Schemes

Implementation of Unified Pension Scheme : ಸರ್ಕಾರಿ ನೌಕರರಿಗೆ ಏಪ್ರಿಲ್ 1ರಿಂದ ಏಕೀಕೃತ ಪಿಂಚಣಿ ಯೋಜನೆ ಜಾರಿ

Implementation of Unified Pension Scheme : ಸರ್ಕಾರಿ ನೌಕರರಿಗೆ ಏಪ್ರಿಲ್ 1ರಿಂದ ಏಕೀಕೃತ ಪಿಂಚಣಿ ಯೋಜನೆ ಜಾರಿ

2025ರ ಆರ್ಥಿಕ ವರ್ಷದಿಂದ ಅಂದರೆ ಬರಲಿರುವ ಏಪ್ರಿಲ್ 1ರಿಂದ ಕೇಂದ್ರ ಸರ್ಕಾರಿ ನೌಕರರಿಗೆ ಏಕೀಕೃತ ಪಿಂಚಣಿ ಯೋಜನೆ (Unified Pension Scheme- UPS) ಜಾರಿಯಾಗೊಳಿಸುವ ಕುರಿತು ಕೇಂದ್ರ ಹಣಕಾಸು ಸಚಿವಾಲಯ ಅಧಿಕೃತ ಅಧಿಸೂಚನೆ ಹೊರಡಿಸಿದೆ.


ಹೊಸ ಪಿಂಚಣಿ ಯೋಜನೆ (New Pension Scheme - NPS) ರದ್ದುಗೊಳಿಸಿ, ಪುನಃ ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ (Old Pension Scheme - OPS) ಜಾರಿಗೊಳಿಸುವಂತೆ ಸರ್ಕಾರಿ ನೌಕರರ ಸಂಘಗಳು ಒತ್ತಾಯಿಸಿದ್ದವು. ತತ್ಪರಿಣಾಮ ಕಳೆದ 2024ರ ಆಗಸ್ಟ್ 24ರಂದು ಕೇಂದ್ರ ಸಚಿವ ಸಂಪುಟವು ಒಪಿಎಸ್ ಮತ್ತು ಎನ್‌ಪಿಎಸ್ ಸಂಯೋಜಿಸಿ ಯುಪಿಎಸ್ ರೂಪಿಸಿ ಅನುಮೋದನೆ ನೀಡಿತ್ತು.


ಇದನ್ನೂ ಓದಿ: ಸೂರ್ಯ ಘರ್ ಯೋಜನೆಯಡಿ ರಾಜ್ಯದಲ್ಲಿ 4,407 ಮನೆಗಳಿಗೆ ಸಹಾಯಧನ


ಯಾರು ಅರ್ಹರು? ಯಾರು ಅರ್ಹರಲ್ಲ? : 2025ರ ಏಪ್ರಿಲ್ 1ರ ನಂತರ ಕೆಲಸಕ್ಕೆ ಸೇರುವವರಿಗೆ, ಈಗಾಗಲೇ ನಿವೃತ್ತಿ ಹೊಂದಿರುವವರಿಗೆ ಮತ್ತು 2025ರ ಮಾರ್ಚ್ 31ರ ವರೆಗೆ ನಿವೃತ್ತಿ ಹೊಂದುವವರಿಗೆ ಏಕೀಕೃತ ಪಿಂಚಣಿ ಯೋಜನೆ ಅನ್ವಯವಾಗಲಿದೆ.


ಇನ್ನು ಸೇವೆಯಿಂದ ವಜಾ ಆದವರು ಹಾಗೂ ರಾಜೀನಾಮೆ ನೀಡಿದವರು ಸದರಿ ಏಕೀಕೃತ ಪಿಂಚಣಿ ಯೋಜನೆಗೆ (ಯುಪಿಎಸ್) ಅರ್ಹರಾಗುವುದಿಲ್ಲ ಎಂದು ಮೊನ್ನೆ ಜನವರಿ 25ರಂದು ಹೊರಡಿಸಿರುವ ಅಧಿಸೂಚನೆಯಲ್ಲಿ ಸ್ಪಷ್ಟಪಡಿಸಲಾಗಿದೆ.


ಏಕೀಕೃತ ಪಿಂಚಣಿ ಯೋಜನೆ ವಿಶೇಷಗಳು : ಕನಿಷ್ಠ 10 ವರ್ಷ ಸೇವೆ ಸಲ್ಲಿಸಿ ನಿವೃತ್ತರಾದವರಿಗೆ ಮಾಸಿಕ 10 ಸಾವಿರ ರೂ. ಪಿಂಚಣಿ ಸಿಗಲಿದೆ. ಕನಿಷ್ಠ 25 ವರ್ಷ ಸೇವೆ ಸಲ್ಲಿಸಿದವರಿಗೆ ಮೂಲವೇತನದ ಶೇ. 50ರಷ್ಟು ಪಿಂಚಣಿ ಸಿಗಲಿದೆ. ಪಿಂಚಣಿದಾರರು ನಿಧನರಾದರೆ ಅವರ ಸಂಗಾತಿ ಪತಿ ಅಥವಾ ಪತ್ನಿಗೆ ಶೇ. 60ರಷ್ಟು ಪಿಂಚಣಿ ಲಭ್ಯವಾಗಲಿದೆ.


ಇದನ್ನೂ ಓದಿ: ವಿಶೇಷ ವೈಯಕ್ತಿಕ ಸಾಲ ಯೋಜನೆಗಳು | ಯಾವುದಕ್ಕೆಲ್ಲ ಸಾಲ ಸಿಗುತ್ತೆ ಗೊತ್ತಾ? Personal Loans Schemes