Education

SSLC Exam Helpline- ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಸಹಾಯವಾಣಿ ಆರಂಭ | ಪರೀಕ್ಷೆ ಭಯ-ಗೊಂದಲ ನಿವಾರಣೆಗೆ ಕರೆ ಮಾಡಿ...

SSLC Exam Helpline- ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಸಹಾಯವಾಣಿ ಆರಂಭ | ಪರೀಕ್ಷೆ ಭಯ-ಗೊಂದಲ ನಿವಾರಣೆಗೆ ಕರೆ ಮಾಡಿ...

ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆ-1 (SSLC Exam 2025) ಇದೇ ಮಾರ್ಚ್ 21ರಂದು ಆರಂಭವಾಗಿ ಏಪ್ರಿಲ್ 04ರ ವರೆಗೆ ನಡೆಯಲಿದೆ. ಈ ಬಾರಿ ಒಟ್ಟು 8,96,447 ವಿದ್ಯಾರ್ಥಿಗಳು ನೋಂದಾಯಿಸಿಕೊ೦ಡು ದಾಖಲೆ ನಿರ್ಮಿಸಿದ್ದಾರೆ. ಈ ಹಿಂದೆ 2021ರಲ್ಲಿ 8.76 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊ೦ಡಿದ್ದು ದಾಖಲೆಯಾಗಿತ್ತು. ಈ ಬಾರಿ 8,42,917 ಹೊಸ ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊ೦ಡಿದ್ದಾರೆ. 


ಪುನರಾವರ್ತಿತ ವಿದ್ಯಾರ್ಥಿಗಳ ಸಂಖ್ಯೆ 38,091 ಮತ್ತು ಖಾಸಗಿ ಅಭ್ಯರ್ಥಿಗಳ ಸಂಖ್ಯೆ 15,539ರಷ್ಟಿದೆ. 4,61,563 ಬಾಲಕರು ಮತ್ತು 4,34,884 ಪರೀಕ್ಷೆಗೆ ನೋಂದಾಯಿಸಿಕೊAಡಿದ್ದಾರೆ. ಒಟ್ಟು 15,881 ಪ್ರೌಢ ಶಾಲೆಗಳಿಂದ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. 240 ಮೌಲ್ಯಮಾಪನ ಕೇಂದ್ರಗಳಲ್ಲಿ 65,000 ಶಿಕ್ಷಕರು ಮೌಲ್ಯಮಾಪನ ಮಾಡಲಿದ್ದಾರೆ.


ಇದನ್ನೂ ಓದಿ: 8 ಲಕ್ಷ ರೂಪಾಯಿ ವರೆಗೆ ಗೂಗಲ್ ಪೇ ಲೋನ್ | ಮೊಬೈಲ್‌ನಲ್ಲೇ ಅರ್ಜಿ ಸಲ್ಲಿಸಿ ಪಡೆಯಿರಿ...


ಪರೀಕ್ಷಾ ಗೊಂದಲ, ಸಂದೇಹ ನಿವಾರಣೆಗೆ ಸಹಾಯವಾಣಿ: ಇತ್ತೀಚಿನ ದಿನಗಳಲ್ಲಿ ‘ಪರೀಕ್ಷೆ ಭಯ’ ವಿದ್ಯಾರ್ಥಿಗಳನ್ನು ಎಡೆಬಿಡದೇ ಕಾಡುತ್ತಿದೆ. ಇಂತಹ ಭಯದಿಂದಾಗಿಯೇ ಓದಿದ್ದು ಮರೆತು ಹೋಗುವುದು, ಉತ್ತರ ಗೊತ್ತಿದ್ದರೂ ಬರೆಯಲು ಸಾಧ್ಯವಾಗದೇ ಇರುವುದು ಸೇರಿದಂತೆ ಅನೇಕ ರೀತಿಯ ಯಡರು ತೊಡರುಗಳು ಸಂಭವಿಸಿ ವಿದ್ಯಾರ್ಥಿಗಳಿಗೆ ನಿರೀಕ್ಷಿತ ಫಲಿತಾಂಶ ಪಡೆಯಲು ಸಾಧ್ಯವಾಗುತ್ತಿಲ್ಲ. 


ಈ ಹಿನ್ನಲೆಯಲ್ಲಿ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು (Karnataka School Examination and Assessment Board) ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಸಹಾಯವಾಣಿಯನ್ನು ಆರಂಭಿಸಿದ್ದು; ಪಾಲಕರು ಮತ್ತು ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆದುಕೊಳ್ಳುವಂತೆ ಮಂಡಳಿ ನಿರ್ದೇಶಕ ಎಚ್.ಎನ್. ಗೋಪಾಲಕೃಷ್ಣ ಅವರು ಕೋರಿದ್ದಾರೆ.


ಇದನ್ನೂ ಓದಿ: ಸಣ್ಣ ಉದ್ಯಮ ಆರಂಭಿಸಲು ಸಿಗುತ್ತೆ ₹20 ಲಕ್ಷ ಮುದ್ರಾ ತರುಣ್ ಲೋನ್ | ಈಗಲೇ ಅರ್ಜಿ ಸಲ್ಲಿಸಿ...

 

ಸಹಾಯವಾಣಿ ಸಮಯ: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಆರಂಭಿಸಿರುವ 080-23310075 ಮತ್ತು 080-23310076 ಸಂಖ್ಯೆಗೆ ಪಾಲಕರು, ವಿದ್ಯಾರ್ಥಿಗಳು ಕರೆ ಮಾಡಿ ತಮ್ಮ ಗೊಂದಲಗಳನ್ನು ನಿವಾರಣೆ ಮಾಡಿಕೊಳ್ಳಬಹುದು.ಮಾರ್ಚ್ 10ರಿಂದ ಏಪ್ರಿಲ್ 4ರ ವರೆಗೆ ಸದರಿ ಸಹಾಯವಾಣಿಯು ಕಾರ್ಯ ನಿರ್ವಹಿಸಲಿದೆ.


ಈ ಸಹಾಯವಾಣಿಯು ಮಾರ್ಚ್ 10ರಿಂದ 19ರ ವರೆಗೆ ಮಧ್ಯಾಹ್ನ 2.30ರಿಂದ ಸಂಜೆ 6.30, ಮಾರ್ಚ್ 16ರಿಂದು ಬೆಳಿಗ್ಗೆ 11ರಿಂದ ಸಂಜೆ 5 ಘಂಟೆ ಹಾಗೂ ಮಾರ್ಚ್ 21ರಿಂದ ಏಪ್ರಿಲ್ 4ರ ವರೆಗೆ ನಿಯಂತ್ರಣ ಕೊಠಡಿಯಾಗಿ ಬೆಳಗ್ಗೆ 10ರಿಂದ ಮಧ್ಯಾಹ್ನ 2 ಗಂಟೆಯ ವರೆಗೆ ಕಾರ್ಯನಿರ್ವಹಿಸಲಿದೆ.


ಇದನ್ನೂ ಓದಿ: ಇನ್ಮುಂದೆ ಬಡವರಿಗೆ ಮನೆ ಕಟ್ಟಿಕೊಳ್ಳಲು ರಾಜ್ಯ ಸರ್ಕಾರದಿಂದ 3.50 ಲಕ್ಷ ರೂ. ಸಹಾಯಧನ


ವಿದ್ಯಾರ್ಥಿಗಳ ಸಾಮರ್ಥ್ಯ, ಬುದ್ಧಿಶಕ್ತಿ, ಆಸಕ್ತಿ, ಕ್ರಿಯಾಶೀಲತೆ, ಕಠಿಣ ಪರಿಶ್ರಮಗಳನ್ನು ಗಣನೆಗೆ ತೆಗೆದುಕೊಳ್ಳದೆ ಹೆಚ್ಚು ಅಂಕಗಳನ್ನು ಗಳಿಸುವಂತೆ ಪಾಲಕರು ಒತ್ತಡಗಳನ್ನು ಹಾಕುತ್ತಿರುವುದು ಸಾಮಾನ್ಯವಾಗಿದೆ. ಇದರಿಂದ ವಿದ್ಯಾರ್ಥಿಗಳು ಅಧ್ಯಯನದ ಕಡೆಗೆ ಗಮನ ಹರಿಸಲಾಗದೇ, ಏಕಾಗ್ರತೆ ಕಳೆದುಕೊಳ್ಳುತ್ತಿದ್ದಾರೆ. ಈ ಸಮಸ್ಯೆ ನಿವಾರಣೆಯಾಗದೆ ವಿದ್ಯಾರ್ಥಿಗಳು ಪರೀಕ್ಷೆಯನ್ನು ಸಮರ್ಥವಾಗಿ ಬರೆಯಲಾಗುತ್ತಿಲ್ಲ.


ಈ ಹಿನ್ನೆಲೆ ಪರೀಕ್ಷೆಯನ್ನು ಸಮರ್ಥವಾಗಿ ಬರೆಯಲು ಸ್ಪೂರ್ತಿ ನೀಡಬೇಕಿದೆ. ಇಂತಹ ವಿದ್ಯಾರ್ಥಿಗಳ ಸಮಸ್ಯೆಗಳಿಗೆ ಸ್ಪಂದಿಸಿ ಪರಿಹರಿಸುವ ಹಾಗೂ ಭಯ ರಹಿತವಾಗಿ ಪರೀಕ್ಷೆ ಬರೆಯಲು ಆತ್ಮಸ್ಥೆರ್ಯ ತುಂಬಲು ಮಂಡಳಿಯು ಸಹಾಯವಾಣಿಯನ್ನು ಆರಂಭಿಸಿದೆ. ಪಾಲಕರು, ವಿದ್ಯಾರ್ಥಿಗಳು ಮೇಲೆ ತಿಳಿಸಿರುವ ದೂರವಾಣಿ ಸಂಖ್ಯೆಗೆ ಕರೆ ಮಾಡಿ ಸಮಸ್ಯೆಗಳು, ಸಂದೇಹಗಳಿಗೆ ಪರಿಹಾರ ಕಂಡುಕೊಳ್ಳಬಹುದಾಗಿದೆ.


ಇದನ್ನೂ ಓದಿ: ವಿಶೇಷ ವೈಯಕ್ತಿಕ ಸಾಲ ಯೋಜನೆಗಳು | ಯಾವುದಕ್ಕೆಲ್ಲ ಸಾಲ ಸಿಗುತ್ತೆ ಗೊತ್ತಾ?