ಪ್ರಧಾನಮಂತ್ರಿ ಸೂರ್ಯ ಘರ್ (PM Surya Ghar: Muft Bijli Yojana) ಯೋಜನೆಗೆ ದೇಶಾದ್ಯಂತ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಸೂರ್ಯಘರ್ ಮೇಲ್ಛಾವಣಿ ಯೋಜನೆಯು ವಿಶ್ವದ ಅತಿ ದೊಡ್ಡ ಸೌರ ಶಕ್ತಿ ಯೋಜನೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
10 ಲಕ್ಷ ಮನೆಗಳಿಗೆ ಸೋಲಾರ್ ವಿದ್ಯುತ್: ಸೂರ್ಯ ಘರ್ ಯೋಜನೆ ಅಡಿಯಲ್ಲಿ ಇದುವರೆಗೆ 10 ಲಕ್ಷಕ್ಕೂ ಅಧಿಕ ಮನೆಗಳು ಸೌರಶಕ್ತಿ ಮೂಲಕ ವಿದ್ಯುತ್ ಪಡೆಯುತ್ತಿವೆ ಎಂದು ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಪ್ರಹ್ಲಾದ್ ಜೋಶಿ ತಿಳಿಸಿದ್ದಾರೆ. ಭಾರತವು ಸೌರಶಕ್ತಿಯಲ್ಲಿ ಐತಿಹಾಸಿಕ ಮೈಲಿಗಲ್ಲು ಸಾಧಿಸಿದೆ. ಪ್ರಧಾನಿ ಮೋದಿ ದೂರದೃಷ್ಟಿಯ ನಾಯಕತ್ವದಲ್ಲಿ, ಸೂರ್ಯಘರ್ 10 ಲಕ್ಷ ಮನೆಗಳನ್ನು ಸೌರಶಕ್ತಿಯಿಂದ ಸಬಲೀಕರಣಗೊಳಿಸಿದ್ದು; ಇದೇ ಅಕ್ಟೋಬರ್ ವೇಳೆಗೆ 20 ಲಕ್ಷ ಮನೆಗಳನ್ನು ತಲುಪುವ ಗುರಿ ಇದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ನಿಮ್ಮ ಮನೆಗೆ ಸೋಲಾರ್ ಕರೆಂಟ್ ಪಡೆಯಲು ಕೇವಲ ಐದೇ ನಿಮಿಷದಲ್ಲಿ ಅರ್ಜಿ ಹಾಕಿ | ಇಲ್ಲಿದೆ ಕಂಪ್ಲೀಟ್ ಡಿಟೈಲ್ಸ್...
25 ವರ್ಷಗಳ ಸುದೀರ್ಘ ಬಾಳಿಕೆ: 2024ರ ಫೆಬ್ರವರಿಯಲ್ಲಿ ಜಾರಿಗೆ ತಂದಿರುವ ಈ ಯೋಜನೆಯಡಿ ಮನೆ, ವಾಣಿಜ್ಯ ಕಟ್ಟಡಗಳ ಮೇಲೆ ಸೌರ ವಿದ್ಯುತ್ ಘಟಕ ಸ್ಥಾಪಿಸಿಕೊಳ್ಳಬಹುದಾಗಿದೆ. ಇದಕ್ಕಾಗಿ ಸರ್ಕಾರ ಸಹಾಯಧನ ಒದಗಿಸುತ್ತಿದ್ದು; ಸಬ್ಸಿಡಿ ಬಳಸಿಕೊಂಡು ಸೋಲಾರ್ ಘಟಕ ಸ್ಥಾಪಿಸಿದರೆ ಮನೆಗೆ ವಿದ್ಯುತ್ ಉಪಯೋಗಿಸಿ ಹೆಚ್ಚುವರಿ ವಿದ್ಯುತ್ ಅನ್ನು ಮಾರಾಟ ಮಾಡಿ ಆದಾಯ ಕೂಡ ಗಳಿಸಬಹುದಾಗಿದೆ.
ಸೂರ್ಯಘರ್ ಯೋಜನೆಯು ಪ್ರತಿ ತಿಂಗಳು 300 ಯೂನಿಟ್‌ಗಳ ವರೆಗೆ ಉಚಿತ ವಿದ್ಯುತ್ ಒದಗಿಸುವ ಮೂಲಕ 1 ಕೋಟಿ ಮನೆಗಳಿಗೆ ಬೆಳಕು ನೀಡುವ ಗುರಿಯನ್ನು ಹೊಂದಿದೆ. 25 ವರ್ಷಗಳ ಸುದೀರ್ಘ ಬಾಳಿಕೆ ಬರುವ ಈ ಸೋಲಾರ್ ಘಟಕಗಳಿಗೆ 5 ವರ್ಷಗಳ ಕಾಲ ಉಚಿತ ನಿರ್ವಹಣೆ ಕೂಡ ಸಿಗಲಿದೆ. 10X10 ಅಳತೆಯಲ್ಲಿ 1 ಕಿಲೋ ವ್ಯಾಟ್ ಸಾಮರ್ಥ್ಯದ ಸೋಲಾರ್ ಘಟಕ ಅಳವಡಿಸಿಕೊಂಡರೆ ತಿಂಗಳಿಗೆ 100 ಯೂನಿಟ್ ವಿದ್ಯುತ್ ಉತ್ಪಾದಿಸಬಹುದು.
ಇದನ್ನೂ ಓದಿ: ರಾಜ್ಯದ 37 ಲಕ್ಷ ರೈತರಿಗೆ 28,000 ಕೋಟಿ ರೂ. ಸೊಸೈಟಿ ಸಾಲ
ಏನೆಲ್ಲ ಪ್ರಯೋಜನಗಳು ಸಿಗಲಿವೆ?: ವಿದ್ಯುತ್ ಬಿಲ್‌ನಲ್ಲಿ ಉಳಿತಾಯವಾಗಲಿದೆ. ಹೆಚ್ಚುವರಿ ವಿದ್ಯುತ್ ಅನ್ನು ಬೆಸ್ಕಾಂಗೆ ಮಾರಾಟ ಮಾಡುವ ಮೂಲಕ ಆದಾಯ ಕೂಡ ಗಳಿಸಬಹುದಾಗಿದೆ. ಇದು ಪರಿಸರ ಸ್ನೇಹಿ ವಿದ್ಯುತ್ ವ್ಯವಸ್ಥೆಯಾಗಿದ್ದು; ನಿಸರ್ಗಕ್ಕೆ ಕೊಡುಗೆ ನೀಡದಂತೆಯೂ ಆಗುತ್ತದೆ.
ಘಟಕದ ವೆಚ್ಚ, ಸಬ್ಸಿಡಿ ಮತ್ತು ಉಳಿತಾಯದ ವಿವರ: ಈ ಯೋಜನೆಯಡಿ 1 ಕಿಲೋ ವ್ಯಾಟ್ ಸಾಮರ್ಥ್ಯದ ಸೋಲಾರ್ ಘಟಕದಿಂದ ಮಾಸಿಕ 100 ಕಿಲೋ ವ್ಯಾಟ್ ವಿದ್ಯುತ್ ಉತ್ಪಾದಿಸಬಹುದು. ಈ ಘಟಕ ಅಳವಡಿಕೆಗೆ 60,000 ದಿಂದ 80,000 ರೂ. ವೆಚ್ಚವಾಗುತ್ತದೆ. ಇದಕ್ಕೆ 30,000 ರೂ. ಸಬ್ಸಿಡಿ ಸಿಗಲಿದ್ದು, ವರ್ಷಕ್ಕೆ 9,600 ರೂ. ಉಳಿತಾಯವಾಗಲಿದೆ.
2 ಕಿಲೋ ವ್ಯಾಟ್ ಸಾಮರ್ಥ್ಯದ ಸೋಲಾರ್ ಘಟಕದಿಂದ ಮಾಸಿಕ 101ರಿಂದ 200 ಕಿಲೋ ವ್ಯಾಟ್ ವಿದ್ಯುತ್ ಉತ್ಪಾದಿಸಬಹುದು. ಈ ಘಟಕ ಅಳವಡಿಕೆಗೆ 1,20,000 ದಿಂದ 1,60,000 ರೂ. ವೆಚ್ಚವಾಗುತ್ತದೆ. ಇದಕ್ಕೆ 60,000 ರೂ. ಸಬ್ಸಿಡಿ ಸಿಗಲಿದ್ದು, ವರ್ಷಕ್ಕೆ 21,600 ರೂ. ಉಳಿತಾಯವಾಗಲಿದೆ.
ಇದನ್ನೂ ಓದಿ: 8 ಲಕ್ಷ ರೂಪಾಯಿ ವರೆಗೆ ಗೂಗಲ್ ಪೇ ಲೋನ್ | ಮೊಬೈಲ್‌ನಲ್ಲೇ ಅರ್ಜಿ ಸಲ್ಲಿಸಿ ಪಡೆಯಿರಿ...
ಇನ್ನು 3 ಕಿಲೋ ವ್ಯಾಟ್ ಸಾಮರ್ಥ್ಯದ ಸೋಲಾರ್ ಘಟಕದಿಂದ ಮಾಸಿಕ 201ರಿಂದ 300 ಕಿಲೋ ವ್ಯಾಟ್ ವಿದ್ಯುತ್ ಉತ್ಪಾದಿಸಬಹುದು. ಈ ಘಟಕ ಅಳವಡಿಕೆಗೆ 1,80,000 ದಿಂದ 2,40,000 ರೂ. ವೆಚ್ಚವಾಗುತ್ತದೆ. ಇದಕ್ಕೆ 60,000 ರೂ. ಸಬ್ಸಿಡಿ ಸಿಗಲಿದ್ದು, ವರ್ಷಕ್ಕೆ 35,000 ರೂ. ಉಳಿತಾಯವಾಗಲಿದೆ.
ಸಾಮಾನ್ಯ ವಾಸದ ಮನೆಗಳಿಗೆ 1ರಿಂದ 3 ಕಿಲೋ ವ್ಯಾಟ್ ಸಾಮರ್ಥ್ಯದ ಸೋಲಾರ್ ಘಟಕ ಅಳವಡಿಕೆಗೆ ಅವಕಾಶವಿದ್ದರೆ, ವಸತಿ ಸಮುಚ್ಛಯಗಳು, ಅಪಾರ್ಟ್ಮೆಂಟ್‌ಗಳಿಗೆ 500 ಕಿಲೋ ವ್ಯಾಟ್ ಸಾಮರ್ಥ್ಯದ ಸೋಲಾರ್ ಘಟಕ ಅಳವಡಿಸಿಕೊಳ್ಳಲು ಅವಕಾಶವಿದೆ.
ಅರ್ಜಿ ಸಲ್ಲಿಕೆ ಹೇಗೆ?: ಸೋಲಾರ್ ವಿದ್ಯುತ್ ವ್ಯವಸ್ಥೆ ಪಡೆಯಲು ಇತ್ತೀಚಿನ ವಿದ್ಯುತ್ ಬಿಲ್ ಹಾಗೂ ಆಧಾರ್ ಕಾರ್ಡ್ ಮಾತ್ರ ಸಾಕು. ಈ ಎರಡು ದಾಖಲೆಗಳೊಂದಿಗೆ ಈ ಕೆಳಗಿನ ಲಿಂಕ್ ಬಳಸಿಕೊಂಡು ನೋಂದಣಿ ಮಾಡಿಕೊಳ್ಳುವ ಮೂಲಕ ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ.
ಅರ್ಜಿ ಲಿಂಕ್ : Apply ಮಾಡಿ
ಇದನ್ನೂ ಓದಿ: ಸಣ್ಣ ಉದ್ಯಮ ಆರಂಭಿಸಲು ಸಿಗುತ್ತೆ ₹20 ಲಕ್ಷ ಮುದ್ರಾ ತರುಣ್ ಲೋನ್ | ಈಗಲೇ ಅರ್ಜಿ ಸಲ್ಲಿಸಿ...