Schemes

Solar Power - ಒಂದು ಕೋಟಿ ಮನೆಗಳಿಗೆ ಸೋಲಾರ್ ಕರೆಂಟ್ ಅಳವಡಿಕೆ | ಕೇಂದ್ರ ಬಜೆಟ್’ನಲ್ಲಿ ಬೃಹತ್ ಅನುದಾನದ ನಿರೀಕ್ಷೆ

Solar Power - ಒಂದು ಕೋಟಿ ಮನೆಗಳಿಗೆ ಸೋಲಾರ್ ಕರೆಂಟ್ ಅಳವಡಿಕೆ | ಕೇಂದ್ರ ಬಜೆಟ್’ನಲ್ಲಿ ಬೃಹತ್ ಅನುದಾನದ ನಿರೀಕ್ಷೆ

ಫೆಬ್ರವರಿ 1ರಂದು ಮಂಡನೆಯಾಗಲಿರುವ 2025-26ನೇ ಸಾಲಿನ ಕೇಂದ್ರ ಬಜೆಟ್‌ನಲ್ಲಿ (Union Budget 2025-26) ಸೋಲಾರ್‌ಗೆ ಹೆಚ್ಚಿನ ಅನುದಾನ ದೊರಕಲಿದೆ. ಸೋಲಾರ್ ಸೇರಿದಂತೆ ನವೀಕರಣ ವಿದ್ಯುತ್‌ಗೆ 30,000 ಕೋಟಿ ರೂ. ಅನುದಾನ ಲಭಿಸುವ ಸಂಭವವಿದೆ. ಇದರಲ್ಲಿ 50 ಲಕ್ಷ ಮನೆಗಳ ಮೇಲೆ ಸೋಲಾರ್ ಫಲಕ ಅಳವಡಿಸುವ ಪ್ರಮುಖ ಕಾರ್ಯಕ್ರಮ ಸೇರ್ಪಡೆಗೊಂಡಿದೆ. ಇದಕ್ಕಾಗಿ ಕನಿಷ್ಠ 10,000 ಕೋಟಿ ರೂ. ಸಿಗುವುದು ಖಚಿತ ಎನ್ನಲಾಗುತ್ತಿದೆ.


ಈ ವರ್ಷ 19,000 ಕೋಟಿ ರೂ. ಅನುದಾನ ನೀಡಲಾಗಿತ್ತು. 2023ರಲ್ಲಿ ಅದು ಕೇವಲ 7,848 ಕೋಟಿ ರೂ. ಮಾತ್ರ ಆಗಿತ್ತು. 2024ರಲ್ಲಿ ಒಂದು ಕೋಟಿ ಮನೆಗಳ ಮೇಲೆ ಸೋಲಾರ್ ಅಳವಡಿಕೆಗೆ 75,021 ಕೋಟಿ ರೂ. ನಿಗದಿಪಡಿಸಲಾಗಿತ್ತು. ಈ ಯೋಜನೆ 2027ಕ್ಕೆ ಮುಕ್ತಾಯಗೊಳ್ಳಲಿದೆ. ಕೇಂದ್ರದ ನೆರವಿನಿಂದ ಕರ್ನಾಟಕದಲ್ಲಿ ಸೋಲಾರ್ ಉತ್ಪಾದನೆ ಅಧಿಕಗೊಳ್ಳಲಿದೆ. ಇದರೊಂದಿಗೆ ಬ್ಯಾಟರಿ ದಾಸ್ತಾನು ವ್ಯವಸ್ಥೆ ಕೂಡ ಉತ್ತಮಗೊಳ್ಳಲಿದೆ.


ಇದನ್ನೂ ಓದಿ:  ಸರ್ಕಾರಿ ನೌಕರರಿಗೆ ಏಪ್ರಿಲ್ 1ರಿಂದ ಏಕೀಕೃತ ಪಿಂಚಣಿ ಯೋಜನೆ ಜಾರಿ 


ಸೌರವಿದ್ಯುತ್ ಸಂಗ್ರಹಕ್ಕೆ ಬ್ಯಾಟರಿ ವ್ಯವಸ್ಥೆ : ಮುಂದಿನ ದಿನಗಳಲ್ಲಿ ಕೇವಲ ಸೋಲಾರ್ ಮಾತ್ರ ಬರುವುದಿಲ್ಲ. ಅದರೊಂದಿಗೆ ಬ್ಯಾಟರಿ ಇದ್ದೇ ಇರುತ್ತದೆ. ಅಂದರೆ ಹಗಲು ಹೊತ್ತಿನಲ್ಲಿ ನಮಗೆ ಬೇಕಾದಷ್ಟು ಸೌರವಿದ್ಯುತ್ ಬಳಸಿಕೊಳ್ಳುವುದು. ಹೆಚ್ಚುವರಿ ವಿದ್ಯುತ್ ಬ್ಯಾಟರಿಯಲ್ಲಿ ದಾಸ್ತಾನು ಮಾಡಿ, ರಾತ್ರಿ ವೇಳೆಯಲ್ಲಿ ಬಳಸುವುದು. ಈ ಪದ್ಧತಿ ಅಮೆರಿಕ ಮತ್ತಿತರ ದೇಶಗಳಲ್ಲಿ ಹಲವು ವರ್ಷಗಳ ಹಿಂದೆ ಜಾರಿಗೆ ಬಂದಿದೆ. ಈಗ ನಮ್ಮಲ್ಲೂ ಕಾಲಿಟ್ಟಿದೆ.


ಪಾವಗಡದಲ್ಲಿ ಬ್ಯಾಟರಿ ಅಳವಡಿಕೆಯ ಸೌರ ಫಲಕ ತಲೆ ಎತ್ತಲಿದೆ. ಇದರಿಂದ ಅತಿ ಕಡಿಮೆ ದರದಲ್ಲಿ ವಿದ್ಯುತ್ ಪಡೆಯಬಹುದು. ಕ್ರೆಡಿಲ್ ಸಂಸ್ಥೆಯ ಅಂದಾಜಿನ ಪ್ರಕಾರ ಪ್ರತಿ ಯೂನಿಟ್‌ಗೆ 1-2 ರೂ. ಹೆಚ್ಚುವರಿ ವಿದ್ಯುತ್ ದರ ಬೀಳಲಿದೆ. ಜಲ ವಿದ್ಯುತ್ ಕೇಂದ್ರಗಳಲ್ಲಿ ಪಂಪ್ಡ್ ಸ್ಟೋರೇಜ್ ವ್ಯವಸ್ಥೆ ಮಾಡಿದರೂ ಇಷ್ಟು ಕಡಿಮೆ ದರಕ್ಕೆ ವಿದ್ಯುತ್ ಸಿಗುವುದಿಲ್ಲ. 


ಇದುವರೆಗೆ ನಾವು ಸೋಲಾರ್ ಪಾರ್ಕ್’ಗಳನ್ನು ಸ್ಥಾಪಿಸಿದ್ದೇವೆ. ಬ್ಯಾಟರಿ ಬಗ್ಗೆ ಚಿಂತನೆ ನಡೆಸಿರಲಿಲ್ಲ. ಹೀಗಾಗಿ ಸೋಲಾರ್ ವಿದ್ಯುತ್ ಕೂಡಲೇ ಬಳಕೆಯಾಗಿ ಬಿಡಬೇಕು ಎಂದು ಕೆಇಆರ್‌ಸಿ ಸೋಲಾರ್ ವಿದ್ಯುತ್ ಖರೀದಿಯನ್ನು ಕಡ್ಡಾಯಗೊಳಿಸಿತ್ತು. ಈಗ ಅದರ ಅಗತ್ಯವಿಲ್ಲ. ಬ್ಯಾಟರಿ ಮೂಲಕ ವಿದ್ಯುತ್ ದಾಸ್ತಾನು ಮಾಡಬಹುದು.


ಬ್ಯಾಟರಿ ಮೂಲಕ ಬರುವ ವಿದ್ಯುತ್ ದರ ಪ್ರತಿ ಯೂನಿಟ್‌ಗೆ ಕೇವಲ 1-2 ರೂ. ಮಾತ್ರ. ಸೋಲಾರ್ ಮತ್ತು ಲೀಥಿಯಂ ಬ್ಯಾಟರಿ ಡಿ.ಸಿ. ಕರೆಂಟ್‌ನಲ್ಲಿ ಕೆಲಸ ಮಾಡುತ್ತದೆ. ಆ ವಿದ್ಯುತ್ ಬಳಸಬೇಕು ಎಂದರೆ ಅದನ್ನು ಎ.ಸಿ. ರೂಪಕ್ಕೆ ಪರಿವರ್ತಿಸಬೇಕು. ಇದಕ್ಕೆ ಇನ್ವರ್ಟರ್ ಬಳಸುವುದು ಅನಿವಾರ್ಯ. 


ಇದನ್ನೂ ಓದಿ: ಸೂರ್ಯ ಘರ್ ಯೋಜನೆಯಡಿ ರಾಜ್ಯದಲ್ಲಿ 4,407 ಮನೆಗಳಿಗೆ ಸಹಾಯಧನ


ಸೂರ್ಯ ಘರ್ ಸಬ್ಸಿಡಿ : ಕೇಂದ್ರ ಸರ್ಕಾರ ಸೌರ ವಿದ್ಯುತ್ ಬಳಸುವವರಿಗೆ ಹಲವು ರಿಯಾಯಿತಿ ಮತ್ತು ಸಬ್ಸಿಡಿಗಳನ್ನು ಘೋಷಿಸಿದ್ದರೂ ಅದಕ್ಕೆ ತಕ್ಕಂತೆ ರಾಜ್ಯ ಸರ್ಕಾರ ಅವುಗಳನ್ನು ಜಾರಿಗೆ ತರುವ ಕಾರ್ಯ ಕೈಗೊಳ್ಳಬೇಕು. 


ಪ್ರತಿ ತಿಂಗಳೂ 300 ಯೂನಿಟ್ ಮೇಲ್ಪಟ್ಟು ಸೌರ ವಿದ್ಯುತ್ ಉತ್ಪಾದಿಸಿ ಬಳಸುವ ಗ್ರಾಹಕರಿಗೆ ಕೇಂದ್ರ ಸರ್ಕಾರ ಪ್ರತಿ ಕಿಲೋ ವ್ಯಾಟ್‌ಗೆ 18,000 ರೂ. ನಿಂದ 80,000 ರೂ. ವರೆಗೆ ಸಬ್ಸಿಡಿ ಘೋಷಿಸಿದೆ. ಇವುಗಳನ್ನು ಜಾರಿಗೆ ತರಲು ಆಯಾ ರಾಜ್ಯದಲ್ಲಿರುವ ವಿದ್ಯುತ್ ವಿತರಣ ಕಂಪನಿಗಳನ್ನು ನೋಡಲ್ ಕೇಂದ್ರವಾಗಿ ಕೇಂದ್ರ ಇಂಧನ ಇಲಾಖೆ ನೇಮಿಸಿದೆ. 


ಸೋಲಾರ್ ವಿದ್ಯುತ್ ಉತ್ಪಾದನೆಯಲ್ಲಿ ಕರ್ನಾಟಕ ಶೇ.30 ರಷ್ಟು ಉತ್ಪಾದನೆ ಸಾಮರ್ಥ್ಯ ಪಡೆದಿದೆ. ಕರ್ನಾಟಕ ಹೊರತುಪಡಿಸಿದರೆ ಮಹಾರಾಷ್ಟ್ರ ಶೇ. 14, ತಮಿಳುನಾಡು ಶೇ. 11ರಷ್ಟು ಸೋಲಾರ್ ವಿದ್ಯುತ್ ಹೊಂದಿದೆ. ಇದಕ್ಕೆ ಪ್ರಮುಖ ಕಾರಣ ಸೋಲಾರ್ ವಿದ್ಯುತ್ ಬಳಸುವ ಕೈಗಾರಿಕೆಗಳು ಕರ್ನಾಟಕದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿವೆ. ಬ್ಯಾಟರಿ ಉತ್ಪಾದನೆ ಹೆಚ್ಚಿಸಿಕೊಂಡರೆ 2050ಕ್ಕೆ ಇಂಧನ ತೈಲಗಳ ಬಳಕೆ ಶೂನ್ಯಕ್ಕೆ ಬರಲಿದೆ ಎನ್ನಲಾಗುತ್ತಿದೆ.


ಇದನ್ನೂ ಓದಿ: ವಿಶೇಷ ವೈಯಕ್ತಿಕ ಸಾಲ ಯೋಜನೆಗಳು | ಯಾವುದಕ್ಕೆಲ್ಲ ಸಾಲ ಸಿಗುತ್ತೆ ಗೊತ್ತಾ?