನು ಕಡಿಮೆ ಮಾಡುವ ಮೂಲಕ ಸುಸ್ಥಿರತೆಯನ್ನು ಉತ್ತೇಜಿಸುವ ಧ್ಯೇಯಯನ್ನು ಹೊಂದಿದೆ. ಈ ಯೋಜನೆಯು ಭಾರತದ ನವೀಕರಿಸಬಹುದಾದ ಇಂಧನ ವಲಯವನ್ನು ಮತ್ತು ಪರಿಸರ ಸಂರಕ್ಷಣೆಗೆ ಕೊಡುಗೆ ಬಹುದೊಡ್ಡ ಕೊಡುಗೆ ನೀಡುತ್ತಿದೆ.


ಇದನ್ನೂ ಓದಿ: ಮನೆಗೆ 20 ವರ್ಷ ಉಚಿತ ಸೋಲಾರ್ ವಿದ್ಯುತ್ ಪಡೆಯಲು ಹೀಗೆ ಅರ್ಜಿ ಸಲ್ಲಿಸಿ...


ಸೂರ್ಯ ಘರ್ ಯೋಜನೆ ಪ್ರಯೋಜನಗಳು : ‘ಪ್ರಧಾನಮಂತ್ರಿ ಸೂರ್ಯ ಫರ್: ಮುಫ್ತ್ ಬಿಜ್ಲಿ’ (PM Surya Ghar - Muft Bijli Yojana) ಯೋಜನೆಯಡಿ ಸೋಲಾರ್ ವಿದ್ಯುತ್ ಘಟಕ ಅಳವಡಿಸಿಕೊಂಡರೆ ಸರ್ಕಾರದ ಸಹಾಯಧನ ಸಿಗಲಿದೆ. ಸಬ್ಸಿಡಿ ಸೌರ ಫಲಕಗಳ ಮೂಲಕ ಮನೆಗಳಿಗೆ ಉಚಿತ ವಿದ್ಯುತ್ ಸಿಗುವುದರಿಂದ ಫಲಾನುಭವಿಗಳು ಕಡಿಮೆ ವಿದ್ಯುತ್ ಬಿಲ್ ಪಡೆಯುತ್ತಿದ್ದಾರೆ.


ಸರ್ಕಾರಕ್ಕೆ ವಾರ್ಷಿಕವಾಗಿ 75,000 ಕೋಟಿ ರೂ. ವಿದ್ಯುತ್ ಉಳಿತಾಯವಾಗುತ್ತಿದೆ. ಈ ಯೋಜನೆಯು ನವೀಕರಿಸಬಹುದಾದ ಇಂಧನಕ್ಕೆ ಕೊಡುಗೆ ನೀಡಲಾಗುತ್ತಿದೆ. ಕಡಿಮೆಯಾದ ಇಂಗಾಲದ ಹೊರಸೂಸುವಿಕೆ ಭಾರತದ ಹವಾಮಾನ ರಕ್ಷಣಾ ಗುರಿಗಳನ್ನು ಹೊಂದಿದೆ.


ಇದನ್ನೂ ಓದಿ: ಸೂರ್ಯ ಘರ್ ಯೋಜನೆಯಡಿ ರಾಜ್ಯದಲ್ಲಿ 4,407 ಮನೆಗಳಿಗೆ ಸಹಾಯಧನ


ವಾರ್ಷಿಕ ಪ್ರಗತಿ ಏನು? : ಕಳೆದ 2025ರ ಜನವರಿ 27ರ ಹೊತ್ತಿಗೆ, ದೇಶದ 8.46 ಲಕ್ಷಕ್ಕೂ ಹೆಚ್ಚು ಮನೆಗಳಲ್ಲಿ ಸೌರ ಫಲಕಗಳ ಅಳವಡಿಕೆಯಾಗಿದೆ. 5.54 ಲಕ್ಷ ಮನೆಗಳಿಗೆ 4,308.66 ಕೋಟಿ ರೂ. ಕೇಂದ್ರ ಸರ್ಕಾರದ ಹಣಕಾಸು ನೆರವು (ಸಿಎಫ್‌ಎ) ವಿತರಣೆಯಾಗಿದೆ.


ಪ್ರತಿ ಮನೆಗೆ ಸರಾಸರಿ 77,800 ರೂ. ಸಬ್ಸಿಡಿಯೊಂದಿಗೆ, ಶೇ.40ರ ವರೆಗೆ ಸಬ್ಸಿಡಿ ವಿತರಣೆಯಾಗಿದ್ದು; ಈಗಾಗಲೇ ಶೇ.45ರಷ್ಟು ಫಲಾನುಭವಿಗಳು ಸೌರಶಕ್ತಿ ಬಳಕೆಯನ್ನು ಅವಲಂಬಿಸಿದ್ದಾರೆ. 2027ರ ಮಾರ್ಚ್ ವೇಳೆಗೆ ಒಂದು ಕೋಟಿ ಮನೆಗಳಲ್ಲಿ ಸೋಲಾರ್ ಕರೆಂಟ್ ಅಳವಡಿಕೆಯಾಗಲಿದೆ.


ನೀವೂ ಅರ್ಜಿ ಸಲ್ಲಿಸಿ : ‘ಪ್ರಧಾನಮಂತ್ರಿ ಸೂರ್ಯ ಫರ್: ಮುಫ್ತ್ ಬಿಜ್ಲಿ’ ಯೋಜನೆಯಡಿ ಸೋಲಾರ್ ವಿದ್ಯುತ್ ವ್ಯವಸ್ಥೆ ಪಡೆಯಲು ಇತ್ತೀಚಿನ ವಿದ್ಯುತ್ ಬಿಲ್ ಹಾಗೂ ಆಧಾರ್ ಕಾರ್ಡ್ ಮಾತ್ರ ಸಾಕು. ಈ ಎರಡು ದಾಖಲೆಗಳೊಂದಿಗೆ ಈ ಕೆಳಗಿನ ಲಿಂಕ್ ಬಳಸಿಕೊಂಡು ನೋಂದಣಿ ಮಾಡಿಕೊಳ್ಳುವ ಮೂಲಕ ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ.


ಅರ್ಜಿ ಸಲ್ಲಿಕೆ ಲಿಂಕ್: Apply ಮಾಡಿ


ಇದನ್ನೂ ಓದಿ: ಮನೆಗೆ ಉಚಿತ ಸೋಲಾರ್ ಕರೆಂಟ್ ಪಡೆಯಲು ಈಗಲೇ ಅರ್ಜಿ ಹಾಕಿ | ಕರ್ನಾಟಕದಲ್ಲಿ 5,14 ಲಕ್ಷ ಕುಟುಂಬಗಳು ನೋಂದಣಿ...